ಸಂವಿಧಾನದ ಪ್ರಸ್ತಾವನೆ

 

ಪ್ರಸ್ತಾವನೆ


ಭಾರತ ಸಂವಿಧಾನವು ತನ್ನದೇ ಆದ ಪ್ರಸ್ತಾವನೆ ಹೊಂದಿದ್ದು, ಈ ಪ್ರಸ್ತಾವನೆ ಸಂವಿಧಾನದ ಸಂವಿಧಾನ ರಚನಾಕಾರರ ವಿಚಾರಧಾರೆಗಳನ್ನು ಒಳಗೊಂಡಿದೆ. ಸಂವಿಧಾನದ ರೂಪುರೇಷ, ಮೌಲ್ಯ, ಸಿದ್ಧಾಂತ ಮತ್ತು ಉದ್ದೇಶಗಳ ಸಾರಾಂಶವೇ ಸಂವಿಧಾನದ ಪ್ರಸ್ತಾವನೆ ಆಗಿದೆ. ಇದು ಜನತೆಯ ಧ್ಯೇಯಗಳನ್ನು ನಿರ್ಧರಿಸಿ ಘೋಷಿಸಿಕೊಂಡ ಆದರ್ಶ ತತ್ವವಾಗಿದೆ. ಈ ಪ್ರಸ್ತಾವನೆಯು ಡಿಸೆಂಬರ್ 13, 1946ರಂದು ಜವಹಾರ ಲಾಲ್ ನೆಹರುರವರು ಮಂಡಿಸಿದ ‘ಧ್ಯೇಯಗಳ ನಿರ್ಣಯ’ (Objective Resolution) ವನ್ನು ಸಂವಿಧಾನ ರಚನಾ ಸಭೆ ಜನವರಿ 22, 1947ರಂದು ಅಂಗೀಕರಿಸಿತು. ಈ ನಿರ್ಣಯವು ಭಾರತದ ಸ್ವಾತಂತ್ರ್ಯ, ಗಣರಾಜ್ಯ, ಪ್ರಜೆಗಳ ಪರಮಾಧಿಕಾರ, ಜನತೆಯ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ಒದಗಿಸುವುದಾಗಿ ತಿಳಿಸಿದೆ. ನಮ್ಮ ಸಂವಿಧಾನದ ಪೂರ್ವ ಪೀಠಿಕೆಯು ತುಂಬಾ ಅರ್ಥಗರ್ಭಿತವಾಗಿದ್ದು, ದೇಶದ ರಾಜಕೀಯ ವ್ಯವಸ್ಥೆಯ ಚಿತ್ರಣವನ್ನು ಚಿತ್ರಿಸುತ್ತದೆ.


* ಕೆ.ಎಂ. ಮುನ್ಷಿಯವರು ಪ್ರಸ್ತಾವನೆಯನ್ನು “ರಾಜಕೀಯ ಜಾತಕ” ಎಂದಿದ್ದಾರೆ.
* ಸುಪ್ರೀಂಕೋರ್ಟ 1960ರ ಬೇರುಬಾರಿ ಮೊಕದ್ದಮೆಯಲ್ಲಿ ಪ್ರಸ್ತಾವನೆಯು ಸಂವಿಧಾನದ ಭಾಗವಲ್ಲ ಎಂದು ಹೇಳಿತು.
* ಪ್ರಸ್ತಾವನೆಯು ಸಂವಿಧಾನದ ಭಾಗವೆಂದು 1973ರಲ್ಲಿ ಕೇಶವಾನಂದ ಭಾರತಿ ಮೊಕದ್ದಮೆಯಲ್ಲಿ ಸುಪ್ರೀಂಕೋರ್ಟ ತೀಪು ನೀಡಿತು.
* 1976 ರಲ್ಲಿ ಸಂವಿಧಾನಕ್ಕೆ 42 ನೇ ತಿದ್ದಪಡಿಯನ್ನು ತರುವ ಮೂಲಕ ಪ್ರಸ್ತಾವನೆಗೆ ಸಮಾಜವಾದಿ, ಜಾತ್ಯಾತೀತ ಎಂಬ ಪದಗಳನ್ನು ಸೇರಿಸಲಾಯಿತು.

ಪ್ರಸ್ತಾವನೆಯ ಪ್ರಮುಖ ತತ್ವಗಳು (ಉದ್ದೇಶಗಳು) :


* ಭಾರತದ ಪ್ರಜೆಗಳಾದ ನಾವು
* ಸಾರ್ವಭೌಮ ರಾಷ್ಟ್ರ
* ಸಮಾಜವಾದಿ ರಾಷ್ಟ್ರ
* ಜಾತ್ಯತೀತ ರಾಷ್ಟ್ರ
* ಗಣರಾಜ್ಯ
* ನ್ಯಾಯ
* ಸ್ವಾತಂತ್ರ್ಯ ಸಮಾನತೆ, ಭ್ರಾತೃತ್ವ, ಭಾವನೆ
* ಪ್ರಸ್ತಾವನೆಯನ್ನು ‘ಸಂವಿಧಾನದ ಹೃದಯ’ ಎಂದು ಕರೆಯಲಾಗುತ್ತದೆ.