ಮಹಿಳಾ ಶೋಷಣೆ ಮತ್ತು ಸಶಕ್ತೀಕರಣ
ಶತಮಾನಗಳಿಂದಲೂ ಮಹಿಳೆ ದೌರ್ಜನ್ಯಕ್ಕೊಳಗಾಗುತ್ತಾ ಬಂದಿದ್ದಾಳೆ. ಮಾನಸಿಕ, ದೈಹಿಕ, ಲೈಂಗಿಕ ಇತ್ಯಾದಿ ನೂರೆಂಟು ನೋವುಗಳಿಗೆ ಚಿತ್ರಹಿಂಸೆಗಳಿಗೆ ಒಳಗಾದ ಅವಳ ಬದುಕು ನಿತ್ಯರೋಧನ ಕಡುಬಡವರಿಂದ ಹಿಡಿದು ಶ್ರೀಮಂತ ಕುಟುಂಬದ ಮಹಿಳೆಯ ತನಕ ಎಲ್ಲರೂ ಇದಕ್ಕೆ ಒಳಗಾದವರೇ, ಇದರ ಕಪಿಮುಷ್ಠಿಯಿಂದ ಮುಕ್ತಿ ಪಡೆದವರು ಮಾತ್ರ ಅತ್ಯಲ್ಪ.
ಜಗತ್ತಿನ ಎಲ್ಲ ಸಮಾಜಗಳೂ ಪುರುಷ ಪ್ರಧಾನ ಸಮಾಜಗಳೇ ಆಗಿವೆ. ಎಲ್ಲೆಡೆಯೂ ಸ್ತ್ರೀ ಎರಡನೆಯ ದರ್ಜೆಯಲ್ಲಿ ನಿಲ್ಲುತ್ತಾಳೆ. ನೈತಿಕವಾಗಿ ಸಿಗಬೇಕಾದ ಹಕ್ಕುಗಳಂತಿರಲಿ ಒಬ್ಬ ಮನುಷ್ಯಳಾಗಿ ಸಿಗಬೇಕಾದ ಹಕ್ಕುಗಳಿಂದ ಅವಳು ವಂಚಿತಳಾಗಿದ್ದಾಳೆ. ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ, ಉದ್ಯೋಗ ಮುಂತಾದ ಎಲ್ಲ ಕ್ಷೇತ್ರಗಳಲ್ಲಿ ಅವಳೇ ಪ್ರಾತಿನಿಧ್ಯ ಅತ್ಯಲ್ಪ.
ದೌರ್ಜನ್ಯದ ರೀತಿಗಳು
ತಮ್ಮ ಸ್ವಾರ್ಥ ಮತ್ತು ಇತರೆ ಕಾರಣಗಳಿಗಾಗಿ ಮಹಿಳೆಯರನ್ನು ದೈಹಿಕ, ಮಾನಸಿಕ, ಲೈಂಗಿಕ ಹಿಂಸೆಗೆ ಮತ್ತು ಪೀಡನೆಗೆ ಒಳಪಡಿಸುವುದನ್ನು ಶೋಷಣೆ ಎಂದು ಕರೆಯಬಹುದು. ಹತ್ಯೆ, ಅತ್ಯಾಚಾರ, ಅಪಹರಣ, ವರದಕ್ಷಿಣೆ ಸಾವು, ಭ್ರೂಣಹತ್ಯೆ, ಸತಿ ಮುಂತಾದವು ದೌರ್ಜನ್ಯದ ಪ್ರಮುಖ ರೀತಿಗಳಾಗಿವೆ.
ಕಾರಣಗಳು
• ಪುರುಷ ಪ್ರಧಾನ ಸಮಾಜ
• ಶಿಕ್ಷಣದ ಕೊರತೆ
• ವರದಕ್ಷಿಣೆ ಇತ್ಯಾದಿ ಸಾಂಪ್ರಾದಾಯಿಕ, ಧಾರ್ಮಿಕ ಕಾರಣಗಳು
• ಎಲ್ಲ ದೌರ್ಜನ್ಯವನ್ನು ಸಹಿಸಿಕೊಳ್ಳುವ ವಿವೇಚನಾರಹಿತ ಮನೋವೃತ್ತಿ
• ಲಿಂಗ ತಾರತಮ್ಯ
• ಸಾಮಾಜಿಕ ಸ್ಥಾನಮಾನದ ಕೊರತೆ
• ಆತ್ಮವಿಶ್ವಾಸ ಮತ್ತು ಧೈರ್ಯದ ಕೊರತೆ
• ಆರ್ಥಿಕ ಅವಲಂಬನೆ
• ಸಾಮಾಜಿಕ ಅರಿವಿನ ಕೊರತೆ
• ಅವಕಾಶವಂಚಿತರಾಗಿರುವುದು
ಇತ್ಯಾದಿ ಅನೇಕ ಕಾರಣಗಳನ್ನು ಗುರ್ತಿಸಬಹುದಾದರೂ ಮುಖ್ಯವಾಗಿ ಶತಶತಮಾನಗಳಿಂದ ಬೆಳೆದು ಬಂದಿರುವ ಪುರುಷ ಉತ್ತಮ, ಸ್ತ್ರೀ ಕೀಳು ಎಂಬ ಅತಿರೇಖದ ಧೋರಣೆಯು ಸ್ತ್ರೀಯರ ಮೇಲಿನ ಎಲ್ಲ ದೌರ್ಜನ್ಯಗಳಿಗೂ ಮೂಲ ಕಾರಣವಾಗಿದೆ.
ಹೆಚ್ಚಾಗಿ ದೌರ್ಜನ್ಯಕ್ಕೊಳಗಾಗುವರು
ದೌರ್ಜನ್ಯಕ್ಕೊಳಗಾಗುವ ಮಹಿಳೆಯರಲ್ಲಿ ಬಹುತೇಕರು, ಸಹಾಯಕರು, ಖಿನ್ನರು, ಆತ್ಮಗೌರವ,ಧೈರ್ಯದ ಕೊರತೆಯಿರುವವರು, ಅವಿದ್ಯಾವಂತರು, ಆರ್ಥಿಕವಾಗಿ ಬೇರೆಯವರ ಮೇಲೆ ಅವಲಂಬಿತರಾದವರು, ಒತ್ತಡಪೂರಿತ ಕುಟುಂಬದಲ್ಲಿರುವವರು, ಅಶಕ್ತರು, ಸಾಮಾಜಿಕ ಅರಿವಿನ ಕೊರತೆಯಿರುವವರು, ಕುಡುಕ, ಮಾನಸಿಕ ವಿಕೃತಿಯ ಪುರುಷರ ಸಂಬಂಧಗಳಲ್ಲಿರುವವರು ಮುಂತಾದವರು.
ದೌರ್ಜನ್ಯದ ಉದ್ದೇಶಗಳು
ಹಣಕ್ಕಾಗಿ, ಸ್ವಾರ್ಥ ಸಾಧನೆಗಾಗಿ, ಅಧಿಕಾರಕ್ಕಾಗಿ, ವಿಕೃತ ಸುಖಕ್ಕಾಗಿ, ಮಾನಸಿಕ ವ್ಯಾಧಿ, ಕುಟುಂಬದಲ್ಲಿನ ಒತ್ತಡ, ದುಡುಕ ಇತ್ಯಾದಿಗಳ ಜೊತೆಗೆ ಸ್ತ್ರೀಯರ ಮೇಲಿರುವ ಉಚ್ಚ-ನೀಚ ಎಂಬ ಮಾನಸಿಕ ಧೋರಣೆಯು ದೌರ್ಜನ್ಯದ ಪ್ರಮುಖ ಉದ್ದೇಶಗಳೆಂದು ಗುರ್ತಿಸಬಹುದು.
ಭಾರತದಲ್ಲಿ ದೌರ್ಜನ್ಯದ ತೀರ್ವತೆ
ಭಾರತದಲ್ಲಿ ಸುಮಾರು ಪ್ರತಿ 7 ನಿಮಿಷಕ್ಕೆ ಒಬ್ಬ ಮಹಿಳೆಯ ಮೇಲೆ ಅತ್ಯಾಚಾರ ನಡೆಯುತ್ತಿದೆ. ಈ ಪ್ರಮಾಣವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಗೃಹ ಖಾತೆ ಪೋಲೀಸ್ ರಿಸರ್ಚ್ ಬ್ಯೂರೋ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಡಿಫೆನ್ಸ್ ಆಧರಿಸಿದ ಮಾಹಿತಿಯ ಪ್ರಕಾರ ಪ್ರತಿ ವರ್ಷ ಭಾರತದಲ್ಲಿ ಸರಾಸರಿ 15,000 ರೇಪ್, 40,000 ಮಹಿಳಾ ಪೀಡನೆ ಪ್ರಕರಣ ಸಾವಿರಾರು ಅಪಹರಣ, ಚಿತ್ರಹಿಂಸೆ, ಕೀಟಲೆ ಪ್ರಕರಣ, ವರದಕ್ಷಿಣೆ ಸಾವು ಸಂಭವಿಸುತ್ತಿವೆ. ಈ ಪ್ರಮಾಣವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು ಕೌರ್ಯ ಮುಂದುವರೆದಿದೆ.
ಮಹಿಳಾ ಆಂದೋಲನ
ಅನೇಕ ಶತಮಾನಗಳ ಹಿಂದಿನಿಂದ ಪುರುಷ ದೌರ್ಜನ್ಯದ ವಿರುದ್ಧ ಪ್ರತಿಭಟನೆಗಳು ನಡದೇ ಇವೆ. ಆದರೆ ಸಂಘಟಿತ ಬೃಹತ್ ಮಹಿಳಾ ಆಂದೋಲನಗಳು ಪ್ರಾರಂಭವಾಗಿದ್ದು ಇತ್ತೀಚೆಗೆ ಸಂಪರ್ಕ ಮಾಧ್ಯಮ ಅಭಿವೃದ್ದಿ ಸಾರಿಗೆ ಅಭಿವೃದ್ಧಿ ಆಧುನಿಕ ವೈಜ್ಞಾನಿಕ ಶಿಕ್ಷಣ, ನಾಗರೀಕತೆಯ ಉನ್ನತಿ ಮುಂತಾದವುಗಳು ಪ್ರಸ್ತುತ ಮಹಿಳಾ ಆಂದೋಲನಗಳನ್ನು ರಾಷ್ಟ್ರ ವ್ಯಾಪಿ ವಿಶ್ವ ವ್ಯಾಪಿಯಾಗಿಸಿವೆ. ಈ ಹೊತ್ತಿನ ಆಂದೋಲನಗಳನ್ನು ಎರಡು ರೀತಿಯಲ್ಲಿ ಗುರ್ತಿಸಬಹುದಾಗಿದೆ.
1. ಉದಾರವಾದಿ ಸ್ತ್ರೀ ಆಂದೋಲನ:
ಇವರು ಸಾಮಾಜಿಕ ಪುನರುಜ್ಜೀವನನ್ನು ಬಯಸುವರಾಗಿದ್ದು ಕಾನೂನು, ಶಾಸನ, ಯೋಜನೆ, ಉದ್ಯೋಗ ಮಾನಸಿಕ ಪರಿವರ್ತನೆಗೆ ತೀರ್ವ ಯತ್ನ ಮುಂತಾದ ಪ್ರಯತ್ನಗಳ ಮೂಲಕ ಮಹಿಳೆಯರ ಸರ್ವತೋಮುಖ ಅಭಿವೃದ್ಧಿ ಇವರ ಒಲವಾಗಿದೆ.
2.ಮೂಲಭೂತ ಪರಿವರ್ತನೆಯನ್ನು ಬಯಸುವ ತೀರ್ವವಾದಿ ಸ್ತ್ರೀ ಆಂದೋಲನ:
ಇವರಿಗೆ ಸಾಮಾಜಿಕ ಪುನರುಜ್ಜೀವನದಲ್ಲಿ ನಂಬಿಕೆಯಿಲ್ಲ. ಇವರ ಪ್ರಕಾರ ರಾಜ್ಯವೆಂಬುದು ಪುರುಷ ಪ್ರಧಾನ ಉಕ್ಕಿನ ಕೋಟೆ. ಲಿಂಗ ತಾರತಮ್ಯ ಇವರ ಸಾಧನ. ಈ ಪುನರುಜ್ಜೀವನವೆಂಬುದು ಪುರುಷ ಪ್ರಾಧಾನ್ಯತೆಯನ್ನು ಮತ್ತೂ ಭದ್ರಗೊಳಿಸುತ್ತದೆ. ಇದರಿಂದ ಮಹಿಳೆಯರು ಅಡಿಗೆ ಮನೆಗೆ, ದುಡಿಯುವ ಹೊಲಗದ್ದೆಗಳಿಗೆ ಸೀಮಿತರಾಗಿ ದುಡಿಯುವ ಯಂತ್ರಗಳಾಗುತ್ತಾರೆ. ಇವರ ಮೇಲೆ ದೌರ್ಜನ್ಯ ನಡೆಸುವ ಪುರುಷರು ರಾಜ್ಯವಾಳುತ್ತಲೆ ಇರುತ್ತಾರೆ ಎಂಬುದು ಇವರ ನಿಲುವು.
19ನೆಯ ಶತಮಾನದಲ್ಲಿ ಮತದಾನದ ಹಕ್ಕಿಗಾಗಿ ಹಲವಾರು ಸ್ತ್ರೀ ಆಂದೋಲನಗಳು ನಡೆದವು. 1930ರಲ್ಲಿ ಬ್ರಿಟನ್ ಸ್ತ್ರೀಯರಿಗೆ ಮತದಾನದ ಹಕ್ಕನ್ನು ನೀಡಿದರೆ, ಭಾರತದಲ್ಲಿ ಗಣರಾಜ್ಯ ಅಸ್ತಿತ್ವಕ್ಕೆ ಬಂದ ನಂತರ (1950) ಸ್ತ್ರೀಯರಿಗೆ ಮತದಾನದ ಹಕ್ಕು ದೊರೆಯಿತು. 2003ರಲ್ಲಿ ಕುವೈತ್ನಲ್ಲಿ ಈ ಹಕ್ಕಿಗಾಗಿ ಆಂದೋಲನ ನಡೆದರೂ ಅಚಿತಿಮವಾಗಿ ಅಲ್ಲಿನ ಶಾಸನಸಭೆ ಇದನ್ನು ನಿರಾಕರಿಸಿತು.
ನಿವಾರಣೆಗೆ ಯತ್ನ:
ವಿಶ್ವಸಂಸ್ಥೆ:
1945ರ ವಿಶ್ವಸಂಸ್ಥೆಯ ಚಾರ್ಟರ್ ಆ್ಯಕ್ಟ್ ಲಿಂಗ ಸಮಾನತೆಯನ್ನು ಸಾರುತ್ತದೆ. ಇದರ ಪ್ರಕಾರ ಲಿಂಗ ತಾರತಮ್ಯಕ್ಕೆ ಯಾವುದೇ ಅವಕಾಶವಿಲ್ಲ.
ವಿಶ್ವಸಂಸ್ಥೆ ಅಧೀನದಲ್ಲಿ ಎಕನೋಮಿಕ್ ಮತ್ತು ಸೋಶಿಯಲ್ ಕೌನ್ಸಿಲ್ (ECOSOC)ಸ್ಥಾಪಿಸಲಾಯಿತು. ಸಾಮಾಜಿಕ, ನಾಗರೀಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಮುಂತಾದ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರ ಹಕ್ಕುಗಳನ್ನು ಎಷ್ಟರ ಮಟ್ಟಿಗೆ ನೀಡಲಾಗಿದೆ ಎಂಬುದನ್ನು ವರದಿ ಮಾಡುವುದು ಇದರ ಕಾರ್ಯ.
1979ರಲ್ಲಿ ವಿಶ್ವಸಂಸ್ಥೆಯ ಅಡಿಯಲ್ಲಿ ‘ಕನ್ವೆಂಷನ್ ಆನ್ ಎಲಿವೇಶನ್ ಆಫ್ ಆಲ್ ಫಾಮ್ಸ್ ಡಿಸ್ಟ್ರಿಮಿನೇಷನ್’ (CEDAN) ಅನ್ನು ಸ್ಥಾಪಿಸಲಾಗಿದೆ. ಅಂತಾರಾಷ್ಟ್ರೀಯವಾಗಿ ಒಪ್ಪಿತವಾಗಿರುವ ಮಹಿಳಾ ಹಕ್ಕುಗಳನ್ನು ನಿರೂಪಿಸುವುದು ಮತ್ತು ಎಲ್ಲ ಸಮಾಜಗಳೂ ಇದನ್ನು ಅಳವಡಿಸಿಕೊಳ್ಳಲು ಸಹಕರಿಸುವುದು ಇದರ ಕಾರ್ಯ.
ವಿಶ್ವಸಂಸ್ಥೆಯ ಘೋಷಣೆಯಲ್ಲಿ 4 ಅಂತರಾಷ್ಟ್ರೀಯ ಮಹಿಳಾ ಸಮ್ಮೇಳನಗಳು ನಡೆದವು. ಮೆಕ್ಸಿಕೋದಲ್ಲಿ (1975), ಕೊಪೆನ್ ಹೇಗನ್ (1980), ನೈರೋಬಿ (1985), ಬೀಜಿಂಗ್ (1995). ಈ ಸಮ್ಮೇಳನಗಳಲ್ಲಿ ವಿಶ್ವ ಸಮುದಾಯವು ಮಹಿಳೆಯರೆಡೆಗಿನ ಅನೇಕ ಸುಧಾರಣೆಗಳ ಬಗ್ಗೆ ದೃಡ ಸಂಕಲ್ಪ ಕೈಗೊಂಡವು.
ಪ್ರಸ್ತುತ ಅನೇಕ (NGO) ಗಳು ಈ ಕಾರ್ಯದಲ್ಲಿ ನಿರತವಾಗಿದ್ದು ಸಾಮಾಜಿಕ ಪುನರುಜ್ಜೀವನದ ಹಾದಿಯಲ್ಲಿ ತೀರ್ವತೆಯನ್ನು ತರಲು ಯತ್ನಿಸಲಾಗುತ್ತಿದೆ.
ಸಾಂವಿಧಾನಿಕ ರಕ್ಷಣೆ
ಲಿಂಗ ಸಮಾನತೆ ಸಾಧಿಸುವ ಮತ್ತು ಅಸಮಾನತೆಯನ್ನು ತೊಡೆದು ಹಾಕುವ ದೃಷ್ಟಿಯಿಂದ ಸಂವಿಧಾನದಲ್ಲಿ ಅನೇಕ ರಕ್ಷಣೆಗಳನ್ನು ಒದಗಿಸಲಾಗಿದೆ.
ವಿಧಿ 14: ಕಾನೂನಿನ ಮುಂದೆ ಎಲ್ಲರೂ ಸಮಾನರು, ಎಲ್ಲರಿಗೂ ಸಮಾನ ರಕ್ಷಣೆ
ವಿಧಿ 15: ಲಿಂಗ ಇತ್ಯಾದಿ ಆಧಾರಿತ ತಾರತಮ್ಯ ಮಾಡುವಂತಿಲ್ಲ. ಈ ದೃಷ್ಟಿಯಿಂದ ರಾಜ್ಯವು ವಿಶೇಷ ಕಾನೂನು ರಚಿಸಬಹುದು.
ವಿಧಿ 39: ಪುರುಷ ಮತ್ತು ಮಹಿಳೆಯರಿಗೆ ಜೀವನೋಪಾಯಕ್ಕಾಗಿ ಸಮಾನ ಹಕ್ಕುಗಳು
ವಿಧಿ 42: ಉದ್ಯೋಗಗಳಲ್ಲಿ ಮಾನವೀಯ ಪರಿಸ್ಥಿತಿ, ಹೆರಿಗೆ ಸವಲತ್ತು ಇತ್ಯಾದಿ.
ವಿಧಿ 51 A(e): ಸ್ತ್ರೀಯರ ಗೌರವಕ್ಕೆ ಧಕ್ಕೆ ತರುವ ಎಲ್ಲವನ್ನೂ ತಿರಸ್ಕರಿಸುವುದು ನಾಗರೀಕರ ಕರ್ತವ್ಯ.
ವಿಶೇಷ ವಿವಾಹ ಕಾಯ್ದೆ:
1954-18 ವರ್ಷ ಮೇಲ್ಟಟ್ಟ ಸ್ತ್ರೀ ಮತ್ತು 21 ವರ್ಷ ಮೇಲ್ಪಟ್ಟ ಪುರುಷ ಯಾವುದೇ ಜಾತಿ, ಧರ್ಮ, ಕುಲವಾಗಿದ್ದರೂ ಈ ಕಾನೂನು ಅನ್ವಯಿಸುತ್ತದೆ.
ಹಿಂದೂ ವಿವಾಹ ಕಾಯ್ದೆ:
1955 – ಎರಡನೆಯ ಮದುವೆಯನ್ನು ನಿಷೇಧಸಲಾಗಿದ್ದು ವಿವಾಹ ವಿಚ್ಛೇದನಕ್ಕೆ ಕೆಲವು ನಿರ್ದಿಷ್ಟ ಕಾರಣಗಳಿಗಾಗಿ ಅವಕಾಶ ಕಲ್ಪಿಸಲಾಗಿದೆ.
ದತ್ತು ಮತ್ತು ಪೋಷಣೆ ಕಾಯ್ದೆ:
1955 – ಅವಿವಾಹಿತ ಸ್ತ್ರೀ, ವಿಧವೆ ಅಥವಾ ವಿಚ್ಛೇದನ ಪಡೆದಿರುವ ಮಾನಸಿಕ ಆರೋಗ್ಯದಿಂದಿರುವ ಮಹಿಳೆಯು ಮಗುವನ್ನು ದತ್ತು ತೆಗೆದುಕೊಳ್ಳಬಹುದು.
ಹಿಂದೂ ಸಕ್ಸೆಷನ್ ಕಾಯ್ದೆ:
1956 - ಪುರುಷರಂತೆಯೇ ಸ್ತ್ರೀ ಕೂಡ ಅನುವಂಶೀಯವಾಗಿ ಆಸ್ತಿಯಲ್ಲಿ ಪಾಲುದಾರಳಾಗಿದ್ದಾಳೆ.
ವರದಕ್ಷಿಣೆ ನಿಷೆಧ ಕಾಯ್ದೆ:
1961 – ವರದಕ್ಷಿಣೆ ಕೊಡುವುದು ಅಥವಾ ತೆಗೆದುಕೊಳ್ಳುವುದು,ಜಾಮೀನು ರಹಿತ ಅಪರಾಧ. 5 ವರ್ಷಕ್ಕೆ ಕಡಿಮೆಯಿಲ್ಲದಂತೆ ಜೈಲು ಮತ್ತು 15,000 ಅಥವಾ ವರದಕ್ಷಿಣೆ ಮೊತ್ತಕ್ಕೆ ತಕ್ಕ ದಂಡ ವಿಧಿಸಬಹುದು.
ಹೆರಿಗೆ ಸವಲತ್ತು ಕಾಯ್ದೆ:
1961 - ಪ್ರಸವ ಕಾಲದಲ್ಲಿ ವೇತನ ಸಹಿತ 6 ವಾರಗಳ ರಜೆ ಮತ್ತು ಒಂದು ತಿಂಗಳ ಕಾಲ ಯಾವುದೇ ರೀತಿಯ ಪ್ರಯಾಸಕರ ಕೆಲಸ ಮಾಡದಂತೆ ರಕ್ಷಣೆ.
ಮೆಡಿಕಲ್ ಟರ್ಮಿನೇಶನ್ ಆಫ್ ಪ್ರೆಗ್ನೆನ್ಸಿ ಆ್ಯಕ್ಟ್:
1971 – ವೈದ್ಯಕೀಯ ದೃಷ್ಟಿಯಿಂದ ಸರಿಯೆನಿಸಿದ ಗರ್ಭಪಾತ ಮಾತ್ರ ಕಾನೂನು ಬದ್ಧ.
ಬಾಲ್ಯ ವಿವಾಹ ನಿಷೆಧ ಕಾಯ್ದೆ:
1976 – ವಿವಾಹ ವಯಸ್ಸನ್ನು ಹೆಣ್ಣಿಗೆ 15 ರಿಂದ 18 ವರ್ಷಗಳಿಗೆ ಮತ್ತು ಪುರುಷನಿಗೆ 21 ವರ್ಷಗಳಿಗೆ ವಿಸ್ತರಿಸಲಾಯಿತು.
ಸಮಾನ ವೇತನ ಕಾಯ್ದೆ:
1976 - ಶ್ರಮಕ್ಕೆ ತಕ್ಕ ಸಮಾನ ಪ್ರತಿಫಲ.
ಪ್ರೀನೇಟಲ್ ಡಯಾಗ್ನೋಸ್ಟಿಕ್ ಟಕ್ನಿಕ್ಸ್ ಆ್ಯಕ್ಟ:
1994 – ಗರ್ಭದಲ್ಲಿರುವ ಮಗುವಿನ ಲಿಂಗ ಪತ್ತೆ ನಿಯಂತ್ರಣ ಕಾಯ್ದೆ.
1980ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯಲ್ಲಿ ಪ್ರತ್ಯೇಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ವಿಭಾಗವನ್ನು ಸ್ಥಾಪಿಸಲಾಯಿತು. ಮಹಿಳಾ ಮತ್ತು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಬೇಕಾದ ಕಾನೂನು, ಯೋಜನೆ, ಕಾರ್ಯಕ್ರಮ ಇತ್ಯಾದಿಗಳನ್ನು ರೂಪಿಸುವುದು ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಈ ನಿಟ್ಟಿನಲ್ಲಿ ಸಹಕರಿಸುವುದು ಇದರ ಕಾರ್ಯವಾಗಿದೆ.
ಇತ್ತೀಚಿನ ವರ್ಷದಲ್ಲಿ ಮಹಿಳಾ ಅಭಿವೃದ್ಧಿಯ ನಿಟ್ಟಿನಲ್ಲಿ ದೃಷ್ಟಿಕೋನ ಮತ್ತು ಕಾರ್ಯ ವಿಧಾನಗಳಲ್ಲಿ ವ್ಯತ್ಯಾಸಗಳನ್ನು ಕಾಣುತ್ತೇವೆ. ಎಪ್ಪತ್ತರ ದಶಕದಲ್ಲಿ “ಮಹಿಳಾ ಕ್ಷೇಮಾಭಿವೃದ್ಧಿ”ಎಂಬತ್ತರ ದಶಕದಲ್ಲಿ “ಮಹಿಳಾ ಅಭಿವೃದ್ಧಿ” ತೊಂಬತ್ತರ ದಶಕದಲ್ಲಿ “ಸ್ತ್ರೀ ಸಶಕ್ತೀಕರಣ ಮತ್ತು ತೀರ್ಮಾನ ಕೈಗೊಳ್ಳುವಲ್ಲಿ ಪ್ರಮುಖ ಪಾತ್ರ” ಇತ್ಯಾದಿಗಳು ಮಹಿಳೆಯ ಅಭಿವೃದ್ಧಿಯನ್ನು ಗುರಿಯನ್ನಾಗಿಸಿಕೊಂಡು ಹುಟ್ಟಕೊಂಡವು. ಸಪೋರ್ಟ್ ಟು ಟ್ರೈನಿಂಗ್ ಕಮ್ ಎಂಪ್ಲಾಯ್ಮೆಂಟ್ (STEP), ಮಹಿಳಾ ಸಮೃದ್ಧಿ ಯೋಜನೆ, ಇಂದಿರಾ ಮಹಿಳಾ ಯೋಜನೆ, ರಾಷ್ಟ್ರೀಯ ಮಹಿಳಾ ಕೋಶ, ಅಲ್ಲದೆ ರಾಷ್ಟ್ರೀಯ ಮಟ್ಟದಲ್ಲಿ 1953ರಲ್ಲಿ ಸೆಂಟ್ರಲ್ ವೆಲ್ ಫೇರ್ ಬೋರ್ಡ್ (SWB)ಸ್ಥಾಪಿಸಲಾಯಿತು. ಈ ನಿಟ್ಟಿನಲ್ಲಿ ಸಹಕರಿಸಲು ಸುಮಾರು 18,000 ಸರ್ಕಾರೇತರ ಸಂಸ್ಥೆಗಳಿಗೆ ಧನ ಸಹಾಯ ಒದಗಿಸಲಾಗಿದೆ.
1992ರಲ್ಲಿ ಅಂಗಿಕರಿಸಲಾಗದ 73 ಮತ್ತು 74 ನೇಯ ಸಾಂವಿಧಾನಿಕ ತಿದ್ದುಪಡಿ ಮಸೂದೆಗಳು ಪಂಚಾಯಿತಿ ರಾಜ್ ವ್ಯವಸ್ಥೆಯಲ್ಲಿ ಅತ್ಯಮೂಲ್ಯ ಪರಿವರ್ತನೆಗಳನ್ನು ತಂದವು. ಈ ಕಾಯ್ದೆಗಳು ಸ್ಥಳೀಯ ಸಂಸ್ಥೆಗಳಲ್ಲಿ ಸ್ತ್ರೀಯರಿಗೆ 1/3ರಷ್ಟು ಮೀಸಲಾತಿಯನ್ನು ಕಲ್ಪಿಸುವ ಮೂಲಕ 669562 ಸಬಲೀಕರಣಕ್ಕೆ ಮಹತ್ವದ ವೇದಿಕೆ ಕಲ್ಪಿಸಿದವು. 1977ರಲ್ಲಿ ಗ್ರಾಮ ಮಟ್ಟದಲ್ಲಿ ಸುಮಾರು , ಬ್ಲಾಕ್ ಮಟ್ಟದಲ್ಲಿ ಸುಮಾರು 42509 ಮತ್ತು ಜಿಲ್ಲಾಮಟ್ಟದಲ್ಲಿ ಸುಮಾರು 4163 ಮಹಿಳಾ ಸದಸ್ಯರಿದ್ದರು. ಪ್ರಸ್ತುತ ಆಂಧ್ರಪ್ರದೇಶದ ಬಹುತೇಕ ಗ್ರಾಮ ಪಂಚಾಯಿತಿಗಳನ್ನು ಮಹಿಳೆಯರೇ ನಿಯಂತ್ರಿಸುತ್ತಿದ್ದಾರೆ.
ಪ್ರಸ್ತುತ ಕರ್ನಾಟಕದ ರಾಜ್ಯದಲ್ಲಿ ಅತ್ಯಂತ ಯಶಸ್ಸು ಕಾಣುತ್ತಿರುವ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳು ಮಹಿಳಾ ಸಶಕ್ತಿಕರಣದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿರುವುದನ್ನು ಕಾಣುತ್ತಿದ್ದೇವೆ.ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಲೋಕ ಸಭೆ ಮತ್ತು ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ಕಲ್ಪಿಸುವ ಮಹಿಳಾ ಮೀಸಲಾತಿ ಮಸೂದೆಯು ಅಂಗೀಕಾರವಾದ ಪಕ್ಷದಲ್ಲಿ ಸ್ತ್ರೀ ಸಶಕ್ತೀಕರಣಕ್ಕೆ ಅತ್ಯಂತ ಮಹತ್ವದ ಚಾಲನೆ ದೊರೆಯುವುದರಲ್ಲಿ ಸಂಶಯವಿಲ್ಲ.
ನ್ಯಾಯಿಕ ಆದೇಶಗಳು
ಮಹಿಳೆಯರ ಕ್ಷೇಮಾಭಿವೃದ್ಧಿಯ ದೃಷ್ಟಿಯಿಂದ ಸುಪ್ರಿಂಕೋರ್ಟ 1977ರಲ್ಲಿ ಹಿಂದೂ ಸಕ್ಸೆಶನ್ ಆ್ಯಕ್ಟ್ನ ಕೆಲವು ನಿಯಮಗಳನ್ನು ಹಿಂದೂಗಳಲ್ಲದವರಿಗೂ ಅನ್ವಯಿಸಿತು. ಉದ್ಯೋಗ ಮಾಡುವ ಸ್ಥಳಗಳಲ್ಲಿ ಸ್ತ್ರೀಯರ ಮೇಲೆ ಲೈಗಿಂಕ ಕಿರುಕುಳ ನೀಡದಂತೆ ಮಾಡಲು ಕೆಲವು ನಿರ್ದೇಶನಗಳನ್ನೂ ನೀಡಿತು. ಈ ರೀತಿಯ ಲೈಂಗಿಕ ಶೋಷಣೆಯು ಮೂಲಭೂತ ಹಕ್ಕು ವಿಧಿ 19ರ ಅತಿಕ್ರಮಣ ಎಂದು ಸಾರಿತು.
ಮಹಿಳೆಯರ ಸಾಂವಿಧಾನಿಕ ರಕ್ಷಣೆ, ಕಾನೂನು ಮತ್ತು ಅವುಗಳ ಕಾರ್ಯರೂಪಗೊಳ್ಳುವ ಸಾಧ್ಯತೆಗಳನ್ನು ಪರಿಶೀಲಿಸಲು 1992ರಲ್ಲಿ ನ್ಯಾಷನಲ್ ಕಮೀಷನ್ ಫಾರ್ ವುಮನ್ ಸ್ಥಾಪಿಸಲಾಯಿತು.
ಪ್ರಸ್ತುತ ಮಹಿಳಾ ಪ್ರಗತಿ
ಎಷ್ಟೇಲ್ಲ ಕಾರ್ಯಕ್ರಮ ಮತ್ತು ಯೋಜನೆಗಳನ್ನು ಹಮ್ಮಿಕೊಂಡರೂ ಪ್ರಸ್ತುತ ಮಹಿಳೆಯ ಸ್ಥಿತಿಗತಿಯಲ್ಲಿ ಹೆಚ್ಚಿನ ಪ್ರಗತಿ ಕಂಡುಬಂದಿಲ್ಲ. ಬಡತನ, ಶಿಕ್ಷಣದ ಕೊರತೆ, ಅಜ್ಞಾನ, ಆರ್ಥಿಕಾವಲಂಬನೆ ಮುಂತಾದ ಅನೇಕ ಸಮಸ್ಯೆಗಳು ಹಾಗೆಯೇ ಇವೆ. ಸತಿ ಇತ್ಯಾದಿ ಕಠೋರ ಪದ್ಧತಿಗಳು ಇನ್ನೂ ಮುಂದುವರಿಯುತ್ತಲೇ ಇವೆ. ಬಾಲ್ಯ ವಿವಾಹ ಮತ್ತು ದೌರ್ಜನ್ಯಗಳಂತೂ ರೋಧನಗಳಾಗಿ ಹೋಗಿವೆ. ಎಷ್ಟೇ ಒಳ್ಳೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಅದು ಫಲಾನುಭವಿಗಳಿಗೆ ತಲುಪದಿರುವುದು ಒಂದು ದೊಡ್ಡ ಸಮಸ್ಯೆಯಾಗಿದೆ.
2011ರ ಜನಗಣತಿಯ ಪ್ರಕಾರ ಸ್ತ್ರೀಯರಲ್ಲಿ ಶೇಕಡ 64.16ರಷ್ಟು ಶಿಕ್ಷಿತರಿದ್ದರು. ಶೇ.22 ಮಹಿಳೆಯರು ಉದ್ಯೋಗದಲ್ಲಿ ಪಾಲ್ಗೊಂಡಿದ್ದರು. ಇದರ ಅಸಂಘಟಿತ ವಲಯದಲ್ಲಿ ಶೇ.86 ಇತ್ತು.ಸಂಘಟಿತ ವಲಯದ ಸಾರ್ವಜನಿಕ ಉದ್ಯಮಗಳಲ್ಲಿ ಶೇ. 16 ಮತ್ತು ಖಾಸಗಿ ವಲಯದಲ್ಲಿ ಶೇ.26.
ಭಾರತೀಯ ನಾಗರೀಕ ಸೇವೆ (IAS,IFS,IRS) ನಲ್ಲಿ ಶೇ.33 ಮಹಿಳೆಯರಿದ್ದರೆ, (IAS,IES) ರಲ್ಲಿ ಶೇ. 15-18. ಅಂಚೆ ಸೇವೆಯಲ್ಲಿ ಇವರ ಪ್ರಮಾಣ ಅತ್ಯಧಿಕ ಶೇ.21, ಪೋಲೀಸ್ ಇಲಾಖೆಯಲ್ಲಿ ಅತ್ಯಂತ ಕನಿಷ್ಠ ಶೇ.20 ನ್ಯಾಯಿಕ ಸೇವೆಯಲ್ಲಿ ಶಾಸನ ಸಭೆಗಳಲ್ಲಿ ಉನ್ನತ ಅಧಿಕಾರಗಳಲ್ಲಿ ಮಹಿಳೆಯರ ಪಾಲು ಅತ್ಯಲ್ಪ.
ಪ್ರಸ್ತುತ ಮಹಿಳಾ ಆಂದೋಲನಗಳು ನಗರ, ಪಟ್ಟಣಗಳ ಮಧ್ಯಮ, ಉನ್ನತ ವರ್ಗಗಳಿಗೆ ಮೀಸಲಾಗಿದ್ದು ಗ್ರಾಮೀಣ ಪ್ರದೇಶದ ಮಹಿಳೆಯರು ಬಹುತೇಕ ಇದರಿಂದ ಹೊರಗೆ ಉಳಿದಿದ್ದಾರೆ.ಪ್ರಸ್ತುತ ಸ್ತ್ರೀ ಸ್ವಸಹಾಯ ಗುಂಪುಗಳು ಈ ನಿಟ್ಟಿನಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸುವ ಎಲ್ಲಾ ಸೂಚನೆಗಳನ್ನು ತೋರುತ್ತಿದ್ದು ಈ ನಿಟ್ಟಿನಲ್ಲಿ ಆಶಾದಾಯಕ ಭರವಸೆಯನ್ನು ಮೂಡಿಸುತ್ತಿವೆ.ಮಹಿಳಾ ಸಬಲೀಕರಣ ಮತ್ತು ಅಭಿವೃದ್ಧಿಯೆಂಬುದು ಅತ್ಯಂತ ತುರ್ತಿನ ವಿಚಾರ. ಶತ ಶತಮಾನಗಳಿಂದ ಜಡ್ಡುಗಟ್ಟಿ ಹೂತು ಹೋಗಿದ್ದ ಸ್ತ್ರೀಯರ ಮೈ ಮನಸ್ಸುಗಳು ಹೊಸದೊಂದು ಬೆಳಗಿಗೆ ತೆರೆದುಕೊಳ್ಳಲು ಕಾತರದಿಂದ ತುಡಿಯುತ್ತಿರುವ ಈ ಹೊತ್ತಿನಲ್ಲಿ ನಾಗರೀಕ ಸರ್ಕಾರಗಳು ತಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಿದೆ. ಏಕೆಂದರೆ ವಿಶ್ವದ ಶೇಕಡಾ ಅರ್ಧದಷ್ಟಿರುವ ಮಹಿಳೆಯ ಉದ್ಧಾರವಾಗದ ಹೊರತು ಯಾವುದೇ ಸಮಾಜವಾಗಲೀ, ರಾಷ್ಟ್ರವಾಗಲೀ ಅಭಿವೃದ್ಧಿ ಹೊಂದಲು ಸಾಧ್ಯವೇ ಇಲ್ಲ.
ಪ್ರಸ್ತುತ ಮಹಿಳೆಯ ಪರಿಸ್ಥಿತಿಯ ಬಗ್ಗೆ ಎಷ್ಟೆಲ್ಲಾ ಹೇಳಿದರೂ ಎಷ್ಟೇಲ್ಲಾ ವಿಶ್ಲೇಷಿಸಿದರೂ ನಮ್ಮ ಮನದಲ್ಲಿ ಮಾತ್ರ ಕೆಲವು ಪ್ರಶ್ನೆಗಳು ಉಳಿದೇ ತೀರುತ್ತದೆ. ಮಹಿಳೆಯರು ತಮ್ಮ ಮೇಲಿನ ದೌರ್ಜನ್ಯವನ್ನು ಎಕಾದರೂ ಸಹಿಸುತ್ತಾರೆ? ತಾನೂ ದಿಟ್ಟತನದಿಂದ ಆತ್ಮವಿಶ್ವಾಸದಿಂದ ಮನುಷ್ಯಳಂತೆ ಬದುಕಬಲ್ಲ ಶಕ್ತಿ ತನ್ನಲ್ಲಿದೆ ಎಂದು ಇವರಿಗೇಕೆ ಅರಿವಾಗದು, ಬದಲಾಗುತ್ತಿರುವ ಕಾಲದ ಹೆಜ್ಜೆ ಸಪ್ಪಳ ಇವರಿಗೇಕೆ ಕೇಳಿಸದು?
ಸಶಕ್ತೀಕರಣಕ್ಕೆ ಬೇಕಾದ ಪೂರ್ವ ಶರತ್ತುಗಳೇನು? ಅಂತಿಮವಾಗಿ ಹಿಂಸೆಯಿಂದ ಮುಕ್ತಿ ನೀಡುವ ಅತ್ಯಂತ ಕಡಿಮೆ ದರದ ಅಪರಾಧಗಳು & ಕ್ಷಿಪ್ರ ನ್ಯಾಯ ವಿತರಣೆ, ಸೂಕ್ತ ವಿದ್ಯಾಭ್ಯಾಸಕ್ಕೆ & ಆರ್ಥಿಕ ಚಟುವಟಿಕೆಗೆ ಅವಕಾಶ, ಇವು ಅದರ ಪ್ರಮುಖ ಅಂಶಗಳು ಆದುದರಿಂದಲೇ ಅಪರಾಧ ವಿಶ್ಲೇಷಣೆ & ನ್ಯಾಯ ವಿತರಣೆ ಮಾದರಿಗಳ ಅಧ್ಯಯನ ಪ್ರಾಮುಖ್ಯತೆ ಪಡೆಯುತ್ತವೆ.ಅಂತಹ ಅಧ್ಯಯನದಿಂದ ಕೆಲ ನೀತಿ ಮಾರ್ಗಸೂಚಿಗಳನ್ನು ಸಲಹೆ ಮಾಡಬಹುದು.
ಮಹಿಳೆಯರ ವಿರುದ್ಧ ಅಪರಾಧ ಪ್ರಕರಣಗಳು ಇತ್ಯರ್ಥವಾಗದೆ ಅಧಿಕ ಸಂಖ್ಯೆಯಲ್ಲಿ ಉಳಿದುಕೊಂಡಿರುವುದು ಹಾಗೂ ಅತಿ ಕಡಿಮೆ ದರದಲ್ಲಿ ಅಪರಾಧ ನಿರ್ಣಯವಾಗುತ್ತಿರುವುದು ನಮ್ಮ ನ್ಯಾಯ ವಿತರಣೆ ವ್ಯವಸ್ಥೆಯತ್ತ ಹೊಸ ದೃಷ್ಟಿ ಹಾಯಿಸಬೇಕೆಂಬುದನ್ನು ಬಹುತೇಕವಾಗಿ ಸೂಚಿಸುತ್ತದೆ. ಅನವಶ್ಯಕ ಕ್ರಿಯೆ & ಮೋಸ ನಿವಾರಣೆಯಲ್ಲಿ ಕಾನೂನು ಕ್ರಮ ಜರುಗಿಸುವ & ಪ್ರತಿವಾದಿ ವಕೀಲರು ಹಾಗೂ ನ್ಯಾಯಧೀಶರು ವಹಿಸಬೇಕಾದ ಪಾತ್ರದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ.
ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆ (ಎನ್ ಸಿ ಆರ್ ಬಿ) ಪ್ರಕಾಶಪಡಿಸುವ ವಾರ್ಷಿಕ ವರದಿಗಳಿಂದ ಆರಂಭಿಸಿ, ಮಹಿಳೆಯರ ವಿರುದ್ಧದ ಹಿಂಸಾಚಾರದ ಪರಿಸ್ಥಿತಿಯನ್ನು ಅಧ್ಯಯನ ಮಾಡಬಹುದು. ದೇಶದಲ್ಲೆಡೆಗಳಿಂದ ದಾಖಲೆ ಸಂಗ್ರಹಿಸುವ ಜಾಲವನ್ನು ಈ ಸಂಸ್ಥೆ ಹೊಂದಿದೆ, ಪ್ರತಿ ಜಿಲ್ಲೆಯಲ್ಲಿ ಒಂದು ತಿಂಗಳ ಅವಧಿಯಲ್ಲಿ ನಡೆಯುವ ಎಲ್ಲ ಅಪರಾಧಗಳ ಬಗ್ಗೆ ಆಯಾ ಜಿಲ್ಲಾ ಪೋಲಿಸ್ ಮುಖ್ಯ ಕೇಂದ್ರ ರಾಜ್ಯ ಪೋಲೀಸ್ ಮುಖ್ಯ ಕೇಂದ್ರಕ್ಕೆ ವರದಿ ಮಾಡುತ್ತದೆ. ಅಲ್ಲಿ ಈ ವರದಿಗಳನ್ನು ಸಂಗ್ರಹಿಸಿ ರಾಜ್ಯವಾರು ದತ್ತಾಂಶಗಳನ್ನು ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆಗೆ ರವಾನಿಸಲಾಗುವುದು ದೇಶದಲ್ಲಿನ ಒಟ್ಟಾರೆ ಅಪರಾಧ ಪರಿಸ್ಥಿತಿಯ ಸಂಕಲನಕ್ಕಾಗಿ ಸಂಸ್ಥೆ ಈ ಮಾಸಿಕ ವರದಿಗಳನ್ನು ಬಳಸಿಕೊಂಡು ಆಯ್ದ ದತ್ತಾಂಶ ದಾಖಲೆಗಳನ್ನು ವಾರ್ಷಿಕವಾಗಿ ಪ್ರಕಾಶಪಡಿಸುತ್ತದೆ.
ನನ್ನ ಮಾದರಿ ಅಧ್ಯಯನಕ್ಕಾಗಿ ನಾನು ಎನ್ ಸಿ ಆರ್ ಬಿ, 1995,1996 & 1997ನೇ ವರ್ಷಗಳಿಗಾಗಿ ಅಪರಾಧ ದಾಖಲೆಗಳ ಕುರಿತಾಗಿ ಮಾಡಿದ ವರದಿಗಳನ್ನು ಆರಿಸಿಕೊಂಡೆ.ಮಹಿಳೆಯರ ವಿರುದ್ಧ ಮಾತ್ರ ಎಸಗಲಾದ ಆರು ಪ್ರಮುಖ ಅಪರಾಧಗಳ ದತ್ತಾಂಶ ಮಾಹಿತಿಗಳನ್ನು ತುಲನೆ ಮಾಡಿ ನೋಡಿದೆ. ಅಂದರೆ ಮಹಿಳೆಯರ ವಿರುದ್ಧ್ದ ಆರು ಪ್ರಕಾರದ ಅಪರಾಧಗಳೂ ಸೇರಿದಂತೆ ಒಟ್ಟಾರೆಯಾಗಿ ವಿವಿಧ ಶೀರ್ಷಿಕೆಗಳಡಿ ದಾಖಲಾದ ಭಾರತೀಯ ಅಪರಾಧ ಸಂಹಿತೆಯಲ್ಲಿ ನಮೂದಿಸಲಾದಂತಹ ಅಪರಾಧಗಳು ಅವು. ಅವುಗಳ ಕೆಲ ಪ್ರಮುಖ ಅವಲೋಕನಗಳನ್ನು ಇಲ್ಲಿ ಕೊಡಲಾಗಿದೆ.
ಈ ಮೂರು ವರ್ಷಗಳ ಅವಧಿಯಲ್ಲಿ ಮಧ್ಯಪ್ರದೇಶ & ಮಹಾರಾಷ್ಟ್ರಗಳಲ್ಲಿ ದಾಖಲಾದ ಅಪರಾಧಗಳು ಕ್ರಮವಾಗಿ 5.9 ಲಕ್ಷ & 5.5 ಲಕ್ಷಕ್ಕೆ ಹೆಚ್ಚಾಗಿದ್ದವು. ಉತ್ತರ ಪ್ರದೇಶ, ರಾಜಸ್ಥಾನ & ತಮಿಳುನಾಡು ರಾಜ್ಯಗಳಲ್ಲಿ 4ರಿಂದ ಎಂದು ಹಲವು ಮಹಿಳಾ ಕಾರ್ಯಕರ್ತರು & ಮಹಿಳಾ ಆಯೋಗಗಳು ಅಭಿಪ್ರಾಯ ಹೊಂದಿದೆ.ಪಾಯಶಃ ಮಹಿಳೆಯರ ವಿರುದ್ಧದ 10 ಅಪರಾಧಗಳ ಪೈಕಿ ಕೇವಲ ಒಂದು ಮಾತ್ರ ವರದಿಯಾಗುತ್ತದೆಂದು ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆಯ ವರದಿಯೇ ಹೇಳಿಕೆ ನೀಡಿದೆ. ಹಲವು ರಾಜ್ಯಗಳು ಈ ಕುರಿತು ಮಾಸಿಕ ವರದಿಯನ್ನು ಎನ್ ಸಿ ಆರ್ ಬಿ.ಗೆ ಕಳಿಸುವುದಿಲ್ಲ & ಹಲವು ಬಾರಿ ರಾಜ್ಯ ಮಟ್ಟದಲ್ಲಿ ಅಂತಹ ವರದಿಗಳನ್ನು ಸಿದ್ಧಪಡಿಸುವುದೇ ಇಲ್ಲ. ಪ್ರಾಯಶಃ ಅಂತಹ ಅಪರಾಧಗಳನ್ನು ದಾಖಲಿಸಲು ಹೊಸ ವ್ಯವಸ್ಥೆ ಅಭಿವೃದ್ಧಿ ಪಡಿಸಲು ಈಗ ಸಮಯ ಸನ್ನಿಹಿತವಾಗಿದೆ. ಆ ವ್ಯವಸ್ಥೆ ಪೋಲೀಸ್ ಯಂತ್ರವನ್ನು ಮಾತ್ರ ಅವಲಂಬಿಸಿರಬಾರದು. ಬದಲಾಗಿ ಅದರಲ್ಲಿ ಇಡೀ ಸಮಾಜವನ್ನು ವ್ಯಾಪಕ ರೀತಿಯಲ್ಲಿ ಒಳಗೊಳ್ಳುವಂತೆ
ಮಾಡುವಂತಹುದಾಗಿರಬೇಕು. ಇಂತಹ ಬದಲಾವಣೆ ಉಂಟಾಗಲು ಬಹಳ ಸಮಯ ತಗಲಬಹುದು. ಆದರೆ ತಕ್ಷಣ ಮಾಡಬಹುದಾದ ಬದಲಿ ವ್ಯವಸ್ಥೆ ಎಂದರೆ “ಎನ್ ಸಿ” ಪ್ರಕರಣಗಳ ಬಗ್ಗೆ ಅಂದರೆ ಮೊದಲ ಮಾಹಿತಿ ವರದಿ (ಎಫ್ ಐ ಆರ್) ಯನ್ನು ದಾಖಲಿಸುವ ಮೊದಲು ಪ್ರಕರಣ ದಾಖಲಿಸಲು ತಕ್ಕುದಲ್ಲ ಎಂದು ಪೊಲೀಸರೇ ನಿರ್ಧಾರ ಕೈಗೊಂಡು ಇತ್ಯರ್ಥ ಪಡಿಸುವಂತಹ ಪ್ರಕರಣಗಳ ಬಗ್ಗೆ ವರದಿ ಸಲ್ಲಿಸುವಂತೆ ಪೋಲೀಸರಿಗೆ ತಿಳಿಸುವುದು. ಅಂತಹ ಪ್ರಕರಣಗಳ ಶೇಕಡಾವಾರು ಪ್ರಮಾಣ ಕೇವಲ 0.4 ಎಂದು ಎನ್ ಸಿ ಆರ್ ಬಿ ತಿಳಿಸಿದರೂ ಸಹ ಸರ್ಕಾರೇತರ ಸಂಸ್ಥೆಗಳ (ಎನ್ ಜಿ ಓ) & ವಿವಿಧ ಆಯೋಗಗಳ ಅನುಭವ ಬೇರೆಯೇ ಆಗಿದೆ.‘ಎನ್ ಸಿ’ ಪ್ರಕರಣವೇ ಆಗಲಿ ಅಥವಾ ಎಫ್ ಐ ಆರ್ ದಾಖಲಿಸಿದ ಪ್ರಕರಣವೇ ಆಗಲಿ ಫಿರ್ಯಾದುದಾರರಾಗಿ ಪೋಲೀಸರು ನಿಯಮ ಪ್ರಕಾರ ನೀಡಬೇಕಾದ ಸಂಬಂಧಿಸಿದ ದಾಖಲೆಗಳನ್ನು ನೀಡುವಂತೆ ಜನರು & ಎನ್ ಜಿ ಓ.ಗಳು ಒತ್ತಾಯಿಸುವುದು ಅಗತ್ಯ.
•ಅತ್ಯಾಚಾರ & ವರದಕ್ಷಿಣೆ ಸಾವು:
ಎಲ್ಲ ಅಪರಾಧಗಳ ಪೈಕಿ ಮಹಿಳೆಯರ ವಿರುದ್ಧದ ಅತಿ ಘೋರ ಎರಡು ಅಪರಾಧಗಳೆಂದರೆ ಅತ್ಯಾಚಾರ & ವರದಕ್ಷಿಣೆ ಹತ್ಯೆ ಸಾಧನೆ & ಸ್ವಾತಂತ್ರ್ಯದೆಡೆಗೆ ಹಕ್ಕಿಯಂತೆ ಹಾರಿಹೋಗ ಬಯಸುವ ಮಹಿಳೆಯ ರೆಕ್ಕೆಗಳನ್ನು ಮೊದಲನೆಯ ಅಪರಾಧ ಕತ್ತರಿಸಿ ಹಾಕುತ್ತದೆ. ಯಾರ ಕಲ್ಪನೆಗೂ ಬಾರದ ರೀತಿಯಲ್ಲಿ ಅವಳನ್ನೂ ಮಾನಸಿಕವಾಗಿ ದುರ್ಬಲಳನ್ನಾಗಿಸುತ್ತದೆ. ದೈಹಿಕವಾಗಿ ಘಾಸಿಯುಂಟು ಮಾಡುತ್ತದೆ. ಮತ್ತೋಂದೆಡೆ ವರದಕ್ಷಿಣೆ, ಸಾವಿನ ಬೆದರಿಕೆ, ಮಹಿಳೆ ತನ್ನದೇ ಎಂದು ತಿಳಿದುಕೊಂಡ ಮನೆಯಲ್ಲೆ ಅವಳಿಗೆ ಸಮಾನ ಸ್ಥಾನಮಾನ & ಮರ್ಯಾದೆ ದೊರಕದಂತೆ ಮಾಡುವ ಮಾನಸಿಕ ಸ್ಥಿತಿಯಿಂದ ಉಂಟಾಗುತ್ತದೆ.
•ಪಂಜಾಬ್ನಲ್ಲಿ ಒಂದು ಕಳವಳಕಾರಿ ಲಕ್ಷಣ ಕಂಡುಬರುತ್ತದೆ. ಇದು ಮಹಿಳೆಯರ ವಿರುದ್ಧದ ಅಪರಾಧ ದರ ಹಾಗೂ ಒಟ್ಟಾರೆ ಅಪರಾಧ ದರ ಇವೆರಡನ್ನೂ ಅತಿ ಕಡಿಮೆ ಇರುವ ರಾಜ್ಯಗಳಲ್ಲಿ ಒಂದಾದರೂ ಸಹ ವರದಕ್ಷಿಣೆ ಸಾವಿನ ದರ ಇಲ್ಲಿ ಬಹಳ ಹೆಚ್ಚು ವರದಕ್ಷಿಣೆ ಸಾವಿನ ದರ ಅತಿ ಹೆಚ್ಚಿರುವ 5 ರಾಜ್ಯಗಳೆಂದರೆ ದೆಹಲಿ 128, ಹರ್ಯಾನ 125, ಉತ್ತರಪ್ರದೇಶ 123, ಪಂಜಾಬ್ 75 ಮತ್ತು ರಾಜಸ್ತಾನ್ 73 ಪ್ರಾಯಶಃ ಇದು ಪಂಜಾಬ್ನಲ್ಲಿ ನಡೆಯುವ ಹೆಣ್ಣು ಭ್ರೂಣ ಹತ್ಯೆಯ ಅತಿ ಹೆಚ್ಚಿನ ದರಕ್ಕೆ ವಿವರಣೆ ನೀಡುತ್ತದೆ. ಎಲ್ಲ ಅಪರಾದ ದಾಖಲೆಗಳಲ್ಲಿ ಈ ವಿಷಯ ಹೊರತಕ್ಕೆ ಬಾರದಂತೆ ಯಶಸ್ವಿಯಾಗಿ ತಡೆಗಟ್ಟಲಾಗಿದ್ದರೂ ಸಹ ಎಲ್ಲ ಗುಂಪುಗಳಲ್ಲಿ ಹೆಣ್ಣು – ಗಂಡಿನ ದಾಮಾಶಯ ಅತಿ ಕಡಿಮೆ ತೋರುವುದರ ಮೂಲಕ ಅದು ವ್ಯಕ್ತವಾಗುತ್ತದೆ. 0-6 ವಯೋಮಿತಿಯಲ್ಲಿ ಈ ಕಡಿಮೆ ದಾಮಾಶಯ ಬಹಳ ಸ್ಪಷ್ಟವಾಗಿ ವ್ಯಕ್ತವಾಗಿದ್ದು, ಈ ಅಪರಾಧ ಪ್ರಮುಖವಾಗಿ ಎದ್ದು ತೋರುತ್ತದೆ.
•ಸಂಘಟಿತ ಅಪರಾಧಗಳು:
ಮಹಿಳೆಯರ ವಿರುದ್ಧ ಎಸಗಲಾಗುವ ಆರು ಪ್ರಮುಖ ಅಪರಾಧಗಳನ್ನು ದಾಖಲೆ ಇಡಲು ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆ (ಎನ್ಸಿಆರ್ಬಿ) ನಿಯಮ ಬದ್ಧ ಪ್ರಯತ್ನ ನಡೆಸುತ್ತಿರುವಂತೆಯೇ ಸಾಮಾನ್ಯ ಸಂಘಟಿತ ಅಪರಾಧಗಳ, ಅದರಲ್ಲೂ ನಿರ್ದಿಷ್ಟವಾಗಿ ಮಹಿಳೆಯರ ವಿರುದ್ಧದ ಸಂಘಟಿತ ಅಪರಾಧಗಳ ಅದರಲ್ಲೂ ನಿರ್ದಿಷ್ಟವಾಗಿ ಮಹಿಳೆಯರ ವಿರುದ್ಧದ ಸಂಘಟಿತ ಅಪರಾಧಿಗಳ ಬಗ್ಗೆ ದಾಖಲಿಸುವ & ಗಮನಿಸುವ ವ್ಯವಸ್ಥೆಯನ್ನು ಅದು ಕ್ಷಿಪ್ರವಾಗಿ ಸ್ಥಾಪಿಸಬೇಕಾದುದು ಇಲ್ಲಿ ಗಮನಾರ್ಹ, ಸಂಘಟಿತ ಗುಂಪು ಅಥವಾ ಸಾಮೂಹಿಕ ಅತ್ಯಾಚಾರ, ಸಂಘಟಿತ ವೇಶ್ಯಾವಾಟಿಕೆ & ಹೆಣ್ಣು ಮಕ್ಕಳ ಹಾಗೂ ಅವರ ಅವಯವಗಳ ಮಾರಾಟ ಇಂತಹ ಅಪರಾಧಗಳ ಪ್ರತ್ಯೇಕ ದಾಖಲಿಕೆ & ವಿಶ್ಲೇಷಣಾ ವ್ಯವಸ್ತೇ ಇನ್ನೂ ಆರಂಭವಾಗಿಲ್ಲ . ಈ ನ್ಯೂನತೆಯನ್ನು ಅತಿ ಕ್ಷಿಪ್ರವಾಗಿ ಸರಿಪಡಿಸಬೇಕಾಗಿದೆ.