ಭಾರತ್ ಕೆ ವೀರ್ - ವೆಬ್ ಪೋರ್ಟಲ್
ಕೇಂದ್ರ ಸರ್ಕಾರದ ಗೃಹ ಸಚಿವಾಲಯವು ಹುತಾತ್ಮರಾದ ಸೈನಿಕರ ಮತ್ತು ಸಶಸ್ತ್ರ ಪಡೆಗಳ ಯೋಧರ ಕುಟುಂಬಗಳಿಗೆ ಸಹಾಯ ಮಾಡಲು ಇಚ್ಚಿಸುವ ಸಾರ್ವಜನಿಕರು ನೇರವಾಗಿ ಹುತಾತ್ಮರ ಕುಟುಂಬದ ಖಾತೆಗೆ ಹಣ ವರ್ಗಾವಣೆ ಮಾಡಲು ಹೊಸದಾಗಿ ಆರಂಭಿಸಿರುವ ವೆಬ್ ಪೋರ್ಟಲ್
ಪ್ರತಿ ಹುತಾತ್ಮ ವೀರ ಯೋಧನ ಕುಂಟುಂಬಗಳಿಗೆ ಗರಿಷ್ಟ 15 ಲಕ್ಷ ರೂಪಾಯಿಗಳವರೆಗೆ,ಸಹಾಯಧನ ನೀಡಲು ಅವಕಾಶ ಕಲ್ಪಿಸಲಾಗಿದೆ.
ಸಹಾಯಧನ ನೀಡಲು ಇಚ್ಚೆಯಿದ್ದರೂ ಯಾವುದೇ, ಯೋಧರ ಕುಟುಂಬಸ್ಥರ ವೈಯಕ್ತಿಕ ಖಾತೆಗೆ ಹಣಸಂದಾಯ ಮಾಡಲು ಇಚ್ಚಿಸದ ಸಾರ್ವಜನಿಕರಿಗೆ ಅನುವಾಗುವಂತೆ , ‘ಭಾರತ್ ಕೆ ವೀರ್’ ಎಂಬ ಸಾರ್ವತ್ರಿಕ ಖಾತೆ ತೆರೆಯಲಾಗಿದ್ದು, ಈ ಖಾತೆಗೆ ಹಣ ಸಂದಾಯ ಮಾಡಬಹುದಾಗಿದೆ.
ಈ ಅಭಿಯಾನವು 2017ರ ಏಪ್ರಿಲ್ ತಿಂಗಳಿನಲ್ಲಿ ಆರಂಭವಾಗಿದ್ದು, 2017ರ ಆಗಸ್ಟ್ 15ರವೆರೆಗಿನಮಾಹಿತಿಯನ್ನು ಆಧರಿಸಿ, ಒಟ್ಟು 118 ಹುತಾತ್ಮರ ಕುಟುಂಬಗಳಿಗೆ , ಸುಮಾರು 11.1 ಕೋಟಿ ರೂಪಾಯಿಗಳಷ್ಟು ಹಣ ಸಂದಾಯವಾಗಿದೆ.