ಸಾಗರಗಳು

 

ಇವು ಆಳವಾದ ಮತ್ತು ವಿಸ್ತಾರವಾದ ಜಲರಾಶಿಗಳಾಗಿದ್ದು. ಭೂಖಂಡಗಳ ನಡುವೆ ಹಂಚಿಕೆಯಾಗಿವೆ.
ಉದಾ: ಏಷ್ಯಾ, ಆಫ್ರಿಕಾ ಮತ್ತು ಆಸ್ಟ್ರೇಲಿಯಾಗಳ ನಡುವೆ ಇರುವ ಹಿಂದೂ ಮಹಾಸಾಗರ, ಉತ್ತರ ಅಮೆರಿಕ ಮತ್ತು ಯುರೋಪಿನ ನಡುವೆ ಇರುವ ಅಟ್ಲಾಂಟಿಕ ಸಾಗರ.

ಸಾಗರ ತಳದ ಭೂಸ್ವರೂಪ


ಭೂಮೇಲ್ಭಾಗದಲ್ಲಿ ವಿವಿಧ ಬಗೆಯ ಭೂಸ್ವರೂಪಗಳು ಕಂಡುಬರುವಂತೆಯೇ ಸಾಗರ ತಳದಲ್ಲಿಯೂ ಹಲವಾರು ಬಗೆಯ ಭೂ ಸ್ವರೂಪಗಳಿವೆ. ಭೂ ಸ್ವರೂಪಗಳ ಗುಣ ಲಕ್ಷಣಗಳನ್ನು ಆಧರಿಸಿ ಸಾಗರ ತಳವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದು. ಅವುಗಳೆಂದರೆ :
1.ಖಂಡಾವರಣ ಪ್ರದೇಶ
2.ಖಂಡಾವರಣ ಇಳಿಜಾರು
3.ಆಳಸಾಗರ ಮೈದಾನ
4.ಸಾಗರ ತಗ್ಗುಗಳು.
ಸಾಗರದ ಆಳವನ್ನು - ಫ್ಯಾದೋಮೀಟರ್ ಉಪಕರಣ ಬಳಸಿ ಫ್ಯಾಧಮ್ಸ್‍ಗಳಲ್ಲಿ ಅಳೆಯುತ್ತಾರೆ. (1 Fatham – 6 feet / 1.80 meter)

1.ಖಂಡಾವರಣ ಪ್ರದೇಶ


ಭೂಮಿಯ ಕರಾವಳಿ ಮೈದಾನ ಪ್ರದೇಶಗಳು ಸಮುದ್ರ ತೀರದಲ್ಲಿ 100 Fathms (180 meters)ವರೆಗೆ ಚಾಚಿಕೊಂಡಿರುವ ತೀರದಿಂದ ಒಂದು ಡಿಗ್ರಿಗಿಂತ ಕಡಿಮೆ ಇಳಿಜಾರನ್ನು ಹೊಂದಿರುವ ಆಳವಿಲ್ಲದ ಭಾಗಕ್ಕೆ ಖಂಡಾವರಣ ಎನ್ನುವರು.

2.ಖಂಡಾವರಣ ಇಳಿಜಾರು


ಖಂಡಾವರಣ ಪ್ರದೇಶದ ಅಂತ್ಯದಲ್ಲಿ ಸಾಗರದ ತಳವು ಇದ್ದಕ್ಕಿದ್ದ ಹಾಗೆ ಕಡಿದಾಗುತ್ತದೆ. 2000 Fathm ಗಳವರೆಗೆ ಇರುವ ಪ್ರದೇಶವನ್ನು ಖಂಡಾವರಣ ಇಳಿಜಾರು ಪ್ರದೇಶ ಎಂದು ಕರೆಯುತ್ತಾರೆ.

3.ಆಳಸಾಗರ ಮೈದಾನ


ಭೂ ಇಳುಕಲು ಪ್ರದೇಶದಿಂದ 3600 – 6000 ಮೀ. ಆಳದಲ್ಲಿರುವ ಸಾಗರದ ಸಮತಟ್ಟಾದ ಭಾಗಕ್ಕೆ ಆಳ ಸಾಗರ ಮೈದಾನ ಎನ್ನುವರು.

4.ಸಾಗರ ತಗ್ಗುಗಳು.


ಸಾಗರಗಳ ಅತ್ಯಂತ ಆಳ ಪ್ರದೇಶದಲ್ಲಿ ಕಂಡು ಬರುವ ಅತ್ಯಂತ ಕಿರಿದಾದ ಮತ್ತು ಕಡಿದಾದ ಆಳ ಕಣಿವೆ ಪ್ರದೇಶವನ್ನು - ಸಾಗರ ತಗ್ಗುಗಳೆಂದು ಕರೆಯುತ್ತಾರೆ. ಇವುಗಳ ಆಳವು 6 ಸಾವಿರ ಮೀ. ಗಿಂತ ಹೆಚ್ಚಾಗಿದ್ದು ಜ್ವಾಲಾಮುಖಿ ಮತ್ತು ಭೂಕಂಪಗಳು ಸಂಭವಿಸುವ ವಲಯದಲ್ಲಿ ಹೆಚ್ಚು ಪ್ರಮಾಣದಲ್ಲಿ ಕಂಡು ಬರುತ್ತವೆ. ಇವು ಸಾಗರದ ಒಟ್ಟು ವಿಸ್ತೀರ್ಣದ ಪ್ರತಿಶತ 1.2 ಭಾಗವನ್ನು ಆವರಿಸಿಕೊಂಡಿದೆ. ಶಾಂತ ಮಹಾಸಾಗರದಲ್ಲಿ (Pacific Ocean) ಮಿಂಡ ನಾವೋ ದ್ವೀಪ ಸಮೀಪದ ಚಾಲೆಂಜರ್ / ಮರಿಯಾನ್ ತಗ್ಗು (11032 m) ಆಳವಾಗಿದ್ದು ಜಗತ್ತಿನಲ್ಲಿ ಆಳವಾದ ತಗ್ಗಾಗಿದೆ.