ಇ-ರಕಮ್(e-RaKAM) ವೆಬ್ ಪೋರ್ಟಲ್
ಕೇಂದ್ರ ಸರ್ಕಾರವು ರೈತರು ತಮ್ಮ ಉತ್ಪನ್ನಗಳನ್ನು ಮದ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಮಾರಾಟ ಮಾಡಲು ನೆರವಾಗಲು ಇ-ರಕಮ್(e-RaKAM) ವೆಬ್ ಪೋರ್ಟಲ್‍ಗೆ ಚಾಲನೆ ನೀಡಿದೆ ಇ-ರಕಮ್(e-RaKAM) ವೆಬ್ ಪೋರ್ಟಲ್ ಒಂದು ಸಣ್ಣ ಹಳ್ಳಿಯ ರೈತನನ್ನು ಇಂಟರ್‍ನೆಟ್ ಮೂಲಕ ದೊಡ್ಡ ಉದ್ಧಿಮೆದಾರರೊಂದಿಗೆ ಸಂಪರ್ಕ ಬೆಸೆಯುವ ವೇದಿಕೆಯಾಗಿದೆ ಈ ವೆಬ್ ಪೋರ್ಟಲ್ ಒಂದು ಡಿಜಿಟಲ್ ಉಪಕ್ರಮವಾಗಿದ್ದು ರೈತರು, ಸಾರ್ವಜನಿಕ ಕಂಪನಿಗಳು ಹಾಗೂ ವರ್ತಕರನ್ನು ಒಂದೇ ವೇದಿಕೆಯ ಮೇಲೆ ತರಲು ಉದ್ದೇಶಿಸಿದೆ.
e-RaKAM:
electronic- Rastriya Krishi Agri Mandi
ಈ ವೆಬ್ ಪೋರ್ಟಲ್ ಅನ್ನು ಕೇಂದ್ರ ಸರ್ಕಾರದ ಒಡೆತನದಲ್ಲಿರುವ ಎಮ್.ಎಸ್.ಟಿ.ಸಿ ಲಿಮಿಟೆಡ್ ಮತ್ತು ಸಿ.ಆರ್.ಡಬ್ಲೂ.ಸಿ ಲಿಮಿಟೆಡ್ ಅಭಿವೃದ್ಧಿ ಪಡಿಸಿವೆ. ಈ ಯೋಜನೆಯನ್ನು ಕೇಂದ್ರ ಸರ್ಕಾರವು ಹಂತ ಹಂತವಾಗಿ ಅನುಷ್ಠಾನಗೊಳಿಸಲು ನಿರ್ಧರಿಸಿದೆ.