ಶಕ್ತಿ ಸಂಪನ್ಮೂಲಗಳು (Power resources)

 

1. ಕಲ್ಲಿದ್ದಲು


• ಭಾರತವು ಉತ್ಪಾದಿಸುತ್ತಿರುವ ಹಾಗೂ ಬಳಕೆ ಮಾಡುತ್ತಿರುವ ಶಕ್ತಿ ಸಂಪನ್ಮೂಲಗಳಲ್ಲಿ ಕಲ್ಲಿದ್ದಲು ಅತ್ಯಂತ ಪ್ರಮುಖವಾದುದು.
• ಭಾರತವು ಪ್ರಪಂಚದಲ್ಲಿ ಕಲ್ಲಿದ್ದಲಿನ ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿದೆ.
• ಕಲ್ಲಿದ್ದಲು ಕೇವಲ ಶಕ್ತಿಯ ಖನಿಜವಾಗಿರದೇ ಕೀಟ ನಿರೋಧಕಗಳು,
• ಸ್ಫೋಟಕ ವಸ್ತುಗಳು, ಕೃತಕ ನಾರು, ಕೃತಕ ರಬ್ಬರ್, ಪ್ಲಾಸ್ಟಿಕ್, ರಾಸಾಯನಿಕ ಗೊಬ್ಬರ, ಮುಂತಾದವುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಕಲ್ಲಿದ್ದಲು ಬಹು ಉಪಯೋಗಿ ಖನಿಜವಾಗಿರುವುದರಿಂದ ಇದನ್ನು “ಕಪ್ಪು ಬಂಗಾರ” ಎಂದು ಕರೆಯುವರು.

ವಿಧಗಳು


೧.ಆಂತ್ರಸೈಟ್ :ಇದು ಅತ್ಯುತ್ತಮ ದರ್ಜೆಯ ಕಲ್ಲಿದ್ದಲು.ಇದು ಶೇ 72 ಕ್ಕಿಂತಲೂ ಹೆಚ್ಚು ಇಂಗಾಲನನ್ನೊಳಗೊಂಡಿದ್ದು ಕಪ್ಪು ಬಣ್ಣದಿಂದ ಕೂಡಿದೆ. ಇದು ಜಮ್ಮು ಕಾಶ್ಮೀರದಲ್ಲಿ ಮಾತ್ರ ಕಂಡು ಬರುತ್ತದೆ.
೨.ಬಿಟುಮಿನುಸ್ : ಇದು ಶೇ 70 - 90 ರಷ್ಟು ಇಂಗಾಲವನ್ನು ಒಳಗೊಂಡಿರುವುದು.
೩.ಲಿಗ್ನೈಟ್ :ಇದು ಕಂಡು ಬಣ್ಣದಿಂದ ಕೂಡಿದ್ದು ಶೇ 40 ರಿಂದ 60 ರಷ್ಟು ಇಂಗಾಲವನ್ನು ಒಳಗೊಂಡಿರುವುದು.
೪.ಪೀಟ್ :ಇದು ಅತ್ಯಂತ ಕೆಲ ದರ್ಜೆಯ ಕಲ್ಲಿದ್ದಿಲು.ಇದು ಶೇ 40 ಕ್ಕಿಂತಲೂ ಕಡಿಮೆ ಪ್ರಮಾಣದ ಇಂಗಾಲವನ್ನು ಹೊಂದಿದೆ.

• ದಾಮೋದರ, ಗೋದಾವರಿ, ಮಹಾನದಿ ಮತ್ತು ವಾರ್ಧಾ ನದಿಗಳ ಕಣಿವೆಯಲ್ಲಿ ನಿಕ್ಷೇಪಗಳಿವೆ.
• ಕಲ್ಲಿದ್ದಲನ್ನು ಉತ್ಪಾದಿಸುವ ಮುಖ್ಯ ರಾಜ್ಯಗಳೆಂದರೆ ಜಾರ್ಖಂಡ್, ಛತ್ತೀಸ್ಘಡ, ಒರಿಸ್ಸಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶ.
• ದೇಶದಲ್ಲಿ ಕಲ್ಲಿದ್ದಲಿನ ಬೇಡಿಕೆ ಅಧಿಕವಾಗಿದ್ದು, ಇದರಿಂದ ಉತ್ತಮ ದರ್ಜೆಯ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲಾಗುತ್ತದೆ.

2. ಪೆಟ್ರೋಲಿಯಂ


• ಭೂಮಿಯಿಂದ ಹೊರ ತೆಗೆಯುವ ಪೆಟ್ರೋಲಿಯಂ ಹಲವಾರು ಬಗೆಯ ಮಿಶ್ರಣಗಳಿಂದ ಕೂಡಿದ್ದು, ಅದನ್ನು ‘ಕಚ್ಚಾತೈಲ’ ಎಂದು ಕರೆಯುವರು.
• ಇದನ್ನು ಶುದ್ಧೀಕರಣ ಕೇಂದ್ರಗಳಲ್ಲಿ ಶುದ್ಧೀಕರಿಸಿ ಗ್ಯಾಸೋಲಿನ್, ಪೆಟ್ರೋಲ್, ಡೀಸಲ್, ಸೀಮೆಎಣ್ಣೆ ಮುಂತಾದವುಗಳನ್ನು ಪಡೆಯಲಾಗುವುದು. ಪೆಟ್ರೋಲಿಯಂ ಪ್ರಮುಖವಾದ ಶಕ್ತಿ
• ಭಾರತದಲ್ಲಿ ಅಸ್ಸಾಂನ ‘ದಿಗ್ಬಾಯ್’ ಎಂಬಲ್ಲಿ ಪೆಟ್ರೋಲಿಯಮ್ನ್ನು ಮೊದಲು ಪತ್ತೆ ಮಾಡಲಾಯಿತು. ಇಂದು ಲಕಿಮ್ಪುರ ಹುಗ್ರಿಜನ್, ಮೊರಾನ್, ನಹರ್ಕಟಿಯಾ ಹಾಗೂ ಇತರ ಬಾವಿಗಳಿಂದ ಎಣ್ಣೆಯನ್ನು ಉತ್ಪಾದಿಸಲಾಗುತ್ತದೆ.
• ಗುಜರಾತ್ ರಾಜ್ಯವು ಕಚ್ಚಾ ತೈಲವನ್ನು ಉತ್ಪಾದಿಸುವ ಮತ್ತೊಂದು ಪ್ರದೇಶವಾಗಿದೆ. ಅಂಕಲೇಶ್ವರದಲ್ಲಿ ಮೊದಲನೇ ತೈಲ ಬಾವಿಯನ್ನು ಕೊರೆಯಲಾಯಿತು.
• 1974ರಲ್ಲಿ ಅರಬ್ಬೀ ಸಮುದ್ರದಲ್ಲಿ ಮುಂಬೈಯಿಂದ 110 ಕಿ.ಮೀ. ದೂರದ ‘ಬಾಂಬೆ ಹೈ’ ನಲ್ಲಿ ತೈಲವನ್ನು ಪತ್ತೆ ಮಾಡಿ 1976ರಲ್ಲಿ ತೈಲೋತ್ಪಾದನೆಯನ್ನು ಪ್ರಾರಂಭಿಸಲಾಯಿತು. ಇದು ಭಾರತದ ಅತಿ ದೊಡ್ಡ ತೈಲ ನಿಕ್ಷೇಪವಾಗಿದೆ.
• ಭಾರತದಲ್ಲಿ ಉತ್ಪಾದನೆ ಕಡಿಮೆ ಇದ್ದು, ಇರಾನ್, ಇರಾಕ್, ಸೌದಿ ಅರೇಬಿಯಾ ಕಚ್ಚಾ ತೈಲವನ್ನು ಆಮದುಮಾಡಿಕೊಳ್ಳುತ್ತಿದೆ.

3.ಅಣು ಶಕ್ತಿ


ಭಾರತದಲ್ಲಿ ಕಂಡು ಬರುವ ಅಣು ಖನಿಜಗಳಲ್ಲಿ ಯುರೇನಿಯಂ, ಥೋರಿಯಂ. ಬೆರಿಲಿಯಂ, ಲಿಥಿಯಂ ಮುಂತಾದವುಗಳು ಪ್ರಮುಖವಾಗಿವೆ.
ಎ) ಯುರೇನಿಯಂ : ಜಾರ್ಖಂಡ್ನ ಸಿಂಗಭೂಮ್, ಗಯಾ ಮತ್ತು ಹಜಾರಿಬಾಗ್ ಜಿಲ್ಲೆಗಳು, ಉತ್ತರ ಪ್ರದೇಶದ ಶಹರಣ್ಪುರದ ಮೆಕ್ಕಲು ಮಣ್ಣು, ಕೇರಳದ ತೀರದಲ್ಲಿ ಹಂಚಿಕೆಯಾಗಿದೆ.
ಬಿ) ಥೋರಿಯಂ : ಇದು ಕೇರಳ, ಬಿಹಾರ, ತಮಿಳುನಾಡು ಮತ್ತು ರಾಜಸ್ತಾನಗಳಲ್ಲಿ ಹಂಚಿಕೆಯಾಗಿದೆ.
ಸಿ) ಬೆರಿಲಿಯಂ : ಬೆರಿಲಿಯಂ ಅಕ್ಸೈಡನ್ನು ಅಣುವಿದ್ಯುತ್ ಉತ್ಪಾದನೆಯ ರಿಯಾಕ್ಟರುಗಳಲ್ಲಿ ‘ಮಾಡರೇಟರ್’ ಕಾರ್ಯಕ್ಕಾಗಿ ಬಳಸಲಾಗುವುದು. ಭಾರತವು ಅಗತ್ಯವಾದಷ್ಟು ಬೆರಿಲಿಯಂ ನಿಕ್ಷೇಪವನ್ನು ಹೊಂದಿದೆ.
ಡಿ) ಲಿಥಿಯಂ : ಇದು ಹಗುರವಾದ ಲೋಹವಾಗಿದ್ದು ಲೆಪಿಡೋಲೆಟ್ ಹಾಗೂ ಫ್ಯೂಡೋಮಿನ್ ಅದಿರುಗಳಿಂದ ಪಡೆಯಲಾಗುವುದು. ಭಾರತದಲ್ಲಿ ಜಾರ್ಖಂಡ್ ಹಾಗೂ ಮಧ್ಯ ಪ್ರದೇಶಗಳಲ್ಲಿ ಇದು ವ್ಯಾಪಕವಾಗಿ ಹಂಚಿಕೆಯಾಗಿದೆ.

ಅಣು ವಿದ್ಯುತ್ ಕೇಂದ್ರಗಳು


1. ತಾರಾಪುರ ಅಣು ವಿದ್ಯುತ್ ಕೇಂದ್ರ:ಇದು ಭಾರತದ ಮೊದಲ ಅಣು ವಿದ್ಯುತ್ ವೈತ್ಪಾದನೆಯ ಕೇಂದ್ರವಾಗಿದೆ. ಇದನ್ನು 1969 ರಲ್ಲಿ ಮುಂಬೈ ಬಳಿಯ ತಾರಾಪುರದಲ್ಲಿ ಸ್ಥಾಪಿಸಲಾಯಿತು.
2. ರಾಜಸ್ತಾನ ಅಣು ವಿದ್ಯುತ್ ಕೇಂದ್ರ : ಇದನ್ನು ರಾಜಸ್ತಾನದ ಕೋಟಾ ಜಿಲ್ಲೆಯ ರಾಣಾ ಪ್ರತಾಪ ಸಾಗರ ಎಂಬಲ್ಲಿ ಸ್ಥಾಪಿಸಲಾಗಿದೆ.
3. ಮದ್ರಾಸ್ ಅಣು ವಿದ್ಯುತ್ ಕೇಂದ್ರ :ಇದನ್ನು ತಮಿಳುನಾಡಿನ ಕಲ್ಪಕಂ ನಲ್ಲಿ ಸ್ಥಾಪಿಸಲಾಗಿದೆ.
4. ಮದ್ರಾಸ್ ಅಣು ವಿದ್ಯುತ್ ಕೇಂದ್ರ : ಇದನ್ನು ಉತ್ತರ ಪ್ರದೇಶದಲ್ಲಿ ಸ್ಥಾಪಿಸಲಾಗಿದೆ.
5. ಕಕ್ರಪಾರ ಅಣು ವಿದ್ಯುತ್ ಕೇಂದ್ರ : ಇದು ಗುಜರಾತಿನಲ್ಲಿ ಸ್ಥಾಪಿಸಲ್ಪಟ್ಟಿದೆ.
6. ಕೈಗಾ ಕೇಂದ್ರ: ಇದನ್ನು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ.
7. ಕೂಡುಕುಲಂ ಅಣು ಸ್ಥಾವರ:ರಷ್ಯಾದ ನೆರವಿನಿಂದ ತಮಿಳುನಾಡಿನ ಕೂಡುಕುಲಂ ನಲ್ಲಿ ಸ್ಥಾಪಿಸಲಾಗಿದೆ.

ನೈಸರ್ಗಿಕ ಶಕ್ತಿ ಮೂಲಗಳು


1) ಸೌರ ಶಕ್ತಿ


• ಸೂರ್ಯನ ಕಿರಣಗಳಿಂದ ಹೊರ ಸೂಸಲ್ಪಡುವ ಶಾಖದ ಬಳಕೆಯನ್ನೇ ‘ಸೌರಶಕ್ತಿ’ ಎಂದು ಕರೆಯುವರು.
• ಇದು ಮುಗಿಯದ ಶಕ್ತಿ ಸಂಪನ್ಮೂಲವಾಗಿದ್ದು, ಸೌರ ಶಕ್ತಿಯನ್ನು ನೇರವಾಗಿ ಶಾಖ ಶಕ್ತಿಯನ್ನಾಗಿ ಪರಿವರ್ತಿಸಬಹುದು.
• ಸೌರಶಕ್ತಿಯನ್ನು ಈಗಾಗಲೇ ವಿವಿಧ ವಿಧಾನಗಳಲ್ಲಿ ಬಳಸಲಾಗುತ್ತಿದ್ದು, ಇವುಗಳಲ್ಲಿ ಸೋಲಾರ್ ವಾಟರ್ ಹೀಟರ್, ಕುಕ್ಕರ್, ಸೋಲಾರ್ ಥರ್ಮಲ್, ವಿದ್ಯುತ್ ದೀಪ, ರೆಲ್ವೆ ಸಿಗ್ನಲ್, ನೀರೆತ್ತಲು ಹಾಗೂ ಸಂಪರ್ಕ ಮಾಧ್ಯಮಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ.
• ಭಾರತದಲ್ಲಿ ಮೊದಲ ಸೌರ ವಿದ್ಯುತ್ ಉತ್ಪಾದನಾ ಕೇಂದ್ರವನ್ನು ರಾಜಸ್ತಾನದ ‘ಬಾರ್ಮರ್’ನಲ್ಲಿ ಸ್ಥಾಪಿಸಲು ಯೋಜಿಸಲಾಗಿದೆ.
• ಇತ್ತೀಚೆಗೆ ಕರ್ನಾಟಕದ ಚಿಕ್ಕ ಬಳ್ಳಾಪುರ ಜಿಲ್ಲೆಯಲ್ಲಿಯೂ ಸೌರ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.

2) ಪವನ ಶಕ್ತಿ


• ಭಾರತವು ಪ್ರಪಂಚದಲ್ಲಿ ಗಾಳಿಯಿಂದ ವಿದ್ಯುತ್ತನ್ನು ಉತ್ಪಾದಿಸುವ ಐದನೆಯ ದೊಡ್ಡ ದೇಶವಾಗಿದೆ.
• ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ, ರಾಜಸ್ತಾನ ಮತ್ತು ಗುಜರಾತ್ ರಾಜ್ಯಗಳಲ್ಲಿ ಪವನ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲಾಗುತ್ತಿದೆ.