ಉಪರಾಷ್ಟ್ರಪತಿ
 
* ಬಿ.ಎನ್ ರಾವ್ ಸಂವಿಧಾನ ರಚನಾ ಸಭೆಯಲ್ಲಿ ಉಪರಾಷ್ಟ್ರಪತಿಯ ಸ್ಥಾನ ಇರಬೇಕೆಂದು ಶಿಫಾರಸು ಮಾಡಿದರು.
* ಸಂವಿಧಾನದ 63 ನೇ ವಿಧಿಯಲ್ಲಿ ಉಪರಾಷ್ಟ್ರಪತಿಯ ಬಗ್ಗೆ ಪ್ರಸ್ತಾಪಿಸಲಾಗಿದೆ.
ಅರ್ಹತೆಗಳು
* ಭಾರತದ ಪ್ರಜೆಯಾಗಿರಬೇಕು
* 35 ವರ್ಷ ವಯಸ್ಸಾಗಿರಬೇಕು
* ಲಾಭದಾಯಕ ಹುದ್ದೆಯಲ್ಲಿರಬಾರದು (ಕೇಂದ್ರ – ರಾಜ್ಯ ಸರ್ಕಾರದ)
ಪ್ರಮಾಣವಚನ
* ರಾಷ್ಟ್ರಪತಿ- ಉಪರಾಷ್ಟ್ರಪತಿಗೆ ಪ್ರಮಾಣ ವಚನ ಬೋಧಿಸುತ್ತಾರೆ.
* ರಾಷ್ಟ್ರದ ಅತ್ಯುನ್ನತ ಹುದ್ದೆಗಳಲ್ಲಿ ಇವರದು ದ್ವಿತೀಯ ಸ್ಥಾನ (1957 ರಲ್ಲಿ ನೆಹರು ನಿಗದಿಪಡಿಸಿದರು)
* ಉಪರಾಷ್ಟ್ರಪತಿಯ ಅಧಿಕಾರಾವಧಿ 5 ವರ್ಷ
* ಉಪರಾಷ್ಟ್ರಪತಿ ಇಚ್ಚಿಸಿದಾಗ ತಮ್ಮ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಗೆ ಸಲ್ಲಿಸಬಹುದು.
* ಸಂವಿಧಾನದ 66ನೇ ವಿಧಿ ಅನ್ವಯ ಸಂಸತ್ತಿನ ಉಭಯ ಸದನಗಳ ಎಲ್ಲಾ ಚುನಾಯಿತ ಸದಸ್ಯರು ಉಪರಾಷ್ಟ್ರಪತಿಯನ್ನು ಚುನಾಯಿಸುತ್ತಾರೆ. (ರಹಸ್ಯ ಮತದಾನದ, ಏಕಮತ ವರ್ಗಾಯಿಸುವ ಪ್ರಮಾಣಾನುಗುಣ ಪದ್ದತಿ ಮೂಲಕ) ನಾಮಕರಣಗೊಂಡ ಸದಸ್ಯರು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಭಾಗಹಿಸುತ್ತಾರೆ.
* ಉಪರಾಷ್ಟ್ರಪತಿ, ರಾಷ್ಟ್ರಪತಿಗೆ ನಿಗಧಿಪಡಿಸಿರುವ ವೇತನ ಭತ್ಯೆ ಪಡೆಯುತ್ತಾರೆ.
* ಉಪರಾಷ್ಟ್ರಪತಿಯು ರಾಜ್ಯಸಭೆಯ ಪದನಿಮಿತ್ತ ಸಭಾಪತಿಯಾಗಿ ಕಾರ್ಯನಿರ್ವಹಿಸುತ್ತಾರೆ. (64ನೇ ವಿಧಿ)
* ರಾಷ್ಟ್ರಪತಿ ರಾಜೀನಾಮೆ ನೀಡಿದರೆ ಅಥವಾ ನಿಧನರಾದರೆ ಅಥವಾ ಪದಚ್ಯುತಿಗೊಂಡರೆ ಅಥವಾ ಅನಾರೋಗ್ಯದಿಂದ ರಾಷ್ಟ್ರಪತಿ ಸ್ಥಾನ ತೆರವಾದಾಗ ಉಪರಾಷ್ಟ್ರಪತಿ ಆ ಸ್ಥಾನವನ್ನು ಅಲಂಕರಿಸಿ ಕಾರ್ಯನಿರ್ವಹಿಸುತ್ತಾರೆ. ಈ ಸಮಯದಲ್ಲಿ ಹಂಗಾಮಿ ರಾಷ್ಟ್ರಪತಿ ರಾಜ್ಯಸಭೆಯ ಅಧ್ಯಕ್ಷತೆ ವಹಿಸುವಂತಿಲ್ಲ (65ನೇ ವಿಧಿ)
* 67(ಬಿ) ವಿಧಿಯ ಪ್ರಕಾರ ರಾಜ್ಯಸಭೆಯ ಬಹುಮತದ ನಿರ್ಣಯದ ನಂತರ ಲೋಕಸಭೆ ಅದನ್ನು ಒಪ್ಪಿದರೆ ಉಪರಾಷ್ಟ್ರಪತಿಯನ್ನು ಅಧಿಕಾರದಿಂದ ತೆಗೆಯಲಾಗುತ್ತದೆ.
* ಭಾರತದ ಉಪರಾಷ್ಟ್ರಪತಿ ಹುದ್ದೆಯನ್ನು ಅಮೇರಿಕಾದ ಉಪಾಧ್ಯಕ್ಷರ ಹುದ್ದೆಗೆ ಹೋಲಿಸಲಾಗಿದೆ.