ಕೃಷಿ ಭಾಗ್ಯಯೋಜನೆ:-
ಮಳೆಯಾದರಿತ ಪ್ರದೇಶದ ರೈತರ ಜೀವನೋಪಾಯ ಉತ್ತಮ ಪಡಿಸಲು ಕೃಷಿಭಾಗ್ಯ ಯೋಜನೆಯನ್ನು ಜಾರಿಗೆತರಲಾಗಿದೆ. ಸ್ವಾಭಾವಿಕ ಸಂಪನ್ಮೊಲ ಮಣ್ಣು & ನೀರಿನ ಸಂರಕ್ಷಣೆಯೊಂದಿಗೆ ಕೃಷಿ ಉತ್ಪಾದಕತೆ &ರೈತರು ಹಾಗೂ ಕೃಷಿ ಕಾರ್ಮಿಕರ ಆದಾಯ ಮಟ್ಟ ಹೆಚ್ಚಿಸುವುದು ಈ ಯೋಜನೆಯ ಮೂಲ ಉದ್ವೇಶ ರಾಜ್ಯದ 105 ಜಿಲ್ಲೆಗಳಲ್ಲಿ ಈ ಯೋಜನೆ ಅನುಷ್ಠಾನಗಳ್ಳಲಿದೆ. ಈ ಯೋಜನೆಯಡಿಯಲ್ಲಿ ಪಾಲಿಹೌಸ್ ನಿರ್ಮಾಣ ಹನಿನೀರಾವರಿ ಪದ್ದತಿ ತುಂತುರು ನೀರಾವರಿ ಪದ್ದತಿ ಮತ್ತಿತರ ಘಟಕಗಳ ಸ್ಥಾಪನೆಗೆ ಸಹಾಯಧನ ನೀಡಲಾಗುತ್ತದೆ. ಸಾಮಾನ್ಯ ವರ್ಗದ ರೈತರಿಗೆ ಶೇ 80 ರವರೆಗೆ & ಎಸ್‍ಸಿ/ಎಸ್‍ಟಿ ವರ್ಗದವರಿಗೆ ಶೇ ೯೦ವರೆಗೆ ಧನ ಸಹಾಯ ಸಿಗಲಿದೆ. ಈ ಬಾರಿಯ ಬಜೆಟ್ ನಲ್ಲಿ 600 ಕೋಟಿರೂಪಾಯಿಯನ್ನು ಮೀಸಲಿಟ್ಟಿದ್ದಾರೆ. ತೋಟಗಾರಿಕೆಯನ್ನು ಕೃಷಿ ಭಾಗ್ಯದಡಿಯಲ್ಲಿ ತಂದಿದ್ದುಅದಕ್ಕಾಗಿ ರಾಜ್ಯ ಸರ್ಕಾರ 200 ಕೋಟಿರೂ ಪ್ರತ್ಯೇಕವಾಗಿ ಮೀಸಲಿಟ್ಟಿದೆ.