ತುರ್ತು ಪರಿಸ್ಥಿತಿ
 
* ತುರ್ತು ಪರಿಸ್ಥಿತಿ ಜಾರಿಯ ಉದ್ದೇಶ ರಾಷ್ಟ್ರದ ಪರಮಾಧಿಕಾರ, ಏಕತೆ, ಸಮಗ್ರತೆ, ಭದ್ರತೆ ಹಾಗೂ ರಕ್ಷಣೆಯ ಜೊತೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಂವಿಧಾನಬದ್ಧವಾಗಿ ಮುಂದುವರಿಸುವುದಾಗಿದೆ.
* ರಾಷ್ಟ್ರ ಆಂತರಿಕ ಅಥವಾ ಬಾಹ್ಯ ಗಂಡಾಂತರ ಪರಿಸ್ಥಿತಿಗೆ ಸಿಲುಕಿದಾಗ ರಾಷ್ಟ್ರಪತಿಯವರು ತುರ್ತು ಪರಿಸ್ಥಿತಿಯನ್ನು ಘೋಷಿಸುತ್ತಾರೆ. ಉದಾ: ಯುದ್ಧ, ಅತಿವೃಷ್ಟಿ, ಅನಾವೃಷ್ಟಿ ಮೊದಲಾದ ಸಂದರ್ಭಗಳಲ್ಲಿ.
* ತುರ್ತು ಪರಿಸ್ಥಿತಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. 1980ರ ಸುಪ್ರೀಂಕೋರ್ಟನ ಮೀನರ್ವ ಮಿಲ್ ಮೊಕದ್ದಮೆಯ ತೀರ್ಪಿನಲ್ಲಿ ಹೇಳಲಾಗಿದೆ.
* ತುರ್ತು ಪರಿಸ್ಥಿತಿ ಘೋಷಣೆಯಾದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಬಲಿಷ್ಟವಾಗಿ ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ಕೇಂದ್ರದ ನಿಯಂತ್ರಣಕ್ಕೆ ಒಳಪಟ್ಟಿರುತ್ತವೆ.
* ಸಂವಿಧಾನದ 18ನೇ ಭಾಗದಲ್ಲಿ 352 ನೇ ವಿಧಿಯಿಂದ 360 ನೇ ವಿಧಿಯಲ್ಲಿ 3 ರೀತಿಯ ತುರ್ತು ಪರಿಸ್ಥಿತಿಯ ಬಗ್ಗೆ ಪ್ರಸ್ತಾಪಿಸಲಾಗಿದೆ.
* ತುರ್ತು ಪರಿಸ್ಥಿತಿ ಘೋಷಿಸುವ ಅಧಿಕಾರವನ್ನು ಸಂವಿಧಾನ ಬದ್ಧವಾಗಿ ರಾಷ್ಟ್ರಪತಿಗೆ ನೀಡಲಾಗಿದೆ.
* ಪ್ರಧಾನಮಂತ್ರಿ ಇತರೆ ಕ್ಯಾಬಿನೆಟ್ ಮಂತ್ರಿಗಳು ಲಿಖಿತ ರೂಪದಲ್ಲಿ ತುರ್ತು ಪರಿಸ್ಥಿತಿಗೆ ಶಿಫಾರಸ್ಸು ಮಾಡಿದಾಗ ಮಾತ್ರ ರಾಷ್ಟ್ರಪತಿ ತುರ್ತು ಪರಿಸ್ಥಿತಿಯನ್ನು ಘೋಷಿಸಬೇಕಾಗುತ್ತದೆ.
ತುರ್ತು ಪರಿಸ್ಥಿತಿಯಲ್ಲಿ 3 ವಿಧ.
1. ರಾಷ್ಟ್ರೀಯ ತುರ್ತು ಪರಿಸ್ಥಿತಿ (352 ನೇ ವಿಧಿ - ಯುದ್ಧ, ಆಕ್ರಮಣ, ಮಿಲಿಟರಿ ದಂಗೆ ಮೊದಲಾದ ಸಂದರ್ಭಗಳಲ್ಲಿ)
ಸಶಸ್ತ್ರ ಬಂಡಾಯದಿಂದ ಅಥವಾ ಬೇರೆ ರಾಷ್ಟ್ರಗಳ ಆಕ್ರಮಣದಿಂದ ದೇಶದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿಯುಂಟಾಗಿ ರಾಷ್ಟ್ರದ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾದಾಗ ರಾಷ್ಟ್ರಪತಿಯವರು ಸಂವಿಧಾನದ 352 ನೇ ವಿಧಿ ಅನ್ವಯ ಘೋಷಿಸುವ ತುರ್ತು ಪರಿಸ್ಥಿತಿಗೆ “ರಾಷ್ಟ್ರೀಯ ತುರ್ತು ಪರಿಸ್ಥಿತಿ” ಎಂದು ಕರೆಯಲಾಗುತ್ತದೆ.
* ತುರ್ತು ಪರಿಸ್ಥಿತಿ ಘೋಷಣೆಯಾದ ದಿನಾಂಕದಿಂದ ಒಂದು ತಿಂಗಳೊಳಗಾಗಿ ಸಂಸತ್ತಿನಲ್ಲಿ ಮಂಡಿಸಿ 2/3 ರಷ್ಟು ಸದಸ್ಯರ ಒಪ್ಪಿಗೆಯನ್ನು ಪಡೆಯಬೇಕು (ಉಭಯ ಸದನಗಳ) ಇಲ್ಲದ್ದಿದರೆ ರದ್ದಾಗುತ್ತದೆ.
* ಜಾರಿಯಾದ ತುರ್ತು ಪರಿಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗಬೇಕಾದರೆ ಪ್ರತಿ ಆರು ತಿಂಗಳಿಗೊಮ್ಮೆ ಸಂಸತ್ತಿನ ಉಭಯ ಸದನಗಳ ಒಪ್ಪಿಗೆ ಪಡೆಯಬೇಕು.
* ಲೋಕಸಭೆ ವಿಸರ್ಜನೆಯಾಗಿದ್ದರೆ, ರಾಜ್ಯಸಭೆಯ ಒಪ್ಪಿಗೆ ಪಡೆಯಬೇಕು. ನಂತರ ಅಸ್ತಿತ್ವಕ್ಕೆ ಬಂದ ಲೋಕಸಭೆಯ ಒಪ್ಪಿಗೆಯನ್ನು ಒಂದು ತಿಂಗಳೊಳಗೆ ಪಡೆಯಬೇಕಾಗುತ್ತದೆ.
* ವಿಶೇಷ ಅಧಿವೇಶನದ ಒಪ್ಪಿಗೆಯ ಮೇರೆಗೆ ತುರ್ತು ಪರಿಸ್ಥಿತಿ ವಾಪಸ್ ಪಡೆಯಬಹುದು.
ಪ್ರಮುಖ ಪರಿಣಾಮಗಳು :-
* ಏಕಾತ್ಮಕ ಸರ್ಕಾರದ ಕಾರ್ಯ ನಿರ್ವಹಣೆ
* 20 ಹಾಗೂ 21 ನೇ ವಿಧಿಯನ್ನು ಹೊರತುಪಡಿಸಿ ಮೂಲಭೂತ ಹಕ್ಕುಗಳ ರದ್ಧತಿ.
* ರಾಜ್ಯಪಟ್ಟಿಯ ವಿಷಯಗಳಿಗೆ ಶಾಸನ ಮಾಡುವ ಅಧಿಕಾರ ಸಂಪೂರ್ಣವಾಗಿ ಕೇಂದ್ರಕ್ಕೆ ಸೇರಿರುತ್ತದೆ.
2. ರಾಜ್ಯ ತುರ್ತು ಪರಿಸ್ಥಿತಿ (356 ನೇ ವಿಧಿ-ರಾಷ್ಟ್ರಪತಿ ಆಳ್ವಿಕೆ)
ರಾಜ್ಯ ಸರ್ಕಾರವು ಆಡಳಿತ ನಡೆಸಲು ವಿಫಲವಾದಾಗ, ಅಥವಾ ರಾಜ್ಯವು ಕೇಂದ್ರದ ನಿರ್ದೇಶನ ಪಾಲಿಸದಿದ್ದಾಗ, ಅಥವಾ ಸಂವಿಧಾನಿಕ ಬಿಕ್ಕಟ್ಟು ಉಂಟಾದಾಗ ರಾಜ್ಯಪಾಲರು ರಾಷ್ಟ್ರಪತಿಗೆ ರಾಜ್ಯ ಪರಿಸ್ಥಿತಿಯನ್ನು ವಿವರಿಸುತ್ತಾರೆ. ನಂತರ ರಾಷ್ಟ್ರಪತಿಯವರು ರಾಜ್ಯಪಾಲರ ವರದಿಯನ್ನು ಕೂಲಂಕುಷವಾಗಿ ಪರಿಶೀಲಿಸಿ ಆ ರಾಜ್ಯದ ಮೇಲೆ 356 ನೇ ವಿಧಿ ಅನ್ವಯ ರಾಷ್ಟ್ರಪತಿ ಆಡಳಿತ ಘೋಷಿಸುತ್ತಾರೆ.
* ರಾಷ್ಟ್ರಪತಿ ಆಡಳಿತ ಜಾರಿಯಾದ 2 ತಿಂಗಳೊಳಗೆ ಸಂಸತ್ತಿನ ಒಪ್ಪಿಗೆ ಪಡೆಯಬೇಕು.
ಪ್ರಮುಖ ಪರಿಣಾಮಗಳು
* ರಾಜ್ಯದ ಆಡಳಿತ ರಾಷ್ಟ್ರಪತಿ ವಶದಲ್ಲಿರುತ್ತದೆ.
* ರಾಜ್ಯ ಮಂತ್ರಿ ಮಂಡಲ ರದ್ದತಿ
* ರಾಜ್ಯಪಾಲರರ ಆಳ್ವಿಕೆ
* ರಾಜ್ಯಪಟ್ಟಿಯ ವಿಷಯಗಳ ಬಗ್ಗೆ ಶಾಸನ ಮಾಡುವ ಅಧಿಕಾರ ಕೇಂದ್ರ ಸಂಪತ್ತಿಗೆ ಇರುತ್ತದೆ.
3. ಹಣಕಾಸಿನ ತುರ್ತು ಪರಿಸ್ಥಿತಿ (360ನೇ ವಿಧಿ)
ರಾಷ್ಟ್ರ ಅಥವಾ ರಾಷ್ಟ್ರದ ಯಾವುದೇ ಭಾಗದಲ್ಲಿ ಆರ್ಥಿಕ ಬಿಕ್ಕಟ್ಟು ಅಥವಾ ಭದ್ರತೆಗೆ ಧಕ್ಕೆಯುಂಟಾದಾಗ ರಾಷ್ಟ್ರಪತಿಯವರು 360ನೇ ವಿಧಿ ಅನುಗುಣವಾಗಿ ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸಬಹುದು.
* ಆರ್ಥಿಕ ತುರ್ತು ಪರಿಸ್ಥಿತಿ ಜಾರಿಯಾದ 2 ತಿಂಗಳೊಳಗೆ ಸಂಸತ್ತಿನ ಒಪ್ಪಿಗೆ ಪಡೆಯಬೇಕು.
* ತುರ್ತು ಪರಿಸ್ಥಿತಿಯನ್ನು ಹಿಂದಕ್ಕೆ ಪಡೆದುಕೊಳ್ಳುವ ಅಧಿಕಾರ ರಾಷ್ಟ್ರಪತಿಗಿದೆ (ಸಂಸತ್ತಿನ ಅನುಮೋದನೆ ಅಗತ್ಯವಿಲ್ಲ)
ಪ್ರಮುಖ ಪರಿಣಾಮಗಳು
* ಸರ್ಕಾರಿ ನೌಕರರ ವೇತನವನ್ನು ಕಡಿತಗೊಳಿಸಬಹುದು.
* ಸರ್ವೋಚ್ಚ ಹಾಗೂ ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರ ವೇತನವನ್ನು ಕಡಿತಗೊಳಿಸಬಹುದು.
* ಸರ್ಕಾರದ ವೆಚ್ಚದಲ್ಲಿ ಕಡಿತ ಮಾಡುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ನಿರ್ದೇಶನ ನೀಡಬಹುದು.
* ಭಾರತದಲ್ಲಿ ಇದುವರೆಗೆ 3(1962,1971,1975) ಬಾರಿ ರಾಷ್ಟ್ರಿಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.