ಸರ್ವೋಚ್ಛ ನ್ಯಾಯಾಲಯ

 

* ಭಾರತದ ನ್ಯಾಯಿಕ ವ್ಯವಸ್ಥೆಯನ್ನು 1935 ರ ಕಾಯ್ದೆಯಿಂದ ಅಳವಡಿಸಿಕೊಳ್ಳಲಾಗಿದೆ.
* ಸಂವಿಧಾನದ 5ನೇ ಭಾಗದಲ್ಲಿ 124 ನೇ ವಿಧಿಯಿಂದ 147 ನೇ ವಿಧಿಯವರೆಗೆ ಸರ್ವೋಚ್ಛ ನ್ಯಾಯಾಲಯದ ರಚನೆ, ಕಾರ್ಯಗಳ ವ್ಯಾಪ್ತಿಯ ಬಗ್ಗೆ ಪ್ರಸ್ತಾಪಿಸಿದೆ.
* ಸರ್ವೋಚ್ಛ ನ್ಯಾಯಾಲಯವು 1950 ಜನವರಿ 28 ರಂದು ಜಾರಿಗೆ ಬಂದಿತು.
* ಭಾರತ ನ್ಯಾಯಾಂಗ ವ್ಯವಸ್ಥೆಯಲ್ಲಿ ಸರ್ವೋಚ್ಛ ನ್ಯಾಯಾಲಯ ಅತ್ಯುನ್ನತ ಸ್ಥಾನ ಪಡೆದಿದೆ.
* ಸರ್ವೋಚ್ಛ ನ್ಯಾಯಾಲಯವನ್ನು ‘ಮನವಿಯ ಅಂತಿಮ’ ನ್ಯಾಯಾಲಯ ಎಂದು ಸಹ ಕರೆಯುತ್ತಾರೆ. ಇದರ ಕೇಂದ್ರ ಕಛೇರಿ ನವದೆಹಲಿಯಲ್ಲಿದೆ.
* ಭಾರತದ ನ್ಯಾಯಾಂಗ ವ್ಯವಸ್ಥೆ ಏಕೀಕೃತ ನ್ಯಾಯಾಂಗ ವ್ಯವಸ್ಥೆಯಾಗಿದೆ.
* ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರ ಸಂಖ್ಯೆ ಪ್ರಾರಂಭದಲ್ಲಿ 8 ನ್ಯಾಯಾಧೀಶರಿದ್ದರು. ಇಂದು ಮುಖ್ಯ ನ್ಯಾಯಾಧೀಶರನ್ನೊಳಗೊಂಡಂತೆ 25 ಜನ ನ್ಯಾಯಾಧೀಶರಿದ್ದಾರೆ. 1986 ರಲ್ಲಿ ನ್ಯಾಯಾಧೀಶರ ಸಂಖ್ಯೆ ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಅಧಿಕಾರ ಸಂಸತ್ತಿಗೆ ನೀಡಲಾಗಿದೆ.
* ಸರ್ವೋಚ್ಛ ನ್ಯಾಯಾಲಯದ ಅಧೀನದಲ್ಲಿ 24 ಉಚ್ಚ ನ್ಯಾಯಾಲಯಗಳು, ಜಿಲ್ಲಾ ನ್ಯಾಯಾಲಯಗಳು, ಅಧೀನ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ.

ನ್ಯಾಯಾಧೀಶರಾಗಲು ಇರಬೇಕಾದ ಅರ್ಹತೆಗಳು (124 ನೇ ವಿಧಿ)


* ಭಾರತದ ಪ್ರಜೆಯಾಗಿರಬೇಕು
* ಯಾವುದಾದರೂ ಉಚ್ಚ ನ್ಯಾಯಾಲಯದಲ್ಲಿ 5 ವರ್ಷಗಳ ಕಾಲ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿರಬೇಕು ಅಥವಾ ಯಾವುದಾದರೂ ಉಚ್ಚ ನ್ಯಾಯಾಲಯದಲ್ಲಿ 10 ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿರಬೇಕು.
* ರಾಷ್ಟ್ರಪತಿಯವರ ದೃಷ್ಟಿಯಲ್ಲಿ ಹೆಸರಾಂತ ನ್ಯಾಯವಾದಿಯಾಗಿರಬೇಕು.
* ರಾಷ್ಟ್ರಪತಿಯವರು ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರನ್ನು ನೇಮಿಸುತ್ತಾರೆ.
* ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರ ಅಧಿಕಾರಾವಧಿ 65 ವರ್ಷ.
* ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ನಿವೃತ್ತಿಯ ನಂತರ ಭಾರತದಲ್ಲಿರುವ ಯಾವುದೇ ನ್ಯಾಯಾಲಯದಲ್ಲಿ ವಕೀಲರಾಗಿ ಕಾರ್ಯ ನಿರ್ವಹಿಸುವಂತಿಲ್ಲ.
* ಸಂಸತ್ತು ಕಾಲಕಾಲಕ್ಕೆ ನಿಗದಿಪಡಿಸಿದ ಸಂಬಳ(ಸಂಚಿತ ನಿಧಿಯಿಂದ), ಭತ್ಯೆ, ಇತರೆ ಸೌಲಭ್ಯ ಪಡೆಯುತ್ತಾರೆ.
* ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರನ್ನು ಮಹಾಭಿಯೋಗ ಅಥವಾ ದೋಷಾ ರೋಪಣೆಯ ಮೂಲಕ ಸಂಸತ್ತಿನ ಉಭಯ ಸದನಗಳಲ್ಲಿನ 2/3 ರಷ್ಟು ಸದಸ್ಯರ ಬೆಂಬಲ ಪಡೆದು ಅಧಿಕಾರದಿಂದ ತೆಗೆಯಬಹುದು ಅಥವಾ ರಾಷ್ಟ್ರಪತಿಗೆ ತಮ್ಮ ರಾಜೀನಾಮೆ ನೀಡಬಹುದು.
* ಪದಚ್ಯುತಿಗೆ ಸಂಬಂಧಿಸಿದಂತೆ 1992 ರಲ್ಲಿ ಸುಪ್ರೀಂಕೋರ್ಟನ ನ್ಯಾಯಾಧೀಶರಾಗಿದ್ದ ವಿ. ರಾಮಸ್ವಾಮಿಯವರ ಅನುಚಿತ ವರ್ತನೆಗೆ ಸಂಸತ್ತಿನಲ್ಲಿ ಪದಚ್ಯುತಿ ನಿರ್ಣಯ ಮಂಡಿಸಿ ವಿಫಲವಾಯಿತು.
* ರಾಷ್ಟ್ರಪತಿಯವರು ಸುಪ್ರೀಂಕೋರ್ಟನ ಹಂಗಾಮಿ ನ್ಯಾಯಾಧೀಶರನ್ನು ನೇಮಿಸುವ ಅಧಿಕಾರ ಹೊಂದಿರುತ್ತಾರೆ.

ಅಧಿಕಾರ ವ್ಯಾಪ್ತಿ


1. ಮೂಲ ಅಧಿಕಾರ ವ್ಯಾಪ್ತಿ (131 ನೇ ವಿಧಿ) :
* ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವಿನ ವಿವಾದಗಳು
* ರಾಜ್ಯ – ರಾಜ್ಯಗಳ ನಡುವಿನ ವಿವಾದಗಳು
* ಎರಡು ಅಥವಾ ಎರಡಕ್ಕಿಂತ ಹೆಚ್ಚು ರಾಜ್ಯಗಳ ನಡುವಿನ ವಿವಾದಗಳು
* ಮೂಲಭೂತ ಹಕ್ಕುಗಳು
* ನದಿ ನೀರು ವಿವಾದಗಳು
* ಹಣಕಾಸಿನ ಆಯೋಗಕ್ಕೆ ಸಂಬಂಧಿಸಿದ ವಿವಾದಗಳು.
2. ಅಫಿಲು ಅಧಿಕಾರ ವ್ಯಾಪ್ತಿ (136-136ನೇ ವಿಧಿ) :
* ಸಂವಿಧಾನಾತ್ಮಕ ಪ್ರಕರಣಗಳು
* ಸಿವಿಲ್ ಪ್ರಕರಣಗಳು
* ವಿಶೇಷ ಮನವಿಗಳು
3. ಸಲಹಾ ಅಧಿಕಾರ ವ್ಯಾಪ್ತಿ (143ನೇ ವಿಧಿ) :
* ರಾಷ್ಟ್ರಪತಿಯವರು ಯಾವುದೇ ವಿಷಯ ಅಥವಾ ಮಸೂದೆಯ ಬಗ್ಗೆ ಸಲಹೆಯನ್ನು ಕೇಳಿದಂತಹ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು ಸಲಹೆ ನೀಡುವ ಅಧಿಕಾರ ಹೊಂದಿದೆ.
* ಕಾನೂನಿಗೆ ಸಂಬಂಧಪಟ್ಟ ವಿವಾದಗಳು
4. ಪುನರ್ ಪರಿಶೀಲನಾ ವ್ಯಾಪ್ತಿ (137ನೇ ವಿಧಿ) :
* ಸರ್ವೋಚ್ಚ ನ್ಯಾಯಾಲಯ ತಾನು ನೀಡಿದ ತೀರ್ಪುಗಳನ್ನು ಹಾಗೂ ಆದೇಶಗಳನ್ನು ಪುನರ್ ಪರಿಶೀಲಿಸುವ ಅಧಿಕಾರ ಹೊಂದಿದೆ.
5. ವಿಶೇಷ ಆಜ್ಞೆ ಹೊರಡಿಸುವ (ರಿಟ್‍ಗಳು) :
* ಮೂಲಭೂತ ಹಕ್ಕುಗಳ ರಕ್ಷಣೆಯ ಬಗ್ಗೆ ವಿಶೇಷ ರಿಟ್‍ಗಳನ್ನು ಹೊರಡಿಸುವ ಅಧಿಕಾರ
ಅಂತಹ ಪ್ರಮುಖ ರಿಟ್‍ಗಳೆಂದರೆ :
1. ಬಂಧಿ ಪ್ರತ್ಯಕ್ಷೀರಣ (ಹೇಬಿಯಸ್ ಕಾರ್ಪಸ್ )
2. ಪರಮಾದೇಶ (ಮ್ಯಾಂಡಮಸ್)
3. ಪ್ರತಿಬಂಧಕಾಜ್ಞೆ (ಪ್ರೊಹಿಬಿಷನ್)
4. ಷರ್ಷಿಯೊರರಿ
5. ಕೋವಾರಂಟೊ
6. ಸಂಯುಕ್ತ ವ್ಯವಸ್ಥೆಯ ರಕ್ಷಕ.
7. ದಾಖಲೆಗಳ ನ್ಯಾಯಾಲಯ (ನ್ಯಾಯಾಲದ ಕಾರ್ಯಕಲಾಪಗಳು ನೀಡಿದ ತೀರ್ಪುಗಳ ಸಂಗ್ರಹಕ್ಕೆ)
8. ಸಂವಿಧಾನದ ರಕ್ಷಕ (121 ನೇ ವಿಧಿ)
9. ನೇಮಕಾತಿ ಮೇಲ್ವಿಚಾರಣೆಯ ಅಧಿಕಾರ.

ವಿಶೇಷ ಅಧಿಕಾರಗಳು


* ಸಂವಿಧಾನದ 71 ನೇ ವಿಧಿಯ ಪ್ರಕಾರ ರಾಷ್ಟ್ರಪತಿ, ಉಪರಾಷ್ಟ್ರಪತಿಗಳ ಚುನಾವಣಾ ತಕರಾರು ಇತ್ಯರ್ಥ.
* ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷ ಸದಸ್ಯರ ವರ್ತನೆ ವಿಚಾರಣೆ.
* ಹೈಕೋರ್ಟ ಮೊಕದ್ದಮೆಗಳ ಇತ್ಯರ್ಥಪಡಿಸುವ ಅಧಿಕಾರ.
* ಸಂವಿಧಾನವನ್ನು ವ್ಯಾಖ್ಯಾನಿಸುವ ಅಧಿಕಾರ ಮೊದಲಾದವು.