“ಪರಮಾಣು ಒಪ್ಪಂದ - ಭವಿಷ್ಯತ್ತಿನ ಬಿಕ್ಕಟ್ಟು”
ಅಣುಬಂಧದ ಕೊಂಡಿ ಜೋಡಿಸಲು ಹೋಗುತ್ತಿರುವ ಭಾರತ ಅಣು ಒಪ್ಪಂದಕ್ಕೆ ಒತ್ತಾಯಿಸುತ್ತಿರುವ ಅಮೇರಿಕೆಯ ಒತ್ತಡಗಳ ಮಧ್ಯೆ ಸಿಲುಕಿ ನಲುಗಿರುವ ಕೇಂದ್ರ ಸರಕಾರ ಕೊನೆಗೂ ಬೆಂಬಲಿತ ಪಕ್ಷಗಳ ಆಕ್ರೋಶಕ್ಕೆ ಗುರಿಯಾಗಿ ಪತನದತ್ತ ಸಾಗಿದೆ. ಭಾರತ ಪರಮಾಣು ಕ್ಷೇತ್ರದಲ್ಲಿ ದಾಪುಗಾಲು ಹಾಕುವಲ್ಲಿ ಸಹಕಾರ ನೀಡಲಿರುವ “ಅಮೇರಿಕಾ” 123 ಪರಮಾಣು ಒಪ್ಪಂದವನ್ನು ಬಿಂಬಿಸಲಾಗುತ್ತಿದ್ದರೂ ಕೆಲ ಅಹಿತಕರ ಅಂಶಗಳು – ಭಾರತಕ್ಕೆ ಪ್ರತಿಬಂಧಿಸುವ ಕೆಲ ನಿಯಮಗಳೂ ಇದರಲ್ಲಿವೆ ಎಂದು ತಜ್ಞರ ಅಭಿಮತ. ರಾಜಕೀಯ ರೂಪ ಪಡೆದುಕೊಂಡ ಈ ಒಪ್ಪಂದ ಭಾರತಕ್ಕೆ ಬೇಕೆ-ಬೇಡವೇ ಎಂಬ ತೀವ್ರ ಚರ್ಚೆ ನಡೆಯುತ್ತಿರುವಾಗ ‘ಕೇಂದ್ರ’ ಯು.ಪಿ.ಎ ಸರಕಾರವು ಅಣುಬಂಧ ಒಪ್ಪಂದಕ್ಕೆ ಒಲವು ತೋರಿದ್ದೆ ಅವಘಡಕ್ಕೆ ದಾರಿಯಾಗಿ ಸರ್ಕಾರವನ್ನು ಬೆಂಬಲಿಸುತ್ತಿದ್ದ ದೊಡ್ಡ ಪಕ್ಷ ಕಮ್ಯುನಿಸ್ಟ್ ಪಕ್ಷ ಸರಕಾರಕ್ಕೆ ಬೆಂಬಲ ಹಿಂತೆಗೆದುಕೊಳ್ಳುವುದರೊಂದಿಗೆ ಕೇಂದ್ರ ಸರಕಾರ ತ್ರಿಶಂಖು ಸ್ಥಿತಿ ತಲುಪಿತು.ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ಈ ವಿಚಾರ ಜುಲೈ 8ರಂದು ಜಿ 8 ಸಮ್ಮೇಳನದಲ್ಲಿ ಭಾಗವಹಿಸಿದ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಅಂತರಾಷ್ಟ್ರೀಯ ಅಣುಬಂಧ ಆಯೋಗದ ನಿಯಮಗಳಿಗೆ ಬದ್ಧರಾಗಿ, ಪರಮಾಣುಒಪ್ಪಂದ ಮಾಡಿಕೊಳ್ಳಲಿದ್ದೇವೆ ಎಂದು ಹೇಳಿದ್ದೇ ಸರಕಾರಕ್ಕೆ ಕುತ್ತಾಗಿ ಪರಿಣಮಿಸಿದೆ. ಸುಮಾರು ಎರಡುವರ್ಷಗಳಿಂದಲೂ ಹಗ್ಗ ಜಗ್ಗಾಟದಲ್ಲಿ ತೊಡಗಿದ್ದ ಅಮೇರಿಕದೊಂದಿಗಿನ ಅಣುಬಂಧ ಒಪ್ಪಂದದ ವಿಶ್ಲೇಷಣೆ ಅದರಿಂದಾಗುವ ಲಾಭ-ಹಾನಿಗಳ ಚರ್ಚೆ ಇಂದಿನ ಅಗತ್ಯವಾಗಿದ್ದು ಅಮೇರಿಕದ ಷಡ್ಯಂತ್ರವೇನೆಂಬುದುಮನವರಿಕೆಯಾಗಲು ಒಪ್ಪಂದದ ಸಿಂಹಾವಲೋಕನದಿಂದ ಅರಿವಾಗುತ್ತದೆ.
ಆರ್ಥಿಕವಾಗಿ ಬಲಾಢ್ಯವಾಗುತ್ತಿರುವ ಭಾರತಕ್ಕೆ ಶಕ್ತಿ ಮೂಲಗಳ ಅಗತ್ಯತೆ ತೀವ್ರವಾಗಿದೆ. ವಿದ್ಯುತ್ ಶಕ್ತಿ,ಜಲವಿದ್ಯುತ್, ಪರಮಾಣು ಶಕ್ತಿ, ಔಷ್ಣೀಯ ಸ್ಥಾವರಗಳ ಶಕ್ತಿ ಹೀಗೆ ವೈವಿದ್ಯಮಯ ಮೂಲಗಳಿಂದಲೂ ಬೇಡಿಕೆಗೆ ತಕ್ಕಪೂರೈಕೆ ಸಮಸ್ಯೆಯಾಗಿಯೆ ಪರಿಣಮಿಸುತ್ತಿರುವುದರಿಂದ, ಅಲ್ಲದೇ ಇವೆಲ್ಲವುಗಳಿಂದ ಪರಿಸರಕ್ಕೆ ಹಾನಿವುಂಟಾಗಿರುವಕ್ಷೋಭೇ ಇರುವುದು ಆತಂರಿಕ ವಿಷಯವಾಗಿದೆ. ಭಾರತ ಈ ನಿಟ್ಟಿನಲ್ಲಿ ಪರಮಾಣು ಶಕ್ತಿಯ ಬಗೆಗೆ ಯೋಚಿಸುತ್ತಿದೆ.ಪರಮಾಣು ತಂತ್ರಜ್ಞಾನದಲ್ಲಿ ಭಾರತವನ್ನೂ ಶೈಶಾವಸ್ಥೆಯಲ್ಲಿದೆ. ಪರಮಾಣೂ ಇಂಧನಗಳ ಮೂಲಕ ಶಕ್ತಿ ಉತ್ಪಾದನೆಗೆಯೋಚಿಸುತ್ತಿರುವಾಗಲೇ ಅಮೇರಿಕ ಸಹಕಾರ ನೀಡುವ ಭರವಸೆ 2005ರಲ್ಲಿ ನೀಡಿತು.
2005ರ ಜುಲೈ 18ರಂದು ಭಾರತದ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಮೇರಿಕಗೆ ಬೇಟಿ ನೀಡಿದ್ದರು.ಅಲ್ಲಿನ ಅಧ್ಯಕ್ಷ ಜಾರ್ಜ ಬುಷ್ರೊಂದಿಗೆ ನಡೆದ ಮಾತುಕತೆಯಿಂದಾಗಿ ಭಾರತದ ಪರಮಾಣು ಕ್ಷೇತ್ರಕ್ಕೆ ಅಮೇರಿಕಸಹಕಾರ ನೀಡಲು ಒಪ್ಪಿ ಜುಲೈ 25ರಂದು ಈ ಬಗ್ಗೆ ಜಂಟಿ ಹೇಳಿಕೆಯನ್ನು ನೀಡಲಾಯಿತು. ಭಾರತದ ನಾಗರೀಕ ಕಬಳಕೆಯ ಪರಮಾಣು ಕಾರ್ಯಕ್ರಮಕ್ಕೆ ಇಂಧನ ಸ್ಥಾವರಕ್ಕೆ ಬೇಕಾದ ಸಾಮಾಗ್ರಿಗಳನ್ನು ಅಮೇರಿಕ ಪೂರೈಸಲಿದೆ. ಆದರೆಭಾರತದಲ್ಲಿ ರಾಜಕೀಯ ಪಕ್ಷಗಳು ಇದರ ವಿರುದ್ಧ ಕಿಡಿಕಾರಿದವು. ಬುಷ್ ಆಡಳಿತಕ್ಕೆ ಇಂಥ ವಿರೋಧ ಅಲ್ಲಿಯೂವ್ಯಕ್ತವಾಗಿದೆ. ಭಾರತ ಈ ಒಪ್ಪಂದ ಮಾಡಿಕೊಂಡಲ್ಲಿ ಭವಿಷ್ಯತ್ತಿನಲ್ಲಿ ಪರಮಾಣೂ ಕ್ಷೇತ್ರದ ಯಾವುದೇ ಕಾರ್ಯಾಚರಣೆಗಳಲ್ಲಿಅಮೇರಿಕ ಅಡ್ಡಗಾಲು ಹಾಕಬಹುದೆಂಬ ಸಂಶಯದ ಗರಿಗೆದರಿದೆ. ಅಮೇರಿಕ ತನ್ನ ಅನುಕೂಲಕ್ಕೆ ತಕ್ಕಂತೆನಿಯಮಾವಳಿಗಳನ್ನು ರೂಪಿಸಿದ್ದು ಭಾರತದ ಪಾಲಿಗೆ ನುಂಗಲಾರದ ತುತ್ತಾಗಿದೆ. ಇದರಿಂದ ನಾವೇ ಹಗ್ಗ ಕೊಟ್ಟುಕೈಕಟ್ಟಿಸಿಕೊಂಡಂತಾಗುತ್ತದೆ ಎಂಬ ಅಭಿಪ್ರಾಯವನ್ನು ಚಿಂತಕರು, ರಾಜಕೀಯ ವಿಶ್ಲೇಷಕರು ವಿಜ್ಞಾನಿಗಳು, ಸಮಾಜಸೇವಕರು ಹಾಗೂ ಹಿರಿಯರು ವ್ಯಕ್ತಪಡಿಸಿದ್ದಾರೆ.
ಅಪರೋಕ್ಷವಾಗಿ ಭಾರತಕ್ಕೆ ಪ್ರತಿಬಂಧಕವಾಗುವ ಹಲವು ನಿಯಮಗಳು ಇದರಲ್ಲಿವೆ ಎನ್ನುತ್ತಾರೆ. ವಿಜ್ಞಾನಿಗಳು& ರಾಜಕೀಯ ವಿಶ್ಲೇಷಕರು, ಭಾರತ ಸಮಗ್ರ ಅಣ್ವಸ್ತ್ರ ನಿಷೆಧ (ಎನ್ಪಿಟಿ) ಒಪ್ಪಂದಕ್ಕೆ ಸಹಿ ಹಾಕಿರದೇ ಇದ್ದರೂ ಕೂಡಒಪ್ಪಂದದ ನಿಯಮಗಳನ್ನು ಪಾಲಿಸಬೇಕು. ತನ್ನಲ್ಲಿರುವ ಅಣುಸ್ಥಾವರ ಘಟಕಗಳ ಸಾಮಾಗ್ರಿಗಳಿಗೆ ಬೇಡಿಕೆಯೇಇಲ್ಲದಿರುವಾಗ ಅಮೇರಿಕ ಪರಮಾಣು ಘಟಕಗಳಿಗೆ ಬೇಕಾದ ಸಾಮಾಗ್ರಿ ಪೂರೈಸುತ್ತದೆ. ಅಂದರೆ ಅದರ ಮಾರುಕಟ್ಟೆಭಾರತವಾಗಬೇಕು. ಈ ಒಪ್ಪಂದವು 40 ವರ್ಷಗಳ ಕಾಲಮಿತಿ ಹೊಂದಿದ್ದು ಅಲ್ಲಿಯವರೆಗೆ ಅನೇಕ ಕಟ್ಟುಪಾಡುಗಳಿಗೆಒಳಗಾಗಬೇಕು ಭಾರತ. ಅಮೇರಿಕ ಮಾತ್ರವಲ್ಲದೇ ಅಣು ಇಂಧನ ಪೂರೈಕೆ ಗುಂಪಿನ ಎಲ್ಲ ರಾಷ್ಟ್ರಗಳೊಂದಿಗೆ ಸಹಕಾರಬಾಂಧವ್ಯ ಭಾರತ ಹೊಂದಿರಬೇಕು, ಪರಮಾಣು ಸ್ಥಾವರ (ನಾಗರಿಕ ಬಳಕೆ) ಗಳನ್ನು (IAEA) ಯ ನಿಯಮಾವಳಿಗಳ ಅಡಿಯಲ್ಲಿಯೇ ಕಾರ್ಯಚರಣೆಗಳಿಗೂ ಪಡಬೇಕು. ಅಮೇರಿಕ ತನ್ನ ನಾಗರಿಕ ಪರಮಾಣು ತಂತ್ರಜ್ಞಾನವನ್ನು ಮಾತ್ರ ಪರಮಾಣು ಘಟಕಗಳಲ್ಲಿ ಭವಿಷ್ಯತ್ತಿನ ದೃಷ್ಟಿಯಿಂದ ಕಚ್ಚಾ ಸಾಮಾಗ್ರಿಗಳನ್ನು ಖರಿಸಿಟ್ಟುಕೊಳ್ಳುವಂತಿಲ್ಲ. ಈ ಒಪ್ಪಂದಕ್ಕೆಸಹಿ ಹಾಕುವ ಮುನ್ನ ಭಾರತ ಅಂತರಾಷ್ಟ್ರೀಯ ಅಣುಶಕ್ತಿ ಆಯೋಗದ ನಿಯಮಗಳನ್ನು ಅನುಸರಿಸಬೇಕು. ಭಾರತದನಾಗರಿಕ ಪರಮಾಣು ಘಟಕಗಳು ಅದರ ನಿರೀಕ್ಷಣೆಯಲ್ಲಿರಬೇಕು. ಅಮೇರಿಕ ತನ್ನಗೆ ಇಷ್ಟವಿಲ್ಲದಿದ್ದಲ್ಲಿ ಭಾರತದೊಂದಿಗಿನ ಸಹಕಾರ ಒಪ್ಪಂದ ಹಿಂತೆಗೆದುಕೊಳ್ಳಬಹುದು, ಆದರೆ 40 ವರ್ಷಗಳವರೆಗೆ ಭಾರತ ಮಾತ್ರ ಅದರ ನಿಯಮಪಾಲಿಸಬೇಕು. ಒಪ್ಪಂದವನ್ನು ಮತ್ತೆ 10 ವರ್ಷಗಳವರೆಗೆ ವಿಸ್ತರಿಸಬಹುದು. ಹೀಗೆ ಸಾಗುತ್ತಿದೆ ಒಪ್ಪಂದದ ಪ್ರಸ್ತಾಪಗಳು ಇದೇ ಕಾರಣದಿಂದಾಗಿ ಒಪ್ಪಂದ ವಿವಾದದತ್ತ ತಿರುಗಿದೆ.
ವಿಶ್ವದ ಪ್ರಮುಖ ರಾಷ್ಟ್ರಗಳನ್ನು ಗಮನಿಸಿದರೆ ಸದ್ಯಕ್ಕೆ ಯಾವ ನಾಗರಿಕರಿಗೂ ಪರಮಾಣು ಸ್ಥಾವರಗಳೊಡವೆಬೇಕಿಲ್ಲ. ಅಣು ಸ್ಥಾವರಗಳಿಗೆ ಬೇಕಾದ ಯುರೇನಿಯಂ ಅದಿರು ಆಸ್ಟ್ರೇಲಿಯಾದಲ್ಲಿ ಸಾಕಷ್ಟಿದೆ. ಆದರೆ ಅಣುಸ್ಥಾವರಗಳುಇಲ್ಲ. ಅಮೇರಿಕಾದಲ್ಲಿ ಕಳೆದ 3 ದಶಕಗಳಿಂದಲೂ ಅಣುಸ್ಥಾವರಗಳ ಸ್ಥಾಪನೆಯಿಲ್ಲ. ಜರ್ಮನಿ, ಫ್ರಾನ್ಸ್, ಬ್ರಿಟನ್,ರಷ್ಯಾ , ಜಪಾನ್ಗಳಲ್ಲಿ ಅಣುಸ್ಥಾವರಗಳು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲ. ಮೇಲಾಗಿ ಸ್ಥಾವರಗಳಿಗೆ ಉಪಕರಣ, ಸಾಮಾಗ್ರಿತಯಾರಿಕೆಯಲ್ಲಿ ಉದ್ಯಮಿಗಳಿಗೆ ಬಹುದೊಡ್ಡ ಮಾರುಕಟ್ಟೆಯಾಗಲಿದೆ ಭಾರತ. ಈ ಒಪ್ಪಂದ ಭಾರತಕ್ಕೆ ಅಗತ್ಯವಿದೆಎನ್ನುತ್ತದೆ ಸರಕಾರ. ಪ್ರಸ್ತುತ ಭಾರತದಲ್ಲಿ ಒಟ್ಟು ವಿದ್ಯುತ್ ಉತ್ಪಾದನೆ ಎಲ್ಲ ಮೂಲಗಳಿಂದಲೂ 111 ಗಿಗಾವ್ಯಾಟ್ನಷ್ಟಿದೆ, ಅದರಲ್ಲಿ ನೂಕ್ಲಿಯರ್ ಶಕ್ತಿಯ ಭಾಗ ಕೇವಲ 2.5 ರಷ್ಟು ಹೆಚ್ಚುತ್ತಿರುವ ಶಕ್ತಿ ಬೇಡಿಕೆಗೆ ಅಗತ್ಯಪ್ರಮಾಣದ ಪೂರೈಕೆಗೆ ಸಂಪನ್ಮೂಲವು ಇದ್ದರೂ ಮುಂದೊಂದು ದಿನ ಬರಿದಾಗುವುದು. ಸದ್ಯ ಭಾರತದ ಅಣುಶಕ್ತಿಯ ಬಳಕೆ 4,000 ಮೆಗಾವ್ಯಾಟ್, ಇದು ಮುಂದಿನ ದಶಕದಲ್ಲಿ 20,000 ಮೆಗಾವ್ಯಾಟ್ ಸಾಮಥ್ರ್ಯ ಹೊಂದಬಹುದು.ಭಾರತದ ಸಾಮಥ್ರ್ಯ ನೋಡಿದಲ್ಲಿ 4000 ಮೆಗಾವ್ಯಾಟ್ನಿಂದ ಇಡೀ ದೇಶದ ಅಗತ್ಯಕ್ಕೆ ತಕ್ಕಂತೆ ಇಲ್ಲ. ಬೆಳೆದ ಸಂಪನ್ಮೂಲಗಳ ಬಳಕೆ ಹೆಚ್ಚಿದರಿಂದ ಅಣುಶಕ್ತಿಯ ಬಳಕೆಗೆ ಇನ್ನೂ ದಶಕಗಳ ಕಾಲ ಕಾಯಬೇಕು. ಮುಂದಿನ 50ವರ್ಷಗಳನ್ನು ಗಮನದಲ್ಲಿರಿಸಿದಲ್ಲಿ ಎಲ್ಲ ಮೂಲಗಳಿಂದಾಗುವ ವಿದ್ಯುತ್ ಉತ್ಪಾದನೆ 1250 ಗಿಗಾವ್ಯಾಟ್ ಅಣುಶಕ್ತಿಯನ್ನೆ ನಂಬಿದಲ್ಲಿ 2050 ರ ವೇಳೆಗೆ ಶೇ. 50 ರಷ್ಟು ವಿದ್ಯುತ್ ಉತ್ಪಾದಿಸಲು ಸಾಧ್ಯ ಅದಕ್ಕಾಗಿ ಬೃಹತ್ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಈ ಮಧ್ಯೆ ಭಾರತ & ಚೀನಾಗಳು ಜಾಗತಿಕ ಆರ್ಥಿಕ ಶಕ್ತಿಯಾಗಿ ಹೊಮ್ಮುತ್ತಿರುವುದು ಶಕ್ತಿ ಸಂಪನ್ಮೂಲಗಳ ಬಳಕೆ ತೀವ್ರಗೊಂಡಿದೆ ಹಾಗೆ ಖಾಲಿಯೂ ಆಗುತ್ತಿದೆ.
ರಾಷ್ಟ್ರಕ್ಕೆ ಸದ್ಯದ ಸ್ಥಿತಿಯಲ್ಲಿ ನೈಸರ್ಗಿಕ ಸಂಪನ್ಮೂಲ ಬಳಸಿ ವಿದ್ಯುತ್ ಉತ್ಪಾದಿಸುವ ಸಾಮಥ್ರ್ಯವಿದ್ದರೆ, 16ನಾಗರಿಕ ಬಳಕೆಯ ಅಣು ಸ್ಥಾವರಗಳ ಉತ್ಪಾದನೆ ಮಾಡುತ್ತಿವೆ. ಭವಿಷ್ಯತ್ತಿನಲ್ಲಿ ಕೈಗಾರಿಕೆ, ಗೃಹ ಉಪಯೋಗ ಹೀಗೆವೈವಿಧ್ಯಮಯ ಬೇಡಿಕೆಗಳಿಗೆ ತಕ್ಕಂತೆ ಪೂರೈಸಲು ಅಣು ಶಕ್ತಿಯ ಅಗತ್ಯತೆ ಇದೆ. ಭಾರತದಲ್ಲಿ ಅಣುಶಕ್ತಿಗೆಪೂರಕವಾಗುವ ಸಂಪದ್ಭರಿತವಾಗಿದ್ದರೂ ನಿಶಸ್ತೀಕರಣ ಒಪ್ಪಂದಕ್ಕೆ ಭಾರತ ಸಹಿ ಹಾಕಿಲ್ಲ ಎಂಬ ನೆಪದಿಂದಯುರೇನಿಯಂ ನೀಡಲು ನಿರಾಕರಿಸುತ್ತಿದೆ, ಹೀಗಾಗಿ ನಾಗರಿಕ ಬಳಕೆಗೆ ಭಾರತ ಅಮೇರಿಕದ ಸಹಕಾರ ಬಯಸಿದ್ದು,ಆದರೆ ಅಮೆರಿಕದ ಲೆಕ್ಕಾಚಾರವೇ ಬೇರೆ. ಈ ಒಪ್ಪಂದದಿಂದ ತನ್ನ ಪ್ರತಿಗಾಮಿ ರಾಷ್ಟ್ರಗಳ ಪಾಲಿಗೆ ಗುರಾಣಿಯಾಗಿ ಬಳಸಿಕೊಳ್ಳುವರ, ಚೀನಾದಂತಹ ರಾಷ್ಟ್ರಗಳು ನಿಯಂತ್ರಿಸಲು, ರಷ್ಯಾದ ಇರಾನ್ ಜೊತೆಗಿನ ಬಾಂಧವ್ಯಗಳ ಕಡಿವಾಣಕ್ಕೆ ಭಾರತವನ್ನು ಪ್ರತಿ ಅಸ್ತ್ರದಂತೆ ಉಪಯೋಗಿಸುವ ಇರಾದೇ ಇರಬಹುದೆಂದು ತಜ್ಞರ ಲೆಕ್ಕಾಚಾರ.
ಇಂಧನ ಶಕ್ತಿಯ ವಿಚಾರವಾಗಿ ನೋಡಿದರೆ ಭವಿಷ್ಯತ್ತಿನ ವಿದ್ಯುಚ್ಛಕ್ತಿ ಉತ್ಪಾದನೆಗೆ ಉತ್ತಮಸಾಧನವಾಗಬಲ್ಲದು. ಅಣುಶಕ್ತಿ ಅದಕ್ಕಾಗಿಯೇ ಭಾರತದ ಅಣ್ವಸ್ತ್ರ ಪಿತಾಮಹ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರುಅಣು ಒಪ್ಪಂದದ ಬಗ್ಗೆ ಸಕಾರಾತ್ಮಕ ಧೋರಣೆ ತಳೆದಿದ್ದಾರೆ. ಆದರೆ ಒಪ್ಪಂದದ ಆಂತರಿಕ ಕಟ್ಟುಪಾಡುಗಳನ್ನು ನೋಡಿದರೆನಮಗೆ ಮಾರಕ ಎನ್ನುತ್ತಾರೆ. ಅಣುಶಕ್ತಿ ಆಯೋಗದ ಹಿಂದಿನ ಅಧ್ಯಕ್ಷ ಡಾ. ಪಿ.ಕೆ ಅಯ್ಯಂಗಾರ್, ಅಣುಶಕ್ತಿ ನಿಯಂತ್ರಣಮಂಡಳಿಯ ಹಿಂದಿನ ಅಧ್ಯಕ್ಷ ಡಾ. ಎ. ಗೋಪಾಲಕೃಷ್ಣನ್, ಭಾಭಾ ಅಣುಶಕ್ತಿ ಕೇಂದ್ರ (BARC) ದ ಹಿಂದಿನನಿರ್ದೇಶನ ಡಾ. ಎ.ಎನ್.ಪ್ರಸಾದ್, ಇತರ ಸಾಂಪ್ರಾದಾಯಿಕ ವಿದ್ಯುತ್ ಉತ್ಪಾದನಾ ವಿಧಾನಗಳಿಗಿಂತ ಅಣುಶಕ್ತಿಮೂರು ಪಟ್ಟು ಹೆಚ್ಚಿನದು. ಕೆಲ ಸಂದರ್ಭದಲ್ಲಿ ಹೊರ ದೇಶಗಳು ನಮ್ಮ ಮೇಲೆ ಅಕ್ರಮಣ ಮಾಡಿದಾಗ ನಾವುಒಪ್ಪಿಗೆಗಾಗಿ ಅಮೇರಿಕದ ಮುಖ ನೋಡಬೇಕಾಗುತ್ತದೆ. ಪರಮಾಣು ಶಕ್ತಿಗೆ ಸಂಬಂಧಿಸಿದಂತೆ ಪ್ರಯೋಗಗಳನ್ನುಕೈಗೊಳ್ಳಲು ಕೂಡ ನಿರ್ಬಂಧಗಳು ಅಡ್ಡಿಯಾಗುತ್ತಿದೆ. ಅಣು ಸಹಕಾರ ಒಪ್ಪಂದದಿಂದ ನಾವು ಶಕ್ತಿ ಉತ್ಪಾದನೆಗಾಗಿವಿದೇಶಿ ಅಣು ಇಂಧನ ಪೂರೈಕೆಯ ದಾರಿ ನೋಡಬೇಕು. ಯಾವುದೊಂದು ರಾಜನೈತಿಕ, ತಾಂತ್ರಿಕ ಅಡಚಣೆ ಬಂದರೂಕೂಡ ಇಂಧನ ಪೂರೈಕೆ ನಿಂತಾಗ ಅಪಾರ ವೆಚ್ಚದಲ್ಲಿ ನಿರ್ಮಿಸಲಾಗಿರುವ ಶಕ್ತಿ ಉತ್ಪಾದನ ಘಟಕಗಳ ಸ್ಥಿತಿ ಏನು ಎಂಬುದು ಚಿಂತನೆಗೆ ಹಚ್ಚುವುದು. ಹೈಡ್ ನಿಯಮಗಳಲ್ಲಿ ಇಂಥ ನಿಬಂಧನೆಗಳು ನಮಗೆ ಕಂಡೂ ಕಾಣದಂತೆನಿಯಂತ್ರಿಸುತ್ತವೆ ಎನ್ನುತ್ತಾರೆ ವಿಜ್ಞಾನಿಗಳು.
ಪರಮಾಣು ಕ್ಷೇತ್ರದಲ್ಲಿ ನಾವು ಸಾಕಷ್ಟು ಸಂಶೋಧನೆ ಮಾಡಿ ಪ್ರಗತಿಯತ್ತ ಸಾಗುತ್ತಿದ್ದೇವೆ. ಪರಮಾಣುಭಸ್ಮವನ್ನು ಮರು ಉಪಯೋಗಿಸಿ ಅದನ್ನು ಮತ್ತೆ ಉರಿಸಿ ವಿದ್ಯುತ್ ಉತ್ಪಾದಿಸುವ ತಾಂತ್ರಿಕತೆಯನ್ನು ನಮ್ಮ ಪರಮಾಣುವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಆದರೆ ಅಮೇರಿಕದೊಂದಿಗಿನ ಒಪ್ಪಂದವು ನಾವು ಉರಿಸಿದ ಪರಮಾಣು ಭಸ್ಮವನ್ನುಅನುಮತಿಯಿಲ್ಲದೆ ಉಪಯೋಗಿಸುವಂತಿಲ್ಲ. ಆದರೆ ನಾವು ತಾತ್ವಿಕವಾಗಿ ಬಳಸಬಹುದೆಂದು ಅಮೇರಿಕ ಹೇಳಿದೆಯೇಹೊರತು ಅದಕ್ಕೂ ಅಡ್ಡಗಾಲು ಹಾಕುವ ನಿಯಮಗಳು ಒಪ್ಪಂದದಲ್ಲಿದೆ.
ಸಾಕಷ್ಟು ಬಿಸಿಬಿಸಿ ಚರ್ಚೆಯಲ್ಲಿರುವ 123 ಅಣು ಒಪ್ಪಂದ ಭಾರತದ ಪಾಲಿಗೆ ಹೂವಿಗಿಂತ ಮಳ್ಳೇ ಜಾಸ್ತಿ ಎಂಬಂತಿದೆ ಎನ್ನುವುದೇ ಬಹುತೇಕರ ವಾದ. ಈ ಮಧ್ಯ ಈ ಒಪ್ಪಂದವನ್ನು ಜಾರಿಗೊಳಿಸಲು ಅಮೇರಿಕ ಭಾರತಕ್ಕೆಒತ್ತಾಯಿಸುತ್ತದೆ ಕಾರಣ ಡಿಸೆಂಬರ್ ಅಂತ್ಯಕ್ಕೆ ಅಮೇರಿಕಾದಲ್ಲಿ ನೂತನ ಅಧ್ಯಕ್ಷರಾಗುವವರು ಇದರ ಬಗ್ಗೆ ಯಾವ ಧೋರಣೆ ತಳೆದವರು ಎಂಬುದು ಗೊತ್ತಿಲ್ಲ. ಈಗ ಬುಷ್ ಆಡಳಿತಾವಧಿಯಲ್ಲಿಯೇ ಅದು ಜಾರಿಯಾಗಬೇಕೆಂದು ಬುಷ್ ಹಠ. ಭಾರತದಲ್ಲಿ ರಾಜಕೀಯ ಸ್ಥಿತಿ ನೋಡಿದರೆ ಅತಂತ್ರವಾಗಿದೆ ಸರಕಾರ, ಜಪಾನಿನಲ್ಲಿ ನಡೆದ ಜಿ 8 ಸಮಾರಂಭದಲ್ಲಿ ಅಣುಬಂಧಕ್ಕೆ ಬದ್ಧರಾಗುವ ವಿಚಾರ ಪ್ರಧಾನಿ ಡಾ. ಮನಮೋಹನ್ ಸಿಂಗ್ ವ್ಯಕ್ತಪಡಿಸಿದ್ದು ರಾಜಕೀಯ ವಿಪ್ಲವಕ್ಕೆಕಾರಣವಾಗಿದೆ. ಬೆಂಬಲ ನೀಡುತ್ತದೆ. ಕಮ್ಯುನಿಷ್ಟ ಪಕ್ಷ ಬೆಂಬಲ ಹಿಂತೆಗೆದುಕೊಂಡಿದೆ. ದೂರದಿಂದ ಇದನ್ನುಗಮನಿಸುತ್ತಿರುವ ಸಮಾಜವಾದಿ ಪಕ್ಷ ಮನಮೋಹನ್ರ ನಿಲುವಿಗೆ ಬೆಂಬಲ ಸೂಚಿಸಿ ಬೀಳಲಿರುವ ಸರಕಾರದ ಸಹಾಯಕ್ಕೆ ಬಂದಿದ್ದಾರೆ. ಇವೆಲ್ಲದರ ನಡುವೆ ಜಿ 8 ಸಮಾರಂಭದಲ್ಲಿ ಭಾರತ ಅಣು ಒಪ್ಪಂದದ ಕುರಿತು ತನ್ನ ನಿಲುವು ತೋರಿದೆ.
ಪರಮಾಣು ಇಂಧನವನ್ನು ನಾವು ನೆಚ್ಚಿಕೊಂಡಿರಬೇಕಿಲ್ಲ, ಜಾಗತಿಕವಾಗಿ ಪರಮಾಣು ಇಂಧನ ಉಳಿದವುಗಳಿಗಿಂತ ಉತ್ತಮ ವಾಗಿದ್ದರೂ ಸುರಕ್ಷತಾ, ಭದ್ರತೆ ದೃಷ್ಟಿಯಿಂದ ಸಾಕಷ್ಟು ವೆಚ್ಚದಾಯವೂ ಹೌದು .ಇರಾನ್ನೊಂದಿಗಿನ ಅನಿಲ ಪೈಪ್ ಲೈನ್ ಯೋಜನೆ ಬದಲಿ ಸಾಂಪ್ರಾದಾಯಿಕ ಇಂಧನ ಮೂಲಗಳಿಂದಲೂ ವಿದ್ಯುತ್ಉತ್ಪಾದನೆಗೆ ಹೊಸ ರೂಪು ನೀಡಬಹುದು.
ಈ ಒಪ್ಪಂದದಿಂದ ಅಮೇರಿಕಕ್ಕೆ ಹೆಚ್ಚಿನ ಲಾಭವಿದೆ. ಜಿ-8 ಶೃಂಗಸಭೆಯಲ್ಲಿ ಅಮೇರಿಕ & ಜಿ-8 ಸದಸ್ಯರಾಷ್ಟ್ರಗಳಿಗೆ ಭಾರತ ತಿಳಿಸುವಂತೆ ಅಂತರಾಷ್ಟ್ರೀಯ ಅಣುಶಕ್ತಿ ಆಯೋಗಕ್ಕೆ ಅಣುಶಕ್ತಿ ಉತ್ಪಾದನೆ ಕುರಿತು ಅಂತಾಸುರಕ್ಷತಾ ಕ್ರಮಗಳ ಒಪ್ಪಂದ ಮಾಡಿಕೊಳ್ಳಲು ಕರಡು ಪ್ರತಿ ಸಿದ್ಧಗೊಳಿಸಿದೆ. ಈ ಕರಡಿನಲ್ಲಿ ತಿಳಿಸಿರುವಂತೆ ನಾಗರಿಕ ಪರಮಾಣು ಶಕ್ತಿ ಬಳಕೆಯ ಸ್ಥಾವರಗಳು ಅಂತರಾಷ್ಟ್ರೀಯ ಸಂಘಟನೆಗಳು ನಿರೀಕ್ಷಣೆಯಲ್ಲಿರುವುದು, ಉಳಿದಂತೆ ರಕ್ಷಣಾಸಂಬಂಧಿ ಪರಮಾಣು ಕಾರ್ಯಕ್ರಮಗಳನ್ನು ಈ ಒಪ್ಪಂದದಿಂದ ದೂರವಿರಿಸಲಾಗಿದೆ. ಪರಮಾಣು ಅಣ್ವಸ್ತ್ರ ತಯಾರಿಕೆಮೊದಲಾದ ರಾಷ್ಟ್ರೀಯ ಭದ್ರತೆಯ ವಿಚಾರಗಳಲ್ಲಿ ಬೇರೆಯವರು ಮೂಗು ತೂರಿಸುವಂತಿಲ್ಲ. ಈಗಾಗಲೇ ಅಣ್ವಸ್ತ್ರಬಳಕೆಯನನು ಎರಡು ಬಾರಿ ಭಾರತ ಪರೀಕ್ಷಿಸಿದೆ. ಕರಡಿನಲ್ಲಿ ಸೂಚಿಸಿದಂತೆ 3 ಹಂತದಲ್ಲಿ ರಾಷ್ಟ್ರೀಯ ಪರಮಾಣುಕಾರ್ಯಕ್ರಮಕ್ಕೆ ಯಾವುದೇ ಆತಂಕವಿಲ್ಲ. ಅಣು ಇಂಧನದಿಂದ ಶಸ್ತ್ರಾಸ್ತ್ರ ತಯಾರಿಕೆ ನಿಷೆಧ. ಆಪತ್ಕಾಲದಲ್ಲಿ ಅಣುಇಂಧನವನ್ನು ಸಂಗ್ರಹಿಸಿಕೊಳ್ಳುವುದನ್ನು ಇದರಲ್ಲಿ ಪ್ರಸ್ತಾಪಿಸಲಾಗಿದೆ. ಈ ಹಿಂದೆ ಒಪ್ಪಂದದ ಪ್ರಕಾರ ಭಾರತವು ತನ್ನಅಣು ಸ್ಥಾವರಗಳನ್ನು ನಾಗರಿಕ & ಸಂಶೋಧನಾತ್ಮಕ ಎಂದು ಎರಡು ಭಾಗಗಳಲ್ಲಿ ವಿಂಗಡಿಸಲಾಗಿದೆ. ಭಾರತವುಪರಮಾಣು ಸಂಬಂಧಿತ ತನ್ನ ಪ್ರಸ್ತಾಪಗಳನ್ನು ಅಂತರಾಷ್ಟ್ರೀಯ ಅಣುಶಕ್ತಿ ಆಯೋಗಕ್ಕೆ ಸಲ್ಲಿಸಿದೆ. ಆಯೋಗವು ಒಪ್ಪಿದಲ್ಲಿ ಭಾರತಕ್ಕೆ ಭವಿಷ್ಯತ್ತಿನಲ್ಲಿ ಪರಮಾಣು ಇಂಧನ ನಿರಾಂತಂಕವಾಗಿ ಸಾಗಬಹುದು.
ಜಿ-8 ಸಭೆಯಲ್ಲಿ ತನ್ನ ಅಧಿಕಾರಾವಧಿಯಲ್ಲಿಯೇ ಈ ಒಪ್ಪಂದದ ಜಾರಿಗೆ ತರಲು ಬುಷ್ ಇಚ್ಛಿಸಿದ್ದಾಗಿತಿಳಿಸಿದ್ದಾರೆ, ಆದರೆ ಹೈಡ್ ನಿಯಮಗಳು ಭಾರತದ ಪ್ರತಿಕ್ರಿಯೆಗಳನ್ನು ಗಮನಿಸಿದರೆ ಅದು ಅದರ ಅವಧಿಯಲ್ಲಿಜಾರಿಗೊಳ್ಳುವ ನಿರೀಕ್ಷೆ ತುಂಬ ಕಡಿಮೆ ಇದೆ. ಏಕೆಂದರೆ 123 ನಿಯಮದಂತೆ ಈ ಒಪ್ಪಂದದ ಕುರಿತು ಅಮೇರಿಕಸಂಸತ್ತಿನಲ್ಲಿ ಸತತ 30 ದಿನಗಳವರೆಗೆ ಚರ್ಚೆ ನಡಯಬೇಕು ಆಗ ಸಂಸತ್ತು ಅನುಮೋದಿಸುವಲ್ಲಿ ಮಾತ್ರ ಅದು ಜಾರಿಗೆ ಬರುತ್ತದೆ. ಆದರೆ ಬುಷ್ ಆಡಳಿತಕ್ಕೆ ಚರ್ಚೆಗೆ ಇರುವ ಕಾಲಮಿತಿ ಬಹಳ ಕಡಿಮೆ ಕೇವಲ 40 ಸಂಸತ್ತಿನದಿನಗಳಾಗಿರುವುದರಿಂದ ಈ ಚರ್ಚೆ ಕಾವು ಪಡೆದುಕೊಳ್ಳುವುದೇ ಎಂಬುದನ್ನು ಕಾದು ನೋಡಬೇಕು.
ಭಾರತ ಅಂತರಾಷ್ಟ್ರೀಯ ಅಣುಶಕ್ತಿ ಆಯೋಗಕ್ಕೆ ಸಲ್ಲಿಸಿದ್ದ ಸುರಕ್ಷತಾ ನಿಯಮಾವಳಿಗಳನ್ನು ಕುರಿತು ಅನುಮೋದನೆಗೊಂಡಲ್ಲಿ ಅಣ್ವಸ್ತ್ರ ಇಂಧನ ಪೂರೈಸುವ 45 ರಾಷ್ಟ್ರಗಳು ಭಾರತದೊಂದಿಗೆ ಸಹಕಾರಕ್ಕೆ ಮುಂದೆಬರಬಹುದು, ಆಗ ಅಮೇರಿಕದೊಂದಿಗೆ ಸಹಕಾರ ಒಪ್ಪಂದವು ತುಸು ಪ್ರಭಾವ ಕಳೆದುಕೊಳ್ಳಬಹುದು ಅಥವಾ ನಾವೇ ಇಂಧನ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದಲ್ಲಿ ಇತರ ರಾಷ್ಟ್ರಗಳು ಬೆಂಬಲಿಸಬಹುದು. ಭಾರತ ಈಗಾಗಲೇ ಅಣು ರಿಯಾಕ್ಟರ್ಗಳಿಗೆ ಬೇಕಾಗುವ ಭಾರಜಲವನ್ನು ಪೂರೈಸುವ ಅಭಿವೃದ್ಧಿ ಸಾಧಿಸುತ್ತಿದೆ. ಯುರೋಪಿನ ರಾಷ್ಟ್ರಗಳು ಅಮೇರಿಕ ಸಹ ತನ್ನ ರಿಯಾಕ್ಟರ್ಗಳಿಗೆ ಭಾರನೀರು ಪೂರೈಸಲು ಭಾರತದೊಂದಿಗೆ ಒಪ್ಪಂದಕ್ಕೆ ಬಂದಿದೆ. ಮುಂದೊಂದುದಿನ ಭಾರತ ಭಾರನೀರು ರಫ್ತಿನಲ್ಲಿ ಮುಂಚೂಣಿ ರಾಷ್ಟ್ರವಾಗಬಲ್ಲದು ಎಂದು ಘೋಷಿಸಿದರು. ಯುರೋಪಿಯನ್ಒಕ್ಕೂಟದಿಂದ ಮಾನ್ಯತೆ ಪಡೆದಿದ್ದರೂ ಹಂಗೇರಿ ಸರಕಾರವು 2005ರ ಜನವರಿಯಲ್ಲಿ ಕುಲಾಂತರಿ ಗೋವಿನ ಜೋಳದ ಬೀಜಗಳನ್ನು ಆಮದು ಮಾಡಿಕೊಳ್ಳುವುದನ್ನು & ಬೆಳೆಯುವುದನನು ನಿರ್ಬಂಧಿಸಿತು.
ಆಗಸ್ಟ್ 18, 2006ರಂದು ಅಮೇರಿಕದಿಂದ ಯುರೋಪ್ಗೆ ರಫ್ತಾಗುತ್ತಿದ್ದ. ಅಕ್ಕಿಯನ್ನು ತಡೆಹಿಡಿಯಲಾಯಿತು.ಇದಕ್ಕೆ ಕಾರಣವೆಂದರೆ ಮಾನ್ಯತೆ ಪಡೆಯದ ಕುಲಾಂತರಿ ವಂಶಾಣು (ಜೀನ್)ಗಳು ಕಲಬೆರಿಕೆಯಾಗಿದ್ದವು. ಬಹುಶಃ ಇದುಸಾಂಪ್ರದಾಯಿಕ ಬೆಳೆಯೊಂದಿಗೆ ಕುಲಾಂತರಿ ಭತ್ತದ ತಳಿಯ ಪರಾಗ ಸ್ಪರ್ಶದಿಂದಾಗಿರಬೇಕು. ಈ ರೀತಿಯ ಪರಕೀಯಪರಾಗ ಸ್ಪರ್ಶದಿಂದಾಗಿ ಕುಲಾಂತರಿ ಜೀನ್ಗಳು ವರ್ಗಾವಣೆಗೊಂಡು ಸಮಸ್ಯೆ ಉಂಟುಮಾಡುತ್ತಿರುವುದನ್ನು ಗಂಭೀರವಾಗಿಪರಿಗಣಿಸಲಾಗಿದೆ. ಸಾಂಸ್ಕೃತಿಕ ಜೀವನದ ಭಾಗವಾದ ಸ್ಥಳೀಯ ತಳಿಗಳು ನಾಶವಾಗಿ ಅವುಗಳ ಜಾಗದಲ್ಲಿ ಬಹುರಾಷ್ಟ್ರೀಯ ಕಂಪನಿ ನಿಯಂತ್ರಕ ತಳಿಗಳು ಬರುತ್ತದೆ. ಸ್ಥಳಿಯ ಜಾತಿಯ ತಳಿಗಳು ನಾಶವಾಗುವುದರಿಂದ ಅದಕ್ಕೆಸಂಬಂಧಪಟ್ಟ ಆಹಾರ ಪದ್ಧತಿ, ಜೀವನ ಶೈಲಿಗಳಲ್ಲಿ ವ್ಯತ್ಯಾಸವುಂಟಾಗುತ್ತದೆ.
ಮಾನವನ ಕರುಳಿನಲ್ಲಿ ವಾಸಿಸುವ ಎಶ್ಚರಿಚಿಯ ಕೊಲಿ (ಇ.ಕೊಲಿ) ಎನ್ನುವ ಸೂಕ್ಷ್ಮಾಣು ಜೀವಿಗಳಡಿ.ಎನ್.ಎ.ಗೆ ಮಾನವ ಇನ್ಸುಲಿನ್ ತಯಾರಿಸುವ ಜೀನ್ (ಡಿಎನ್ಎ) ಗಳನ್ನು ಕಸಿ ಮಾಡಲಾಯಿತು, ಇನ್ಸುಲಿನ್ತಯಾರಿಸುವ ಜೀನ್ ಇ ಕೂಲಿ ಬ್ಯಾಕ್ಟೀರಿಯಾದ ಡಿ.ಎನ್.ಎ. ಯ ಘಟಕ ಆಯಿತು. ಇದರಿಂದ ಅಗತ್ಯವಾದ ಇನ್ಸುಲಿನ್ ತಯಾರಿಸುತ್ತಿದ್ದಾರೆ. ಇದು ಮೊಟ್ಟ ಮೊದಲ ಕುಲಾಂತರಿ ಜೀವಿ ಈ ಕುಲಾಂತರಿ ಜೀವಿಗಳಿಂದ ಅನೇಕ ರೀತಿಯ ಔಷದಿಗಳನ್ನು ತಯಾರಿಸಲಾಗುತ್ತದೆ.