ಕಾಯಕವೇ ಕೈಲಾಸ

 

ಗಾದೆಗಳು ಜನಪದರ ಜೀವನದ ಅನುಭವದ ನುಡಿಮುತ್ತುಗಳು ಇವುಗಳಿಂದ ಜೀವನದ ಮ್ಯೌ ಹೆಚ್ಚುತ್ತದೆ.ಆದ್ದರಿಂದಲೇ ‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ‘ಗಾದೆಗಳನ್ನು ವೇದಗಳಿಗೆ ಸಮಾನ’ ಎಂದುಹೇಳುವರು. ಅಂತಹ ಹಲವು ಪ್ರಸಿದ್ಧ ಗಾದೆಗಳಲ್ಲಿ ಇದು ಒಂದಾಗಿದೆ.
ಕೈ ಕೆಸರಾಗುವುದು ಕಷ್ಟಪಟ್ಟು ದುಡಿದಾಗ ,ದುಡಿಮೆ ನಮಗೆ ಬೇಕಾದ ಸೌಕರ್ಯಗಳನ್ನು ಪಡೆಯಲು ಸಹಾಯ ನೀಡುತ್ತದೆ. ಆದ್ದರಿಂದ ನಾವು ಸುಖವನ್ನು ಪಡೆಯಬಹುದು. ನಾವು ಯಾವುದೇ ಕೆಲಸವನ್ನು ನಿಷ್ಠೆಯಿಂದ ಮಾಡಬೇಕು.
ಕೆಲಸದಲ್ಲಿ ದೇವರನ್ನು ಕಾಣಬೇಕು. ಕಷ್ಟಪಟ್ಟು ದುಡಿದರೆ ದುಡಿಮೆಗೆ ತಕ್ಕ ಪ್ರತಿಫಲ ಸಿಗುತ್ತದೆ ಎಂಬುದನ್ನು ಬಸವಣ್ಣನವರ
ಈ ವಚನ ಪ್ರತಿಪಾದಿಸುತ್ತದೆ. ಕಾಯಕದಲ್ಲಿ ಕೈಲಾಸವನ್ನು ಅಂದರೆ ಶಿವನ ಸಾನಿಧ್ಯವನ್ನು ಕಾಣಬಹುದು ಎಂದು ಈ ಗಾದೆ ಮಾತು ಸೂಚಿಸುತ್ತದೆ.