ಗಣಕಯಂತ್ರ (Computer)
 
• ಗಣಕಯಂತ್ರ ಒಂದು ವಿದ್ಯುನ್ಮಾನ್ ಸಾಧನವಾಗಿದ್ದು ಮಾಹಿತಿಯನ್ನು ಶೇಖರಿಸಿ, ರಕ್ಷಿಸಿ, ಬಳಸಿ ಪ್ರಸಾರ ಮಾಡುವ ಸಾಧನವಾಗಿದೆ. ನಿಖರತೆ ಮತ್ತು ವೇಗಕ್ಕೆ ಗಣಕಯಂತ್ರ ಮಹತ್ವವಾಗಿದೆ. ಮಾಹಿತಿ ತಂತ್ರಜ್ಞಾನ ಪ್ರಮುಖವಾಗಿ ಗಣಕಯಂತ್ರ ಬಳಸಲಾಗುತ್ತಿದ್ದು ದೂರಸಂಪರ್ಕ ವಿವಧ ಸೇವೆಗಳು ಇಂಜಿನಿಯರಿಂಗ್ ವಾಣಿಜ್ಯ ಇನ್ನೂ ಅನೇಕ ಸೇವೆಗಳಲ್ಲಿ ಸಹಕಾರಿಯಾಗಿದೆ.
• ಕಂಪ್ಯೂಟರ್ ಎನ್ನುವುದು ದತ್ತಾಂಶದ (ಡೇಟಾ) ಸಂಸ್ಕರಣೆ ಹಾಗೂ ಸಂಗ್ರಹಣೆಯನ್ನು ಸುಲಭವಾಗಿಸುವ ವಿದ್ಯುನ್ಮಾನ ಸಾಧನ.
• ಗಣಿತದ ಲೆಕ್ಕಾಚಾರಗಳು ಹಾಗೂ ತಾರ್ಕಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ದತ್ತಾಂಶವನ್ನು ಸಂಸ್ಕರಿಸುವುದು ಹಾಗೂ ಆ ಮೂಲಕ ದೊರಕುವ ಮಾಹಿತಿಯನ್ನು ನಂತರದ ಬಳಕೆಗಾಗಿ ಉಳಿಸಿಡಲು ಸಾಧ್ಯವಾಗಿಸುವುದು ಕಂಪ್ಯೂಟರಿನ ವೈಶಿಷ್ಟ್ಯ.
ಬಳಕೆದಾರರ ಅಯ್ಕೆಗೆ ಅನುಗುಣವಾಗಿ ಇಂತಹ ನಿರ್ದೇಶನಗಳನ್ನು ನೀಡುವುದು ತಂತ್ರಾಂಶದ (ಸಾಫ್ಟ್ವೇರ್) ಕೆಲಸ.
• ಬಳಕೆದಾರ ಕಂಪ್ಯೂಟರನ್ನು ಬಳಸಲು ನೆರವಾಗುವುದು, ದತ್ತಾಂಶ ಸಂಸ್ಕರಣೆಯಲ್ಲಿ ತಂತ್ರಾಂಶ ನೀಡುವ ನಿರ್ದೇಶನಗಳನ್ನು ಪಾಲಿಸುವುದೆಲ್ಲ ಯಂತ್ರಾಂಶದ (ಹಾರ್ಡ್ವೇರ್) ಜವಾಬ್ದಾರಿ. ಕಂಪ್ಯೂಟರ್ನಲ್ಲಿ ದ್ವಿಮಾನ ಪದ್ಧತಿಯ (ಬೈನರಿ ಪದ್ಧತಿ) ಯಂತ್ರ ಭಾಷೆಯನ್ನು ಬಳಸಲಾಗಿದ್ದು, ಅದು ನಾವು ನೀಡುವ ಎಲ್ಲ ಮಾಹಿತಿಗಳನ್ನು, ಅಂದರೆ ಅಕ್ಷರಗಳು, ಅಂಕೆಗಳು, ಚಿತ್ರಗಳು, ವಿರಾಮ ಚಿಹ್ನೆಗಳು ಹಾಗೂ ಖಾಲಿ ಸ್ಥಾನ, ದ್ವಿಮಾನ ಪದ್ಧತಿಯಲ್ಲಿ ಸ್ವೀಕರಿಸಿ ಅರ್ಥೈಸಿಕೊಳ್ಳುತ್ತದೆ.
• ಮೊದಲ ಕಂಪ್ಯೂಟರುಗಳನ್ನು ರೂಪಿಸುವಲ್ಲಿ ಚಾರ್ಲ್ಸ್ ಬ್ಯಾಬೇಜ್, ಅಲನ್ ಟ್ಯೂರಿಂಗ್, ಜಾನ್ ನ್ಯೂಮನ್ ಮೊದಲಾದವರು ಮಹತ್ವದ ಪಾತ್ರ ವಹಿಸಿದ್ದರು.
• ಡಿಫರೆನ್ಸ್ ಇಂಜಿನ್ ಹಾಗೂ ಅನಲಿಟಿಕಲ್ ಇಂಜಿನ್ ಎಂಬ ಹೆಸರಿನ ಕಂಪ್ಯೂಟರುಗಳನ್ನು ವಿನ್ಯಾಸಗೊಳಿಸಿದ ಬ್ರಿಟನ್ನಿನ ವಿಜ್ಞಾನಿ ಚಾರ್ಲ್ಸ್ ಬ್ಯಾಬೇಜ್ನನ್ನು ಕಂಪ್ಯೂಟರ್ ಪಿತಾಮಹ ಎಂದು ಗುರುತಿಸಲಾಗುತ್ತದೆ. ಆಧುನಿಕ ಕಂಪ್ಯೂಟರುಗಳ ಬಗ್ಗೆ ಮೊದಲ ಕಲ್ಪನೆ ಈತನದು.
ಗಣಕಯಂತ್ರಗಳ ಪೀಳಿಗೆಗಳು
1) 1940-1956- ವಾಕ್ಯೂಂ ಟೂಬಗಳು ಉದಾ : ಯಾನಿವಾಕ & ಐನಿಯಾಕ ಗಣಕಯಂತ್ರಗಳು
2) 1956-1963 – ಟ್ರಾನ್ಸಿಸ್ಟರ್ ಗಣಕಯಂತ್ರಗಳು
3) 1964-1971 – ಇಂಟಿಗ್ರೇಟೆಡ್ ಸರ್ಕಿಟ್ಗಳು(IC). ಇವುಗಳಲ್ಲಿ ಸಿಲಿಕಾನ್ ಚಿಪಗಳನ್ನು ಅಳವಡಿಸಲಾಗುತ್ತದೆ.
4) 1971- ಇದುವರೆಗೆ – ಮೈಕ್ರೊಪ್ರೊಸೆಸ್ಸರಗಳು ವಿ.ಎಲ್.ಎಸ್.ಐ ತಂತ್ರಜ್ಞಾನ ಬಳಕೆ ಮಾಡಲಾಗಿದೆ. ಗೃಹ ಬಳಕೆಯಲ್ಲಿ ಉಪಯೋಗಿಸಿದ ಪ್ರಥಮ ಕಂಪ್ಯೂಟರ್ ಐಬಿಎಮ್.
5) ಪ್ರಸ್ತುತ : ಕೃತಕ ಇಂಟೆಲಿಜೆನ್ಸ. ಉದಾ : ರೊಬೊಟ್ಗಳು
ಸೂಪರ್ ಕಂಪ್ಯೂಟರ್ ಗಳು
• ಅತಿ ಹೆಚ್ಚು ಸಂಸ್ಕರಣಾ ಸಾಮರ್ಥ್ಯ ಹೊಂದಿರುವ ಹೆಗ್ಗಳಿಕೆ ಈ ಬಗೆಯ ಕಂಪ್ಯೂಟರುಗಳದು.
• ಸಾಮಾನ್ಯ ಕಂಪ್ಯೂಟರಗಳಿಗೆ ಹೋಲಿಸಿದಾಗ ಅತಿ ಹೆಚ್ಚು ವೇಗ ಹಾಗೂ ಪರಿಣಾಮಕಾರಿಯಾಗಿ ಸಮೀಕರಿಸುವ ಸಾಮಥ್ಯ್ರ್ಯ ಹೊಂದಿರುವ ಗಣಕಯಂತ್ರಗಳನ್ನು ಸೂಪರ್ ಕಂಪ್ಯೂಟರ್ ಎಂದು ಕರೆಯಲಾಗುತ್ತದೆ.
• ಇ ಕಂಪ್ಯೂಟರ್ಗಳಲ್ಲಿ ಗ್ಯಾಲಿಯಂ ಅರ್ಸೆನೈಡದಿಂದ ತಯಾರಿಸುವ ಚಿಪಗಳ ಬಳಕೆಯಗುವುದರಿಂದ ಅತಿ ವೇಗವಾಗಿ ಕಾರ್ಯನಿರ್ವಹಿಸುವುದು.
• ಪ್ಯಾರಲಲ್ ಪ್ರೋಸೆಸಿಂಗ್ ತಂತ್ರಜ್ಞಾನ ಹೊಂದಿರುವುದರಿಂದ ಅತಿವೇಗ ಅನೇಕ ಕಾರ್ಯಗಳನ್ನು ಒಟ್ಟಿಗೆ ಮಾಡುವದು.
• ಇವು ಅತ್ಯಂತ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಪ್ರಮಾಣದ ಲೆಕ್ಕಾಚಾರಗಳನ್ನು ಕೈಗೊಳ್ಳಬಲ್ಲವು.
• ಅತ್ಯಂತ ಕ್ಲಿಷ್ಟ ಲೆಕ್ಕಾಚಾರಗಳನ್ನು ಬಳಸುವ ಹವಾಮಾನ ಮುನ್ಸೂಚನೆ, ವೈಜ್ಞಾನಿಕ ಸಂಶೋಧನೆ ಮುಂತಾದ ಕ್ಷೇತ್ರಗಳಲ್ಲಿ ಇವನ್ನು ಬಳಸಲಾಗುತ್ತದೆ.
ಭಾರತದಲ್ಲಿ ಸೂಪರ ಕಂಪ್ಯೂಟರ್ಗಳು.
* ಡಿ.ಆರ್.ಡಿ.ಓ ಅಂಗ ಸಂಸ್ಥೆಯಾದ ಅನುರಾಗ ವಿಜ್ಞಾನಿಗಳು ಪಿ.ಎ.ಸಿ.ಇ ಎಂಬ ಸೂಪರ ಕಂಪ್ಯೂಟರ್ ಅಭಿವೃದ್ಧಿ ಪಡಿಸಿದರು.
* 1980 ರಲ್ಲಿ ಅಮೇರಿಕ ತನ್ನ ಕ್ರೇ-ಎಕ್ಸ ಸುಪರ್ ಕಂಪ್ಯೂಟರ್ ಕೊಡಲು ನಿರಾಕರಿಸಿತ್ತು.
* ಸಿಡ್ಯಾಕ್ ಸಂಸ್ಥೆ 1991ರಲ್ಲಿ ಪರಮ 8000 ಸೂಪರ ಕಂಪ್ಯೂಟರ ಅಭಿವೃದ್ಧಿ ಪಡಿಸಿತು. ಇದರ ವೇಗ 1 ಗಿಗಾ ಪ್ಲಾಫ್.
* 1998 ರಲ್ಲಿ ಪರಮ 1000 ಸುಪರ್ ಕಂಪ್ಯೂಟರ್ ಸಿದ್ದಪಡಿಸಲಾಯಿತು. ಇದರ ವೇಗದ ಕ್ಷಮತೆ ಟೆರಾ ಪ್ಲಾಪ್ ವರೆಗ ಹೆಚ್ಚಿಸಬಹುದಾಗಿತ್ತು.
* 2003ರಲ್ಲಿ ಪರಮ ಪದ್ಮ ನಿಖರವಾದ ಟೆರಾಪ್ಲಾಫ್ ಸೂಪರ ಕಂಪ್ಯೂಟರ ತಯಾರಿಸಿತು.
* ಬಾರ್ಕ ಸಂಸ್ಥೆಯಿಂದ ಅನುಪಮ್ ಸರಣಿ ಕಂಪ್ಯೂಟರ್ಗಳು.
* 2013 ರಲ್ಲಿ ಪರಮ್ ಯುವ ತಯಾರಿಸಲಾಯಿತು.
* 2016 ರಲ್ಲಿ ಎಪ್ರೀಲ್ನಲ್ಲಿ ಪರಮ್ ಶಾವಕ.
* 2016 ರಲ್ಲಿ ಅಭಿವೃದ್ಧಿ ಪಡಿಸಲಾದ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಸೂಪರ ಕಂಪ್ಯುಟರ್ ಎಂದರೆ “ಪರಮ್ ಇಶಾನ್”
ವಿಶ್ವದ ಇತರೇ ಸುಪರ ಕಂಪ್ಯೂಟರ್‍ಗಳು
1. ಜಾಗ್ವಾರ್ – ಅಮೇರಿಕಾ
2. ನೆಬುಲೆ – ಚೀನಾ
3. ಜುಗಿನ್ –ಜರ್ಮನಿ
4. ಶಾಹಿನ್ – ಸೌದಿ ಅರೇಬಿಯಾ
5. ಹುಜಲ್ ಹೆನ್ – ಯುರೋಪ್
6. ಪಿಜ್ ಡೈಂಟ್ – ಸ್ವಿಝರಲ್ಯಾಂಡ್
7. ಟ್ರಿನಿಟಿ – ಅಮೇರಿಕಾ
8. ಕೆ. ಕಂಪ್ಯೂಟರ್ – ಜಪಾನ್
9. ತಿಯಾನೆ2 – ಚೀನಾ
10. ಸನ್ವೇ ತೈಹುಲೈಟ್ – ಚೀನಾ (ಜಗತ್ತಿನ ಅತಿವೇಗದ ಸೂಪರ ಕಂಪ್ಯೂಟರ್)
ಕಂಪ್ಯೂಟರ್ ಉಪಯೋಗಗಳು
• ಕಂಪ್ಯೂಟರ್ನಲ್ಲಿ ದಾಖಲೆಗಳನ್ನು, ಮಾಹಿತಿಗಳನ್ನು, ಚಿತ್ರಗಳನ್ನು, ಇ-ಬುಕ್ಗಳನ್ನು, ಹಾಡುಗಳನ್ನು, ಚಲನಚಿತ್ರಗಳನ್ನು ಶೇಖರಿಸಿ ಇಡಬಹುದು.
• ವಿದ್ಯಾರ್ಥಿಗಳು, ಸಂಶೋಧಕರು ಪ್ರೊಜೆಕ್ಟ್ ಸಿದ್ಧಗೊಳಿಸಲು, ಅಧ್ಯಯನ ಮಾಡಲು ಕಂಪ್ಯೂಟರ್ ಅಪ್ಲಿಕೇಶನ್ಗಳನ್ನು ಬಳಸಿಕೊಳ್ಳಬಹುದು.
• ಎಂಎಸ್ ವರ್ಡ್ನಂತಹ ಅಪ್ಲಿಕೇಶನ್ಗಳಲ್ಲಿ ಬರೆಯುವುದು, ತಿದ್ದುವುದು, ಹೊಂದಿಸುವುದು ಅತ್ಯಂತ ಸುಲಭವಾಗಿದ್ದು, ಕೈಬರಹಕ್ಕಿಂತ ಇದು ಅದು ಅತ್ಯಂತ ಸುಲಭ ಮತ್ತು ವೇಗದ್ದಾಗಿರುತ್ತದೆ.
• ಕಠಿಣವಾದ ಲೆಕ್ಕಗಳನ್ನು ಕಂಪ್ಯೂಟರ್ ಬಳಸಿ ಮಾಡುವುದು ಅತ್ಯಂತ ಸುಲಭವಾಗುತ್ತದೆ. ಕಲಿಕೆಯ ದೃಷ್ಟಿಯಿಂದ ಕಂಪ್ಯೂಟರ್ ಬಳಕೆ ಅತ್ಯಂತ ಪ್ರಯೋಜನಕಾರಿ.
• ಅಂತರಜಾಲವನ್ನು ಬಳಸಿ ಅಗತ್ಯ ಮಾಹಿತಿಗಳನ್ನು ಹುಡುಕಬಹುದು ಮತ್ತು ಅಂತರಜಾಲದಿಂದ ಪಡೆದ ಮಾಹಿತಿಗಳನ್ನು ಕಂಪ್ಯೂಟರ್ ಹಾರ್ಡ್ ಡ್ರೈವ್ಗಳಲ್ಲಿ ಶೇಖರಿಸಿ ಇಡಬಹುದು.
• ಇಮೇಲ್ ಮಾಡಲು, ಸಾಮಾಜಿಕ ಸಂವಹನ ನಡೆಸಲು ಬಳಸಬಹುದಾಗಿದೆ. ಕಂಪ್ಯೂಟರ್ನಲ್ಲಿ ಬರೆದದ್ದನ್ನು, ಇಂಟರ್ನೆಟ್ನಿಂದ ಡೌನ್ಲೋಡ್ ಮಾಡಿದ್ದನ್ನು ಬಾಹ್ಯ ಹಾರ್ಡ್ಡಿಸ್ಕ್ಗಳಾದ ಸಿಡಿ, ಡಿವಿಡಿ, ಪೆನ್ಡ್ರೈವ್ ಮುಂತಾದವುಗಳ ಮುಖಾಂತರ ಇತರರೊಂದಿಗೆ ಹಂಚಿಕೊಳ್ಳುವುದು ಅಥವಾ ಬೇರೊಂದು ಕಂಪ್ಯೂಟರ್ಗೆ ವರ್ಗಾಯಿಸುವುದು ಎಲ್ಲವೂ ಸುಲಭ.
• ಒಮ್ಮೆ ಕಂಪ್ಯೂಟರ್ ಮತ್ತು ಅಂತರಜಾಲದ ಬಳಕೆಯ ಜಗತ್ತಿಗೆ ತೆರೆದುಕೊಂಡರೆ, ಅದು ಅಸಂಖ್ಯ ಸಾಧ್ಯತೆಗಳನ್ನು ಒದಗಿಸುತ್ತದೆ, ಮತ್ತು ಕಲಿಕೆ ಅತ್ಯಂತ ಆಸಕ್ತಿದಾಯಕ ಮತ್ತು ಆನಂದದಾಯಕವಾದದ್ದಾಗಿರುತ್ತದೆ.