ರಾಜ್ಯ ಶಾಸಕಾಂಗ

 

ವಿಧಾನ ಪರಿಷತ್ತು


* ಪ್ರತಿಯೊಂದು ರಾಜ್ಯವು ತನ್ನದೇ ಆದ ಶಾಸಕಾಂಗವನ್ನು ಹೊಂದಬಹುದು (168ನೇ ವಿಧಿಯಿಂದ 212ನೇ ವಿಧಿ)
* ಸಂವಿಧಾನದ 6ನೇ ಭಾಗದ 3ನೇ ಅಧ್ಯಾಯದಲ್ಲಿ ರಾಜ್ಯ ಶಾಸಕಾಂಗದ ಬಗ್ಗೆ ಪ್ರಸ್ತಾಪಿಸಲಾಗಿದೆ.
* ಕೆಲವು ರಾಜ್ಯಗಳಲ್ಲಿ ದ್ವಿ- ಸದನ ವ್ಯವಸ್ಥೆ ಇದ್ದರೆ, ಇನ್ನು ಕೆಲವು ರಾಜ್ಯಗಳಲ್ಲಿ ಏಕಸದನ ಶಾಸಕಾಂಗ ವ್ಯವಸ್ಥೆಯಿದೆ.
* ದ್ವಿ-ಸದನ ಹೊಂದಿರುವ ರಾಜ್ಯಗಳೆಂದರೆ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಕರ್ನಾಟಕ, ಬಿಹಾರ, ಉತ್ತರಪ್ರದೇಶ, ಆಂಧ್ರಪ್ರದೇಶ (6 ರಾಜ್ಯಗಳಲ್ಲಿ ಮಾತ್ರ)
* ರಾಜ್ಯ ಶಾಸಕಾಂಗ, ರಾಜ್ಯಪಾಲರು, ವಿಧಾನಸಭೆ ಹಾಗೂ ವಿಧಾನ ಪರಿಷತ್ತುಗಳನ್ನು ಒಳಗೊಂಡಿರುತ್ತದೆ.
* ರಾಜ್ಯಪಾಲರು ರಾಜ್ಯಶಾಸಕಾಂಗದ ಭಾಗವಾಗಿರುತ್ತಾರೆ. (ಇವರು ರಾಜ್ಯ ಶಾಸಕಾಂಗದ ಸದಸ್ಯರಲ್ಲ)
* ಮೊದಲ ಬಾರಿಗೆ 1969 ಅಗಸ್ಟ್ 1 ರಲ್ಲಿ ಸಂಸತ್ ಪಶ್ಚಿಮ ಬಂಗಾಳದ ವಿಧಾನ ಪರಿಷತ್ತನ್ನು ರದ್ದುಪಡಿಸಿತು.

* ವಿಧಾನ ಪರಿಷತ್ ರಾಜ್ಯ ಶಾಸಕಾಂಗದ ಮೇಲ್ಮನೆ ಅಥವಾ ಹಿರಿಯರ ಸದನ ಎಂದು ಕರೆಯುತ್ತಾರೆ.
* ರಾಜ್ಯಗಳಲ್ಲಿರುವ ವಿಧಾನಪರಿಷತ್ತನ್ನು ರದ್ದುಗೊಳಿಸಬಹುದು. ಅಥವಾ ವಿಧಾನಪರಿಷತ್ತು ಇಲ್ಲದ ರಾಜ್ಯಗಳು ಹೊಸದಾಗಿ ವಿಧಾನ ಪರಿಷತ್ತನ್ನು ರಚಿಸಿಕೊಳ್ಳಬಹುದು (169ನೇ ವಿಧಿ)
* ಸಂವಿಧಾನದ 171 ನೇ ವಿಧಿ ವಿಧಾನ ಪರಿಷತ್ತಿನ ಬಗ್ಗೆ ಪ್ರಸ್ತಾಪಿಸುತ್ತದೆ.
* ವಿಧಾನ ಪರಿಷತ್ತಿನ ಸದಸ್ಯರ ಸಂಖ್ಯೆ 1/3 ರಷ್ಟನ್ನು ಮೀರುವಂತಿಲ್ಲ ಹಾಗೂ 40 ಸದಸ್ಯರಿಗಿಂತ ಕಡಿಮೆಯಿರಬಾರದು.
* ವಿಧಾನ ಪರಿಷತ್ತಿನಲ್ಲಿ ಚುನಾಯಿತ ಹಾಗೂ ನಾಮಕರಣಗೊಂಡ ಸದಸ್ಯರಿರುತ್ತಾರೆ.
* ಕರ್ನಾಟಕ ವಿಧಾನ ಪರಿಷತ್ 75 ಸದಸ್ಯರನ್ನು ಒಳಗೊಂಡಿದೆ.

ಚುನಾವಣಾ ವಿಧಾನ


ವಿಧಾನ ಪರಿಷತ್ ಸದಸ್ಯರನ್ನು ವಿವಿಧ ಕ್ಷೇತ್ರಗಳ ಮೂಲಕ ಚುನಾಯಿಸಲಾಗುತ್ತದೆ. ಅಂತಹ ಕ್ಷೇತ್ರಗಳೆಂದರೆ
* 1/3 ರಷ್ಟು ಸದಸ್ಯರನ್ನು ವಿಧಾನಸಭೆಯ ಸದಸ್ಯರಿಂದ ಚುನಾಯಿಸಲಾಗುತ್ತದೆ. ಆಯ್ಕೆಗೊಳ್ಳುವ ಸದಸ್ಯರು ವಿಧಾನಸಭೆಯ ಸದಸ್ಯರಾಗಿರಬಾರದು.
* 1/3 ರಷ್ಟು ಸದಸ್ಯರನ್ನು ಸ್ಥಳೀಯ ಸಂಸ್ಥೆಗಳಿಂದ ಚುನಾಯಿಸಲಾಗುತ್ತದೆ. (ಅಂದರೆ ಮುನಿಸಿಪಾಲಿಟಿ, ಕಾರ್ಪೋರೇಶನ, ತಾಲೂಕು, ಜಿಲ್ಲಾ ಮಂಡಳಿ ಮತ್ತು ಪಂಚಾಯತ ಮೊದಲಾದವುಗಳು)
* 1/12 ರಷ್ಟು ಸದಸ್ಯರನ್ನು ಪದವೀಧರ ಕ್ಷೇತ್ರದಿಂದ ಚುನಾಯಿಸಲಾಗುತ್ತದೆ.ಭಾರತದ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದು ಕನಿಷ್ಟ 3 ವರ್ಷಗಳಾಗಿರಬೇಕು.
* 1/6 ರಷ್ಟು ಸದಸ್ಯರನ್ನು ಕಲೆ, ಸಾಹಿತ್ಯ ವಿಜ್ಞಾನ, ಸಹಕಾರ ಚಳುವಳಿ, ಸಮಾಜ ಸೇವೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಹೆಸರು ಮಾಡಿದ ವ್ಯಕ್ತಿಗಳನ್ನು ರಾಜ್ಯಪಾಲರು ನಾಮಕರಣ ಮಾಡುತ್ತಾರೆ.

ಅರ್ಹತೆಗಳು ಮತ್ತು ಅಧಿಕಾರಾವಧಿ


* ಭಾರತೀಯ ಪ್ರಜೆಯಾಗಿರಬೇಕು
* 30 ವರ್ಷ ವಯಸ್ಸಾಗಿರಬೇಕು.
* ಯಾವುದೇ ಲಾಭಾದಯಕ ಹುದ್ದೆಯಲ್ಲಿರಬಾರದು (ಕೇಂದ್ರ ಅಥವಾ ರಾಜ್ಯ ಸರ್ಕಾರದ)
* ಸಂಸತ್ ಕಾಲ ಕಾಲಕ್ಕೆ ನಿಗದಿಪಡಿಸಿದ ಅರ್ಹತೆ ಹೊಂದಿರಬೇಕು.
* ವಿಧಾನ ಪರಿಷತ್ತಿನ ಸದಸ್ಯರ ಅಧಿಕಾರಾವಧಿ 6 ವರ್ಷಗಳು ಇದು ಶಾಶ್ವತ ಸದನ, ವಿಧಾನ ಪರಿಷತ್ತನ್ನು ವಿಸರ್ಜಿಸುವಂತಿಲ್ಲ. 6 ವರ್ಷದ ಅವಧಿ ಮುಗಿದ ನಂತರ 1/3 ರಷ್ಟು ಸದಸ್ಯರು ಪ್ರತಿ 2 ವರ್ಷಗಳಿಗೊಮ್ಮೆ ನಿವೃತ್ತಿಯಾಗುತ್ತಾರೆ.
* ವಿಧಾನ ಪರಿಷತ್ತಿನ ಅಧಿವೇಶನ ನಡೆಸಲು ಕನಿಷ್ಠ 1/10 ರಷ್ಟು ಸದಸ್ಯರ ಹಾಜರಾತಿ ಅಗತ್ಯ
* ವಿಧಾನ ಪರಿಷತ್ತಿನ ಅಧಿವೇಶನ ವರ್ಷದಲ್ಲಿ 2 ಬಾರಿ ನಡೆಯಬೇಕಾಗುತ್ತದೆ. ಎರಡು ಅಧಿವೇಶನಗಳ ನಡುವಿನ ಅಂತರ 6 ತಿಂಗಳು ಮೀರುವಂತಿಲ್ಲ.
* 182 ನೇ ವಿಧಿ ಸಭಾಪತಿಯ ಸ್ಥಾನಕ್ಕೆ ಅವಕಾಶ ಕಲ್ಪಿಸಿದೆ.

ಅಧಿಕಾರ ಮತ್ತು ಕರ್ತವ್ಯಗಳು


1. ಶಾಸನೀಯ ಅಧಿಕಾರಗಳು
* ಶಾಸನ ರಚನೆಯ ವಿಷಯದಲ್ಲಿ ವಿಧಾನ ಸಭೆಯಷ್ಟೆ ಅಧಿಕಾರವನ್ನು ವಿಧಾನ ಪರಿಷತ್ ಹೊಂದಿದೆ. (ಹಣಕಾಸಿನ ಮಸೂದೆ ಹೊರತುಪಡಿಸಿ)
* ಎರಡು ಸಭೆಗಳ ಅನುಮೋದನೆಯಿಲ್ಲದೆ ಯಾವುದೇ ಮಸೂದೆ ಅಂಗೀಕಾರವಾಗುವುದಿಲ್ಲ.
* ವಿಧಾನ ಪರಿಷತ್ ಒಂದು ಸಾಮಾನ್ಯ ಮಸೂದೆಯನ್ನು 4 ತಿಂಗಳು ತಡೆ ಹಿಡಿಯುವ ಅಧಿಕಾರ ಹೊಂದಿದೆ. ಅಂದರೆ ವಿಧಾನಸಭೆಯಿಂದ ಅಂಗೀಕಾರವಾದ ಮಸೂದೆ ವಿಧಾನ ಪರಿಷತ್‍ಗೆ ಬಂದಾಗ ಮೊದಲ ಬಾರಿ 3 ತಿಂಗಳ ಕಾಲ ಎರಡನೇ ಬಾರಿ 1 ತಿಂಗಳ ಕಾಲ ಒಟ್ಟು 4 ತಿಂಗಳ ಕಾಲ ಮಸೂದೆಯನ್ನು ತಡೆಹಿಡಿಯಬಹುದು.
2. ಹಣಕಾಸಿನ ಮೇಲೆ ನಿಯಂತ್ರಣ
* ವಿಧಾನ ಪರಿಷತ್ತಿಗೆ ಹಣಕಾಸಿನ ಮಸೂದೆಯನ್ನು 14 ದಿನಗಳ ಕಾಲ ತಡೆಹಿಡಿಯುವ ಅಧಿಕಾರ ಬಿಟ್ಟರೆ ಬೇರೆ ಯಾವ ಅಧಿಕಾರ ಇರುವುದಿಲ್ಲ.
3. ಆಡಳಿತದ ಮೇಲೆ ನಿಯಂತ್ರಣ
* ಸರ್ಕಾರದ ನೀತಿ, ನಿರ್ಧಾರಗಳು, ಆಡಳಿತಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಿ ಸಲಹೆ ನೀಡುವ ಅಧಿಕಾರ ಮಾತ್ರ ಇರುತ್ತದೆ.
4. ಚುನಾವಣಾ ಅಧಿಕಾರಗಳು
* ವಿಧಾನ ಪರಿಷತ್ತಿನ ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಚುನಾಯಿಸುತ್ತಾರೆ.