ಭಾರತದ ಪ್ರಮುಖ ನದಿಗಳು ಹಾಗೂ ಅವುಗಳ ವಿಶೇಷತೆಗಳು: (India's Famous Indian Rivers)

 

ದಕ್ಷಿಣ ಭಾರತದ ನದಿಗಳು :


1.ನದಿ :— ಕೃಷ್ಣಾ (ಪೂರ್ವಕ್ಕೆ ಹರಿಯುವ ನದಿ)


●ನದಿಯ ಉಗಮ ಸ್ಥಾನ :— ಮಹಾರಾಷ್ಟ್ರದ ಮಹಾಬಲೇಶ್ವರ

●ಕೊನೆಗೆ ಸೇರುವ ಪ್ರದೇಶ :— ಬಂಗಾಳ ಕೊಲ್ಲಿ (ಆಂಧ್ರಪ್ರದೇಶ)

●ವ್ಯಾಪ್ತಿ ರಾಜ್ಯಗಳು :— ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ

●ಪ್ರಮುಖ ಉಪನದಿಗಳು :— ತುಂಗಭದ್ರ, ಕೊಯ್ನ, ಘಟಪ್ರಭಾ, ಮಲಪ್ರಭಾ, ಭೀಮಾ, ದಿಂಡಿ, ಯೆರ್ಲಾ, ವರ್ಣಾ, ಪಂಚಗಂಗಾ, ಧೂದಗಂಗಾ, ದೋಣಿ ಮತ್ತು ಮುಸಿ

●ಪ್ರಮುಖ ಅಣೆಕಟ್ಟುಗಳು :— ನಾಗಾರ್ಜುನ ಸಾಗರ ಜಲಾಶಯ, ಶ್ರೀಶೈಲಂ ಅಣೆಕಟ್ಟು, ಆಲಮಟ್ಟಿ ಅಣೆಕಟ್ಟು, ಧೋಮ್ ಅಣೆಕಟ್ಟು

●ವಿಶೇಷತೆಗಳು :—
ಇದು ದಕ್ಷಿಣ ಭಾರತದ 2 ನೇ ಅತಿ ಉದ್ದವಾದ ಮತ್ತು ಪ್ರಸ್ಥಭೂಮಿಯಲ್ಲಿ ಗೋದಾವರಿ ನದಿಯ ನಂತರದ 2 ನೇ ಅತಿ ದೊಡ್ಡ ನದಿ

2. ನದಿ :— ನರ್ಮದಾ (ರೇವಾ) (ಪಶ್ಚಿಮಕ್ಕೆ ಹರಿಯುವ ನದಿ)


●ನದಿಯ ಉಗಮ ಸ್ಥಾನ :— ಅಮರಕಂಟಕ್, ಮಧ್ಯಪ್ರದೇಶ

●ಕೊನೆಗೆ ಸೇರುವ ಪ್ರದೇಶ (Drain Into) :— ಅರಬ್ಬೀ ಸಮುದ್ರ (ಗುಜರಾತ್)

●ವ್ಯಾಪ್ತಿ ರಾಜ್ಯಗಳು :— ಮಧ್ಯ ಪ್ರದೇಶ, ಮಹಾರಾಷ್ಟ್ರ ಗುಜರಾತ್

●ಪ್ರಮುಖ ಉಪನದಿಗಳು :— ಶೇರ್, ಶಕ್ಕರ್, ದುಧಿ, ತವಾ, ಹಿರನ್, ಬರ್ನ, ಚೊರಲ್, ಕರಮ್

●ಪ್ರಮುಖ ಅಣೆಕಟ್ಟುಗಳು :— ಸರ್ದಾರ್ ಸರೋವರ್ (ಗುಜರಾತ್), ನರ್ಮದಾ ಸಾಗರ್ (ಮಧ್ಯಪ್ರದೇಶ)

●ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಕನ್ಹಾ ರಾಷ್ಟ್ರೀಯ ಉದ್ಯಾನ (ಸುರ್ಪನ್ ನದಿ)

●.ವಿಶೇಷತೆಗಳು :—
1. ಭಾರತೀಯ ಉಪಖಂಡದಲ್ಲಿ ಹರಿಯುವ 5ನೇ ಉದ್ದದ ನದಿ.
2.ಇದು ಪಶ್ಚಿಮಕ್ಕೆ ಹರಿಯುವ ಉದ್ದವಾದ ನದಿಗಳಲ್ಲಿ 1ನೇಯದು.
3.ಇದು ಕಪಿಲಧಾರ್, ಧರ್ದಿ ಮತ್ತು ಧುವಂಧರ್ ಗಳೆಂಬ ಮೂರು ಜಲಪಾತಗಳನ್ನು ಹೊಂದಿದೆ.
4. 'ಅಲಿಯಾಬೆಟ್' ಎಂಬುವುದು ನರ್ಮದಾ ನದಿ ನಿರ್ಮಿತ ದ್ವೀಪಗಳಲ್ಲಿ ಅತಿದೊಡ್ಡ ದ್ವೀಪ.
●ನದಿಯ ಉಗಮ ಸ್ಥಾನ :— ಅಮರಕಂಟಕ್, ಮಧ್ಯಪ್ರದೇಶ

●ಕೊನೆಗೆ ಸೇರುವ ಪ್ರದೇಶ (Drain Into) :— ಅರಬ್ಬೀ ಸಮುದ್ರ (ಗುಜರಾತ್)

●ವ್ಯಾಪ್ತಿ ರಾಜ್ಯಗಳು :— ಮಧ್ಯ ಪ್ರದೇಶ, ಮಹಾರಾಷ್ಟ್ರ ಗುಜರಾತ್

●ಪ್ರಮುಖ ಉಪನದಿಗಳು :— ಶೇರ್, ಶಕ್ಕರ್, ದುಧಿ, ತವಾ, ಹಿರನ್, ಬರ್ನ, ಚೊರಲ್, ಕರಮ್

●ಪ್ರಮುಖ ಅಣೆಕಟ್ಟುಗಳು :— ಸರ್ದಾರ್ ಸರೋವರ್ (ಗುಜರಾತ್), ನರ್ಮದಾ ಸಾಗರ್ (ಮಧ್ಯಪ್ರದೇಶ)

●ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಕನ್ಹಾ ರಾಷ್ಟ್ರೀಯ ಉದ್ಯಾನ (ಸುರ್ಪನ್ ನದಿ)

●.ವಿಶೇಷತೆಗಳು :—
1. ಭಾರತೀಯ ಉಪಖಂಡದಲ್ಲಿ ಹರಿಯುವ 5ನೇ ಉದ್ದದ ನದಿ.
2.ಇದು ಪಶ್ಚಿಮಕ್ಕೆ ಹರಿಯುವ ಉದ್ದವಾದ ನದಿಗಳಲ್ಲಿ 1ನೇಯದು.
3.ಇದು ಕಪಿಲಧಾರ್, ಧರ್ದಿ ಮತ್ತು ಧುವಂಧರ್ ಗಳೆಂಬ ಮೂರು ಜಲಪಾತಗಳನ್ನು ಹೊಂದಿದೆ.
4. 'ಅಲಿಯಾಬೆಟ್' ಎಂಬುವುದು ನರ್ಮದಾ ನದಿ ನಿರ್ಮಿತ ದ್ವೀಪಗಳಲ್ಲಿ ಅತಿದೊಡ್ಡ ದ್ವೀಪ.

3.ನದಿ :— ಮಹಾನದಿ (ಪೂರ್ವಕ್ಕೆ ಹರಿಯುವ ನದಿ)


●ನದಿಯ ಉಗಮ ಸ್ಥಾನ :— ನಗರಿ ಟೌನ್, ಛತ್ತೀಸ್ ಗಢ

●ಕೊನೆಗೆ ಸೇರುವ ಪ್ರದೇಶ (Drain Into) :— ಬಂಗಾಳ ಕೊಲ್ಲಿ (ಒಡಿಶಾ)

●ವ್ಯಾಪ್ತಿ ರಾಜ್ಯಗಳು :— ಛತ್ತೀಸ್ ಗಢ, ಒಡಿಶಾ

●ಪ್ರಮುಖ ಉಪನದಿಗಳು :— ಸೆಯೊನಾಥ್, ಹಸ್ಡೆಯೋ, ಜೋಂಕ್, ಇಬ್, ಓಂಗ್, ಮಂಡ್, ಟೆಲೆನ್, ಸುವರ್ಣರೇಖಾ

●ಪ್ರಮುಖ ಅಣೆಕಟ್ಟುಗಳು :— ಹಿರಾಕುಡ್ ಅಣೆಕಟ್ಟು (ದೊಡ್ಡ ಅಣೆಕಟ್ಟು), ತಿಕ್ಕರಪಾರಾ ಅಣೆಕಟ್ಟು, ನಾರಾಜು ಅಣೆಕಟ್ಟು

4.ನದಿ :— ಕಾವೇರಿ (ಪೂರ್ವಕ್ಕೆ ಹರಿಯುವ ನದಿ)


●ನದಿಯ ಉಗಮ ಸ್ಥಾನ :— ಕೊಡಗು, ಕರ್ನಾಟಕ

●ಕೊನೆಗೆ ಸೇರುವ ಪ್ರದೇಶ (Drain Into) :— ಬಂಗಾಳ ಕೊಲ್ಲಿ

●ವ್ಯಾಪ್ತಿ ರಾಜ್ಯಗಳು :— ಕರ್ನಾಟಕ, ಕೇರಳ ಮತ್ತು ತಮಿಳುನಾಡು

●ಪ್ರಮುಖ ಉಪನದಿಗಳು :— ಅಮರಾವತಿ, ಹಾರಂಗಿ,, ಲೋಕಪಾವನಿ, ಅರ್ಕಾವತಿ, ಲಕ್ಷಣತೀರ್ಥ, ಕಪಿಲಾ,, ಶಿಂಷಾ, ಹೇಮಾವತಿ, ನೋಯಲ್ , ಕಬಿನಿ, ಸುವರ್ಣಾವತಿ, ಭವಾನಿ ಮತ್ತು ಅಮರಾವತಿ

●ಪ್ರಮುಖ ಅಣೆಕಟ್ಟುಗಳು :— ಕೃಷ್ಣ ರಾಜ ಸಾಗರ ಅಣೆಕಟ್ಟು, ಮೆಟ್ಟೂರ್ ಅಣೆಕಟ್ಟು, ಬನಸುರಾ ಸಾಗರ ಅಣೆಕಟ್ಟು (ಕಬಿನಿ ನದಿ)

●ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಮುದುಮಲೈ ರಾಷ್ಟ್ರೀಯ ಉದ್ಯಾನ (ಮೊಯರ್ ನದಿ), ಬಂಡೀಪುರ ರಾಷ್ಟ್ರೀಯ ಉದ್ಯಾನ (ಮೊಯರ್ ನದಿ)

●ವಿಶೇಷತೆಗಳು :—
1. ಇದನ್ನು 'ದಕ್ಷಿಣದ ಗಂಗೆ' ಎಂದು ಕರೆಯುವರು.
2.(ಶಿವನಸಮುದ್ರಂ) ಗಗನಚುಕ್ಕಿ ಮತ್ತು ಭರಚುಕ್ಕಿ, ಚುಂಚನಕಟ್ಡೆ ಮತ್ತು ಹೊಗೇನಕಲ್ ಜಲಪಾತಗಳನ್ನು ಹೊಂದಿದೆ.
3. ಇದು ಮೂರು ಅಂತರ್ ನದಿ ದ್ವೀಪಗಳನ್ನು ಒಳಗೊಂಡಿದೆ.
1)ಶ್ರೀರಂಗಪಟ್ಟಣ 2)ಶಿವನಸಮುದ್ರಂ 3) ಶ್ರೀರಂಗ.

5.ನದಿ :— ಗೋದಾವರಿ (ಪೂರ್ವಕ್ಕೆ ಹರಿಯುವ ನದಿ)


●ನದಿಯ ಉಗಮ ಸ್ಥಾನ :— ತ್ರಿಯಂಬಕ್, ನಾಸಿಕ್

●ಕೊನೆಗೆ ಸೇರುವ ಪ್ರದೇಶ :— ಆಂಧ್ರಪ್ರದೇಶ, ಬಂಗಾಳ ಕೊಲ್ಲಿ

●ವ್ಯಾಪ್ತಿ ರಾಜ್ಯಗಳು :— ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಪುದುಚೇರಿ, ಛತ್ತೀಸ್ಗಢ

●ಪ್ರಮುಖ ಉಪನದಿಗಳು :— ಪೂರ್ಣಾ, ಪ್ರವರ, ಇಂದ್ರಾವತಿ, ಮಂಜೀರಾ, ಬಿಂದುಸಾರ, ಶಬರಿ, ವಾರ್ಧಾ, ವೇನ್ ಗಾಂಗಾ

●ಪ್ರಮುಖ ಅಣೆಕಟ್ಟುಗಳು :— ಜಯಕ್ವಾಡಿ ಅಣೆಕಟ್ಟು , ಪೊಲಾವರಮ್ ಪ್ರಾಜೆಕ್ಟ್

●ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಇಲ್ಲಾ

●ವಿಶೇಷತೆಗಳು :—
1. ಸಂಪೂರ್ಣವಾಗಿ ಭಾರತದೊಳಗೆ ಹರಿಯುವ ಉದ್ದವಾದ ನದಿಗಳಲ್ಲಿ ಮೊದಲನೆಯದು.
2.ದಕ್ಷಿಣ ಭಾರತದ ಅತಿ ಉದ್ದವಾದ ನದಿ
3.ದಕ್ಷಿಣ ಭಾರತದ ವೃದ್ಧ ನದಿ.

6.ನದಿ :— ತಪತಿ (ಪಶ್ಚಿಮಕ್ಕೆ ಹರಿಯುವ ನದಿ)


●ನದಿಯ ಉಗಮ ಸ್ಥಾನ :— ಬೇತುಲ್, ಮಧ್ಯಪ್ರದೇಶ

●ಕೊನೆಗೆ ಸೇರುವ ಪ್ರದೇಶ (Drain Into) :— ಅರಬ್ಬೀ ಸಮುದ್ರ (ಗುಜರಾತ್)

●ವ್ಯಾಪ್ತಿ ರಾಜ್ಯಗಳು :— ಮಧ್ಯಪ್ರದೇಶ, ಗುಜರಾತ್

●ಪ್ರಮುಖ ಉಪನದಿಗಳು :—ಪೂರ್ಣ, ಬೆಟುಲ್, ಗುಲಿ, ಬೊಕಾರ್, ಗಂಜಾಲ್, ದತ್ ಗಂಜ್, ಬೊಕಾಡ್, ಮಿಂಡೊಲಾ, ಗಿರ್ಣ, ಪಂಝರಾ, ವಾಘೂರ್, ಬೋರಿ, ಆನೆರ್

●ಪ್ರಮುಖ ಅಣೆಕಟ್ಟುಗಳು :— ಊಕಾಯಿ ಅಣೆಕಟ್ಟು

ಉತ್ತರ ಭಾರತದ ನದಿಗಳು :


1.ನದಿ :— ಸಿಂಧೂ (ಇಂಡಸ್ ನದಿ)


●ನದಿಯ ಉಗಮ ಸ್ಥಾನ :— ಮಾನಸ ಸರೋವರ, ಟಿಬೆಟ್

●ಕೊನೆಗೆ ಸೇರುವ ಪ್ರದೇಶ (Drain Into) :— ಪಾಕಿಸ್ತಾನ, ಅರಬ್ಬೀ ಸಮುದ್ರ

●ವ್ಯಾಪ್ತಿ ರಾಜ್ಯಗಳು :— (ಪಾಕಿಸ್ತಾನ, ಭಾರತ) ಜಮ್ಮು ಕಾಶ್ಮೀರ, ಗುಜರಾತ್

●ಪ್ರಮುಖ ಉಪನದಿಗಳು :— ಝಸ್ಕಾರ್, ರವಿ, ಬಿಯಾಸ್, ಸಟ್ಲೇಜ್, ಚೆನಾಬ್, ಝೀಲಂ

●ಪ್ರಮುಖ ಅಣೆಕಟ್ಟುಗಳು :— ಮಂಗ್ಲಾ ಅಣೆಕಟ್ಟು (ಝೀಲಂ ನದಿ), ತರಬೇಲಾ ಅಣೆಕಟ್ಟು

●ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಇಲ್ಲಾ

●.ವಿಶೇಷತೆಗಳು :—
1.ಟಿಬೆಟ್ ನಲ್ಲಿ ಸಿಂಧೂ ನದಿಗೆ 'ಸಿಂಘೆ ಕಂಬಾಬ್' ಎಂದು ಕರೆಯುವರು.
2.ಸಿಂಧೂ ನದಿಗೆ ಪಾಕಿಸ್ತಾನದಲ್ಲಿ ಸೇರುವ ಉಪನದಿಗಳೆಂದರೆ 'ಜೋದಾಲ್, ಕಾಬೂಲ್, ತಾಚಿ' ಪ್ರಮುಖವಾದವುಗಳು.

2.ನದಿ :— ಗಂಗಾ


●ನದಿಯ ಉಗಮ ಸ್ಥಾನ :— ಗಂಗೋತ್ರಿ, ಉತ್ತರಾಖಂಡ್

●ಕೊನೆಗೆ ಸೇರುವ ಪ್ರದೇಶ :— ಬಾಂಗ್ಲಾದೇಶ, ಬಂಗಾಳ ಕೊಲ್ಲಿ

●ವ್ಯಾಪ್ತಿ ರಾಜ್ಯಗಳು :— ಉತ್ತರಾಖಂಡ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್

●ಪ್ರಮುಖ ಉಪನದಿಗಳು :— ಗೋಮತಿ, ಘಗ್ರಾ, ಗಂಡಕ್, ಕೊಸಿ, ಯಮುನಾ, ಸೊನ್, ಪುಂಪುನ್, ದಾಮೋದರ್, ರಿಹಾಂದ್,ರಾಮಗಂಗಾ, ಬೇಟ್ವಾ,

●ಪ್ರಮುಖ ಅಣೆಕಟ್ಟುಗಳು :— ತೆಹ್ರಿ ಅಣೆಕಟ್ಟು (ಭಾಗೀರಥಿ ನದಿ), ಬನಸಾಗರ್ ಅಣೆಕಟ್ಟು (ಸನ್ ನದಿ)

●ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಕಾರ್ಬೆಟ್ ರಾಷ್ಟ್ರೀಯ ಪಾರ್ಕ್ (ರಾಮಗಂಗಾ ನದಿ)

●.ವಿಶೇಷತೆಗಳು :—
1.ಭಾರತದ ಅತೀ ಉದ್ದವಾದ ನದಿ
2.ಪ್ರಪಂಚದ ಅತ್ಯಂತ ದೊಡ್ಡ ನದೀಮುಖಜ ಭೂಮಿಯಾದ 'ಸುಂದರ್ ಬನ್ಸ್' ಗಂಗಾನದಿಯ ಮುಖಜ ಭೂಮಿಯಾಗಿದೆ.
3.ದಾಮೋದರ್ ನದಿಯು ಪಶ್ಚಿಮ ಬಂಗಾಳದ ದುಃಖದ ನದಿಯಾಗಿದೆ.
4.ಕೊಸಿ ನದಿಯು ಬಿಹಾರದ ದುಃಖದ ನದಿಯಾಗಿದೆ.

3.ನದಿ :— ಬ್ರಹ್ಮಪುತ್ರ


●ನದಿಯ ಉಗಮ ಸ್ಥಾನ :— (ಮಾನಸ ಸರೋವರ) ಚೆಮಯಂಗ್ ಡಂಗ್, ಟಿಬೆಟ್

●ಕೊನೆಗೆ ಸೇರುವ ಪ್ರದೇಶ (Drain Into) :— ಬಾಂಗ್ಲಾದೇಶ, ಬಂಗಾಳ ಕೊಲ್ಲಿ

●ವ್ಯಾಪ್ತಿ ರಾಜ್ಯಗಳು :— ಅಸ್ಸಾಂ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ

●ಪ್ರಮುಖ ಉಪನದಿಗಳು :— ದಿಬಂಗ್, ದಿಕು, ಕೊಪಿಲಿ, ಬುರ್ಹಿ, ದಿಹಿಂಗ್, ಧನಶ್ರೀ, ತೀಸ್ತಾ, ಲೋಹಿತ್, ಕಮೆಂಗ್, ಮಾನಸ್

●ಪ್ರಮುಖ ಅಣೆಕಟ್ಟುಗಳು :— ಫರಕ್ಕಾ ಬ್ಯಾರೇಜ್ (ಪಶ್ಚಿಮ ಬಂಗಾಳ)

●ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಕಾಜಿರಂಗಾ ರಾಷ್ಟ್ರೀಯ ಉದ್ಯಾನ (ಬ್ರಹ್ಮಪುತ್ರ ನದಿ)

●.ವಿಶೇಷತೆಗಳು :—
1. ಈ ನದಿಗೆ ಟಿಬೆಟಿನಲ್ಲಿ 'ಸಾಂಗ್ ಪೋ', 'ಯಾರ್ಲುಂಗ್ ಜಾಂಗ್ಬೋ ಜಿಯಾಂಗ್' ಹೆಸರಿನಿಂದ ಕರೆಯುತ್ತಾರೆ.
2.. ಅರುಣಾಚಲ ಪ್ರದೇಶವನ್ನು ಪ್ರವೇಶಿಸುವ ಮೂಲಕ ಭಾರತಕ್ಕೆ ಪ್ರವೇಶಿಸುತ್ತದೆ. ಆ ಪ್ರವೇಶಿಸುವ ಭಾಗವನ್ನು 'ಡಿಹಾಂಗ್ ಕಂದರ' ಎನ್ನುವರು.
3. ಈ ನದಿ ಆಸ್ಸಾಂ ರಾಜ್ಯದ ದುಃಖದ ನದಿಯಾಗಿದೆ.
4.ಆಸ್ಸಾಂ ರಾಜ್ಯದಲ್ಲಿ ಬ್ರಹ್ಮಪುತ್ರ ನದಿಯಲ್ಲಿ 'ಮಜೂಲಿ ಎಂಬ ಅಂತರ ನದಿ ದ್ವೀಪವಿದ್ದು, ಇದು ಪ್ರಪಂಚದ ಅತ್ಯಂತ ದೊಡ್ಡ ಅಂತರ ನದಿ ದ್ವೀಪ ವ್ಯವಸ್ಥೆಯಾಗಿದೆ.
5.ತ್ಸಾಂಗ್ ಪೋ ನದಿಗೆ ಟಿಬೆಟಿನ ಕಣ್ಣೀರಿನ ನದಿ ಎನ್ನುವರು.

4. ನದಿ :— ಯಮುನಾ


●ನದಿಯ ಉಗಮ ಸ್ಥಾನ :— ಯಮುನೋತ್ರಿ, ಉತ್ತರಾಖಂಡ್

●ಕೊನೆಗೆ ಸೇರುವ ಪ್ರದೇಶ (Drain Into) :— ಬಂಗಾಳ ಕೊಲ್ಲಿ

●ವ್ಯಾಪ್ತಿ ರಾಜ್ಯಗಳು :— ಉತ್ತರ ಪ್ರದೇಶ, ಹರಿಯಾಣ & ಉತ್ತರಾಖಂಡ್,

●ಪ್ರಮುಖ ಉಪನದಿಗಳು :— ಹಿಂದೊನ್, ಕೆನ್, ಚಂಬಲ್, ಬೇತ್ವಾ, ಸಿಂಧ್, ಟೊನ್ಸ್

●ಪ್ರಮುಖ ಅಣೆಕಟ್ಟುಗಳು :— ಗಾಂಧಿ ಸಾಗರ ಅಣೆಕಟ್ಟು (ಚಂಬಲ್), ರಾಣಾ ಪ್ರತಾಪ್ ಸಾಗರ ಅಣೆಕಟ್ಟು (ಚಂಬಲ್),

●ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಪನ್ನಾ ರಾಷ್ಟ್ರೀಯ ಉದ್ಯಾನ (ಕೆನ್ ನದಿ)

●.ವಿಶೇಷತೆಗಳು :—
1. ಭಾರತದ ಅತ್ಯಂತ ಉದ್ದವಾದ ಉಪನದಿ (ಗಂಗಾ)

5..ನದಿ :— ಸಬರಮತಿ


●ನದಿಯ ಉಗಮ ಸ್ಥಾನ :— ಉದಯಪುರ್, ರಾಜಸ್ಥಾನ

●ಕೊನೆಗೆ ಸೇರುವ ಪ್ರದೇಶ (Drain Into) :— ಅರಬ್ಬೀ ಸಮುದ್ರ

●ವ್ಯಾಪ್ತಿ ರಾಜ್ಯಗಳು :— ಗುಜರಾತ್, ರಾಜಸ್ಥಾನ

●ಪ್ರಮುಖ ಉಪನದಿಗಳು :— ವಕಾಲ್, ಸೇಯ್ ನಾಡಿ, ಮಧುಮತಿ, ಹರ್ನಾವ್, ಹಾಥ್ ಮತಿ

●ಪ್ರಮುಖ ಅಣೆಕಟ್ಟುಗಳು :— ಧರೋಯಿ ಅಣೆಕಟ್ಟು

Contributed by:Spardha Loka