ಇಸ್ರೋದ ಮೈಲುಗಲ್ಲುಗಳು (ISRO)

 

• 1969: ಇಸ್ರೋದ ಸ್ಥಾಪನೆ
• 1972: ಅಂತರಿಕ್ಷ ಇಲಾಖೆಯ ಸ್ಥಾಪನೆ
• 1975: ಆರ್ಯಭಟ ಉಪಗ್ರಹದ ಉಡಾವಣೆ
• 1979: ಪ್ರಾಯೋಗಿಕ ಉಪಗ್ರಹ ಭಾಸ್ಕರ-೧ ರ ಉಡಾವಣೆ. ಎಸ್ಎಲ್ವಿ-೩ ರಾಕೆಟ್ನ ಮೂಲಕ ರೋಹಿಣಿ ಉಪಗ್ರಹದ ಉಡಾವಣೆ ವಿಫಲ
• 1980: ರೋಹಿಣಿ ಉಪಗ್ರಹದ ಯಶಸ್ವಿ ಉಡಾವಣೆ
• 1981: ಆಪಲ್ ಮತ್ತು ಭಾಸ್ಕರ-೨ ಉಪಗ್ರಹಗಳ ಉಡಾವಣೆ
• 1982: ಇನ್ಸಾಟ್ ಸರಣಿಯ ಮೊದಲ ಉಪಗ್ರಹ ಇನ್ಸಾಟ್-೧ಎ ಉಡಾವಣೆ
• 1984: ಇಂಡೋ-ರಷ್ಯನ್ ಅಂತರಿಕ್ಷ ಯಾನ. ರಾಕೇಶ್ ಶರ್ಮಾ ಅಂತರಿಕ್ಷಕ್ಕೆ ಸಂಚರಿಸಿದ ಮೊದಲ ಭಾರತೀಯರಾದರು
• 1992: ಇನ್ಸಾಟ್ ಸರಣಿಯ ಇನ್ಸಾಟ್-೨ಎ, ಸಂಪೂರ್ಣವಾಗಿ ಭಾರತದಲ್ಲಿಯೇ ನಿರ್ಮಿತ ಮೊದಲ ಉಪಗ್ರಹ) ಉಡಾವಣೆ
• 1993: ಪಿಎಸ್ಎಲ್ವಿ ರಾಕೆಟ್ ನ ಉಡಾವಣೆ ವಿಫಲ
• 1994: ಪಿಎಸ್ಎಲ್ವಿ ರಾಕೆಟ್ ನ ಎರಡನೆಯ ಉಡಾವಣೆ ಯಶಸ್ವಿ (ಐಆರ್ಎಸ್-ಪಿ೨ ಉಪಗ್ರಹವನ್ನು ಹೊತ್ತು)
• 2004: ಶೈಕ್ಷಣಿಕ ಉಪಗ್ರಹ ಎಡುಸ್ಯಾಟ್ ಅನ್ನು ಹೊತ್ತ ಜಿಎಸ್ಎಲ್ವಿ ರಾಕೆಟ್ ನ ಮೊದಲ ಉಡಾವಣೆ ಯಶಸ್ವಿ
• 2012:ನವೆಂಬರ್ ೫ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಧ್ರುವಗಾಮಿ ರಾಕೆಟ್ ಮೂಲಕ ‘ಮಂಗಳಯಾನ’ (ಅಂತರಿಕ್ಷ ನೌಕೆ)ವನ್ನು ಉಡಾವಣೆ ಮಾಡಲಾಯಿತು.
• 2014 : 24 ಸೆಪ್ಟೆಂಬರ್ 2014 ರಂದು ಮಂಗಳ ಗ್ರಹ ಅಧ್ಯಯನಕ್ಕಾಗಿ ಎಂ.ಓ.ಎಂ ( ಮಾರ್ಸ್ ಒರ್ಬಿಟರ್ ಮಿಷನ್) ಬಿಡಲಾಯಿತು. ಇದರೊಂದಿಗೆ ಭಾರತವು ಮಂಗಳಯಾನದಲ್ಲಿ ಪ್ರಥಮ ಪ್ರಯೋಗದಲ್ಲಿ ಯಶಸ್ವಿಯಾದ ದೇಶ ಎಂದು ಹೆಗ್ಗಳಿಕೆಗೆ ಪತ್ರವಾಯಿತು.
• 2015 : ಐ.ಆರ್.ಎನ್.ಎಸ್.ಎಸ್.-1ಡಿ ಉಪಗ್ರಹ ಪಿ.ಎಸ್.ಎಲ್.ವಿ-(2) ಉಡಾವಣಾ ವಾಹನದಿಂದ ಉಡಾವಣೆ.
• ಜುಲೈ 10. 2015: ಪಿ.ಎಸ್.ಎಲ್.ವಿ ಅ-28 ಉಡಾವಣಾ ವಾಹನದಿಂದ ಡಿಎಮ್ಸಿ3 ಉಪಗ್ರಹ ಉಡಾವಣೆ, ಇಂಗ್ಲೆಂಡಿನ್ ಭೂ ವಿಕ್ಷಣಾ ಉಪಗ್ರಹಗಳಾಗಿದ್ದು ಮೂರು ಉಪಗ್ರಹಗಳಾಗಿವೆ.
• ಅಗಷ್ಟ 27. 2015 ಜಿ.ಎಸ್.ಎಲ್.ವಿ ಡಿ6 ಉಡಾವಣಾ ವಾಹನದಿಂದ ಜಿ-ಸ್ಯಾಟ್6 ಉಡಾವಣೆ.
• ಸಪ್ಟಂಬರ್ 28. 2015 : ಪಿ.ಎಸ್.ಎಲ್.ವಿ ಸಿ-30 ಉಡಾವಣಾ ವಾಹನದಿಂದ ಅಸ್ಟ್ರೋಸ್ಯಾಟ್ ಉಡಾವಣೆ ಇದರೊಂದಿಗೆ ಇಂಡೋನೆಷಿಯಾದ ಲಪಾನ್-ಎ2, ಕೆನಡಾದ ಎನ್.ಎಲ್.ಎಸ್-14 ಹಾಗೂ ಅಮೇರಿಕಾದ ಲೇಪುರ್ ಉಪಗ್ರಹಗಳನ್ನು ಉಡಾವಣೆ ಮಾಡಲಾಯಿತು.
• ನವ್ಹೆಂಬರ್ 11. 2015 : ಜಿಸ್ಯಾಟ್-15 ಉಡಾವಣೆ
• ಡಿಸೆಂಬರ್ 16. 2015 :ಪಿ.ಎಸ್.ಎಲ್.ವಿ.-ಸಿ 29 ಉಡಾವಣೆ ವಾಹನದಿಂದ ಟೆಲಿಯೋಸ್ -1 ಉಡಾವಣೆ ಇದೂ ಸಿಂಗಾಪುರದ ಪ್ರಥಮ ವಾಣಿಜ್ಯ ಭೂವಿಕ್ಷಣಾ ಉಪಗ್ರಹವಾಗಿದ್ದು ಇಸ್ರೋ ಉಡಾವಣೆ ಮಾಡಿದೆ.
• ಜನೇವರಿ 20. 2016: ಪಿ.ಎಸ್.ಎಲ್.ವಿ. ಸಿ-31 ಉಡಾವಣಾ ವಾಹನದಿಂದ ಐ.ಆರ್.ಎನ್.ಎಸ್.ಎಸ್.-1ಇ ಉಡಾವಣೆ.
• ಮಾರ್ಚ 10. 2016 ; ಪಿ.ಎಸ್.ಎಲ್.ವಿ. ಸಿ-32 ಉಡಾವಣಾ ವಾಹನದಿಂದ ಐ.ಆರ್.ಎನ್.ಎಸ್.ಎಸ್.-1ಎಫ್ ಉಡಾವಣೆ.
• ಎಪ್ರೀಲ್ 28. 2016 : ಪಿ.ಎಸ್.ಎಲ್.ವಿ -ಸಿ33 ಯಿಂದ ಐ.ಆರ್.ಎನ್.ಎಸ್.ಎಸ್.-1ಜಿ ಉಡಾವಣೆ.
• ಮೇ 23. 2016 ಮರುಬಳಕೆ ಉಡಾವಣಾ ವಾಹನ ತಂತ್ರಜ್ಞಾನದ ಉಡಾವಣೆ.
• ಜೂನ್ 22. 2016 : ಪಿ.ಎಸ್.ಎಲ್.ವಿ- ಸಿ-34 ದಿಂದ ಕಾರ್ಟೊಸ್ಯಾಟ್-2 ಸರಣಿ ಉಪಗ್ರಹ ಉಡಾವಣೆ.
• ಸೆಪ್ಟೆಂಬರ್ 26. 2016 : ಪಿ.ಎಸ್.ಎಲ್.ವಿ - ಸಿ-35 ಉಡಾವಣಾ ವಾಹನದಿಂದ ಸ್ಕಾಟ್ಸ್ಯಾಟ್ -1 ಉಡಾವಣೆ ಇದೊಂದು ಚಿಕ್ಕ ಉಪಗ್ರಹವಾಗಿದ್ದು ಹವಾಮಾನ ಮುನ್ಸೂಚನೆ, ಚಂಡಮಾರುತ ಮುನ್ಸೂಚನೆ, ಹಾಗೂ ಟ್ರಾಕಿಂಗ್ ಸೇವೆಗಾಗಿ ಬಳಸಲಾಗುತ್ತದೆ.
• ಅಕ್ಟೋಂಬರ್ 6. 2016 : ಜಿಸ್ಯಾಟ-18 ಉಪಗ್ರಹವನ್ನು ಪ್ರೆಂಚ್ ಗಯಾನಾದಿಂದ ಏರಿಯನ್ -5 ನೌಕೆಯಿಂದ ಉಡಾಯಿಸಲಾಯಿತು. ಇದೊಂದು ದೂರಸಂಪರ್ಕ ಉಪಗ್ರಹವಾಗಿದೆ.
• ಡಿಸೆಂಬರ್ 7. 2016 : ಪಿ.ಎಸ್.ಎಲ್.ವಿ. ಸಿ-36 ಉಡಾವಣಾ ವಾಹನದಿಂದ ರಿಸೊರ್ಸಸ್ಯಾಟ್-2ಎ ಉಪಗ್ರಹ ಉಡಾವಣೆ.ಇದೊಂದು ದೂರಸಂವೇದಿ ಉಪಗ್ರಹವಾಗಿದ್ದು ಸಂಪನ್ಮೂಲ ವಿಕ್ಷಣೆ ಹಾಗೂ ಮೇಲ್ವಿಚಾರಣೆ ಪ್ರಮುಖ ಉದ್ದೇಶವಾಗಿದೆ.
• ಫೆಬ್ರುವರಿ 15 , 2017 : ಪಿ.ಎಸ್.ಎಲ್.ವಿ. ಸಿ 37 ಉಡಾವಣಾ ವಾಹನದಿಂದ ಒಂದೇ ಬಾರಿಗೆ 104 ಉಪಗ್ರಹಗಳ ಉಡಾವಣೆ.ಇಸ್ರೋದಿಂದ ವಿಶ್ವ ಧಾಖಲೆ.
• 29 ಜೂನ್, 2017 : ಜಿಸ್ಯಾಟ್–17 ದೂರಸಂಪರ್ಕ ಉಪಗ್ರಹವನ್ನು ಏರಿಯಾನ್–5 ವಿಎ–238 ಮೂಲಕ, ಕೌರೌನ ಗಯಾನಾ ಉಡಾವಣಾ ಕೇಂದ್ರದಿಂದ ಉಡಾವಣೆ. ಹವಾಮಾನ ದತ್ತಾಂಶ, ಉಪಗ್ರಹ ಆಧಾರಿತ ಹುಡುಕಾಟದ ಸೇವೆಗೆ ಇದು ಬಳಕೆ ಆಗಲಿದೆ ಎಂದು ಇಸ್ರೊ ಹೇಳಿದೆ