Loading [MathJax]/extensions/MathML/mml3.js

ಪ್ರಧಾನ ಮಂತ್ರಿ ಜನ್‍ಧನ್ ಯೋಜನ (PMJDY)

 

ಪ್ರಧಾನ ಮಂತ್ರಿ ಜನ್‍ಧನ್ ಯೋಜನೆಯು ಬ್ಯಾಂಕ್ ಸೌಲಭ್ಯದಿಂದ ವಂಚಿತವಾಗಿರುವ ಸಮುದಾಯವನ್ನು ಬ್ಯಾಂಕ್ ವ್ಯವಹಾರದ ವ್ಯಾಪ್ತಿಯೊಳಗೆ ತರುವ ಕೇಂದ್ರ ಸರ್ಕಾರದ ಮಹತ್ತರ ಯೋಜನೆ ಪ್ರತಿಯೊಬ್ಬ ನಾಗರೀಕನು ಬ್ಯಾಂಕ್ ಖಾತೆಯನ್ನು ಹೊಂದುವಂತೆ ಮಾಡುವ ಉದ್ದೇಶದಿಂದ ಭಾರತ ಸರ್ಕಾರವು ಪ್ರಧಾನ ಮಂತ್ರಿ ಜನ್‍ಧನ್ ಯೋಜನೆಯಡಿಯಲ್ಲಿ ಶೂನ್ಯ ಅಥವಾ ಕನಿಷ್ಠ ಮೊತ್ತದ ಉಳಿತಾಯ ಖಾತೆ ತೆರೆಯಲು ಅವಕಾಶ ನೀಡಲಾಗಿದೆ .

ಧ್ಯೇಯ-


ಮೇರಾ ಖಾತಾ ಭಾಗ್ಯ ವಿಧಾತ

ಪ್ರಾರಂಭ:


2014 ಆಗಸ್ಟ್ 28

ಯೋಜನೆಯಡಿಯಲ್ಲಿ ಲಭ್ಯವಿರುವ ಸೌಲಭ್ಯಗಳು:


ಶೂನ್ಯ ಅಥವಾ ಕನಿಷ್ಠ ಮೊತ್ತದ ಠೇವಣಿ

ರುಪೇ ಡೆಬಿಟ್ ಕಾರ್ಡ್‍ಗಳ ಸೌಲಭ್ಯ

1 ಲಕ್ಷ ರೂಪಾಯಿಗಳವರೆಗೆ ಅಪಘಾತ ವಿಮೆ

6 ತಿಂಗಳ ನಂತರ 5000 ರೂಪಾಯಿವರೆಗಿನ ಓವರ್‍ಡ್ರಾಫ್ಟ್ ಸೌಲಭ್ಯ

NPCI ನ ತಂತ್ರಜ್ಞಾನದ ಸಹಾಯದಿಂದ ಸಾಮಾನ್ಯ ಫೋನ್ ಮೂಲಕವೂ ಸಹ ಬ್ಯಾಲೆನ್ಸ್ ಚೆಕ್ ಮಾಡಬಹುದು ಮತ್ತು ಹಣ ವರ್ಗಾವಣೆ ಮಾಡಬಹುದು ಜುಲೈ 2017 ರವರೆಗೆ ಲಭ್ಯ ವಾಗಿರುವ ಮಾಹಿತಿಗಳ ಪ್ರಕಾರ ಸುಮಾರು 58.6 ಕೋಟಿ ಖಾತೆಗಳನ್ನು ಜನಧನ್ ಯೋಜನೆಯಡಿಯಲ್ಲಿ ತೆರೆಯಲಾಗಿದ್ದು 64926.37ಕೋಟಿ ರೂಪಾಯಿ ಹಣ ಈ ಖಾತೆಗಳಲ್ಲಿ ಜಮೆಗೊಂಡಿದೆ. ಮತ್ತು 22.62 ಕೋಟಿ ರುಪೇ ಕಾರ್ಡಗಳನ್ನು ವಿತರಿಸಲಾಗಿದೆ.