ನವೆಂಬರ್ 30th, 2017

 

1. ಡಾ.ಹೆಗಡೆಗೆ IFI ಪ್ರಶಸ್ತಿ:


• ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗಡೆ micro finance ಕ್ಷೇತ್ರದ ಪ್ರಗತಿಗೆ ನೀಡುತ್ತಿರುವ ಬೆಂಬಲವನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.
• ಆಕ್ಸೆಸ್ಸ್ ಸಂಸ್ಥೆ inclusive finance india ಅವಾರ್ಡ ನ ತೀರ್ಪುಗಾರರ ವಿಶೇಷ ಪ್ರಶಸ್ತಿಗೆ ಆಯ್ಕೆ ಮಾಡಿದೆ.
• ಡಿಸೆಂಬರ್ 11 ಮತ್ತು 12 ರಂದು ನವದೆಹಲಿಯಲ್ಲಿ 14 ನೇ inclusive finance india ಶೃಂಗ ಆಯೋಜಿಸಲಾಗಿದೆ. ಅಂದೇ ಪ್ರಶಸ್ತಿ ನೀಡಲಾಗುವುದು.
 ಪ್ರಶಸ್ತಿಯ ಕುರಿತು
• ಬಡವರ ಜೀವನಾಧಾರವನ್ನು ಬೆಂಬಲಿಸಬಲ್ಲ ಮಾರ್ಗಗಳನ್ನು ಶೋಧಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುವವರನ್ನು ಬೆಂಬಲಿಸುವ ಸಂಸ್ಥೆ ಆಕ್ಸೆಸ್ಸ್ ಆಗಿದೆ.
• 2006ರಲ್ಲಿ ಬ್ರಿಟನ್ ಸರ್ಕಾರದ ಅಂತರಾಷ್ಟ್ರೀಯ ಅಭಿವೃದ್ಧಿ ವಿಭಾಗದ ನೆರವಿನಿಂದ ಅಸ್ತಿತ್ವಕ್ಕೆ ಬಂದಿದೆ.
• ಭಾರತದ ಬಡತನ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಸಹಕಾರ ಮತ್ತು ಕೊಡುಗೆ ನೀಡುವುದು ಇದರ ಉದ್ದೇಶ.

2.ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ:


• ಉತ್ತರ ಕೊರಿಯಾ nov-29 ರಂದು ಖಂಡಾಂತರ ಕ್ಷಿಪಣಿ ಪರೀಕ್ಷಿಸಿದೆ.
• ಹೊಸ ಕ್ಷಿಪಣಿಯು ಅತ್ಯಂತ ಸುಧಾರಿತ ಆವೃತ್ತಿ ಆಗಿದೆ.
• ಅಣ್ವಸ್ತ್ರ ಸಿಡಿತಲೆ ಹೊತ್ತು 13000 km ಗೂ ಅಧಿಕ ದೂರದ ಗುರಿ ತಲುಪುವ ಸಾಮರ್ಥ್ಯ ಹೊಂದಿದೆ.
• ವಾಷಿಂಗ್ಟನ್ ಸಹಿತ ಅಮೆರಿಕದ ಹಲವು ನಗರಗಳನ್ನು ಉತ್ತರ ಕೊರಿಯಾ ಗುರಿಯಾಗಿಸಿಕೊಂಡಿದೆ.
• ಸಪ್ಟಂಬರ್ 15ರಂದು ಮಧ್ಯಂತರ ವ್ಯಾಪ್ತಿಯ ಖಂಡಾಂತರ ಕ್ಷಿಪಣಿ ಉಡಾಯಿಸಿದ್ದ ಉತ್ತರ ಕೊರಿಯಾ ಮತ್ತೆ ಕ್ಷಿಪಣಿ ಉಡಾಯಿಸಿದೆ.
• ಈ ಕ್ಷಿಪಣಿ ಜಪಾನ್ ಸಮುದ್ರ ತೀರದಲ್ಲಿ ಪತನಗೊಂಡಿದೆ.
• ಈ ಹಿನ್ನೆಲೆಯಲ್ಲಿ ಜಪಾನ್, ಅಮೆರಿಕ ಮತ್ತು ದಕ್ಷಿಣ ಕೊರಿಯಾ ಕೋರಿಕೆಯ ಮೇರೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತುರ್ತು ಸಭೆ ಕರೆದಿದೆ.

3.ಭಾರತೀಯ ಸ್ಪರ್ಧಾ ಆಯೋಗದಿಂದ ಬಿಸಿಸಿಐಗೆ ದಂಡ:


• IPL-T20 ಟೂರ್ನಿಗೆ ಸಂಬಂಧಿಸಿ ಸ್ಪರ್ಧಾ ತೃಕತೆ ನಿಗ್ರಹಿಸುವಂಥ ವ್ಯವಹಾರ ಮಾಡಿರುವದಕ್ಕಾಗಿ BCCI ಭಾರತೀಯ ಸ್ಪರ್ಧಾ ಆಯೋಗ [CCI] 52.24 ಕೋಟಿ ರೂ ದಂಡ ವಿಧಿಸಿದೆ.
• ಸ್ಪರ್ಧಾ ಆಯೋಗದ 44 ಪುಟಗಳ ತೀರ್ಪಿನಲ್ಲಿ, ಕಳೆದ ಮೂರು ವರ್ಷಗಳ ಬಿಸಿಸಿಐ ಒಟ್ಟು ವ್ಯವಹಾರದ ಸರಾಸರಿ ಮೇಲೆ 4.48% ರಷ್ಟು ದಂಡ ವಿಧಿಸಲಾಗಿದೆ.
• 2013ರ ಫೆಬ್ರುವರಿಯಲ್ಲೂ ಸ್ಪರ್ಧಾ ಆಯೋಗ ಈಗಿನಷ್ಟೇ 52.24 ಕೋಟಿ ರೂ ದಂಡ ವಿಧಿಸಿತ್ತು.
• ಆದರೆ ಬಳಿಕ BCCI ಮೇಲ್ಮನವಿ ಮೇರೆಗೆ ಅಪೀಲು ನ್ಯಾಯಪೀಠ 2015ರ ಫೆಬ್ರುವರಿಯಲ್ಲಿ ಈ ದಂಡವನ್ನು ರದ್ದುಗೊಳಿಸಿತ್ತು.
• ನಂತರ ಹೊಸದಾಗಿ ಪ್ರಕರಣ ವಿಚಾರಣೆ ಮಾಡಲು ಸೂಚಿಸಿ, ಇದೀಗ ವಾರ್ಷಿಕ ವ್ಯವಹಾರ ವೃದ್ಧಿಸಿ, CCI ತನ್ನ ಹಿಂದಿನ ತೀರ್ಪಿನ ಮೊತ್ತವನ್ನು ಉಳಿಸಿಕೊಂಡಿದೆ.

Contributed by: Mallikajan.Korbu