ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಕರ್ನಾಟಕದ ಪಾತ್ರ
 
ಬೆಳಗಾವಿ ಕಾಂಗ್ರೆಸ್ ಅಧಿವೇಶನ ಹಾಗೂ ಹಿಂದೂಸ್ತಾನಿ ಸೇವಾ ದಳ
• ಎನ್.ಎಸ್. ಹರ್ಡಿಕರ್ ಎಂಬ ವೈದ್ಯ ರಾಷ್ಟ್ರೀಯ ಭಾವನೆಗಳಿಂದ ತೀವ್ರ ಪ್ರಭಾವಿತರಾಗಿ 1923ರಲ್ಲಿ ‘ಹಿಂದೂಸ್ತಾನಿ ಸೇವಾದಳ’ ಸ್ಥಾಪಿಸಿದರು. ಹುಬ್ಬಳ್ಳಿಯನ್ನು ಇದರ ಪ್ರಧಾನ ಕಚೇರಿಯನ್ನಾಗಿ ಮಾಡಲಾಯಿತು.
• ಹುಬ್ಬಳ್ಳಿಗೆ ತರಬೇತಿ ಪಡೆಯಲು ಭಾರತದ ಎಲ್ಲ ಕಡೆಯಿಂದ ಸ್ವಯಂ ಸೇವಕರು ಆಗಮಿ ಸಿದರು. ಎನ್. ಎಸ್. ಹರ್ಡೀಕರ್ರವರು ತಮ್ಮ ಹದಿನಾರನೇ ವಯಸ್ಸಿನಲ್ಲಿ ರಾಜಕೀಯ ಪ್ರವೇಶಿಸಿ ಲೋಕಮಾನ್ಯ ಬಾಲಗಂಗಾಧರ ತಿಲಕರ ಪರಮ ಶಿಷ್ಯರಾದರು.
• ಬೆಳಗಾವಿಯಲ್ಲಿ 1924ರಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯುವ ಸಂದರ್ಭದಲ್ಲಿ ಇವರ ಸಂಸ್ಥೆ ಹದಿನೇಳು ನೂರು ಸ್ವಯಂ ಸೇವಕರಿಗೆ ತರಬೇತಿ ನೀಡಿತ್ತು.
• ಬೆಳಗಾವಿಯಲ್ಲಿ 1924ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನ ಮಹಾತ್ಮಾ ಗಾಂಧೀಜಿಯವ ರ ಅಧ್ಯಕ್ಷತೆಯಲ್ಲಿ ನಡೆಯಿತು.
• ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ ಮೊಟ್ಟ ಮೊದಲ ಹಾಗೂ ಕೊನೆ ಸಮ್ಮೇಳನ ಇದಾಗಿರುವುದರಿಂದ ಇದಕ್ಕೆ ಅತ್ಯಂತ ಮಹತ್ವವಿದೆ.
ಅಂಕೋಲಾ ಉಪ್ಪಿನ ಸತ್ಯಾಗ್ರಹ (ಕಾನೂನು ಭಂಗ ಚಳವಳಿ)
• ಉಪ್ಪನ್ನು ತಯಾರಿಸುವ ಮತ್ತು ಮಾರಾಟದ ಮೇಲೆ ಬ್ರಿಟಿಷ್ ಸರಕಾರ ವಿಧಿಸಿದ ನಿರ್ಬಂಧದ ವಿರುದ್ದ ರಾಷ್ಟ್ರೀಯ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
• ಗಾಂಧೀಜಿ ಉಪ್ಪಿನ ಕರದ ವಿರುದ್ಧ ಸತ್ಯಾಗ್ರಹ ಪ್ರಾರಂಭಿಸಿ ದಂಡಿ ಯಾತ್ರೆ ಕೈಗೊಂಡರು. ಇದರ ಮಾದರಿಯಲ್ಲಿ ಕರ್ನಾಟಕ ಕರಾವಳಿ ತೀರ ಆಂಕೋಲಾದಲ್ಲಿ ಉಪ್ಪನ್ನು ತಯಾರಿಸಿ ಕಾನೂನು ಭಂಗಗೊಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
• ಹರ್ಡಿಕರ್ರವರು ತಮ್ಮ ಸೇವಾದಳದ ಸದಸ್ಯರೊಂದಿಗೆ ಅಂಕೋಲಾಕ್ಕೆ ತೆರಳಿದರು. ಹುಬ್ಬಳ್ಳಿ, ಬೆಳಗಾವಿಗಳಿಂದ ಪ್ರತ್ಯೇಕ ಗುಂಪುಗಳು 1930ರ ಏಪ್ರಿಲ್ 13 ರಂದು ಅಂಕೋಲಾವನ್ನು ತಲುಪಿದವು. ಹತ್ತು ಸಾವಿರ ಜನರು ಅಂಕೋಲಾದ ಈ ಹೋರಾಟದಲ್ಲಿಸೇರಿದ್ದರು. ಇದರ ನೇತೃತ್ವವನ್ನು ಎಂ.ಪಿ.ನಾಡಕರ್ಣಿ ವಹಿಸಿದ್ದರು.
• ಈ ಉಪ್ಪಿನ ಸತ್ಯಾಗ್ರಹವು ಮಂಗಳೂರು, ಕುಂದಾಪುರ, ಪಡುಬಿದ್ರೆ, ಪುತ್ತೂರು, ಉಡುಪಿ, ಬಿಸ ನಾಳ, ಕಾರ್ಕಳ ಕಿರೇಸೂರು ಒಳಗೊಂಡಂತೆ ಮೂವತ್ತು ಕಡೆಗಳಲ್ಲಿ ನಡೆಯಿತು.
• ಕೆಲವು ಸತ್ಯಾಗ್ರಹಿಗಳು ಅಬಕಾರಿ ನಿಯಮಗಳನ್ನು ಉಲ್ಲಂಘಿಸಿ ಗೋವಾದಿಂದ ಉಪ್ಪನ್ನು ತಂದು ಕಾರವಾರದಲ್ಲಿ ಮಾರಾಟ ಮಾಡಿದರು. 1930ರ ಜೂನ್ 1ರಂದು ಸಾಣೆಕಟ್ಟಾದಲ್ಲಿ ಉಪ್ಪಿನ ಕಟ್ಟೆಗಳ ಮೇಲೆ ಸತ್ಯಾಗ್ರಹಿಗಳು ದಾಳಿ ಮಾಡಿದರು.
ಕರ ನಿರಾಕರಣೆ ಚಳವಳಿ
• ಕರ್ನಾಟಕದಲ್ಲಿ ಪ್ರಾರಂಭವಾದ ಈ ಕರ ನಿರಾಕರಣೆ ಚಳವಳಿಯು ಗುಜರಾತಿನ ಬಾರ್ಡೋಲಿಯಲ್ಲಿ ನಡೆದ ಚಳವಳಿಯ ಮಾದರಿಯಲ್ಲಿ ಆರಂಭವಾಯಿತು.
• ಈ ನಿರಾಕರಣೆ ಚಳವಳಿಗೆ ಕಾರವಾರ ಜಿಲ್ಲೆಯ ಶಿರಸಿ, ಸಿದ್ದಾಪುರ, ಅಂಕೋಲಾ ಹಾಗೂ ಹಾವೇರಿ ಜಿಲ್ಲೆಯ ಹಿರೇಕೆರೂರು ಪ್ರದೇಶಗಳ್ನನು ಆಯ್ಕೆ ಮಾಡಿಕೊಳ್ಳಲಾಯಿತು.
• ಅಂಕೋಲಾದಲ್ಲಿನ ರೈತಾಪಿ ಜನರು ಕಂದಾಯ ನೀಡಲು ನಿರಾಕರಿಸಿದರು
• ಹಿರೇಕೇರೂರಿನಲ್ಲಿ ಈ ಚಳವಳಿಯುಸಂಪೂರ್ಣವಾಗಿ ಯಶಸ್ವಿಯಾಗಲು ಕಾರಣೀಕರ್ತರಾದ ಪ್ರಮುಖ ನಾಯಕರೆಂದರೆ ಶಂಕರ್ ಗುಲ್ವಾಡಿ, ವೀರಗೌಡ ಪಾಟೀಲ, ಟಿ.ಆರ್.ನೇಸ್ವಿ, ನೆಲಗೇರಿ ಜೋಗಿ ನಾಯ್ಕ, ಕೆ. ಎಫ್. ಪಾಟೀಲ.
• ರೈತಾಪಿ ವರ್ಗದ ಮೇಲೆ ಈ ಕರ ನಿರಾಕರಣೆ ಆಂದೋಲನವು ಘೋರ ಪರಿಣಾಮ ಬೀರಿ ರೈತರು ಆಸ್ತಿ-ಪಾಸ್ತಿ, ಮನೆ ದನಕರುಗಳು ಹಾಗೂ ಪಾತ್ರೆ- ಪಗಡೆಗಳನ್ನು ಕಳೆದುಕೊಂಡು ಶೋಷಣೆಗೊಳಗಾದರು.
ಶಿವಪುರ ಧ್ವಜ ಸತ್ಯಾಗ್ರಹ
• ಶಿವಪುರವು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನಲ್ಲಿರುವ ಐತಿಹಾಸಿಕ ಪ್ರದೇಶವಾಗಿದೆ. ಕ್ರಿ.ಶ. 1938ರ ಏಪ್ರಿಲ್ನಲ್ಲಿ ಮೈಸೂರು ಕಾಂಗ್ರೆಸ್ನ ಪ್ರಥಮ ಅಧಿವೇಶನ ಟಿ. ಸಿದ್ಧಲಿಂಗಯ್ಯನವರ ಅಧ್ಯಕ್ಷತೆಯಲ್ಲಿ ಶಿವಪುರದಲ್ಲಿ ಜರುಗಿತು
• ಮೈಸೂರು ಕಾಂಗ್ರೆಸ್ಸಿನ ಅಧಿವೇಶನದ ಕಾರ್ಯಕ್ರಮ 1938ರ ಏಪ್ರಿಲ್ 11 ರಂದು ಬೆಳಿಗಿನ ಧ್ವಜಾರೋಹಣದಿಂದ ಪ್ರಾರಂಭವಾಗಬೇಕಿತ್ತು. ಅದರೆ ಮೈಸೂರು ಜಿಲ್ಲಾ ಮ್ಯಾಜಿಸ್ಟ್ರೇಟ್ ಜಿ.ಎಂ.ಮೇಕ್ರೆ ಮದ್ದೂರಿನ ಸುತ್ತಲೂ ಯಾವುದೇ ಸಭೆ, ಮೆರವಣಿಗೆ ಹಾಗೂ ಧ್ವಜಾರೋಹಣ ಮಾಡಕೂಡದೆಂದು ನಿಷೇಧಾಜ್ಞೆ ಜಾರಿಗೆ ತಂದನು.
• ಸಿದ್ಧಲಿಂಗಯ್ಯನವರು ಧ್ವಜಾರೋಹಣದ ವೇದಿಕೆಯ ಬಂದಾಗ ಸುತ್ತಲೂ ಆರು ನೂರು ಮೀಸಲು ಪಡೆಯ ಪೊಲೀಸರು ಸುತ್ತುವರಿದಿದ್ದರು.
• ಟಿ.ಸುನಂದಮ್ಮ ಒಂದೇ ಮಾತರಂ ಗೀತೆಯನ್ನು ಹಾಡಿದರು ಹಾಗೂ ಅಧ್ಯಕ್ಷರಾದ ಸಿದ್ದಲಿಂಗಯ್ಯನವರಾದ ಧ್ವಜಾರೋಹಣ ನೆರವೇರಿಸಿದ ತಕ್ಷಣವೇ ಪೊಲೀಸರು ಇವರನ್ನು ಬಂಧಿಸಿದರು.
ವಿದುರಾಶ್ವತ್ಥ ದುರಂತ
• ವಿದುರಾಶ್ವತ್ಥ ಎಂಬ ಪ್ರದೇಶವು ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನಲ್ಲಿರುವ ಐತಿಹಾಸಿಕ ಸ್ಥಳವಾಗಿದೆ. 1938ರ ಏಪ್ರಿಲ್ 25 ರಂದು ಶಿವಪುರದಲ್ಲಿ ನಡೆದ ಸತ್ಯಾಗ್ರಹದಂತೆ ಇಲ್ಲಿಯೂ ಸಹ ಧ್ವಜಾರೋಹಣ ನಡೆಸಲು ತೀರ್ಮಾನಿಸಲಾಯಿತು.
• ಕೋಲಾರ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಧ್ವಜಾರೋಹಣ ಮಾಡದಂತೆ ಆಜ್ಞೆಯನ್ನು ಹೊರಡಿಸಿದರು. ಆದರೆ ಅಂದು ಸ್ಥಳೀಯ ವಿದುರ ನಾರಾಯಣ ಸ್ವಾಮಿಯ ಜಾತ್ರಾ ದಿನವಾಗಿದ್ದರಿಂದ ಅಲ್ಲಿ ಸಾವಿರಾರು ಜನ ಸೇರಿದರು.
• ಈ ಸಂದರ್ಭದಲ್ಲಿ ಟಿ.ರಾಮಾಚಾರ್ಯ, ಎಂ.ನಾರಾಯಣ ಸ್ವಾಮಿ, ಸೂರಣ್ಣ ಮುಂತಾದವರು ದೇವಾಲಯದ ಎದುರು 1938ರ ಏಪ್ರಿಲ್ 25ರಂದು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
• ಆದರೆ ಬ್ರಿಟಿಷ್ ಅಧಿಕಾರಿಗಳು ಇದು ಕಾನೂನಿಗೆ ವಿರುದ್ದವಾದುದು ಎಂದು ಜನರನ್ನು ಚದುರುವಂತೆ ಆಜ್ಞೆ ಮಾಡಿದರು. ಈ ಸಂದರ್ಭದಲ್ಲಿ ಪೊಲೀಸರ ಮೇಲೆ ಯಾರೋ ಕಲ್ಲು ತೂರಿದ ಕಾರಣದಿಂದ ಲಾಠಿ ಪ್ರಹಾರ ನಡೆದು ಪೊಲೀಸರಿಂದ 92 ಸುತ್ತು ಗುಂಡುಗಳನ್ನು ಹಾರಿಸಲಾಯಿತು. ಈ ಗೋಲಿಬಾರ್ನಲ್ಲಿ 32 ನಿರಪರಾಧಿಗಳು ಸಾವನ್ನಪ್ಪಿದರು.
• ಈ ದುರಂತವನ್ನು ‘ಕರ್ನಾಟಕದ ಜಲಿಯನ್ ವಾಲಾಬಾಗ್ ದುರಂತ ಎಂದು ಕರೆಯಲಾಯಿತು.
ಈಸೂರು ದುರಂತ
• ಈಸೂರು ಎಂಬ ಗ್ರಾಮವು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕುಮದ್ವತ ನದಿ ದಂಡೆಯ ಮೇಲೆ ಕಾಂಗ್ರೆಸ್ ನಾಯಕರು ಪ್ರತಿ ಗ್ರಾಮಗಳಲ್ಲಿ ಮಾಡಿದ ಚಲೇಜಾವ್ ಚಳವಳಿಯನ್ನು ಪ್ರಚಾರ ಜನರಲ್ಲಿ ಬಹಳ ಜಾಗೃತಿಯನ್ನು ಮೂಡಿಸಿತು.
• ಈಸೂರನ್ನು ಈ ಚಳವಳಿಯ ಕೇಂದ್ರಸ್ಥಾನವನ್ನಾಗಿ ಮಾಡಿಕೊಂಡು ಗ್ರಾಮದ ಎಲ್ಲ ಜನತೆ ರಾಷ್ಟ್ರ ಧ್ವಜವನ್ನು ಕೈಯಲ್ಲಿ ಈಸೂರನ್ನು 1942 ರ ಸೆಪ್ಟೆಂಬರ್ 25ರಂದು ಸ್ವತಂತ್ರ ಗ್ರಾಮ ಎಂದು ಘೋಷಿಸಿಕೊಂಡರು.
• ಈ ಸಂದರ್ಭದಲ್ಲಿ ಅಮಲ್ದಾರ್ ಚನ್ನಕೃಷ್ಣಯ್ಯ ಹಾಗೂ ಸಬ್ ಇನ್ಸಪೆಕ್ಟರ್ ಕೆಂಚೇಗೌಡರನ್ನು ಕೊಲ್ಲಲಾಯಿತು. ತದನಂತರ ಅಪಾರ ಪ್ರಮಾಣದ ಪೊಲೀಸ್ ಪಡೆ ಈಸೂರಿಗೆ ಧಾವಿಸಿದ್ದರಿಂದ ಜನತೆ ಅರಣ್ಯದ ಕಡೆ ಓಡಿಹೋದರು. ಕೈಗೆ ಸಿಕ್ಕದವರನ್ನು ಶಿಕ್ಷಿಸಲಾಯಿತು.
• 1943ರ ಜನವರಿ 9ರಂದು ಹೈಕೋರ್ಟ್ ಮಲ್ಲಪ್ಪ, ಗೂರಪ್ಪ, ಬಿ. ಹಾಲಪ್ಪ, ಜಿ. ಶಂಕ್ರಪ್ಪ ಹಾಗೂ ಸೂರ್ಯನಾರಾಯಣಾಚಾರಿ ಎಂಬ 5 ಜನರಿಗೆ ಮರಣದಂಡನೆಯ ತೀರ್ಪು ವಿಧಿಸಿತು.
• ಚಲೇಜಾವ್ ಚಳವಳಿ ಕರ್ನಾಟಕದಲ್ಲಿ ಅನೇಕ ದಿನಗಳವರೆಗೆ ಜಾಗೃತವಾಗಿತ್ತು.
• ಕರ್ನಾಟಕದ ಜನತೆ ನಿಶ್ಚಿತ ಗುರಿ ಹಾಗೂ ತ್ಯಾಗದಲ್ಲಿ ದೇಶದ ಉಳಿದ ಭಾಗಗಳ ಜನರಿಗಿಂತ ತಾವು ಹಿಂದೆ ಇಲ್ಲ ಎಂಬುದನ್ನು ತೋರಿಸಿಕೊಟ್ಟಿತು.