ಪರಿಸರ ವಿಜ್ಞಾನ (ಜೈವಿಕ ವಿಜ್ಞಾನ)

 

• ನಮ್ಮ ಸುತ್ತಮುತ್ತ ಇರುವ ಎಲ್ಲಾ ಪ್ರಾಕೃತಿಕ ಅಂದರೆ ಜೈವಿಕ ಮತ್ತು ಅಜೈವಿಕ ವಸ್ತುಗಳು, ಘಟನೆಗಳು, ಪ್ರಭಾವಗಳೆಲ್ಲವೂ ಒಟ್ಟುಗೂಡಿ ಪರಿಸರವನ್ನು ರೂಪಿಸಿವೆ.
• Taunslay ಎಂಬ ತತಜ್ಞಾನಿಯು ಮೊಟ್ಟಮೊದಲ ಬಾರಿಗೆ ಪರಿಸರ ಎಂಬುದರ ಅರ್ಥವನ್ನು ತಿಳಿಸಿದ್ದಾನೆ. ಇವನ ಪ್ರಕಾರ ಪರಿಸರವೆಂದರೆ “ಜೀವಿಗಳಿರುವ ಪ್ರಭಾವಕಾರಿ ಪರಿಸ್ಥಿತಿಗಳ ಸಂಪೂರ್ಣ ಸಮೂಹಕ್ಕೆ ಪರಿಸರ ಎನ್ನುವರು” ಎಂದು ಹೇಳಿದನು.
• ಪರಿಸರ ಭೂಗೋಳಶಾಸ್ತ್ರವು ಪ್ರಾಕೃತಿಕ ಮತ್ತು ಮಾನವ ಭೂಗೋಳಶ್ತ್ರಾಗಳ ನಡುವೆ ಕೊಂಡಿಯೆಂತ ವರ್ತಿಸುತ್ತದೆ.
• ಜೀವಿಗಳ ನಡುವೆಯಿರುವ ಸಂಬಂಧ ಮತ್ತು ಅವುಗಳು ಹೊಂದಿರುವ ಸುತ್ತಮುತ್ತಲಿನ ಪರಿಸರ ಅಧ್ಯಯನವೇ “ಜೀವ ಪರಿಸರ ವಿಜ್ಞಾನ” (Ecology).
• ನಮ್ಮ ಸೌರಮಂಡಲದಲ್ಲಿ ಭೂಮಿಯ ಮೇಲೆ ಮಾತ್ರ ಜೀವಿಗಳು ವಾಸಿಸಲು ಅನುಕೂಲವಾಗಿದೆ. ಮತ್ತು ಅಸ್ತಿತ್ವದಲ್ಲಿವೆ ಆದ್ದರಿಂದ ಇದೊಂದು ಜೀವಪೋಷಕ ಗ್ರಹ ಎನ್ನಬಹುದಾಗಿದೆ. ಇದರ ಸುತ್ತಲಿನ ವಾಯುಮಂಡಲವು ಜೀವಿಗಳಿಗೆ ಶಿಕ್ಷಾಕವಚವಾಗಿ ಪರಿಣಮಿಸಿದೆ.
• ಜೀವಿಗೋಳವು ವ್ಯವಸ್ಥಿತವಾಗಿ ರೂಪಿಪತವಾಗಿರುವ ಒಂದು ವ್ಯವಸ್ಥೆಯಾಗಿದೆ. ಇದು ಮಾನಸಿಕ ಮತ್ತು ವೈಜ್ಞಾನಿಕ ಇವುಗಳ ನಡುವೆಯಿರುವ ಅಂತಃ ಸಂಬಂಧಗಳ ಅಧ್ಯಯನಕ್ಕೆ ಅನುಕೂಲ ಮಾಡಿಕೊಟ್ಟಿದೆ

ಜೀವಪರಿಸರ ವ್ಯವಸ್ಥೆಯ ಲಕ್ಷಣಗಳು


1. ಜೀವ ಪರಿಸರ ವ್ಯವಸ್ಥೆಯು ವ್ಯವಸ್ಥಿತವಾಗಿ ಸಂಪೂರ್ಣ ರಚನೆಯಿಂದ ಕೂಡಿದ ವ್ಯವಸ್ಥೆಯಾಗಿದೆ.
2. ಇದು ಭೌತವಸ್ತು ಮತ್ತು ಶಕ್ತಿಯಿಂದ ಕೂಡಿದೆ.
3. ಇದು ಶಕ್ತಿಯ ವ್ಯಯದ ಜೊತೆಗೆ ತೆರೆದ ವ್ಯವಸ್ಥೆಯಿಂದ ಕೂಡಿದೆ.
4. ಇದು ಸ್ವಯಂನಿಯಂತ್ರಿಕ ತಂತ್ರವನ್ನು ಹೊಂದಿದೆ.
5. ಇದು ಸಮತೋಲನ ತಂತ್ರದಿಂದ ಇರಲು ಸಹಾಯಕಾವಾಗುತ್ತದೆ.
6. ಇದು ಗತಿಶೀಲತೆ ಮತ್ತು ಏರಿಳಿತಗಳಿಂದ ಕೂಡಿದೆ.

ಪರಿಸರದ ಘಟಕಗಳು


1. ಅಜೈವಿಕ ಘಟಕಗಳು : ಇವು ಪರಿಸರದ ನಿರ್ಜಿವ ಭೌತಿಕ ಘಟಕಗಳಾಗಿದ್ದು,ಇವು ಉಷ್ಣಾಂಶ, ಬೆಳಕು, ಮಣ್ಣು, ಲವಣಗಳು, ಅನಿಲಗಳು, ಖನಿಜಗಳು ಇತ್ಯಾದಿಗಳನ್ನು ಒಳಗೊಂಡಿದೆ.
2. ಜೈವಿಕ ಘಟಕಗಳು : ಇವು ಪರಿಸರದ ಸಜೀವ ಘಟಕಗಳು. ಇವು ಸೂಕ್ಶ್ಮಾಣು ಜೀವಿಗಳು,ಸಸ್ಯಗಳು,ಪ್ರಾಣಿಗಳನ್ನು ಒಳಗೊಂಡಿದೆ.

ಪರಿಸರದ ಮೇಲೆ ಪ್ರಭಾವ ಬೀರುವ ಅಂಶಗಳು


1. ಉಷ್ಣಾಂಶ : ಜೀವಿಗಳ ಪ್ರಮುಖ ಕ್ರಿಯೆಗಳಿಗೆ ನಿರ್ದಿಷ್ಟ ಪ್ರಮಾಣದ ಉಷ್ಣಾಂಶವು ಅವಶ್ಯಕವಾಗಿದೆ. ಸಸ್ಯಗಳು ಸಾಮಾನ್ಯವಾಗಿ 20 ಡಿಗ್ರಿ ಯಿಂದ 45 ಡಿಗ್ರಿ ವರೆಗೆ ಉಷ್ಣತೆಯನ್ನು ಇಷ್ಟಪಡುತ್ತವೆ ಅದಗ್ಯೂ ಅನೇಕ ಜೀವಿಗಳು ಹವಾಗುಣಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತವೆ.
• ಉದಾ: ಧ್ರುವ ಕರಡಿಯು ಅತೀ ಶೀತಪ್ರದೇಶಗಳಲ್ಲಿ ಜೀವಿಸುತ್ತದೆ. ಮತ್ತು ಚಳಿಗಾಲದಲ್ಲಿ ನಿದ್ರಿಸುತ್ತದೆ.
• ಕೆಲವು ಪ್ರಾಣಿ, ಪಕ್ಷಿಗಳು ಶೀತದಿಂದ ತಪ್ಪಿಸಿಕೊಳ್ಳಲು ಉಷ್ಣ ಸ್ಥಳಗಳಿಗೆ ವಲಸೆ ಹೋಗುತ್ತವೆ.
2. ಬೆಳಕು : ಇದು ಅತ್ಯಾವಶ್ಯಕವಾದುದ್ದಾಗಿದೆ. ಸಸ್ಯಗಳಲ್ಲಿ ಆಹಾರ ತಯಾರಿಕೆಗಾಗಿ, ಜೀವಿಗಳಲ್ಲಿ ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ಸಹಾಯಕವಾಗಿದೆ. ಬಹಳಷ್ಟು ಪ್ರಾಣಿಗಳು ಸೂರ್ಯನ ಬೆಳಕಿನಲ್ಲಿ ಸಂಚರಿಸುತ್ತವೆ. ಮತ್ತು ಇನ್ನು ಸ್ವಲ್ಪ ಪ್ರಾಣಿಗಳು ಕತ್ತಲಲ್ಲಿ ವಾಸಿಸುತ್ತವೆ.
3. ಅನಿಲಗಳು : ವಾಯುವು ಪ್ರಮುಖವಾಗಿ ಸಾರಜನಕ, ಇಂಗಾಲದ ಡೈ ಆಕ್ಸೈಡ್ ಮತ್ತು ಇತರ ಅನಿಲಗಳಿಂದ ಕೂಡಿದೆ. ಇವುಗಳಲ್ಲಿ ಜೀವಿಗಳಿಗೆ ಸಾರಜನಕ, ಆಮ್ಲಜನಿಕ ಅವಶ್ಯವಾಗಿವೆ. ಇಂಗಾಲದ ಡೈ ಆಕ್ಸೈಡನ್ನು ಸಸ್ಯಗಳು ದ್ಯುತಿಸಂಶ್ಲೇಷಣೆ ಕ್ರಿಯೆಗೆ ಉಪಯೋಗಿಸತ್ತವೆ.
4. ಆದ್ರ್ರತೆ : ವಾಯುಮಂಡಲದಲ್ಲಿರುವ ಆದ್ರ್ರತೆಯು ಸಸ್ಯಗಳ ಬಾಷ್ಟವಿಸರ್ಜನೆ ಹಾಗೂ ಪ್ರಾಣಿಗಳ ಬೆವರಿಕೆಯಗತಿಯನ್ನು ನೇರವಾಗಿ ನಿಯಂತ್ರಿಸುತ್ತದೆ. ಅನೇಕ ಪ್ರಾಣಿ, ಸಸ್ಯಗಳು ಒಣಪರಿಸ್ಥಿತಿಗಳನ್ನು ಎದುರಿಸಲು ಅನೇಕ ಹೊಂದಾಣಿಕೆ ಕ್ರಮಗಳನ್ನು ಅನುಸರಿಸುತ್ತವೆ.
5. ಗಾಳಿ : ಗಾಳಿಯು ಅನೇಕ ರೀತಿಯಲ್ಲಿ ಸಸ್ಯಗಳ ಮೇಲೆ ಪ್ರಭಾವ ಬೀರುತ್ತವೆ. ಗಾಳಿಯು ಸಸ್ಯಗಳ ಬಾಷ್ಪವಿಸರ್ಜನಾ ಕ್ರಿಯೆಯನ್ನು ಹೆಚ್ಚಿಸುತ್ತವೆ. ಗಾಳಿಯ ಬೀಜಗಳ ಮತ್ತು ಹಣ್ಣುಗಳ ಪ್ರಸಾರಕ್ಕೆ ಉಪಯುಕ್ತವಾಗಿದೆ.
6. ನೀರು : ನೀರು ಅತಿಮುಖ್ಯವಾದದ್ದು, ಯಾವುದೇ ಕ್ರಿಯೆ ನಡೆಸಲು ನೀರು ಅತ್ಯಾವಶ್ಯಕ, ವಾತಾವರಣದಲ್ಲಿ 95% ಭಾಗದಲ್ಲಿ ಜೀವಿಗಳು ವಾಸಿಸುತ್ತವೆ. ಪರಿಸರ ಸಮತೋಲನವನ್ನು ಕಾಪಾಡಲು ಸಹಾಯಕವಾಗಿವೆ. ನೀರನ್ನು ಒಂದು ಸಾವಯವದ್ರಾವಕ ಎಂದು ಕರೆಯಬಹುದು. ಸಸ್ಯಗಳು ಬೇರಿನಿಂದ ನೀರನ್ನು ಹೀರಿಕೊಂಡು ವಿವಿಧ ಭಾಗಗಳಿಗೆ ಪರಿಸರುತ್ತವೆ. ಅನೇಕ ಜೀವಿಗಳ ತಮ್ಮ ದೇಹದಲ್ಲಿ ನೀರಿನ ಸಮತೋಲನವನ್ನು ಬಹುದಿನಗಳವರೆಗೆ ಶೇಖರಿಸಿಟ್ಟುಕೊಳ್ಳುವಂತಹ ಸಾಮಥ್ರ್ಯವನ್ನು ಹೊಂದಿವೆ. ಕೆಲವು ಪ್ರಾಣಿಗಳನ್ನು ಬೇಟೆಯಾಡಿ ಅವುಗಳಲ್ಲಿರುವ ರಕ್ತದ ಸಹಾಯದಿಂದ ನೀರನ್ನು ಹೀರಿಕೊಳ್ಳುತ್ತವೆ.
7. ಮಣ್ಣು : ಮಣ್ಣು ಸಹ ಅತಿಮುಖ್ಯವಾಗಿದೆ. ಏಕೆಂದರೆ ಯಾವುದೇ ಜೀವಿಯೂ ನೆಲೆಗೊಳ್ಳಲೂ ಮತ್ತು ಆಹಾರ ಕ್ರಿಯೆಗೆ ಅಂದರೆ ಜೀವಿಗಳು ಮಣ್ಣಿನಲ್ಲಿ ಬೆಳೆದಿರುವ ಸಸ್ಯಗಳನ್ನು ತಿಂದು ಜೀವಿಸುತ್ತವೆ. ಮಣ್ಣಿನಲ್ಲಿ ಜೇಡಿಮಣ್ಣು, ಮರಳು ಮಿಶ್ರಿತ ಮಣ್ಣು, ಕೆಸರು ಮಣ್ಣುಗಳಿವೆ. ಒಂದೊಂದು ತರಹದ ಮಣ್ಣಿನಲ್ಲಿ ಒಂದೊಂದು ತರಹದ ವಿಶೇಷ ಆಹಾರ ಪದಾರ್ಥವನ್ನು ಬೆಳೆಯಬಹುದಾಗಿದೆ. ಸಸ್ಯ ಮತ್ತು ಮರಗಳು ಕಮ್ಮಿಯಾದರೆ ಮಣ್ಣು ಕೊಚ್ಚಿಕೊಂಡು ಹೋಗಿ ಸಮುದ್ರವನ್ನು ಸೇರುತ್ತದೆ. ಇದರಿಂದ ಪರಿಸರದ ಮೇಲೆ ಪರಿಣಾಮ ಬೀರುತ್ತದೆ.