ಕೇಂದ್ರ – ರಾಜ್ಯ ಸಂಬಂಧಗಳು(Centre- State Relations)
 
* ಭಾರತ ಸಂವಿಧಾನವು ಶಾಸನೀಯ, ಕಾರ್ಯಾಂಗ, ಹಾಗೂ ಹಣಕಾಸಿನ ಅಧಿಕಾರಗಳನ್ನು ಕೇಂದ್ರ ಮತ್ತು ರಾಜ್ಯಗಳಿಗೆ ಹಂಚಿಕೆ ಮಾಡಿದೆ.
* ಕೇಂದ್ರ- ರಾಜ್ಯ ಸಂಬಂಧಗಳನ್ನು ಸಂವಿಧಾನದ 11ನೇ ಮತ್ತು 12ನೇ ಭಾಗಗಳಲ್ಲಿ ಪ್ರಸ್ತಾಪಿಸಲಾಗಿದೆ.
* ಕೇಂದ್ರ – ರಾಜ್ಯ ಸಂಬಂದಗಳನ್ನು 3 ಭಾಗಗಳಾಗಿ ವಿಂಗಡಿಸಲಾಗಿದೆ ಅವುಗಳೆಂದರೆ.
1. ಶಾಸನೀಯ ಸಂಬಂಧಗಳು
* ಕೇಂದ್ರ- ರಾಜ್ಯ ಸಂಬಂಧಗಳನ್ನು ಸಂವಿಧಾನದ ಭಾಗ 11 ರಲ್ಲಿ 245 ರಿಂದ 255 ರ ವರೆಗಿನ ವಿಧಿಗಳಲ್ಲಿ ಪ್ರಸ್ತಾಪಿಸಲಾಗಿದೆ.
* ಕೇಂದ್ರ ರಾಜ್ಯ ಸರ್ಕಾರಗಳ ನಡುವೆ ಶಾಸನ ರಚಿಸಲು ಇರುವ ಅಧಿಕಾರಕ್ಕೆ ಶಾಸನೀಯ ಸಂಬಂಧ ಎಂದು ಕರೆಯಲಾಗುತ್ತದೆ.
* ಅಧಿಕಾರ ವಿಭಜನೆಯು ಕೆನಡಾ ಹಾಗೂ ಆಸ್ಟ್ರೇಲಿಯಾ ರಾಷ್ಟ್ರಗಳ ಅಧಿಕಾರ ವಿಭಜನೆಯನ್ನು ಹೋಲುತ್ತದೆ.
ಅಧಿಕಾರ ವಿಭಜನೆಯು 3 ಪಟ್ಟಿಯನ್ನು ಒಳಗೊಂಡಿರುತ್ತದೆ.
1. ಕೇಂದ್ರ ಪಟ್ಟಿ -99 ವಿಷಯಗಳು :- ಉದಾ: ವಿದೇಶಾಂಗ, ರಕ್ಷಣೆ, ಹಣಕಾಸು, ರೇಲ್ವೆ, ಅಂಚೆ ಮತ್ತು ತಂತಿ, ನಾಗರೀಕ ವಿಮಾನಯಾನ, ಬ್ಯಾಂಕಿಂಗ್, ಚುನಾವಣೆ, ಗಣಿಗಾರಿಕೆ, ತೈಲ ಸಂಪನ್ಮೂಲ, ನ್ಯಾಯಾಂಗಗಳು, ಕೇಂದ್ರ ಲೋಕಸಭಾ ಆಯೋಗ ಮೊದಲಾದವುಗಳು.
2. ರಾಜ್ಯ ಪಟ್ಟಿ -61 ವಿಷಯಗಳು :- ಪೋಲಿಸ, ಬಂಧಿಖಾನೆ, ಸಾರ್ವಜನಿಕ ಆರೋಗ್ಯ ಮತ್ತು ನೈರ್ಮಲ್ಯ,ಕೃಷಿ, ಮೀನುಗಾರಿಕೆ, ಭೂಕಂದಾಯ, ವಾಣಿಜ್ಯ ತೆರಿಗೆ, ಪಶುಸಂಗೋಪನೆ, ಸ್ಥಳೀಯ ಸರ್ಕಾರಗಳು, ರಾಜ್ಯ ಲೋಕಸೇವಾ ಆಯೋಗ ಮೊದಲಾದವುಗಳು.
3. ಸಮವರ್ತಿ ಪಟ್ಟಿ -52 ವಿಷಯಗಳು :- ಮುದ್ರಣ ಮಾಧ್ಯಮ, ವಿವಾಹ, ವಿವಾಹ ವಿಚ್ಛೇದನ, ಶಿಕ್ಷಣ ಅರಣ್ಯ, ಅಳತೆ ತೂಕ, ವನ್ಯ ಮೃಗಗಳು, ಕುಟುಂಬ ಯೋಜನೆ, ಅಪರಾಧಿಕ ಪ್ರಕ್ರಿಯಾ ಸಂಹಿತೆ, ಸಿವಿಲ್ ಪ್ರಕ್ರಿಯೆ ಸಂಹಿತೆ, ಒಪ್ಪಂದಗಳು, ದತ್ತಿ, ಕಾರ್ಮಿಕ ಕಲ್ಯಾಣ ಮೊದಲಾದವುಗಳು.
* ಶೇಷಾಧಿಕಾರಗಳು :- ಕೇಂದ್ರ ಪಟ್ಟಿ- ರಾಜ್ಯ ಪಟ್ಟಿ ಸಮವರ್ತಿ ಪಟ್ಟಿಗೆ ಸೇರದೆ ಇರುವ ವಿಷಯಗಳನ್ನು ಶೇಷಾಧಿಕಾರ ಅಥವಾ ಉಳಿಕೆ ಅಧಿಕಾರಿಗಳು ಎಂದು ಕರೆಯಲಾಗುತ್ತದೆ.
* 248 ನೇ ವಿಧಿಯ ಪ್ರಕಾರ ಶೇಷಾಧಿಕಾರಗಳನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ.
* ರಾಜ್ಯ ಪಟ್ಟಿಯಲ್ಲಿರುವ ವಿಷಯಗಳ ಮೇಲೆ ಕೇಂದ್ರ ಶಾಸನ ರೂಪಿಸುವ ಅಧಿಕಾರವಿದೆ. ಅಂತಹ ಪ್ರಮುಖ ವಿಷಯಗಳೆಂದರೆ.
* ರಾಜ್ಯದ ಮನವಿ ಮೇರೆಗೆ
* ರಾಷ್ಟ್ರಪತಿ ಆಡಳಿತ ಜಾರಿರಯಲ್ಲಿದ್ದಾಗ
* ಅಂತಾರಾಷ್ಟ್ರೀಯ ಕರಾರುಗಳನ್ನು ಅನುಷ್ಟಾನಗೊಳಿಸುವ ಸಂದರ್ಭದಲ್ಲಿ
* ರಾಷ್ಟ್ರೀಯ ಹಿತ ದೃಷ್ಟಿಯಿಂದ ಹಾಗೂ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದಾಗ
* ರಾಜ್ಯ ಶಾಸನಗಳ ಮೇಲೆ ಮೊದಲಾದ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರ ರಾಜ್ಯ ಪಟ್ಟಿಯಲ್ಲಿರುವ ವಿಷಯಗಳ ಮೇಲೆ ಶಾಸನ ರೂಪಿಸುವ ಅಧಿಕಾರ ಹೊಂದಿದೆ.
2. ಆಡಳಿತಾತ್ಮಕ ಸಂಬಂಧಗಳು
* ಸಂವಿಧಾನದ 11ನೇ ಭಾಗದ 256 ರಿಂದ 263 ನೇ ವಿಧಿಗಳಲ್ಲಿ ಆಡಳಿತಾತ್ಮಕ ಸಂಬಂಧಗಳ ಬಗ್ಗೆ ಪ್ರಸ್ತಾಪಿಸಲಾಗಿದೆ.
* ಪ್ರತಿಯೊಂದು ರಾಜ್ಯ ಸರ್ಕಾರವು ತನ್ನ ಆಡಳಿತವನ್ನು ಸಂಸತ್ತಿನ ಕಾನೂನುಗಳಿಗನುಗುಣವಾಗಿ ಅಥವಾ ಕೇಂದ್ರದ ನಿರ್ದೇಶನಕ್ಕನುಗುಣವಾಗಿ ತನ್ನ ಕಾರ್ಯಾಂಗಾಧಿಕಾರವನ್ನು ಚಲಾಯಿಸಬೇಕು (256ನೇ ವಿಧಿ)
* ರಾಜ್ಯ ಸರ್ಕಾರಗಳು ಕೇಂದ್ರ ಕಾರ್ಯಾಂಗಕ್ಕೆ ಅಡ್ಡಿಯುಂಟು ಮಾಡದಂತೆ ತನ್ನ ಅಧಿಕಾರ ಚಲಾಯಿಸುವುದು (257ನೇ ವಿಧಿ)
* ರಾಜ್ಯಗಳ ಒಪ್ಪಿಗೆ ಪಡೆದು ರಾಷ್ಟ್ರಪತಿ ಕೇಂದ್ರ ಸರ್ಕಾರದ ಕಾರ್ಯಾಂಗಕ್ಕೆ ಸಂಬಂಧಿಸಿದ ವಿಷಯಗಳನ್ನು ರಾಜ್ಯ ಸರ್ಕಾರಕ್ಕೆ ಒಪ್ಪಿಸಬಹುದು (258ನೇ ವಿಧಿ) ಕೇಂದ್ರದ ಒಪ್ಪಿಗೆ ಮೇರೆಗೆ ರಾಜ್ಯವು ತನಗೆ ಸೇರಿದ ವಿಷಯಗಳನ್ನು ಕೇಂದ್ರಕ್ಕೆ ಒಪ್ಪಿಸಬಹುದು.
* ಕೇಂದ್ರವು ರಾಷ್ಟ್ರೀಯ ಅಥವಾ ಸೈನಿಕ ಮಹತ್ವದ ಸಂಪರ್ಕ ವ್ಯವಸ್ಥೆಯನ್ನು ನಿರ್ಮಿಸಿ ನಿರ್ವಹಿಸುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವುದು.
* ಕೇಂದ್ರವು ರಾಜ್ಯಗಳಿಗೆ ಪರಿಶಿಷ್ಟ ಬುಡಕಟ್ಟು, ಜನಾಂಗದ ಕಲ್ಯಾಣಕ್ಕೆ ಸಂಬಂಧಿಸಿದ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುವಂತೆ ನಿರ್ದೇಶನ ನೀಡುವುದು.
* ಅಖಿಲ ಭಾರತ ಸೇವೆಗಳಿಗೆ ನೇಮಕ ಅಥವಾ ಹೊಸ ಅಖಿಲ ಭಾರತ ಸೇವೆಗಳ ಸೃಷಿಸುವ ಸಂದರ್ಭದಲ್ಲಿ (312ನೇ ವಿಧಿ)
* ರಾಜ್ಯಗಳ ನಡುವೆ ಸಮನ್ವಯ ಉಂಟು ಮಾಡುವ ನಿಟ್ಟಿನಲ್ಲಿ ರಾಷ್ಟ್ರಪತಿ ಅಂತರ-ರಾಜ್ಯ ಮಂಡಳಿ ಯನ್ನು ಸ್ಥಾಪಿಸಬಹುದು (263ನೇ ವಿಧಿ)
* ಅಂತರರಾಜ್ಯ ಜಲವಿವಾದಗಳ ಇತ್ಯರ್ಥಪಡಿಸುವ ಸಲುವಾಗಿ ಕಾನೂನು ಮಾಡಬಹುದು (262ನೇ ವಿಧಿ)
* 1956 ರಲ್ಲಿ ಅಂತರರಾಜ್ಯ ಜಲವಿವಾದ ಕಾಯ್ದೆಯನ್ನು ಜಾರಿಗೆ ತರಲಾಗಿದೆ.
* ವ್ಯಾಪಾರ ಮತ್ತು ವಾಣಿಜ್ಯ ವ್ಯವಹಾರ ದೃಷ್ಟಿಯಿಂದ ಅಂತರರಾಜ್ಯ ವಾಣಿಜ್ಯ ಪ್ರಾಧಿಕಾರವನ್ನು ರಚಿಸುವುದು (301-304ನೇ ವಿಧಿ)
* ರಾಜ್ಯಗಳ ರಕ್ಷಣೆಯ ವಿಷಯದಲ್ಲಿ (355ನೇ ವಿಧಿ)
* ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ರಾಜ್ಯಗಳಿಗೆ ಮಾರ್ಗದರ್ಶನ ನೀಡುವ, ರಾಜ್ಯದ ಉನ್ನತ ಹುದ್ದೆಗಳಿಗೆ ನೇಮಕ ಮಾಡುವ ರಾಜ್ಯದೊಳಗೆ ಕಾನೂನು ಮತ್ತು ಶಾಂತಿಪಾಲನೆಗೆ ಧಕ್ಕೆಯಾದಾಗ ಕೇಂದ್ರ ಮೀಸಲು ಪಡೆ ರವಾನಿಸಿ ರಾಜ್ಯಗಳನ್ನು ರಕ್ಷಿ¸ಲುವ ಅಧಿಕಾರ. ಕಾನೂನು ಅಥವಾ ಶಾಸನ ರೂಪಿಸುವ ಅಧಿಕಾರವನ್ನು ಹೊಂದಿರುತ್ತದೆ.
* ರಾಜ್ಯ ಸರ್ಕಾರ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಾಗ ಅಂತಹ ಸರ್ಕಾರವನ್ನು ವಜಾ ಮಾಡುವ ಅಥವಾ ರಾಷ್ಟ್ರಪತಿ ಆಡಳಿತ ಘೋಷಿಸುವ ಅಧಿಕಾರ (356 ನೇ ವಿಧಿ)
3. ಹಣಕಾಸಿನ ಸಂಬಂಧಗಳು
* ಸಂವಿಧಾನದ 12ನೇ ಭಾಗದಲ್ಲಿ 268-293 ನೇ ವಿಧಿಗಳು ಕೇಂದ್ರ ರಾಜ್ಯಗಳ ಹಣಕಾಸಿನ ಬಗ್ಗೆ ತಿಳಿಸುತ್ತವೆ.
* ಕೇಂದ್ರ ಸರ್ಕಾರ ಕೆಲವು ತೆರಿಗೆಗಳನ್ನು ವಿಧಿಸಿದರೆ, ರಾಜ್ಯ ಸರ್ಕಾರಗಳು ಅವುಗಳನ್ನು ವಸೂಲಿ ಮಾಡಿ ಹಂಚಿಕೊಳ್ಳುತ್ತೇವೆ. ಉದಾ: ಸ್ಟ್ಯಾಂಪ್, ಔಷಧಿಗಳ ಮೇಲಿನ ತೆರಿಗೆಗಳು ಇತ್ಯಾದಿ (268ನೇ ವಿಧಿ)
* ಸುಂಕಗಳ ಅಥಾ ತೆರಿಗೆಗಳ ಸರ್ ಚಾರ್ಜನ್ನು ಸಂಸತ್ ವಿಧಿಸಬಹುದು.
* ಕೇಂದ್ರ ಸರ್ಕಾರವೇ ವಿಧಿಸಿ ವಸೂಲಿ ಮಾಡಿ ರಾಜ್ಯಗಳಿಗೆ ಹಂಚಲ್ಪಡುವ ತೆರಿಗೆಗಳು (269 ನೇ ವಿಧಿ) ಉದಾ: ರೈಲು, ಸಮುದ್ರ, ವಿಮಾನ ಪ್ರಯಾಣಿಕರ ಮೇಲೆ ಆಸ್ತಿಯ ಮೇಲಿನ ಎಸ್ಟೇಟ್ ಸುಂಕ, ವೃತ್ತ ಪತ್ರಿಕೆಗಳ ಮಾರಾಟ, ಜಾಹೀರಾತುಗಳ ಮೇಲೆ ವಿಧಿಸುವ ತೆರಿಗೆ ಮೊದಲಾದವುಗಳು.
* ರಾಜ್ಯಗಳಿಗೆ ತುರ್ತು ಅನುದಾನಗಳು : ಬುಡಕಟ್ಟು ರಾಜ್ಯಗಳಿಗೆ ಅಥವಾ ಬರಗಾಲ, ಪ್ರವಾಹ, ಪ್ರಕೃತಿ ವಿಕೋಪಕ್ಕೆ ಒಳಗಾದ ರಾಜ್ಯಗಳಿಗೆ ಅನುದಾನ ನೀಡಲಾಗುತ್ತದೆ. (275-282 ನೇ ವಿಧಿ)
* ಕೇಂದ್ರವೇ ವಿಧಿಸಿ ವಸೂಲಿ ಮಾಡಿ ವಿನಿಯೋಗಿಸಿಕೊಳ್ಳುವ ತೆರಿಗೆಗಳು ಉದಾ: ರೈಲ್ವೆ, ಅಂಚೆ ಮತ್ತು ತಂತಿ, ದೂರವಾಣಿ.
* ರಾಜ್ಯ ಸರ್ಕಾರವೇ ವಿಧಿಸಿ ವಸೂಲಿ ಮಾಡಿ ವಿನಿಯೋಗಿಸಿಕೊಳ್ಳುವ ತೆರಿಗೆಗಳು ಉದಾ: ಭೂ-ಕಂದಾಯ, ಕೃಷಿ, ಅಬಕಾರಿ, ವಿದ್ಯುಚ್ಛಕ್ತಿ, ಮಾರಾಟ ತೆರಿಗೆ.