Loading [Contrib]/a11y/accessibility-menu.js

ಚಾರ್‍ಧಾಮ್ ರೈಲು ಯೋಜನೆ

 

ಹಿಂದುಗಳ ಪವಿತ್ರ ಯಾತ್ರಾ ಕ್ಷೇತ್ರಗಳಾದ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ್, ಮತ್ತು ಬದರಿನಾಥ್ ನಡುವೆ ರೈಲ್ವೆ ಸಂಪರ್ಕ ಕಲ್ಪಿಸುವ ಯೋಜನೆಯೇ ಚಾರ್‍ಧಾಮ್ ರೈಲು ಯೋಜನೆ. ಈ ಯೋಜನೆಯ ಮಾರ್ಗ ಉತ್ತರಖಂಡದ ಡೆಹ್ರಾಡೂನ್‍ನಿಂದ ಆರಂಭವಾಗಿ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ್ ಬದರಿನಾಥ ಮೂಲಕ ಹಾದುಹೋಗಿ ಕರ್ಣಪ್ರಯೋಗನಲ್ಲಿ ಅಂತ್ಯಗೊಳ್ಳಲಿದೆ. ಒಟ್ಟು 327 ಕಿ.ಮೀ ಉದ್ದದ ಈ ಮಾರ್ಗವನ್ನು 43,292 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಈ ಮಾರ್ಗದಲ್ಲಿ ಸುಮಾರು 279 ಕಿ.ಮೀ ಉದ್ದದ ಒಟ್ಟು 61 ಸುರಂಗ ಮಾರ್ಗಗಳು ಮತ್ತು 23 ನಿಲ್ದಾಣಗಳು ಇರಲಿವೆ.ಈ ಯೋಜನೆಯ ಹೊಣೆಗಾರಿಕೆಯನ್ನು ರೈಲು ವಿಕಾಸ್ ನಿಗಮ ಲಿಮಿಟೆಡ್ ವಹಿಸಿಕೊಂಡಿದೆ.