Loading [MathJax]/extensions/MathML/content-mathml.js

ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರ ಅಭಿಯಾನ

 

ಗ್ರಾಮೀಣ ಭಾಗದ ನಾಗರೀಕರನ್ನು ಡಿಜಿಟಲ್ ಸಾಕ್ಷರಸ್ಥನ್ನಾಗಿಸುವ ಸಲುವಾಗಿ ಕೇಂದ್ರ ಸರ್ಕಾರ ಆರಂಭೀಸಿರುವ ಯೋಜನೆ
ಈ ಯೋಜನೆಯಡಿ, 2351 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ
2019 ರೊಳಗೆ ೬ ಕೋಟಿ ಗ್ರಾಮೀಣ ಪ್ರದೇಶದ ಜನರನ್ನು ಡಿಜಿಟಲ್ ಸಾಕ್ಷರರನ್ನಾಗಿಸುವ ಗುರಿಯನ್ನು ಹೊಂದಲಾಗಿದೆ.
ಈ ಅಭೀಯಾನವನ್ನು ಡಿಜಿಟಲ್ ಇಂಡಿಯಾ ಉಪಕ್ರಮದಡಿಯಲ್ಲಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಅನುಷ್ಠಾನಕ್ಕೆ ತರುತ್ತಿದೆ.
ಪ್ರಸ್ತುತ ಆರ್ಥಿಕ ವರ್ಷದಲ್ಲಿ ೨೫ ಲಕ್ಷ,೨೦೧೭-೧೮ ನೆ ಸಾಲಿನಲ್ಲಿ ೨.೭೫ ಕೋಟಿ ಮತ್ತು 2018 -19 ನೇ ಸಾಲಿನಲ್ಲಿ 3 ಕೋಟಿ ಜನರನ್ನು ಡಿಜಿಟಲ್ ಸಾಕ್ಷರಸ್ಥರನ್ನಾಗಿ ತರಬೇತುಗೊಳಿಸುವ ಗುರಿ ಹೊಂದಿದೆ.
ಈ ಮೂಲಕ ಅರ್ಹ ಪ್ರತಿ ಕುಟುಂಬದಿಂದ ತಲಾ ಒಬ್ಬರಂತೆ ದೇಶದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಶೇಕಡಾ 40 ರಷ್ಟು ಕುಟುಂಬಗಳನ್ನು ಇದರ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ.