“ಸೆಲೆಬ್ರೆಟಿಂಗ್ ಯೋಗ” ಮೊಬೈಲ್ app ಬಿಡುಗಡೆ:
ಯೋಗವನ್ನು ಮೊತ್ತಷ್ಟು ಜನಪ್ರಿಯ ಗೊಳಿಸಲು ಕೇಂದ್ರ ವಿಜ್ಞಾನ ಮತ್ತು ತಂತ್ತಜ್ಞಾನ ಸಚಿವಾಲಯವು “ಸೆಲೆಬ್ರೇಟಿಂಗ್ ಯೋಗ” ಹೆಸರಿನಲ್ಲಿ ಮೊಬೈಲ್ app ಅನ್ನು ಅಭಿವೃದ್ದಿ ಪಡಿಸಿ ಬಿಡುಗಡೆ ಮಾಡಿದೆ. 2017 ರ ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಲು ಮತ್ತು ಅದರ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಈ app ಅನ್ನು ಬಿಡುಗಡೆ ಮಾಡಲಾಗಿದೆ ವಿಶ್ವ ಸಂಸ್ಥೆಯು ಜೂನ್ 21 ಅನ್ನು ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನಾಗಿ ಘೋಷಿಸಿದೆ 2014 ಡಿಸೆಂಬರ್ 11 ರಂದು ನಡೆದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜೂನ್ 21 ಅನ್ನು ಅಂತರರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲು ಒಮ್ಮತದಿಂದ ಒಪ್ಪಿಕೊಳ್ಳಲಾಯಿತು ಜೂನ್ 21 ಉತ್ತರಗೋಳಾರ್ಧದಲ್ಲಿ ಅತ್ಯಂತ ಧೀರ್ಘ ದಿನವಾಗಿರುತ್ತದೆ ಮೊದಲ ಅಂತರರಾಷ್ಟ್ರೀಯ ಯೋಗ ದಿನವನ್ನು ಜೂನ್ 21 2015 ರಲ್ಲಿ ಆಚರಿಸಲಾಯಿತು.