ಶಬ್ದ (Sound)
 
ಶಬ್ದವು ಶಕ್ತಿಯ ಇಂದು ರೂಪ.ಶಬ್ದವು ವಸ್ತುಗಳ ಕಂಪನದಿದ ಉಂಟಾಗುತ್ತಾದೆ.ವಸ್ತುಗಳನ್ನು ತಾಡಿಸಿದಾಗ ಕಂಪನ ಉಂಟಾಗುತ್ತದೆ.ಹೀಗೆ ಉಂಟಾದ ಕಂಪನವು ಗಾಳಿಯನ್ನು ಕಲಕಿ ಶಬ್ದದ ಅಲೆಗಳನ್ನು ಉಂಟು ಮಾಡುತ್ತದೆ.ಈ ರೀತಿ ಶಬ್ದದ ಅಲೆಗಳ ಕಂಪಿಸುವ ವಸ್ತುವಿನಲ್ಲಿ ಕೇಂದ್ರ ಹೊಂದಿದ್ದು, ಒಂದೇ ಸಮನೆ ವಿಕಾಸ ಹೊಂದುತ್ತ ಗೋಳಾಕಾರದ ಪಥದಲ್ಲಿ ಸಾಗುತ್ತದೆ.ಇದರಿಂದಾಗಿ ಶಬ್ದ ಪ್ರಸಾರವಾಗುತ್ತದೆ.
ಶಬ್ದ ಪ್ರಸರಣಕ್ಕೆ ಮಾಧ್ಯಮ ಅವಶ್ಯಕ
ಶಬ್ದ ಪ್ರಸರಣಕ್ಕೆ ಮಾಧ್ಯಮ ಅವಶ್ಯಕ. ಘನ, ದ್ರವ, ಅನಿಲ ಮಾಧ್ಯಮವು ಶಬ್ದ ಪ್ರಸರಣಕ್ಕೆ ಅವಶ್ಯಕವಾಗಿದೆ.ನಿರ್ವಾತದಲ್ಲಿ ಶಬ್ದದ ಅಲೆಗಳು ಪ್ರಸಾರಣವಾಗುವುದಿಲ್ಲ. ಆದರೆ ಬೆಳಕಿನ ಕಿರಣಗಳು ಮಾಧ್ಯಮದ ಅವಶ್ಯಕತೆಯಿಲ್ಲದೆ, ನಿರ್ವಾತದಲ್ಲಿ ಚಲಿಸಬಲ್ಲವು.
ಶಬ್ದದ ತರಂಗಗಳು
• ನೀರಿನಲ್ಲಿ ಶರವಣಾತೀತ ತರಂಗವೇಗ 1.5 ಕಿ.ಮೀ./ಸೆಂ.
• ಶಬ್ದವು ಶಕ್ತಿಯ ರೂಪ.
• ಕಾಯಗಳ ಕಂಪನದಿಂದ ಶಬ್ದ ಉತ್ಪತ್ತಿಯಾಗುತ್ತದೆ.
• ಶಬ್ದವು ತರಂಗಗಳ ರೂಪದಲ್ಲಿ ಪ್ರಸಾರವಾಗುತ್ತದೆ.
• ಬೆಳಗಿನ ಜವಕ್ಕಂತ ಶಬ್ದದ ಜವ ಕಡಿಮೆ, ಗಾಳಿಯಲ್ಲಿ ಶಬ್ದದ ಜವ 330 ಕಿ.ಮೀ./ಸೆಂ. ದ್ರವ ಮತ್ತು ಘನ ವಸ್ತುಗಳಲ್ಲಿ ಶಬ್ದದ ಜವ ಹೆಚ್ಚು.
• ಬೆಳಕಿನಂತೆ ಶಬ್ದವೂ ಪ್ರತಿಫಲಿಸುತ್ತದೆ. ಪ್ರತಿಧ್ವನಿಯೂ ಶಬ್ದದ ಪ್ರತಿಫಲನದ ಪರಿಣಾಮ.
• ಶಬ್ದವು ಪ್ರಸಾರವಾಗಲು ಅವಶ್ಯಕವಾದ ಮಾಧ್ಯಮ – ಗಾಳಿ
• ತರಂಗ ದೂರವನ್ನು ಸಂಕೇತಿಸಲು ಗ್ರೀಕ್ ಭಾಷೆಯ ಯಾವ ಅಕ್ಷರ ಬಳಸುತ್ತಾರೆ - ಲ್ಯಾಂಮ್ಡ.
• ಶಬ್ದ ಪ್ರಮಾಣವನ್ನು ಡೆಸಿಬಲ್ಸ್ ನಲ್ಲಿ ಅಳೆಯುತ್ತಾರೆ.
• ಶಬ್ದದ ಒತ್ತಡವನ್ನು ಅಳೆಯುವ ಮಾಪನ – ಆಡಿಯೋಮೀಟರ್
• ಶ್ರವಣಾತೀತ ತರಂಗಗಳ ಆವೃತ್ತಿ ಹೆಚ್ಚಾಗಿರುವುದರಿಂದ ಅವುಗಳು ಹೆಚ್ಚು ಶಕ್ತಿಯನ್ನು ಹೊಂದಿರುತ್ತವೆ.
• ಸಂಗೀತ ಸ್ವರ ಏರ್ಪಡಿಸಲು ಶಬ್ದ ಸೆಕೆಂಡಿಗೆ 40 ರಿಂದ 10,000 ಕಂಪನಗಳನ್ನು ಉಂಟುಮಾಡಬೇಕು.
• ಮನುಷ್ಯನ ಕಿವಿಯು ಸೆಕೆಂಡಿಗೆ 20 ರಿಂದ 20,000 ಕಂಪನಗಳುಳ್ಳ ಧ್ವನಿಯನ್ನು ಗುರುತಿಸುತ್ತದೆ.
• ರೇಡಾರ್ ಇದು ಯಾವುದರ ಸಂಕ್ತಿಪ್ತ ರೂಪ – ರೇಡಿಯೋ ಡಿಟೆಕ್ಷನ್ ಮತ್ತು ರೇಂಜಿಗ್
• ಅತಿ ದೂರದಲ್ಲಿರುವ ವಸ್ತುಗಳನ್ನು ಗೊತ್ತು ಮಾಡುವ ಅವುಗಳಿಗಿರುವ ದಿಕ್ಕನ್ನು ಗೊತ್ತು ಮಾಡುವ ಮತ್ತು ವಸ್ತುವಿನಿಂದ ವೀಕ್ಷಣೆ ಕೇಂದ್ರಕ್ಕಿರುವ ದೂರವನ್ನು ಗೊತ್ತು ಮಾಡುವ ಸಾಧನವನ್ನು ರಾಡಾರ್ ಕರೆಯುತ್ತಾರೆ.
• ಒಬ್ಬ ವ್ಯಕ್ತಿ ಪ್ರತಿಫಲಿಸುವ ಮೇಲ್ಮೈಯಿಂದ 17 ಮೀಟರ್ ಮೀಟರ್ಗಿಂತ ಹೆಚ್ಚು ದೂರದಲ್ಲಿದ್ದಾಗ ಮಾತ್ರ ಪ್ರತಿಧ್ವನಿ ಕೇಳಿಸುತ್ತದೆ.
• ಶಬ್ದ ಮತ್ತು ಶಬ್ದದ ಬಗೆಗೆ ಅಧ್ಯಯನ ನಡೆಸುವ ವಿಜ್ಞಾನಕ್ಕೆ ಅಕೌಸ್ಟಿಕ್ಸ್ ಕರೆಯುತ್ತಾರೆ.
• ನೀರಿನೊಳಗೆ ವಸ್ತುಗಳ ಇರುವಿಕೆಯನ್ನು ಪತ್ತೆ ಹಚ್ಚಲು ಸೋನಾರ್ ತಂತ್ರವನ್ನು ಬಳಸಲಾಗುತ್ತದೆ.
• ಮನುಷ್ಯನ ಕಿವಿ ತಮಟೆಯ ಮೇಲೆ ಶಬ್ದವು 1/10ಸೆಕೆಂಡ್ ಸಮಯ ದೃಢವಾಗಿ ನಿಲ್ಲುತ್ತದೆ.
• ಸಮುದ್ರದ ಆಳವನ್ನು ಉಪಕರಣಕ್ಕೆ ಏನೆಂದು ಕರೆಯುತ್ತಾರೆ? -ಫ್ಯಾದೊಮೀಟರ್, ಗಾಡ್ ಪ್ರೆಹಾವನ್ಸ್ 1973
• ಶೀತ ಬಂದಾಗ ಸೀನುವುದು ಸರ್ವೆ ಸಾಮಾನ್ಯ ಈ ಸೀನಿನ ಸರಾಸರಿ ವೇಗ- ಗಂಟೆಗೆ 200 ಮೈಲುಗಳು
• ಫ್ರಿಕ್ವೆನ್ಸಿ ಮಾಡುಲೇಷಮನ್ (FM) ಕಂಡುಹಿಡಿದವರು – ಇ.ಹೆಚ್.ಆರ್ಮ್ಸ್ಟ್ರಾಂಗ್
• ಗಾಳಿಯ ತೇವಾಂಶವನ್ನು ಹೈಗ್ರೋಮೀಟರ್ ಉಪಕರಣದಿಂದ ಅಳೆಯುತ್ತಾರೆ.
• ಗುಡುಗು ಮತ್ತು ಮಿಂಚುಗಳು ಒಟ್ಟಿಗೆ ಉಂಟಾದರೂ ಮಿಂಚು ಮೊದಲು ಕಾಣಿಸಲು ಕಾರಣ – ಗಾಳಿಯಲ್ಲಿ ಬೆಳಕಿನ ವೇಗ ಶಬ್ದಕ್ಕಿಂತ ಅತೀ ಹೆಚ್ಚು.
• ಗಾಳಿಯ ವೇಗವನ್ನು ಅಳೆಯುವ ಮಾಪನ - ಅನಿಮೋಮೀಟರ್
• ನಾಯಿ, ಬಾವಲಿ ಮುಂತಾದ ಪ್ರಾಣಿಗಳೂ ಶ್ರವ್ಯ ಆವೃತ್ತಿ ಶಬ್ದಗಳಲ್ಲದೇ ಬೇರೆ ಆವೃತ್ತಿಯ ಶಬ್ದಗಳನ್ನು ಗ್ರಹಿಸಬಲ್ಲ ಶಕ್ತಿಯನ್ನು ಹೊಂದಿವೆ.
• ದೂರವಾಣಿಯಲ್ಲಿ ಬಳಸುವ ಆವೃತ್ತಿಯ ಶ್ರೇಣಿ (ಫ್ರೀಕ್ವೆನ್ಸಿರೇಂಜ್) – 400Hz– 4000Hz
• ಕಾನ್ಸರ್ ರೋಗದ ಚಿಕಿತ್ಸೆಯಲ್ಲಿ ಗಾಮಾ ಕಿರಣಗಳನ್ನು ಬಳಸುತ್ತಾರೆ.
• ವಿಕಿರಣಶೀಲ ಮೂಲ ವಸ್ತುಗಳಲ್ಲಿ ಗಾಮಾ ಕಿರಣಗಳು ವಿದ್ಯುತ್ ಅಂಶಗಳನ್ನು ಹೊಂದಿರುವುದಿಲ್ಲ.
• ಕ್ಷ ಕಿರಣಗಳನ್ನು ಕಂಡು ಹಿಡಿದವರು - ಡಬ್ಲ್ಯೂಕೆ ರೊಂಟ್ ಜನ್
• 3ಡಿ ಛಾಯಾಗ್ರಹಣದ ಅತ್ಯಾಧುನಿಕ ಮಾಧ್ಯಮ - ಹಾಲೋಗ್ರಫಿ
• ವಿಸರ್ಜಣೆ ನಳಿಕೆಯಲ್ಲಿ ಒತ್ತಡವು 0.01 ಮಿಲಿ ಮೀಟರಿಗಿಂತ ಕಡಿಮೆಯಾದಾಗ ಕ್ಯಾಥೋಡಿಗೆ ಎದುರಾಗಿರುವ ಗಾಜಿನ ನಳಿಕೆಯು ಹೊಳೆಯುವುದು. ಕ್ಯಾಥೋಡಿನಿಂದ ಹೊರಟು ಎದುರಾಗಿರುವ ಗಾಜಿನ ಮೇಲೆ ಬೀಳುವ ವಿಕಿರಣವೇ ಈ ಹೊಳಪಿಗೆ ಕಾರಣ. ಈ ಕಿರಣಗಳಿಗೆ ಋಣಾಗ್ರಕಿರಣ ಅಥವಾ ಕ್ಯಾಥೊಡ್ ಕಿರಣ ಕರೆಯುತ್ತಾರೆ.
• ಯಂತ್ರಗಳ ಭಾಗಗಳಲ್ಲಿ ದೋಷಗಳನ್ನು ಪತ್ತೆಹಚ್ಚಲು ರೇಡಿಯೋಗ್ರಫಿ ಯಂತ್ರವನ್ನು ಬಳಸುವರು.
• ಕಾಸ್ಮಿಕ್ ಕಿರಣಗಳನ್ನು ಕಂಡುಹಿಡಿದವರು – ಆರ್.ಕೆ. ಮಿಲ್ಲಿಕಾನ್
• ರೇಡಿಯೋ ಅಲೆಗಳನ್ನು ಉತ್ಪಾದಿಸಲು ಬಳಸುವ ಸಾಧನ - ದ್ವಿಧ್ರುವ ಆಂಟೇನ್
• ಬದಲಾಗುತ್ತಿರುವ ವಿದ್ಯುತ್ ಕ್ಷೇತ್ರವು ಕಾಂತಕ್ಷೇತ್ರವನ್ನು ಉಂಟುಮಾಡುತ್ತದೆ.
ಡಾಪ್ಲರ್ ಪರಿಣಾಮ
• ತರಂಗದ ಜವವು ,ಅದು ಪ್ರಸರಿಸುವ ಮಾಧ್ಯಮವನ್ನು ಅವಲಂಬಿಸಿರುತ್ತದೆ.ತರಂಗವು ಯಾವುದಾದರೂ ಒಂದು ಮಾಧ್ಯಮದಲ್ಲಿ ಪ್ರಸರಿಸುವಾಗ ಅದರ ಜವ ಮತ್ತು ಆವೃತ್ತಿ ಬದಲಾಗುವುದಿಲ್ಲ.ಆದರೆ ತರಂಗದ ಆಕಾರ ಮತ್ತು ಕೇಳುಗರ ಸಾಪೇಕ್ಷ ಚಲನೆ ಇದ್ದಲ್ಲಿ ತರಂಗದ ಆವೃತ್ತಿಯು ಬದಲಾದಂತೆ ಭಾಸವಾಗುತ್ತದೆ.ಇದನ್ನು ಡಾಪ್ಲರ್ ಪರಿಣಾಮ ಎನ್ನುತ್ತಾರೆ.
• ತರಂಗದ ಆಕಾರ ಮತ್ತು ವೀಕ್ಷಕನ ಸಾಪೇಕ್ಷ ಚಲನೆಯಿಂದಾಗಿ,ತರಂಗದ ಆವೃತ್ತಿ ಬದಲಾದಂತೆ ವ್ಯಕ್ತವಾಗುತ್ತದೆ. ಉದಾಹರಣೆಗೆ ರೈಲೊಂದು ನಿಲ್ದಾಣದಲ್ಲಿ ನಿಂತ ನಿಮ್ಮೆಡೆಗೆ ಬರುತ್ತಿದ್ದರೆ, ರೈಲಿನ ಎಂಜಿನ್ ಸದ್ದು ಹೆಚ್ಚಾಗುತ್ತಿರುವಂತೆ ಭಾಸವಾಗುತ್ತದೆ, ದೂರ ಹೋದಂತೆ ಸದ್ದು ಕಡಿಮೆಯಾದಂತೆ ಭಾಸವಾಗುತ್ತದೆ. ನೈಜತೆಯಲ್ಲಿ ರೈಲಿನ ಸದ್ದು ಯಾವಾಗಲೂ ಒಂದೇ ಇರುತ್ತದೆ.
ಡಾಪ್ಲರ್ ಪರಿಣಾಮದ ಅನ್ವಯಗಳು
• ಕೃತಕ ಉಪಗ್ರಹಗಳನ್ನು ಪತ್ತೆ ಹಚ್ಚಲು ಡಾಪ್ಲರ್ ಪರಿಣಾಮವನ್ನು ಬಳಸುತ್ತಾರೆ.
• ಜಲಾಂತರ್ಗಾಮಿಗಳನ್ನು ಪತ್ತೆ ಹಚ್ಚಲು ಮತ್ತು ಅದರ ವೇಗವನ್ನು ಅಂದಾಜಿಸಲು ಡಾಪ್ಲರ್ ಪರಿಣಾಮವನ್ನು ಉಪಯೊಗಿಸುತ್ತಾರೆ.
• ಆಳ ಸಮುದ್ರದಲ್ಲಿ ಇರಬಹುದಾದ ಕಲ್ಲಿನ ರಚನೆಗಳನ್ನೂ ಇದರಿಂದ ಪತ್ತೆ ಹಚ್ಚಬಹುದು.