ಕೈಗಾರಿಕೆಗಳು (Industries)

 

• ಯಾವುದೇ ದೇಶದ ಆರ್ಥಿಕ ಪ್ರಗತಿಯನ್ನು ನಿರ್ಧರಿಸಲು ಆ ದೇಶವು ಹೊಂದಿರುವ ಕೈಗಾರಿಕೆಯ ಅಭಿವೃದ್ಧಿಯನ್ನು ಸಹ ಪ್ರಧಾನವಾಗಿ ಪರಿಗಣಿಸಲಾಗುವುದು. ಕೈಗಾರಿಕೆಗಳು ಆಧುನಿಕ ನಾಗರಿಕತೆಯ ಲಕ್ಷಣಗಳಾಗಿದ್ದು, ನಮಗೆ ಅವಶ್ಯಕವಾದ ವಸ್ತುಗಳನ್ನು ಪೂರೈಸುವುದಲ್ಲದೆ ಸಾಕಷ್ಟು ಉದ್ಯೋಗಾವಕಾಶಗಳನ್ನು ದೊರಕಿಸಿಕೊಡುತ್ತವೆ. ಸಾಮಾನ್ಯವಾಗಿ ಕಚ್ಚಾವಸ್ತುಗಳನ್ನು ಸಿದ್ದ ವಸ್ತುಗಳನ್ನಾಗಿ ಪರಿವರ್ತಿಸುವ ಮಾನವನ ಎಲ್ಲ ಉದ್ಯೋಗಗಳನ್ನು ಕೈಗಾರಿಕೆ ಎಂದು ಕರೆಯುತ್ತಾರೆ.
• ಉದಾ : ಕಬ್ಬನ್ನು ಸಕ್ಕರೆಯಾಗಿ,ಹತ್ತಿಯನ್ನು ಬಟ್ಟೆಯನ್ನಾಗಿ, ಬಾಕ್ಸೈಟನ್ನು ಅಲ್ಯುಮಿನಿಯಂ ಲೋಹವನ್ನಾಗಿ, ಮರದ ತಿರುಳನ್ನು ಕಾಗದವನ್ನಾಗಿ ಪರಿವರ್ತಿಸುವುದು.

ಭಾರತದ ಕೈಗಾರಿಕಾ ಪ್ರದೇಶಗಳು


ಭಾರತದಲ್ಲಿ 8 ಪ್ರಧಾನ ಕೈಗಾರಿಕಾ ವಲಯಗಳನ್ನು ಗುರುತಿಸಲಾಗಿದೆ. ಇವುಗಳೆಂದರೆ,
1) ಹೂಗ್ಲಿ ಪ್ರದೇಶ
2) ಮುಂಬೈ-ಪೂನಾ ಪ್ರದೇಶ
3) ಅಹಮದಾಬಾದ್-ವಡೋದರ ಪ್ರದೇಶ
4) ದಾಮೋದರ ಕಣಿವೆ ಪ್ರದೇಶ
5) ದಕ್ಷಿಣದ ಕೈಗಾರಿಕಾ ಪ್ರದೇಶ
6) ನ್ಯಾಷನಲ್ ಕ್ಯಾಪಿಟಲ್ ಪ್ರದೇಶ
7) ವಿಶಾಖಪಟ್ಟಣ-ಗುಂಟೂರು ಪ್ರದೇಶ
8) ಕೊಲ್ಲಂ-ತಿರುವನಂತಪುರ ಪ್ರದೇಶ.

ಭಾರತದ ಪ್ರಮುಖ ಕೈಗಾರಿಕೆಗಳು


1) ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ


• ಭಾರತದಲ್ಲಿ ಒಟ್ಟು 9 ಬೃಹತ್ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳಿವೆ.
• ದೇಶದಲ್ಲಿ ಪ್ರಥಮ ಉಕ್ಕಿನ ಕೈಗಾರಿಕೆಯು 1870 ರಲ್ಲಿ ಪಶ್ಚಿಮ ಬಂಗಾಳದ ‘ಕುಲ್ಟಿ’ ಎಂಬಲ್ಲಿ ಬೆಂಗಾಲ್ ಐರನ್ ಕಂಪನಿ ಲಿ., ಸಂಸ್ಥೆಯಿಂದ ಸ್ಥಾಪಿತಗೊಂಡಿತು.
• 1907 ರಲ್ಲಿ ಟಾಟಾ ಐರನ್ ಅಂಡ್ ಸ್ಟೀಲ್ ಕಂಪನಿಯು ಜಮ್ಶೆಡ್ಪುರ ಬಳಿ ಹಾಗೂ 1919 ರಲ್ಲಿ ದಿ ಇಂಡಿಯನ್ ಐರನ್ ಅಂಡ್ ಸ್ಟೀಲ್ ಕಂಪನಿಯು ಪಶ್ಚಿಮ ಬಂಗಾಳದ ಬರ್ನಪುರ ಎಂಬಲ್ಲಿ ಉಕ್ಕಿನ ಸ್ಥಾವರವನ್ನು ಆರಂಭಿಸಿತು.
• 1923 ರಲ್ಲಿ ಮೈಸೂರು ರಾಜ ಸಂಸ್ಥಾನವು ದಿ ಮೈಸೂರ್ ಐರನ್ ಅಂಡ್ ಸ್ಟೀಲ್ ವಕ್ರ್ಸ್ ಕೈಗಾರಿಕೆಯನ್ನು ಭದ್ರಾವತಿಯಲ್ಲಿ ಸ್ಥಾಪಿಸಿತು.
• ಪ್ರಸ್ತುತ ಭಾರತದಲ್ಲಿರುವ ಕಬ್ಬಿಣ ಮತ್ತು ಉಕ್ಕಿನ ಮುಖ್ಯ ಕೈಗಾರಿಕೆಗಳೆಂದರೆ :
1) ಟಾಟಾ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಜಮ್ಶೆಡ್ಪುರ (ಜಾರ್ಖಂಡ್)
2) ಇಂಡಿಯನ್ ಐರನ್ ಮತ್ತು ಸ್ಟೀಲ್ ಕಂಪನಿ ಬರ್ನಪುರ-ಪಶ್ಚಿಮಬಂಗಾಳ
3) ವಿಶ್ವೇಶ್ವರಯ್ಯ ಐರನ್ ಮತ್ತು ಸ್ಟೀಲ್ ಕಂಪನಿ ಭದ್ರಾವತಿ, ಕರ್ನಾಟಕ
4) ಬಿಲಾಯಿ ಐರನ್ ಮತ್ತು ಸ್ಟೀಲ್ ಕಂಪನಿ, ಬಿಲಾಯಿ, ಛತ್ತೀಸ್ಘಡ್
5) ಐರನ್ ಮತ್ತು ಸ್ಟೀಲ್ ಕಂಪನಿ, ರೂರ್ಕೆಲ ಒರಿಸ್ಸಾ
6) ಐರನ್ ಮತ್ತು ಸ್ಟೀಲ್ ಕಂಪನಿ, ದುರ್ಗಾಪುರ - ಪಶ್ಚಿಮ ಬಂಗಾಳ
7) ಐರನ್ ಮತ್ತು ಸ್ಟೀಲ್ ಕಂಪನಿ, ಬೋಕಾರೋ - ಝಾರ್ಖಂಡ್
8) ಐರನ್ ಮತ್ತು ಸ್ಟೀಲ್ ಕಂಪನಿ, ಸೇಲಂ - ತಮಿಳುನಾಡು
9) ಐರನ್ ಮತ್ತು ಸ್ಟೀಲ್ ಕಂಪನಿ, ವಿಶಾಖಪಟ್ಟಣ - ಆಂಧ್ರಪ್ರದೇಶ

2) ಹತ್ತಿ ಬಟ್ಟೆ ಕೈಗಾರಿಕೆ


• ವಿವಿಧ ಬಗೆಯ ನಾರುಗಳಿಂದ ಬಟ್ಟೆಯನ್ನು ತಯಾರಿಸುವುದನ್ನು ‘ಜವಳಿ ಕೈಗಾರಿಕೆ’ ಯೆಂದು ಕರೆಯುವರು.
• ಭಾರತದಲ್ಲಿ ಈ ಕೈಗಾರಿಕೆ ಮೊದಲು 1854 ರಲ್ಲಿ ಮುಂಬೈ ಹಾಗೂ ಬರೂಚ್ಗಳಲ್ಲಿ ಸ್ಥಾಪಿಸಲ್ಪಟ್ಟವು.
• ಮಹಾರಾಷ್ಟ್ರ, ಗುಜರಾತ, ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶ, ಮಧ್ಯಪ್ರದೇಶ ರಾಜ್ಯಗಳು ಬಹುಪಾಲು ಹತ್ತಿ ಬಟ್ಟೆ ಕೈಗಾರಿಕೆಗಳನ್ನು ಹೊಂದಿವೆ.
• ಮಹಾರಾಷ್ಟ್ರದ ಮುಂಬಯಿಯಲ್ಲಿ ಅತಿ ಹೆಚ್ಚು ಹತ್ತಿ ಗಿರಣಿಗಳಿದ್ದು ಇದನ್ನು ಭಾರತದ ‘ಮ್ಯಾಂಚೆಸ್ಟರ್’ (ಇಂಗ್ಲೆಂಡಿನ ಅತಿ ಪ್ರಮುಖ ಹತ್ತಿ ಬಟ್ಟೆ ಕೈಗಾರಿಕಾ ಕೇಂದ್ರ) ಅಥವಾ ಭಾರತದ ‘ಕಾಟನ್ ಪೊಲೀಸ್’ ಎಂದು ಕರೆಯುತ್ತಾರೆ.
• ಇದಲ್ಲದೆ ನಾಗಪುರ, ಸೊಲ್ಲಾಪುರ, ಪಶ್ಚಿಮ ಬಂಗಾಳ, ಕೊಲ್ಕತ್ತಾ, ಉತ್ತರಪ್ರದೇಶದ ಕಾನ್ಪುರ, ಮಧ್ಯಪ್ರದೇಶದ ಇಂದೋರ್, ಗುಜರಾತಿನ ಸೂರತ್, ತಮಿಳುನಾಡಿನ ಕೊಯಿಮತ್ತೂರ, ಸೇಲಂ, ಚೆನ್ನೈ, ಕರ್ನಾಟಕದ ಬೆಂಗಳೂರು, ದಾವಣಗೆರೆ ಪ್ರಮುಖ ಹತ್ತಿ ಬಟ್ಟೆ ಕೈಗಾರಿಕಾ ಕೇಂದ್ರಗಳಾಗಿವೆ.

3) ಸಕ್ಕರೆ ಕೈಗಾರಿಕೆ


• ಭಾರತವು ಪ್ರಪಂಚದಲ್ಲಿ ಸಕ್ಕರೆ ಉತ್ಪಾದನೆಯಲ್ಲಿ ಬ್ರೆಜಿಲ್ ನಂತರ ಎರಡನೆಯ ಸ್ಥಾನವನ್ನು ಪಡೆದಿದೆ. ಸಕ್ಕರೆ ತಯಾರಿಕೆ ಭಾರತೀಯರಿಗೆ ಪುರಾತನ ಕಾಲದಿಂದಲೂ ತಿಳಿದಿದೆ.
• ಈ ಕೈಗಾರಿಕೆಯನ್ನ ಕಬ್ಬು ಬೆಳೆಯುವ ಪ್ರದೇಶದಲ್ಲಿ ಸ್ಥಾಪಿಸಲಾಗುತ್ತಿದೆ.
• ಭಾರತದ ಬಹಳಷ್ಟು ಸಕ್ಕರೆ ಕೈಗಾರಿಕೆಗಳು ಗಂಗಾ ನದಿಯ ಮೈದಾನ ಪ್ರದೇಶದಲ್ಲಿ ಸ್ಥಾಪಿತಗೊಂಡಿವೆ.
• ಈ ಕೈಗಾರಿಕೆಯನ್ನು ಹೊಂದಿರುವ ಪ್ರಮುಖ ರಾಜ್ಯಗಳೆಂದರೆ ಮಹಾರಾಷ್ಟ್ರ, ಉತ್ತರ ಪ್ರದೇಶ, ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶ, ಮಧ್ಯ ಪ್ರದೇಶ ಮೊದಲಾದವು.
• ಭಾರತದಿಂದ ಸಕ್ಕರೆಯು ಯು.ಎಸ್.ಎ. ಬ್ರಿಟನ್, ಇರಾನ, ಕೆನಡಾ, ಮಲೇಷಿಯಾ ದೇಶಗಳಿಗೆ ರಫ್ತಾಗುತ್ತದೆ.
• ಉತ್ತರ ಪ್ರದೇಶದ ಗೋರಖಪುರ ಜಿಲ್ಲೆ ಸಕ್ಕರೆ ಕೈಗಾರಿಕೆಗಳನ್ನು ಹೊಂದಿರುವದರಿಂದ ಇದನ್ನು ಭಾರತದ ಜಾವಾ ಎಂದು ಕರೆಯುವರು.

4) ಕಾಗದದ ಕೈಗಾರಿಕೆ


• ಭಾರತದಲ್ಲಿ ಮೊದಲ ಕಾಗದದ ಕೈಗಾರಿಕೆಯು 1840 ರಲ್ಲಿ ಪಶ್ಚಿಮ ಬಂಗಾಳದ ಸೆರಾಂಪುರದಲ್ಲಿ ಹೂಗ್ಲಿನದಿ ದಡದಲ್ಲಿ ಸ್ಥಾಪನೆಗೊಂಡಿತು.
• ಅರಣ್ಯಗಳಿಂದ ದೊರೆಯುವ ಬಿದಿರು, ಮರದ ತಿರುಳು, ಹುಲ್ಲು, ಕಾಗದ ತಯಾರಿಕೆಯಲ್ಲಿ ಬಳಸುವ ಪ್ರಮುಖ ಕಚ್ಚಾ ವಸ್ತುಗಳು
• ದೇಶದ ಹೆಚ್ಚಿನ ಕಾಗದ ಕೈಗಾರಿಕೆಗಳು ಪಶ್ಚಿಮ ಬಂಗಾಳದಲ್ಲಿ ಕಂಡುಬರುತ್ತವೆ. ಇದಲ್ಲದೆ ಮುಂಬೈ, ಪೂನಾ, ಚಿಂದ್ವಾರ, ಅಮರಾವತಿ, ನಾಗಪುರ, ನಾಸಿಕ, ಕರಾಡ, ಆಂಧ್ರಪ್ರದೇಶದ ರಾಜಮಂಡ್ರಿ, ರಾಯಘಡ್, ತಿರುಪತಿ, ಉತ್ತರ ಪ್ರದೇಶದ ಮಿರತ, ವಾರಣಾಸಿ, ಗಾಜಿಯಾಬಾದ, ಲಕ್ನೊ, ಪ್ರಮುಖವಾಗಿವೆ. ಗುಜರಾತ, ಓರಿಸ್ಸಾ, ಮಧ್ಯಪ್ರದೇಶ, ತಮಿಳುನಾಡಿನ ಹಲವು ಕಡೆ ಕಾಗದ ಕೈಗಾರಿಕೆ ಸ್ಥಾಪನೆಗೊಂಡಿವೆ.
• ನ್ಯೂಸ್ ಪ್ರಿಂಟ್ ಕಾಗದವನ್ನು ನಾರ್ವೆ, ಸ್ವೀಡನ್, ಕೆನಡಾ ಮತ್ತು ಯುಎಸ್ಎ ದಿಂದ ಆಮದು ಮಾಡಿಕೊಳ್ಳಲಾಗುತ್ತದೆ.

5) ಮಾಹಿತಿ ತಂತ್ರಜ್ಞಾನ


• ಭಾರತ ಸರಕಾರವು ಸಾಫ್ಟವೇರ್ ಉದ್ಯಮ ಬೆಳವಣಿಗೆಯನ್ನು ಪ್ರೋತ್ಸಾಹಿಸಿ ರಫ್ತನ್ನು ಉತ್ತೇಜಿಸಲು ಸಾಫ್ಟವೇರ್ ಟೆಕ್ನಾಲಜಿಪಾರ್ಕಗಳನ್ನು (STP) 1991 ರಲ್ಲಿಯೇ ಸ್ಥಾಪಿಸಿತು.
• ಇಂದು ದೇಶದಲ್ಲಿ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ಆಂಧ್ರ ಪ್ರದೇಶ ರಾಜ್ಯಗಳು ಈ ಉದ್ಯಮದ ಮೇಲೆ ಸಂಪೂರ್ಣ ಹತೋಟಿಯನ್ನು ಸಾಧಿಸಿವೆ. ಈ ರಾಜ್ಯಗಳಲ್ಲಿ ಮಾಹಿತಿ ತಂತ್ರಜ್ಞಾನದ ತರಬೇತಿ ಕೇಂದ್ರ ಹಾಗೂ ವಿಶ್ವವಿದ್ಯಾನಿಲಯಗಳನ್ನು ಅಭಿವೃದ್ಧಿ ಪಡಿಸಿವೆ. ಸಾಫ್ಟ್ವೇರ್ ಮುಖ್ಯ ರಫ್ತಿನ ಸರಕಾಗಿದ್ದು, ವಿದೇಶೀ ವಿನಿಮಯ ಗಳಿಕೆಗೆ ಸಹಾಯಕವಾಗಿದೆ.
• ಬೆಂಗಳೂರು ಮಾಹಿತಿ ತಂತ್ರಜ್ಞಾನದ ಮುಖ್ಯ ಕೇಂದ್ರವಾಗಿದ್ದು ಇದನ್ನು ‘ಸಿಲಿಕಾನ್ ಸಿಟಿ’ ಎಂದು ಕರೆಯಲಾಗಿದೆ.