ಮರಾಠರು
 
ಹದಿನೇಳನೆಯ ಶತಮಾನದಲ್ಲಿ ದಖನ್ ಭಾಗದಲ್ಲಿ ಮರಾಠ ರಾಜ್ಯ ಉದಯವಾಗಿದ್ದು ಒಂದು ಪ್ರಮುಖ
ಬೆಳವಣಿಗೆ. ಇದು ಇಂದಿನ ಪಶ್ಚಿಮ ಭಾರತದ ಭಾಗದಲ್ಲಿ ವಿಸ್ತರಿಸಿತ್ತು.
ಶಿವಾಜಿ
• ಬಾಲ್ಯದಲ್ಲಿ ಶಿವಾಜಿಯ ಮೇಲೆ ಪ್ರಭಾವ ಬೀರಿದವರು ಅವನ ತಾಯಿ. ಅವನಿಗೆ ಅವನ ತಾಯಿಯು ಜೀವನದ ಮೌಲ್ಯಗಳನ್ನು ಹೇಳಿಕೊಟ್ಟರು.
• ಶಿವಾಜಿಯ ತಂದೆ ಬಿಜಾಪುರ ಸುಲ್ತಾನನ ಬಳಿ ಉನ್ನತ ಹುದ್ದೆಯಲ್ಲಿದ್ದುದರಿಂದ ಈತನಿಗೆ ಕೆಲಸಕ್ಕೆ ಸುಲ್ತಾನರಿಂದ ಆಹ್ವಾನ ಬಂದರೂ ತಿರಸ್ಕರಿಸಿ ಸ್ವತಂತ್ರನಾದನು.
• ಕ್ರಿ.ಶ 1648 ರಲ್ಲಿ ತೋರಣಗಲ್ಲು ಕೋಟೆಯನ್ನು (ಬಿಜಾಪುರ) ವಶಪಡಿಸಿಕೊಂಡನು. ಇದು ಆದಿಲ್ ಷಾಹಿಯ ಅಧೀನದಲ್ಲಿತ್ತು. ನಂತರ ರಾಯಗಡ, ಚಾಕಣ್, ಸಿಂಹಗಡ, ಪುರಂದರಗಡಗಗಳನ್ನು ವಶಪಡಿಸಿಕೊಂಡನು.
• ಕ್ರಿ.ಶ 1655 ರಲ್ಲಿ ಶಿವಾಜಿಯು ಕೊಂಕಣ ಪ್ರದೇಶದ ಕಲ್ಯಾಣ, ಜಾವಳಿ, ಪ್ರದೇಶಗಳನ್ನು ವಶಪಡಿಸಿಕೊಂಡನು.
• ಸುಲ್ತಾನನು ಶಿವಾಜಿಯ ದಾಳಿ ತಡೆಯಲು ಕ್ರಿ.ಶ 1659 ರಲ್ಲಿ ಅಫಜಲ್ ಖಾನನ ನೇತೃತ್ವದಲ್ಲಿ ಬಹುದೊಡ್ದ ಸೈನ್ಯವನ್ನು ಕಳುಹಿಸಿದನು. ಆದರೆ ಶಿವಾಜಿಯು ಅವನನ್ನು ಪ್ರತಾಪಗಡದ ಬಳಿ ವಾಯಿಯಲ್ಲಿ ಕೊಂದನು.
• ಕ್ರಿ.ಶ 1660 ರಲ್ಲಿ ಔರಂಗಜೇಬನು ಶಿವಾಜಿಯನ್ನು ಸೋಲಿಸಲು ಶಾಯಿಸ್ತಾಖಾನನ್ನು ಕಳುಹಿಸಿದನು. ಆದರೇ ಮುಂದೆ ಕ್ರಿ.ಶ 1663 ರಲ್ಲಿ ಶಿವಾಜಿ ಶಾಯಿಸ್ತಾಖಾನನ ಡೇರಿಗೆ ನುಗ್ಗಿ ಅವನನ್ನು ಗಾಯಗೊಳಿಸಿ ಉತ್ತರ ಭಾರತಕ್ಕೆ ಓಡಿಹೋಗುವಂತೆ ಮಾಡಿದನು.
• ಶಿವಾಜಿಯನ್ನು ನಿಗ್ರಹಿಸಲು ಔರಂಗಜೇಬನಿಂದ ಕಳುಹಿಸಲ್ಪಟ್ಟ ಜಯಸಿಂಗನು ಕ್ರಿ.ಶ 1665 ರಲ್ಲಿ ಶಿವಾಜಿಯನ್ನು ಸೋಲಿಸಿ "ಪುರಂದರ ಒಪ್ಪಂದ"ವನ್ನು ಮಾಡಿಕೊಂಡನು.
• ಕ್ರಿ.ಶ 1674 ರಲ್ಲಿ ರಾಯಗಡದಲ್ಲಿ ಕಿರೀಟಧಾರಣೆ ಮಾಡಿಕೊಂಡು ’ಛತ್ರಪತಿ ಶಿವಾಜಿ’ ಎನಿಸಿಕೊಂಡನು.
• ಶಿವಾಜಿಯ ಆಡಳಿತ:ಶಿವಾಜಿ ತನ್ನ ರಾಜ್ಯವನ್ನು ಅನೇಕ ಪ್ರಾಂತ್ಯಗಳಾಗಿ ವಿಂಗಡಿಸಿದ್ದನು. ಅವುಗಳನ್ನು ಸ್ವರಾಜ್ಯ ಮತ್ತು ಮೊಘಲರ ರಾಜ್ಯಗಳೆಂದು
• ಕರೆಯುತ್ತಿದ್ದರು. ಮರಾಠಿ ಅಡಳಿತ ಭಾಷೆಯಾಗಿತ್ತು. ಸರ್ಕಾರದ ಮುಖ್ಯಸ್ಥನಾಗಿದ್ದ ದೊರೆಗೆ ಆಡಳಿತದಲ್ಲಿ ನೆರವು ನೀಡಲು ಅಷ್ಠ ಪ್ರಧಾನರೆಂಬ ಮಂತ್ರಿಗಳಿದ್ದರು.
• ಕಂದಾಯ ವ್ಯವಸ್ಥೆ: ಕಂದಾಯವನ್ನು ಹಣದ ಅಥವಾ ವಸ್ತು ರೂಪದಲ್ಲಿ ನೀಡಬೇಕಿತ್ತು. ಚೌತ್ ಹಾಗೂ ಸರದೇಶಮುಖಿಯೆಂಬ ಭೂಕಂದಾಯಗಳಿದ್ದವು.
• ಸೈನ್ಯ : ಮರಾಠ ಸೈನ್ಯದಲ್ಲಿ ಕಾಲ್ದಳ, ಗಜದಳ, ಅಶ್ವದಳ ಮತ್ತು ಫಿರಂಗಿ ದಳಗಳಿದ್ದವು. ರಾಯಗಡ, ರಾಜಗಡ, ತೋರಣ ಗಡ,
• ಪ್ರತಾಪಗಡ ಮತ್ತು ಸಿಂಹಗಡಗಳಲ್ಲಿ ಪ್ರಮುಖ ಕೋಟೆಗಳಿದ್ದವು. ಹವಾಲ್ದಾರ ಕೋಟೆಯ ಮೇಲ್ವಿಚಾರಕನಾಗಿದ್ದನು. ಸೈನ್ಯದಲ್ಲಿ ಅನೇಕ ಚಿಕ್ಕ ಘಟಕಗಳಿದ್ದವು. ಗೆರಿಲ್ಲಾ ಯುದ್ಧತಂತ್ರಗಾರಿಕೆಯಲ್ಲಿ ಶಿವಾಜಿ ಸೈನಿಕರು ವಿಶೇಷ ತರಬೇತಿ ಪಡೆದಿದ್ದರು.
• ಕ್ರಿ.ಶ 1680 ರಲ್ಲಿ ಶಿವಾಜಿಯು ಮರಣವನ್ನಪ್ಪಿದನು. ಇವನ ನಂತರ ಇವನ ಮಗ ’ಸಾಂಬಾಜಿ’ ಅಧಿಕಾರಕ್ಕೆ ಬಂದನು, ನಂತರ ಕೊನೆಯ ದೊರೆ ಸಾಹು ಬರುತ್ತಾನೆ. ಇವನ ಆಳ್ವಿಕೆಯ ಕಾಲದಲ್ಲಿ ಪೇಶ್ವೆಗಳು ಪ್ರಬಲರಾದರು.
ಪೇಶ್ವೆಗಳು
ಬಾಲಾಜಿ ವಿಶ್ವನಾಥ (1713-1720)
* ಬಾಲಾಜಿ ವಿಶ್ವನಾಥನು ಮರಾಠರ ಮೊದಲ ಪೇಶ್ವೆಯಾಗಿದ್ದು ಇವನನ್ನು ಮರಾಠಾ ರಾಜ್ಯದ ಎರೆಡನೇ ಸ್ಥಾಪಕ ಎಂದು ಕರೆಯಲಾಗುತ್ತದೆ.
* ಶಾಹುನ ಸೇನಾಪತಿಯಾಗಿ ಪ್ರಸಿದ್ಧಿಯನ್ನು ಪಡೆದ ಇವನು ಮರಾಠ ನಾಯಕನಾಗಿ ರೂಪಗೊಂಡನು. ನಿಷ್ಠೆ ಹಾಗೂ ಸಾಮರ್ಥ್ಯವನ್ನು ಗುರುತಿಸಿ ಬಾಲಾಜಿ ವಿಶ್ವನಾಥನನ್ನು ಪೇಶ್ವೆಯೆಂದು ನೇಮಕ ಮಾಡಲಾಯಿತು.
ಒಂದನೆಯ ಬಾಜಿರಾವ್ (1720-1740)
* ಇವನು ದಕ್ಷ ಪ್ರಬಲ ಸೇನಾನಿಯಾಗಿದ್ದನು. ಹಿಂದೂ ಸಾಮ್ರಾಜ್ಯ ರಚಿಸಬೇಕೆಂಬ ಆಕಾಂಕ್ಷೆಯುಳ್ಳವನಾಗಿದ್ದನು. ಆದ್ದರಿಂದ ಈತನಿಗೆ ಹಿಂದೂ ಪದಷಾಹಿ ಎಂದು ಕರೆಯುತ್ತಿದ್ದರು.
* ಕ್ರಿ.ಶ 1723 ರಲ್ಲಿ ’ಮಾಳ್ವ’ ರಾಜ್ಯವನ್ನು ಗೆದ್ದುಕೊಂಡನು.
* ಈತನು ಬುಂಡೇಲಖಂಡದ ಛತ್ರಸಾಲನಿಗೆ ಮೊಘಲರ ವಿರುದ್ಧ ಸಹಾಯ ಮಾಡಿದನು.
* ಕ್ರಿ.ಶ 1739 ರಲ್ಲಿ ಪೋರ್ಚುಗೀಸರ ವಶದಲ್ಲಿದ್ದ ಸಾಲ್ಸೆಟ್ ಮತ್ತು ಬಸ್ಸೀನ್ ಬಂದರುಗಳು ಮರಾಠರ ವಶವಾದವು.
* ಒಂದನೆಯ ಬಾಜಿರಾವ್ ನಿಗೆ ಇತಿಹಾಸದಲ್ಲಿ "ಎರೆಡನೇ ಶಿವಾಜಿ" ಎಂದು ಕರೆಯಲಾಗಿದೆ.
ಬಾಲಾಜಿ ಬಾಜಿರಾವ್ (1740-1761)
* ಇವನನ್ನು ನಾನಾಸಾಹೇಬ್ ಎಂತಲೂ ಕರೆಯುತ್ತಿದ್ದರು.
* ಕ್ರಿ.ಶ 1761 ರಲ್ಲಿ ಮೂರನೇ ಪಾಣಿಪತ್ ಕದನವು ನಡೆಯಿತು. ಈ ಕದನವು ಅಫ್ಘಾನ್ ಆಕ್ರಮಣಕಾರರ ಹಾಗೂ ಅಹ್ಮದ್ ಷಾ ಅಬ್ದಾಲಿ ಮತ್ತು ಮರಾಠರ ನಡುವೆ ನಡೆಯಿತು.
* ಬಾಲಾಜಿ ಬಾಜಿರಾವ್ ನ ನಂತರ ಮಾಧವರಾಯನು ಆಡಳಿತಕ್ಕೆ ಬಂದನು. ಇವನು ಕೆಲವೇ ದಿನಗಳಲ್ಲಿ ಅಕಾಲ ಮರಣವನ್ನಪ್ಪಿದನು.
* ನಾರಾಯಣರಾಯನ ಮಗನಾದ ಸವಾಯ ಮಾಧವರಾಯನನ್ನು ಪೇಶ್ವೆ ಎಂದು ಘೋಷಿಸಿ ನಾನಾ ಫಡ್ನವೀಸನು ಪೇಶ್ವೆಯ ಹೆಸರಲ್ಲಿ ಅಧಿಕಾರ ಚಲಾಯಿಸಿದನು.
* ಕ್ರಿ.ಶ 1795 ರಲ್ಲಿ ಸವಾಯ್ ಮಾಧವರಾಯನು ಕಾಲವಾದನು. ನಂತರ ರಾಘೋಬನ ಮಗ ಎರಡನೇ ಬಾಜಿರಾವ್ ನು ಪೇಶ್ವೆಯಾದನು.
* ಪೇಶ್ವೆಯ ಅಧಿಕಾರವು ಕ್ರಿ.ಶ 1818 ರಲ್ಲಿ ಬ್ರಿಟಿಷರಿಂದ ಕೊನೆಗೊಂಡಿತು.