ಅಂತರ್ ರಾಷ್ಟ್ರೀಯ ವ್ಯಾಪಾರ (International Business)
 
• ವಿದೇಶಿ ವ್ಯಾಪಾರವು ಆಧುನಿಕ ಪ್ರಪಂಚದ ಮುಖ್ಯ ಲಕ್ಷಣಗಳಲ್ಲಿ ಒಂದಾಗಿದೆ.
• ಒಂದು ದೇಶವು ಇತರ ದೇಶಗಳಿಗೆ ವಸ್ತು ಮತ್ತು ಸೇವೆಗಳನ್ನು ಮಾರಾಟ ಮಾಡುವುದನ್ನು ರಫ್ತು ಎನ್ನುತ್ತಾರೆ.
• ಒಂದು ದೇಶವು ತನಗೆ ಅಗತ್ಯವಾದ ವಸ್ತು ಮತ್ತು ಸೇವೆಗಳನ್ನು ಇತರ ದೇಶಗಳಿಂದ ತರಿಸಿಕೊಳ್ಳುವುದನ್ನು ಆಮದು ಎನ್ನುತ್ತಾರೆ.
ಆಮದಿನ ಸಂಯೋಜನೆ
• ಆಹಾರ ಮತ್ತು ಇತರ ವಸ್ತುಗಳು : ಭಾರತವೂ ಆಮದು ಮಾಡಿಕೊಳ್ಳುತ್ತಿರುವ ಆಹಾರ ಧಾನ್ಯಗಳ ಆಮದಿನ ನಿಲುಗಡೆ ದೇಶದಲ್ಲಿ ವ್ಯವಆಯದ ಅಭಿವೃದ್ಧಿ ಹಾಗೂ ಹಸಿರು ಕ್ರಾಂತಿಯ ಯಶಸ್ಸಿನೊಂದಿಗೆ ನೇರ ಸಂಬಂಧವನ್ನು ಹೊಂದಿರುವುದು.ಬದಲಾಗಿ ದೇಶವೂ ಆಹಾರ ಧಾನ್ಯಗಳನ್ನು ರಫ್ತು ಮಾಡುತ್ತಿದೆ.
• ಪೆಟ್ರೋಲಿಯಂ ವಸ್ತುಗಳು: ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು,ಇದರಿಂದ ಭಾರತವೂ ಆಮದು ಮಾಡಿಕೊಳ್ಳುತ್ತಿರುವ ಕಚ್ಚಾ ತೈಲವನ್ನು ಬಹುಪಾಲು ಅವಲಂಬಿಸಿದೆ.
• ಭಾರತ ಆಮದು ಮಾಡಿಕೊಳ್ಳುತ್ತಿರುವ ಇನ್ನಿತರ ವಸ್ತುಗಳೆಂದರೆ ರಾಸಾಯನಿಕ ಗೊಬ್ಬರ,ಬೆಳ್ಳಿ,ಚಿನ್ನ ಇತ್ಯಾದಿ.
ರಪ್ತಿನ ಸಂಯೋಜನೆ
• ಭಾರತವು ರಫ್ತು ಮಾಡುತ್ತಿರುವ ವಸ್ತುಗಳ ಮೌಲ್ಯ ಆಮದಿಗಿಂತ ಕಡಿಮೆ.
• ಸಾಂಪ್ರದಾಯಿಕ ರಪ್ತಿನ ವಸ್ತುಗಳು ಚಹಾ,ಕಾಫಿ,ಗೋಡಂಬಿ,ಸಾಂಬಾರ ವಸ್ತುಗಳು,ಹತ್ತಿ,ಸೊಪ್ಪು,ಕಬ್ಬಿಣದ ಅದಿರು,ಮ್ಯಾಂಗನೀಸ್,ಅಭ್ರಕ,ಮೊದಲಾದವು ಸಾಂಪ್ರದಾಯಿಕ ರಪ್ತಿನ ವಸ್ತುಗಳಾಗಿವೆ.