ರಾಷ್ಟ್ರಕೂಟರು

 

ರಾಷ್ಟ್ರಕೂಟರು


ರಾಷ್ಟ್ರಕೂಟರು ಕ್ರಿ.ಶ. 757 ರಲ್ಲಿ ಬಾದಾಮಿ ಚಾಲುಕ್ಯರನ್ನು ಕೊನೆಗಾಣಿಸಿ ಪ್ರವರ್ಧಮಾನಕ್ಕೆ ಬಂದರು
ರಾಷ್ಟ್ರಕೂಟ ಎಂಬ ಪದದ ಅರ್ಥ - ಪ್ರಾದೇಶಿಕ ವಿಭಜನೆಗಳಾದ ರಾಷ್ಟ್ರದ ಮುಖ್ಯಸ್ಥ ರು ಅಥವಾ ರಾಷ್ಟ್ರ ಎಂದರೆ ಪ್ರಾಂತ್ಯ ಹಾಗೂ ಕೂಟ ಎಂದರೆ - ನಾಯಕ ಎಂದರ್ಥ
ರಾಷ್ಟ್ರಕೂಟ ಮನೆತನ ಸ್ಥಾಪಕ - ದಂತಿದುರ್ಗ
ಇವರ ರಾಜಧಾನಿ - ಮಾನ್ಯಖೇಟ
ಮಾನ್ಯಖೇಟ ಪ್ರಸ್ತುತ - ಗುಲ್ಬರ್ಗ ಜಿಲ್ಲೆಯಲ್ಲಿದೆ
ರಾಷ್ಟ್ರಕೂಟರ ರಾಜ್ಯ ಲಾಂಛನ - ಗರುಡ
ಇವರು ರಾಜ್ಯಬಾರ ಮಾಡಿದ್ದು - 8 ನೇ ಶತಮಾನದಿಂದ 10 ನೇ ಶತಮಾನದವರೆಗೆ

ಆಧಾರಗಳು


ದಂತಿದುರ್ಗನ - ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ
ಒಂದನೇ ಕೃಷ್ಣನ - ಭಾಂಡ್ಕ ಮತ್ತು ತಾಳೇಗಾಂ ಶಾಸನ
ಧೃವನ - ಜೆಟ್ಟಾಯಿ ಶಾಸನ
ಅಮೋಘವರ್ಷನ - ಸಂಜಾನ್ ತಾಮ್ರ ಶಾಸನ ಹಾಗೂ ಕವಿ ರಾಜ ಮಾರ್ಗ
ಪೊನ್ನನ - ಶಾಂತಿ ಪುರಾಣ
ದಂತಿದುರ್ಗನ - ಪಂಚತಂತ್ರ
ತ್ರಿವಿಕ್ರಮನ - ನಳಚಂಪು
ಪಂಪನ - ವಿಕ್ರಾಮಾರ್ಜುನ ವಿಜಯಂ
ಬಿಲ್ಹಣನ - ವಿಕ್ರಮಾಂಕ ದೇವಚರಿತ
ಸುಲೇಮಾನ್ ನ - ಬರವಣಿಗೆಗಳು ಹಾಗೂ ಅಲ್ ಮಸೂದಿ
ಇಬಾನ್ ಹಾನಲ್ ಮತ್ತು ಇಸ್ತಾಬ್ರಿಯವರ ಬರವಣಿಗೆಗಳು

ರಾಷ್ಟ್ರಕೂಟರ ರಾಜಕೀಯ ಇತಿಹಾಸ


ಕ್ರಿ.ಶ.757 ರಲ್ಲಿ ಬಾದಾಮಿ ಚಾಲುಕ್ಯರ ಕೊನೆಯ ಅರಸ 2 ನೇ ಕೀರ್ತಿವರ್ಮನನ್ನು ಸೋಲಿಸಿ ದಂತಿದುರ್ಗ ಈ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದ
ದಂತಿದುರ್ಗ - ಈ ಸಾಮ್ರಾಜ್ಯದ ಮೂಲ ಪುರುಷ
ದಂತಿದುರ್ಗನ ತಂದೆಯ ಹೆಸರು - ಇಂದ್ರ
ದಂತಿದುರ್ಗನ ರಾದಧಾನಿ - ಎಲ್ಲೋರಾ
ಈತನ ನಂತರ ಈತನ ಚಿಕ್ಕಪ್ಪ - ಒಂದನೇ ಕೃಷ್ಣ ಅಧಿಕಾರಕ್ಕೆ ಬಂದನು
1 ನೇ ಕೃಷ್ಣ - ಶಿವನ ಆರಾಧಕನಾಗಿದ್ದ .
ಇತಿಹಾಸಕ್ಕೆ 1 ನೇ ಕೃಷ್ಣ ಕೊಡುಗೆ - ಎಲ್ಲೋರದ ಕೈಲೈಸನಾಥ ದೇವಾಲಯ
ಎಲ್ಲೋರದ ಕೈಲೈಸನಾಥ ದೇವಾಲಯಕ್ಕೆ - ಕನ್ನಕೇಶ್ವರ ಎಂಬ ಹೆಸರಿತ್ತು
1ನೇ ಕೃಷ್ಣ ನಂತರ - ಇಮ್ಮಡಿ ಗೋವಿಂದ ಪಟ್ಟಕ್ಕೆ ಬಂದ
ಇಮ್ಮಡಿ ಗೋವಿಂದನ ನಂತರ - ಧೃವನು ಪಟ್ಟಕ್ಕೆ ಬಂದನು

ಧೃವ


ಈತ ಮೊದಲು ಗಂಗರ ವಿರುದ್ದ ಹೋರಾಡಿ ಅವರ ಗಂಗವಾಡಿ ತನ್ನದಾಗಿಸಿದ
ನಂತರ ಕಂಚಿಯ ಪಲ್ಲವ ನಂದಿವರ್ಮನೊಡನೆ ಹೋರಾಡಿ
ನಂತರ ವೆಂಗಿ ಚಾಲುಕ್ಯ ಅರಸ 4 ನೇ ವಿಷ್ಣುವರ್ಧನನೊಡನೆ ಕಾದಾಟ ನಡೆಸಿದ
ಈತನ ಪತ್ನಿ - ಶೀಲಾಮಹಾದೇವಿ ವೆಂಗಿ ಚಾಲುಕ್ಯ ಮನೆತನದವಳು
ಉತ್ತರ ಭಾರತದ ಪ್ರಭುತ್ವಕ್ಕಾಗಿ ನಡೆದ ತ್ರಿರಾಜ ಕದನದಲ್ಲಿ ಸೇರ್ಪಡೆಯಾದ ಮೊದಲು ರಾಷ್ಟ್ರಕೂಟ ದೊರೆ - ಧೃವ
ಧೃವನ ನಂತರ ಈತನ ಮಗ - ಮೂರನೇ ಗೋವಿಂದನ ಅಧಿಕಾರಕ್ಕೆ ಬಂದ

ಮೂರನೇ ಗೋವಿಂದ


ಸ್ತಂಭನ ದಂಗೆಯನ್ನು ಹತ್ತಿಕ್ಕಿದ
ಕಂಚಿಯ ಪಲ್ಲವರೊಡನೆ ಧಾಳಿ ನಡೆಸಿದ
ವೆಂಗಿಯ ವಿರುದ್ದ ದಾಳಿ ನಡೆಸಿದ
ಬಂಗಾಳದ ಧರ್ಮಪಾಲನನ್ನು ಸೋಲಿಸಿದ
ಸಂಯುಕ್ತ ಕೂಟದ ವಿರುದ್ದ ಹೋರಾಟ ನಡೆಸಿದ
ಮೂರನೇ ಗೋವಿಂದ - ವಾದಿಕ ಮತಾವಲಂಬಿಯಾಗಿದ್ದನು
ಲಿಂಗಾನು ಶಾಸನ ಗ್ರಂಥದ ಕರ್ತೃ - ವಾಮನ
ವಾಮನನು ಮೂರನೇ ಗೋವಿಂದನ ಆಸ್ಥಾನವನ್ನು “ಜಗತ್ತುಂಗ ಸಭಾ ” ಎಂದು ಕರೆದಿದ್ದಾನೆ
ಮೂರನೇ ಗೋವಿಂದನ ಬಿರುದುಗಳು - ಜಗತ್ತುಂಗ , ಕೀರ್ತಿನಾರಾಯಣ . ತ್ರಿಭುವನ ಮಲ್ಲ , ಶ್ರೀವಲ್ಲಭ

ಅಮೋಘವರ್ಷ ನೃಪತುಂಗ


ಈತ ರಾಷ್ಟ್ರಕೂಟರ ಅತ್ಯಂತ ಪ್ರಸಿದ್ದ ದೊರೆ

ಅಮೋಘವರ್ಷನು ಎದುರಿಸಿದ ಸಮಸ್ಸೆಗಳು


ವೆಂಗಿಯ ವಿಜಾಯಧಿತ್ಯನು ರಾಷ್ಟ್ರಕೂಟರ ವಿರುದ್ದ ಸಂಚನ್ನು ನಡೆಸಿದನು
ಗಂಗರು ಮತ್ತ ಪಲ್ಲವರು ಹಿಂದಿನ ಹಗೆಯನ್ನು ಮುಂದುವರಿಸಿದರು
ಗೂರ್ಜರು ಪ್ರತಿಹಾರರು ಗಡಿಯನ್ನು ಆಕ್ರಮಿಸಿದರು
ಸಾಮಂತ ಜೆಟ್ಟಿ ಈತನ ವಿರುದ್ದ ದಂಗೆ ಎದ್ದನು
ಈತನ ನೆಚ್ಚಿನ ದಂಡ ನಾಯಕ - ಬಂಕೇಶ
ಈತ ತನ್ನ ಮಗಳಾದ - ಚಂದ್ರೋಲಬ್ಬೆಯನ್ನು ಗಂಗರ ಬೂತುಗನಿಗೆ ಕೊಟ್ಟು ವಿವಾಹ ಮಾಡಿದನು
ಇವನು ಕ್ರಿ.ಶ.800 ರಲ್ಲಿ - ವಿಂಗವಳ್ಳಿಯ ಯುದ್ಧದಲ್ಲಿ ವಿಜಯಾಧಿತ್ಯನನ್ನು ಸಂಪೂರ್ಣವಾಗಿ ಸೋಲಿಸಿದನು
ಅಮೋಘವರ್ಷನ ಬಿರುದುಗಳು - ನೀತಿ ನಿರಂತರ , ನೃಪತುಂಗ .ಅತಿಶಯದವಳ , ಲಕ್ಷ್ಮೀವಲ್ಲಭ , ಕೀರ್ತಿ ನಾರಾಯಣ ಇತ್ಯಾದಿ ...
ಅಮೋಘವರ್ಷನ ನಿಜವಾದ ಹೆಸರು - ಧೇಯಶರ್ಮ ಅಥವಾ ಶರ್ವ
ಅಮೋಘವರ್ಷನ ಆಸ್ಥಾನಕ್ಕೆ ಭೇಟಿನೀಡಿದ ಅರಬ್ ಯಾತ್ರಿಕ - ಸುಲೇಮಾನ್
ಅಮೋಘವರ್ಷನ ಅದಿಕಾರವಧಿಯಲ್ಲಿ ಬರಗಾಲ ಬಂದಿದದ್ದರಿಂದ - ಕೊಲ್ಲಾಪುರದ ಮಹಾಲಕ್ಷ್ಮೀಗೆ ತನ್ನ ಎಡಗೈ ಬೆರಳನ್ನು ಕತ್ತರಿಸಿ ಸಮರ್ಪಿಸಿದ ( ಸಂಜಾನ್ ದತ್ತಿ ಶಾಸನ )
ಕರ್ನಾಟಕದ ಅಶೋಕ - ಅಮೋಘವರ್ಷ ನೃಪತುಂಗ
ನೃಪತುಂಗನ ಕನ್ನಡ ಕೃತಿ - ಕವಿರಾಜಮಾರ್ಗ
ಅಮೋಘವರ್ಷನೃಪತುಂಗನ ಸಂಸ್ಕೃತ ಕೃತಿ - ಪ್ರಶ್ನೋತ್ತರ ಮಾಲಿಕ
ಅಮೋಗವರ್ಷನ ಗುರುಗಳು - ಜಿನಸೇನಾಚಾರ್ಯ
ಜಿನಸೇನಾಚಾರ್ಯನ ಕೃತಿಗಳು - ಆದಿಪುರಣ , ಪಾಶ್ಟಾಭ್ಯುದಯ , ಜಯದಳ
ಮಾನ್ಯಖೇಟ ಪ್ರಸ್ತುತ - ಹೈದರ್ ಬಾದ್ ಕರ್ನಾಟಕದಲ್ಲಿದೆ
ಬಂಕಾಪುರ ನಗರದ ನಿರ್ಮಾತೃ - ಅಮೋಘವರ್ಷನೃಪತುಂಗ ( ತನ್ನ ದಂಡನಾಯಕ ಬಂಕೇಶನ ಜ್ಞಾಪಕಾರ್ಥವಾಗಿ ಕಟ್ಟಿಸಿದ )
ನೃಪತುಂಗ - ಕ್ರಿ.ಶ.878 ರಲ್ಲಿ ಮರಣ ಹೊಂದಿದ
ಅಮೋಘವರ್ಷನ ನಂತರ ಈತನ ಮಗ - ಎರಡನೇ ಕೃಷ್ಣ ಅಧಿಕಾರಕ್ಕೆ ಬಂದನು
ರಾಷ್ಟ್ರಕೂಟರ ಕೊನೆಯ ಅರಸ - ಎರಡನೇ ಕರ್ಕ

ರಾಷ್ಟ್ರಕೂಟರ ಆಡಳಿತ


ರಾಜ - ಆಡಳಿತದ ಕೇಂದ್ರ ಬಿಂದು
ತುಂಗ ವರ್ಷ , ಕಾಲವರ್ಷ , ಶುಭತುಂಗ , ಜಗತ್ತುಂಗ - ರಾಜರ ಬಿರುದುಗಳು
ರಾಜತ್ವ - ವಂಶ ಪಾರಂಪರ್ಯವಾಗಿತ್ತು
ಮಂತ್ರಿಮಂಡಲ - ರಾಜನಿಗೆ ಆಡಳಿತದಲ್ಲಿ ಸಲಹೆ ನೀಡಲು ಅಸ್ತಿತ್ವದಲ್ಲಿತ್ತು
ಮಂತ್ರಿ ಮಂಡಲದ ಮುಖ್ಯಸ್ಥ - ಪ್ರಧಾನ ಮಂತ್ರಿ
ಮಹಾಸಂಧಿ ವಿಗ್ರಹಿ - ವಿದೇಶಾಂದ ವ್ಯಾವಹಾರಗಳ ಮಂತ್ರಿ
ಅಮಾತ್ಯ - ಕಂದಾಯ ಮಂತ್ರಿ
ಭಂಡಾರಿಕ - ಹಣಕಾಸು ವ್ಯವಾಹಾರಳ ಮಂತ್ರಿ
ಸೇನೆಯ ಮುಖ್ಯ ಕಛೇರಿ - ರಾಜಧಾನಿಯಲ್ಲಿತ್ತು
ಆದಾಯದ ಮೂಲ - ಭೂಕಂದಾಯ
ಉದ್ರಂಗ , ಉಪರಿತ ,ಬಾಗಕರ - ಪ್ರಮುಖ ಕಂದಾಯಗಳು
ಸಾಮಂತರು - ಕಪ್ಪ ಕಾಣಿಕೆ ಕೋಡಬೆಕಾಗಿತ್ತು
ಪ್ತಾಂತ್ಯಾಡಳಿತ - ಪ್ರಾಂತ್ಯ , ಭುಕ್ತಿ , ವಿಷಯ ಹಾಗೂ ಗ್ರಾಮ
ಪ್ರಾಂತ್ಯಗಳನ್ನು - ರಾಷ್ಟ್ರ ಅಥವಾ ಮಂಡಲ ಎಂದು ಕರೆಯಲಾಗುತ್ತಿತ್ತು
ರಾಷ್ಟ್ರಪತಿ - ಪ್ರಾಂತ್ಯದ ಆಡಳಿತದ ಮುಖ್ಯಸ್ಥ
ವಿಷಯಗಳು - ಪ್ರಾಂತ್ಯಗಳನ್ನು ವಿಷಯಗಳಾಗಿ ವಿಭಗಿಸಲ್ಪಟ್ಟತ್ತು
ವಿಷಯದ ಮುಖ್ಯಸ್ಥ - ವಿಷಯಪತಿ
ಭುಕ್ತಿ - ವಿಷಯಗಳನ್ನು ಭುಕ್ತಿಗಳಾಗಿ ವಿಭಾಗಿಸಲಾಗಿತ್ತು
ಬೋಗಪತಿ - ಭುಕ್ತಿಯ ಮುಖ್ಯಸ್ಥ
ಪಟ್ಟಣದ ಆಡಳಿತ - ಪಟ್ಟಣ ಶೆಟ್ಟಿಗಳು ನೋಡಿಕೊಳ್ಳುತ್ತಿದ್ದರು
ಗ್ರಾಮ - ಆಡಳಿತದ ಕೊನೆಯ ಘಟಕ
ಗ್ರಾಮಪತಿ ಅಥವಾ ಪ್ರಭುಗಾವುಂಡ - ಗ್ರಾಮದ ಮುಖ್ಯಸ್ಥ
ಮಹಜನರು - ಗ್ರಾಮ ಸಭೆಯ ಸದಸ್ಯರು

ರಾಷ್ಟ್ರಕೂಟರ ಸಾಮಾಜಿಕ ಜೀವನ


ಸಮಾಜದಲ್ಲಿ ಪಿತೃ ಪ್ರಧಾನ ಕುಟುಂಬ ಅಶ್ತಿತ್ವದಲ್ಲಿತ್ತು
ಕೀಳ್ಗುಂಟೆ ಮತ್ತು ವೇಳಾವಳಿ - ಸೇವಕರು , ಸೈನಿಕರು ,ಸ್ತ್ರೀಯರು ತಮ್ಮ ಮಾನ ಹಾಗೂ ಘನತೆಯ ಹಾಗೂ ಗ್ರಾಮದ ರಕ್ಷಣಿಗಾಗಿ ಮಾಡುತ್ತಿದ್ದ ಬಲಿದಾನ

ರಾಷ್ಟ್ರಕೂಟರ ಆರ್ಥಿಕ ಜೀವನ


ನೇಗಿಲು ವ್ಯವಸಾಯದ ಪ್ರಮುಖ ಉಪಕರಣವಾಗಿದ್ದು ಇದನ್ನು “ಮೇಟಿ” ಎಂದು ಕರೆಯುತ್ತಿದ್ದರು .
ಕೃಷಿ -ಆರ್ಥಿಕ ಜೀವನದ ಬೆನ್ನೇಲುಬಾಗಿತ್ತು .
ಭೂಮಿಯ ವಿಭಾಗಗಳು - ತರಿ , ಖುಷ್ಕಿ
ಆದಾಯದ ಮೂಲ - ಭೂಕಂದಾಯವಾಗಿತ್ತು
ಕಂದಾಯ ವಸೂಲಿ - ಉತ್ತನ್ನದ 1/6 ಭಾಗ
ಪ್ರಮುಖ ವಾಣಿಜ್ಯ ಬೆಳೆ - ಹತ್ತಿಯಾಗಿತ್ತು
ಕೈಗಾರಿಕಾ ಕೇಂದ್ರ - ಗುಜರಾತ್ , ಬಿಹಾರ್ ಹಾಗೂ ತೆಲಂಗಾಣದಲ್ಲಿತ್ತು
ಮಾನ್ಯಖೇಟ - ಆಭರಣದ ಮಾರುಕಟ್ಟೆಯಾಗಿತ್ತು
ವ್ಯಾಪಾರ ಸಂಪರ್ಕ - ಅರಬ್ ರಾಷ್ಟ್ರದೊಂದಿಗೆ
ವಿದೇಶಿ ವ್ಯಾಪಾರ ಕೇಂದ್ರಗಳು - ಕಲ್ಯಾಣ , ಸೋಪಾರ , ಬ್ರೋಚ್. ತೊರಾಣ , ಥಾಣ
ವ್ಯಾಪಾರಿ ವೃತ್ತಿ ಸಂಘ ಹೊಂದಿದ್ದವರು - ವೀರಬಣಜಿಗರು
ಲಕ್ಷ್ಮೇಶ್ವರ - ನೆಯ್ಗೆಕಾರರ ನೆಯ್ಗೆ ಸಂಘ ಹೊಂದಿತ್ತು
ನಾಣ್ಯಗಳು - ದ್ರಮ್ಮ , ಸುವರ್ಣ , ಗದ್ಯಾಣ , ಕಳಂಜು ಹಾಗೂ ಕಾಸು

ರಾಷ್ಟ್ರಕೂಟರ ಸಾಂಸ್ಕೃತಿಕ ಕೊಡುಗೆಗಳು


ಬಂಕಾಪುರ - ರಾಷ್ಟ್ರಕೂಟರ ಪ್ರಸಿದ್ದ ಜೈನಮತದ ಕೇಂದ್ರವಾಗಿತ್ತು
ರಾಷ್ಟ್ರಕೂಟರು - ಸಂಸ್ಕೃತ ಹಾಗೂ ಕನ್ನಡ ಭಾಷೆಯಲ್ಲಿ ಶಿಕ್ಷಣ ನೀಡುತ್ತಿದ್ದರು
ಬಿಜಾಪುರ ಜಿಲ್ಲೆಯ “ಸಾಲೋಟಗಿ ” - ಇವರ ಕಾಲದ ಪ್ರಸಿದ್ದ ವಿದ್ಯಾಕೇಂದ್ರ

ಇವರ ಕಾಲದಲ್ಲಿ ರಚನೆಯಾದ ಸಾಹಿತ್ಯ ಕೃತಿಗಳು


ತ್ರಿವಿಕ್ರಮ - ನಳಚಂಪು
ಹಲಾಯುಧ - ಕವಿರಹಸ್ಯ
ಅಕಲಂಕ - ಅಷ್ಟಸಹಸ್ರಿ
ಅಮೋಘವರ್ಷ - ಪ್ರಶ್ನೋತ್ತರ ಮಾಲಿಕೆ ( ಸಂಸ್ಕೃತ ) ಹಾಗೂ ಕವಿರಾಜಮಾರ್ಗ
ಜಿನಸೇನ - ಆದಿಪುರಾಣ , ಪಾರ್ಶ್ವಭುದಯ ಹಾಗೂ ಜಯದವಳ
ಮಹಾವೀರಾಚಾರ್ಯ - ಗಣಿತ ಸಾರ ಸಂಗ್ರಹ ( ಗಮಿತ ಗ್ರಂಥ )
ಕನ್ನಡದ ಮೊಟ್ಟ ಮೊದಲ ಉಪಲಬ್ದ ಗ್ರಂಥ - ಕವಿರಾಜಮಾರ್ಗ
ಕನ್ನಡದ ಆದಿಕವಿ - ಪಂಪ
ಪಂಪ ಅರಿಕೇಸರಿಯ ಆಸ್ಥಾನ ಕವಿ
ಪಂಪನ ಕೃತಿಗಳು - ವಿಕ್ರಮಾರ್ಜುನ ವಿಜಯ ಹಾಗೂ ಆದಿಪುರಾಣ
ಪೊನ್ನ - ಮೂರನೇ ಕೃಷ್ಣನ ಆಸ್ಥಾನದ ಕವಿ
ಕವಿಚಕ್ರವರ್ತಿ - ಪೊನ್ನನ ಬಿರುದು
ಪೊನ್ನನ ಕೃತಿಗಳು - ಶಾಂತಿಪುರಾಣ , ಭುವನೈಕ್ಯ ರಾಮಭ್ಯುದಯ ಮತ್ತು ಜಿನಾಕ್ಷರ ಮಾಲೆ ( ಎಲ್ಲವೂ ಕನ್ನಡ ಕೃತಿಗಳು )
ಮೂರನೇ ಕೃಷ್ಣ ಪೊನ್ನನಿಗೆ ನೀಡಿದ ಬಿರುದು - ಉಭಯಕವಿ

ಕಲೆ ಮತ್ತು ವಾಸ್ತು ಶಿಲ್ಪ


ಒಂದನೇ ಕೃಷ್ಣ ನಿರ್ಮಿಸಿದ - ಎಲ್ಲೋರಾದ ಕೈಲಾಸನಾಥ ದೇವಾಲಯ ಇವರ ಕಾಲದ ಪ್ರಮುಖ ದೇವಾಲಯ
ಎಲ್ಲೋರಾದ ಕೈಲಾಸ ದೇವಾಲಯದ ಶಿಲ್ಪಿ - ವಿಶ್ವಕರ್ಮ
ಈ ದೇವಾಲಯ ಪ್ರಸ್ತುತ - ಮಹಾರಾಷ್ಟ್ರದ ಔರಂಗಬಾದ್ ಜಿಲ್ಲೆಯಲ್ಲಿದೆ
ಎಲ್ಲೋರಾದ 30 ನೇ ಗುಹೆಯನ್ನು - ಛೋಟಾ ಕೈಲಾಸ ಎಂದು ಕರೆಯಲಾಗಿದೆ
ಎಲಿಫೆಂಟಾ ದೇವಾಲಯ - ಬಾಂಬೆಯ ಬಳಿಯಿದೆ
ಎಲಿಫೇಂಟಾದ ಮೊದಲ ಹೆಸರು - ಗೊರವಪುರಿ ಅಥವಾ ಗೋವಕಪುರಿ
ಈ ದೇವಾಲಯವನ್ನು “ ಎಲಿಫೇಂಟಾ ” ಎಂದ ಕರೆದವರು - ಪೋರ್ಚುಗೀಸರು
ರಾಷ್ಠ್ರಕೂಟರ ಕಾಲವನ್ನು - “ಕಾನೂಜ್ ಸಾಮ್ರಾಜ್ಯ ಕಾಲ ” ಎಂದು ಕರೆಯಲಾಗಿದೆ

ಬಿರುದುಗಳು


ದಂತಿದುರ್ಗನ ಬಿರುದುಗಳು - ಮಹಾರಾಜಾಧಿ ಪರಮೇಶ್ವರ , ಪೃಥ್ವಿವಲ್ಲಭ
ಒಂದನೇ ಕೃಷ್ಣನ ಬಿರುದುಗಳು - ಶುಭತುಂಗ , ಅಕಾಲವರ್ಷ
ಎರಡನೇ ಗೋವಿಂದನ ಬಿರುದುಗಳು - ಜಗತ್ತುಂಗ , ಪ್ರಭೂತವರ್ಷ ಹಾಗೂ ಪ್ರತಾಪವ ಲೋಕ
ಧೃವನ ಬಿರಿದುಗಳು - ಧಾರವರ್ಷ , ಕಲಿವಲ್ಲಭ ಹಾಗೂ ಶ್ರೀವಲ್ಲಭ
ಮೂರನೇ ಗೋವಿಂದನ ಬಿರುದುಗಳು - ನರೇಂದ್ರ , ಜಗತ್ತುಂಗ , ಪ್ರಭೂತವರ್ಷ ಹಾಗೂ ಜನವಲ್ಲಭ
ರಾಷ್ಟ್ರಕೂಟರ ಶಾಂತಿಪ್ರೀಯ ಅರಸ - ಅಮೋಘವರ್ಷನೃಪತುಂಗ
ಕಂಚಿಕೊಂಡ ಎಂಬ ಬಿರುದು ಧರಿಸಿದ್ದ ರಾಜ - 3 ನೇ ಕೃಷ್ಣ
ಒಂದನೇ ಕೃಷ್ಣನ ಮತ್ತೊಂದು ಹೆಸರು - ಕನ್ನರಸ ಬಿಲ್ಲಹ
ಉಭಯ ಕವಿ ಚಕ್ರವರ್ತಿ ಬಿರುದುಳ್ಳ ಕವಿ - ಪೊನ್ನ

ಹೆಚ್ಚಿನ ವಿವರಗಳು


“ಶಬ್ದಾನು ಶಾಸನ ” ಎಂಬ ಸಂಸ್ಕೃತ ವ್ಯಾಕರಣ ಗ್ರಂಥದ ಕರ್ತೃ - ಶಾಕ್ತಾಯನ
ನೃಪತುಂಗನ ಆಸ್ಥಾನ ಕವಿ - ಶ್ರೀವಿಜಯ
ಮಾನ್ಯಖೇಟ ಎಂಬ ಹೊಸ ರಾಜಧಾನಿಯ ನಿರ್ಮಾತೃ - ಅಮೋಘವರ್ಷ ನೃಪತುಂಗ
ಕನ್ನಡದ ಮೊದಲ ಗಧ್ಯ ಕೃತಿ - ವಡ್ಡರಾಧನೆ
ವಡ್ಡರಾಧನೆಯ ಕರ್ತೃ - ಶಿವಕೋಟಾಚಾರ್ಯ
ಪ್ರಾಚೀನ ಕರ್ನಾಟಕದ ಎಲ್ಲೆಯನ್ನು ತಿಳಿಸುವ ಕನ್ನಡ ಕೃತಿ - ಕವಿರಾಜಮಾರ್ಗ
ನೃಪತುಂಗನ ಆಸ್ಥಾನಕ್ಕೆ ಬಂದಿದ್ದ ಅರಬ್ ಪ್ರವಾಸಿಗ - ಸುಲೇಮಾನ್
ಕನ್ನಡದ ಅತೀ ಪ್ರಾಚೀನ ಗ್ರಂಥ - ಕವಿರಾಜಮಾರ್ಗ
ರಾಷ್ಟ್ರಕೂಟರ ಕೊನೆಯ ಅರಸ - 2ನೇ ಕರ್ಕ
ಗಣಿತ ಸಾರಸಂಗ್ರಹದ ಕರ್ತೃ - ಮಹಾವೀರಾಚಾರ್ಯರು
ಕನ್ನಡದ ಮೊದಲ ಪಲಬ್ದ ಕೃತಿ - ಕವಿರಾಜಮಾರ್ಗ
ಚಾಲುಕ್ಯರ ನಂತರ ಅಧಿಕಾರಕ್ಕೆ ಬಂದವರು - ರಾಷ್ಠ್ರಕೂಟರು