ದೇಶ ಸುತ್ತು ; ಕೋಶ ಓದು
 
ಗಾದೆಗಳು ಜನಪದರ ಜೀವನದ ಅನುಭವದ ನುಡಿಮುತ್ತುಗಳು ಇವುಗಳಿಂದ ಜೀವನದ ಮ್ಯೌ ಹೆಚ್ಚುತ್ತದೆ.ಆದ್ದರಿಂದಲೇ ‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ‘ಗಾದೆಗಳನ್ನು ವೇದಗಳಿಗೆ ಸಮಾನ’ ಎಂದುಹೇಳುವರು. ಅಂತಹ ಹಲವು ಪ್ರಸಿದ್ಧ ಗಾದೆಗಳಲ್ಲಿ ಇದು ಒಂದಾಗಿದೆ.
ಮನುಷ್ಯನಿಗೆ ಲೋಕಜ್ಞಾನ ಬಹಳ ಮುಖ್ಯ.ಅಂದರೆ ಒಂದು ದೇಶ ಸುತ್ತುವುದರಿಂದ ಪ್ರದೇಶದ ಜನರ ಆಚಾರ,ವಿಚಾರ,ಪದ್ಧತಿ,ರೀತಿ,ನೀತಿಗಳಳ ಅರಿವಾಗುತ್ತದೆ.ನಮಗೆ ತಿಳಿಯದೇ ಇರುವ ಎಷ್ಟೋ ವಿಷಯಗಳು ತಿಳಿಯುತ್ತವೆ.
ಲೋಕಸುತ್ತುವುದೇ ಒಂದು ಬಗೆಯ ಜ್ಞಾನಾರ್ಜನೆ ಎನಿಸಿದೆ.ಅದರಂತೆ ಕೋಶ ಓದುವುದು ಎಂದರೆ ಬೇರೆಬೇರೆ ವಿಷಯಗಳಿಗೆ ಸಂಬಂಧಿಸಿದ ಗ್ರಂಥಗಳನ್ನು ಅಧ್ಯಯನ ಮಾಡುವುದು , ಇಡೀ ಪ್ರಪಂಚದ ಜ್ಞಾನ ಪುಸ್ತಕಗಳಲ್ಲಿ ಅಡಗಿದೆ.
ಹೀಗೆ ಅಡಕವಾಗಿರುವ ವಿಷಯಗಳನ್ನು ಓದಿ ಅದನ್ನು ಜೀವನದಲ್ಲಿ ಅನ್ವಯ ಮಾಡಿಕೊಂಡರೆ ನಮ್ಮ ಬದುಕು ಹಸನಾಗುತ್ತದೆ.ಇವೆರಡರ ಉದ್ದೇಶವು ಅಂತಿಮವಾಗಿ ಅನುಭವಗಳಿಸುವುದಾಗಿದೆ.