ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನ
 
* ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನಕ್ಕೆ ಅವಕಾಶ ಮಾಡಿಕೊಡಲು ಕಾರಣವೆಂದರೆ 1947 ರಲ್ಲಿ ಮಾಡಿಕೊಂಡ ಒಪ್ಪಂದದ ಫಲ.
* ಭಾರತ 1947 ಅಗಸ್ಟ 15 ರಂದು ಸ್ವಾತಂತ್ರ್ಯ ಪಡೆದಾಗ ಜಮ್ಮು – ಕಾಶ್ಮೀರ ಪಾಕಿಸ್ತಾನ ಅಥವಾ ಭಾರತವನ್ನು ಸೇರದೆ ರಾಜ ಹರಿಸಿಂಗ್ ಸ್ವತಂತ್ರವಾಗಿ ಉಳಿದುಕೊಂಡ.
* ಪಾಕಿಸ್ತಾನ 1947 ಅಕ್ಟೋಬರ್ 20 ರಂದು ಜಮ್ಮು ಮತ್ತು ಕಾಶ್ಮೀರದ ಮೇಲೆ ಆಕ್ರಮಣ ಮಾಡಿತು. ಇದರಿಂದ ಹೆದರಿದ ರಾಜ ಹರಿಸಿಂಗ ಜಮ್ಮು ಮತ್ತು ಕಾಶ್ಮೀರವನ್ನು ರಕ್ಷಿಸುವಂತೆ ಭಾರತ ಸರ್ಕಾರವನ್ನು ವಿನಂತಿಸಿಕೊಂಡ.
* ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಒಕ್ಕೂಟಕ್ಕೆ ವಿಲೀನಗೊಳಿಸುವುದಾದರೆ ಮಾತ್ರ ರಕ್ಷಣೆ ನೀಡುವುದಾಗಿ ಆಗಿನ ಗ್ರಹಮಂತ್ರಿಯಾಗಿದ್ದ ಸರ್ಕಾರ್ ವಲ್ಲಭಬಾಯಿ ಪಟೇಲರ ಷರತ್ತಾಗಿತ್ತು. ಈ ಷರತ್ತಿಗೆ ರಾಜ ಹರಿಸಿಂಗ್ ಒಪ್ಪಿದ. ಬಳಿಕ ಭಾರತ ಸರ್ಕಾರ ಜಮ್ಮು ಮತ್ತು ಕಾಶ್ಮೀರವನ್ನು ರಕ್ಷಣೆ ಮಾಡಿತು.
* ನಂತರ ರಾಜ ಹರಿಸಿಂಗ, ಜಮ್ಮು ಮತ್ತು ಕಾಶ್ಮೀರವನ್ನು ಭಾರತದೊಂದಿಗೆ ಸೇರ್ಪಡೆ ಮಾಡುವ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಭಾರತ ಒಕ್ಕೂಟಕ್ಕೆ ಸೇರಿದ.
* ಈ ಸಂದರ್ಭದಲ್ಲಿ ನೆಹರು ಪ್ರಧಾನಿಯಾಗಿದ್ದರು. ಸರ್ಕಾರ್ ವಲ್ಲಭಬಾಯಿ ಪಟೇಲ್ ಗ್ರಹಮಂತ್ರಿ ಯಾಗಿದ್ದರು.
* ಭಾರತ ಸಂವಿಧಾನದ 21ನೇ ಭಾಗದಲ್ಲಿ 370 ನೇ ವಿಧಿಯು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದೆ.
* ಭಾರತ ಒಕ್ಕೂಟದಲ್ಲಿ ತನ್ನದೇ ಪ್ರತ್ಯೇಕ ಸಂವಿಧಾನ ಹೊಂದಿದ ಏಕೈಕ ರಾಜ್ಯ ಜಮ್ಮು ಮತ್ತು ಕಾಶ್ಮೀರ.
* ಜಮ್ಮು ಮತ್ತು ಕಾಶ್ಮೀರದ ಸಂವಿಧಾನವು 1957 ಜನವರಿ 26 ರಂದು ಜಾರಿಗೆ ಬಂದಿತು.
ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯಿಸದೆ ಇರುವ ಭಾರತ ಸಂವಿಧಾನದ ಕೆಲವು ವಿಧಿಗಳು
* ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಅನುಮತಿಯಿಲ್ಲದೆ ರಾಜ್ಯದ ಹೆಸರು, ಅಥವಾ ಪ್ರದೇಶ ಅಥವಾ ಎಲ್ಲೆಯನ್ನು ಬದಲಿಸುವಂತಿಲ್ಲ.
* ಶೇಷಾಧಿಕಾರವನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ನೀಡಲಾಗಿದೆ.
* ಮುನ್ನೆಚ್ಚರಿಕೆ ಬಂಧನ ಕಾಯ್ದೆ ರೂಪಿಸುವ ಅಧಿಕಾರ ಕೇಂದ್ರಕ್ಕೆ ಇರದೆ ರಾಜ್ಯ ಸರ್ಕಾರಕ್ಕೆ ಕೊಡಲಾಗಿದೆ.
* ಸಂವಿಧಾನದ 3ನೇ ಭಾಗವು (ಮೂಲಭೂತ ಹಕ್ಕುಗಳು) ಜಮ್ಮು ಮತ್ತು ಕಾಶ್ಮೀರಕ್ಕೆ ಸಂಪೂರ್ಣವಾಗಿ ಅನ್ವಯಿಸುವುದಿಲ್ಲ.
* ಆಸ್ತಿಯ ಹಕ್ಕು ಜಮ್ಮು ಮತ್ತು ಕಾಶ್ಮೀರದಲ್ಲಿ ಇನ್ನು ಮೂಲಭೂತ ಹಕ್ಕಾಗಿ ಉಳಿದಿದೆ.
* ರಾಜ್ಯ ನೀತಿ ನಿರ್ದೇಶಕ ತತ್ವಗಳು ಮತ್ತು ಮೂಲಭೂತ ಕರ್ತವ್ಯಗಳು ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯಿಸುವುದಿಲ್ಲ.
* 360, 360ಎ, 365 ವಿಧಿಗಳು ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯಿಸುವುದಿಲ್ಲ.
* 352 ನೇ ವಿಧಿ ಅನ್ವಯ ಘೋಷಿಸಲಾಗುವ ರಾಷ್ಟ್ರೀಯ ತುರ್ತು ಪರಿಸ್ಥಿತಿ ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಅನುಮತಿ ಇಲ್ಲದೆ ಈ ರಾಜ್ಯಕ್ಕೆ ಅನ್ವಯಿಸುವುದಿಲ್ಲ.
* ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಥಮ ಬಾರಿಗೆ 1986 ರಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು.
* ಜಮ್ಮು ಮತ್ತು ಕಾಶ್ಮೀರದಲ್ಲಿ ದ್ವಿಸದನ ಶಾಸಕಾಂಗಕ್ಕೆ ಅವಕಾಶ ಕಲ್ಪಿಸಲಾಗಿದೆ. ವಿಧಾನಸಭೆ 76 ಸದಸ್ಯರನ್ನು ಹೊಂದಿದ್ದರೆ, ವಿಧಾನಪರಿಷತ್ 36 ಸದಸ್ಯರನ್ನು ಹೊಂದಿದೆ.