ಕಾಂತತ್ವ (Magnetism)

 

• ಕಾಂತ ಎಂದರೆ ಆಕರ್ಷಣೆ ಎಂದರ್ಥ.
• ಮೈನರ್ನಲ್ಲಿ ಮೆಗ್ನಿಷಿಯಾ ಎಂಬ ಸ್ಥಳದಲ್ಲಿ ಮ್ಯಾಗ್ನಸ್ ಎಂಬ ಕುರಿಗಾಹಿ ಕಂಡು ಹಿಡಿದಿದ್ದಾನೆ. ಆದ್ದರಿ0ದ ಮ್ಯಾಗ್ನಟ ಎಂಬ ಹೆಸರು ಬಂದಿತು.
• ‘ಆಯಾಸ್’ ಎಂಬ ಕಬ್ಬಿಣ ಅದನ್ನು ಆಕರ್ಷಿಸುವುದರಿಂದ ಆಯಸ್ಕಾಂತ ಎನ್ನುತ್ತೇವೆ..

ವಿಧಗಳು


1) ನೈಸರ್ಗಿಕ ಆಯಸ್ಕಾಂತಗಳು (Magnatic Substances):


• ಕಾಂತಿಯ ಗುಣಗಳಲ್ಲಿ ದುರ್ಬಲತೆ ಹೊಂದಿರುವ ಇವು ನೈಸರ್ಗಿಕವಾಗಿ ಭೂಮಿಯಲ್ಲಿ ದೊರೆಯುತ್ತವೆ. ನಿರ್ದಿಷ್ಟ ಆಕಾರ ಇರುವುದಿಲ್ಲ. ಉದಾ:- ಮ್ಯಾಗ್ನಟೈಟ

2) ಕೃತಕ ಆಯಸ್ಕಾಂತಗಳು (Non Magnatic Substances)


• ಕೃತಕವಾಗಿ ಮಾನವನಿಂದ ತಯಾರಿಸಲಾಗುತ್ತವೆ. ಸಾಮಥ್ರ್ಯ ಹಾಗೂ ಆಕಾರಕ್ಕೆ ತಕ್ಕಂತೆ ತಯಾರಿಸಬಹುದು. ಇವುಗಳನ್ನು ಅಲ್ಯುಮಿನಿಯಂ, ಕೊಬಾಲ್ಟ, ನಿಕ್ಕಲ್, ಕಬ್ಬಿಣ ಬಳಸಿ ತಯಾರಿಸಲಾಗುತ್ತದೆ. ಉದಾ: ಲಾಳಕಾಂತ, ದಂಡಕಾಂತ, ಇತ್ಯಾದಿ

ಕಾಂತ ಧ್ರುವಗಳ ನಿಯಮ


• ಸಜಾತೀಯ ಧ್ರುವಗಳು ಪರಸ್ಪರ ವಿಕರ್ಷಿಸುತ್ತವೆ ಮತ್ತು ವಿಜಾತೀಯ ಧ್ರುವಗಳು ಪರಸ್ಪರ ಆಕರ್ಷಿಸುತ್ತವೆ.ಇದನ್ನು ಕಾಂತ ಧ್ರುವಗಳ ನಿಯಮ ಎನ್ನುತ್ತಾರೆ.

ಕಾಂತದ ಗುಣಗಳು


• ಕಾಂತವು ಕಾಂತಿಯ ವಸ್ತುಗಳನ್ನು ಆಕರ್ಷಿಸುತ್ತದೆ.
• ಆಕರ್ಷಿಸುವ ಗುಣ ಕಾಂತದ ತುದಿಗಳಲ್ಲಿ ಅತ್ಯಧಿಕವಾಗಿರುತ್ತದೆ.
• ಕಾಂತದ ದ್ರುವಗಳನ್ನು ಎಂದಿಗೂ ಪ್ರತ್ಯೇಕ ಮಾಡಲು ಸಾಧ್ಯವಿಲ್ಲ.
• ಪ್ರತಿಯೊಂದು ಕಾಂತ ಉತ್ತರ ಮತ್ತು ದಕ್ಷಿಣ ಧ್ರುವ ಹೊಂದಿರುತ್ತವೆ. ಆದ್ದರಿಂದ ಸ್ವತಂತ್ರವಾಗಿ ತೂಗು ಬಿಟ್ಟಾಗ ಉತ್ತರ-ದಕ್ಷಿಣ ದಿಕ್ಕಿನಲ್ಲಿ ನಿಲ್ಲುತ್ತವೆ.
• ಕಾಂತಗಳನ್ನು ಬಡಿದಾಗ, ಕಾಯಿಸಿದಾಗ, ಇನ್ನೊಂದು ವಸ್ತುವಿಗೆ ಉಜ್ಜಿದಾಗ ಕಾಂತತ್ವ ನಷ್ಟವಾಗುತ್ತದೆ.

ಕಾಂತಕ್ಷೇತ್ರ ಹಾಗೂ ಬಲ ರೇಖೆಗಳು


• ಕಾಂತದ ಸೂತ್ತ ಕಾಂತ ಬಲ ಇರುವ ಪ್ರದೇಶವನ್ನು ಕಾಂತ ಕ್ಷೇತ್ರ ಎನ್ನಲಾಗುವುದು.
• ಕಾಂತಕ್ಷೇತ್ರವನ್ನು ರೇಖೆಗಳಿಂದ ಬಿಂಬಿಸಲಾಗುತ್ತದೆ. ಆದ್ದರಿಂದ ಬಲರೇಖೆಗಳು ಹಾಗೂ ಇವು ಉತ್ತರ ದ್ರುವದಿಂದ ದಕ್ಷಿಣ ದ್ರುವಕ್ಕೆ ಚಲಿಸುತ್ತವೆ.
• ಕಾಂತಕ್ಷೇತ್ರ ಹಾಗೂ ಬಲ ರೇಖೆಗಳು ನಮ್ಮ ಕಾನಿಗೆ ಕಾಣುವುದಿಲ್ಲ.
• ಕಾಂತಿಯ ಬಲ ರೇಖೆಗಳು ಒಂದನ್ನೊಂದು ದೂರ ತಳ್ಳುತ್ತವೆ.
• ಕಾಂತಿಯ ಬಲ ರೇಖೆಗಳು ಕಮಾನಿನ ಆಕಾರದಲ್ಲಿರುತ್ತವೆ.

ಕಾಂತೀಯ ವಸ್ತುಗಳು


• ಯಾವ ವಸ್ತುಗಳು ಆಯಸ್ಕಾಂತದಿಂದ ಆಕರ್ಷಿಸಲ್ಪಡುತ್ತವೆಯೋ ಅವುಗಳನ್ನು ಕಾಂತೀಯ ವಸ್ತುಗಳನ್ನು ಎನ್ನುವರು.
• ಉದಾ:- ಕಬ್ಬಿಣ ನಿಕ್ಕಲ್ ಉಕ್ಕು, ಕೊಬಾಲ್ಟ ಇತ್ಯಾದಿ.

ಅಕಾಂತೀಯ ವಸ್ತುಗಳು


• ಯಾವ ವಸ್ತುಗಳು ಕಾಂತಕ್ಕೆ ಆಕರ್ಷಿಸಲ್ಪಡುವುದಿಲ್ಲವೋ ಅವುಗಳನ್ನು ಅಕಾಂತೀಯ ವಸ್ತುಗಳು ಎನ್ನಲಾಗುವುದು.
• ಉದಾ:-ಕಟ್ಟಿಗೆ, ಗಾಜು, ಪ್ಲಾಸ್ಟಿಕ್, ರಬ್ಬರ್ ಇತ್ಯಾದಿ

ಕಾಂತದ ವಿಧಗಳು


1) ಡಯಾಕಾಂತೀಯ ವಸ್ತುಗಳು:-
• ಕಾಂತಿಯ ಲಕ್ಷಣಗಳು ಇರುವುದಿಲ್ಲ. ಉದಾ: ಚಿನ್ನ, ನೀರು, ಅಂಟಿಮನಿ ಇತ್ಯಾದಿ
2) ಪ್ಯಾರಾ ಕಾಂತಿಯ ವಸ್ತುಗಳು:-
• ಕಾಂತ ಕ್ಷೇತ್ರದಲ್ಲಿ ಕಾಂತಿಯತೆ ತೋರುತ್ತದೆ. ಉದಾ:- ಪ್ಲಾಟಿನಂ, ಕ್ರೋಮಿಯಂ, ಅಲ್ಯೂಮಿನಿಯಂ, ಟಂಗಸ್ಟನ್ ಇತ್ಯಾದಿ.
3) ಫೆರೋ ಕಾಂತಿಯ ವಸ್ತುಗಳು:-
• ಬಲಿಷ್ಟ ಕಾಂತಿಯ ಗುಣಗಳು ಹೊಂದಿದ್ದು ಸುಲಭವಾಗಿ ಕಾಂತಗಳಾಗುತ್ತವೆ. ಉದಾ: ಕಬ್ಬಿಣ, ಕೊಬಾಲ್ಟ, ನಿಕ್ಕಲ್ ಇತ್ಯಾದಿ.

ಕಾಂತದ ಉಪಯೋಗಗಳು


• ವಿದ್ಯುತ್ ಕಾಲಿಂಗ್ ಬೆಲ್
• ಟೆಲಿಗ್ರಾಪ್
• ಟೆಲಿಪೋನ್
• ಮೋಟಾರುಗಳು
• ಡೈನಮೋಗಳು
• ಕಂಪ್ಯೂಟರ್ ಶೇಖರಣಾ ವಸ್ತುಗಳು
• ದಿಕ್ಸೂಚಿಗಳಲ್ಲಿ
• ಉಕ್ಕು ಕಾರ್ಖಾನೆಯ ಕ್ರೇನುಗಳಲ್ಲಿ
• ಎಂ.ಆರ್.ಐ(Magnetic Resonance Imaginary) ತಂತ್ರಜ್ಞಾನದಲ್ಲಿ ಬಳಸುವರು.

ನೆನಪಿಡಬೇಕಾದ ಅಂಶಗಳು


• ಭೂಮಿಯಲ್ಲಿ ಸ್ವಾಭಾವಿಕವಾಗಿ ಸುಗುವ ಕಾಂತೀಯ ಗುಣಗಳನ್ನು ಪಡೆದಿರುವ ಮ್ಯಾಗ್ನಟೈಟ ಎಂಬ ಕಬ್ಬಿಣದ ಅದಿರಿಗೆ - ನೈಸರ್ಗಿಕ ಕಾಂತ ಎನ್ನುತ್ತಾರೆ.
• ಭೂಮಿಯ ಮೇಲೆ ಸ್ವತಂತ್ರವಾಗಿ ತೂಗುಬಿಟ್ಟಕಾಂತ – ಉತ್ತರ-ದಕ್ಷಿಣ ದಿಕ್ಕಿನಲ್ಲಿ ನಿಶ್ಚಲವಾಗುತ್ತದೆ.
• ಆಕರ್ಷಿಸುವ ಗುಣ ಕಾಂತದ - ಸ್ವತಂತ್ರ ತುದುಗಳು, ಎರಡೂ ತುದಿಗಳಲ್ಲಿ ಅತ್ಯಧಿಕವಾಗಿರುತ್ತದೆ.
• ಸಜಾತಿಯ ಧ್ರುವಗಳ ಗುಣ – ಆಕರ್ಷಿಸುತ್ತವೆ.
• ಕಾಂತ ಆಕರ್ಷಿಸುವ ವಸ್ತುಗಳಿಗೆ – ಕಾಂತೀಯ ವಸ್ತುಗಳು ಎನ್ನುತ್ತಾರೆ.
• ಕಾಂತ ಆಕರ್ಷಿಸುವ ವಸ್ತುಗಳಿಗೆ – ಅಕಾಂತೀಯ ವಸ್ತುಗಳು ಎನ್ನುತ್ತಾರೆ.
• ಯಾವ ಎಲ್ಲಾ ಪದಾರ್ಥಗಳಲ್ಲಿ ಇರುವ ಅತ್ಯಂತ ಕ್ಷೀಣ ಕಾಂತಗುಣ?- ಡಯೋಕಾಂತತ್ವ
• ಪ್ಲಾಟಿ ನಂ. ಲೋಹವು - ಪ್ಯಾರಾ ಕಾಂತೀಯ ವಸ್ತುಗಳಿಗೆ ಉದಾಹರಣೆ.
• ಫೆರೋಕಾಂತೀಯ ವಸ್ತುಗಳಿಗೆ ಉದಾಹರಣೆ – ಕೋಬಾಲ್ವ್
• ಕಾಂತತ್ವದ ವಿದ್ಯಮಾನವನ್ನು ವಿವರಿಸಲು ಯತ್ನಿಸಿದ ಮೊದಲ ವಾದಕ್ಕೆ – ಅಣುವಾದ ಎಂದು ಕರೆಯುತ್ತಾರೆ.
• ಕಾಂತ ಕ್ಷೇತ್ರವನ್ನು ಸಾಮಾನ್ಯವಾಗಿ ಗೆರೆಗಳಿಂದ ಬಿಂಬಿಸುವುದು ವಾಡಿಕೆ. ಇದನ್ನು “ಕಾಂತೀಯ ಬಲರೇಖೆಗಳ” ಎನ್ನುತ್ತಾರೆ.
• ಭೂಮಿಯೇ ಇಂದು ಕಾಂತ ಎಂಬ ಕಲ್ಪನೆಯ ಪ್ರತಿವಾದಿಸಿದವರು – “ಗಿಲ್ಬರ್ಟ್”
• ಕಾಂತೀಯ ಬಲರೇಖೆಗಳ ಸ್ವಭಾವ – ಅವು ಛೇದಿಸುವುದಿಲ್ಲ.
• ವಿದ್ಯುತ್ ಕಾಂತತೆಉನ್ನು ಉತ್ಪಾದಿಸುತ್ತದೆ ಎಂಬುದನ್ನು ತಿಲಿಸಿದ ವಿಜ್ಞಾನಿ - “ಫ್ರಾನ್ಸ್ಕ್ರಿಸ್ಟಿಯನ್”.
• ಕಾಂತಬಲಗಳನ್ನು ಅಳೆಯಲು ಉಪಯೋಗಿಸುವ ಮಾಪಕದ ಹೆಸರು – “ಮ್ನಾಗ್ನೆಟೋಮೀಟರ್” (ಕಾಂತಮಾಪಕ)
• ನಾವಿಕರ ದಿಕ್ಸೂಚಿಯನ್ನು – ಚೀನಾ ದೇಶದಲ್ಲಿ ತಯಾರಿಸಲಾಯಿತು.
• ಕಾಂತಬಲಗಳನ್ನು ಅಳೆಯುವ ಮೂಲಮಾನ – “ಆಯಿರ್ಸೈಡ್”.
• ಕಾಂತಕ್ಷೇತ್ರ ಮತ್ತು ವಿದ್ಯುಚ್ಛಕ್ತಿಗಳು ಒಂದಕ್ಕೊಂದು ಬೆಸೆದುಕೊಂಡಿದ್ದು ಅವೆರಡು ಸೇರಿ ವಿದ್ಯುತ್ಕಾಂತಿಯವಾಗಿ ವರ್ತಿಸುತ್ತವೆ. ಎಂಬುದನ್ನು ಕಂಡುಹಿಡಿದ ವಿಜ್ಞಾನಿ - “ಮ್ಯಾಕ್ಸ್ವೆಲ್”.
• ಆಯಸ್ಕಾಂತದ ಧ್ರುವಗಳನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂದು ಹೇಳಿದ ವಿಜ್ಞಾನಿ - “ವಿಲಿಯಂ ಗಿಲ್ಟರ್ಟ್”.
• ವಿದ್ಯುತ್ ಪ್ರವಾಹದಿಂದಾಗಿ ಕಾಂತೀಯ ಗುಣವನ್ನು ಹೊಂದಿದ್ದಕ್ಕೆ – ವಿದ್ಯುತ್ ಕಾಂತ ಎಂದು ಕರೆಯುತ್ತಾರೆ.
• ಕಾಂತಗುಣ ಇರುವ ವಸ್ತುಗಳಲ್ಲಿ ಅಣುಗಳು – ಏಕ ದಿಕ್ಕಿನಲ್ಲಿ ಪರಸ್ಪರ ಸಮಾನಂತರವಾಗಿ ಜೋಡಣೆ ಆಗಿರುತ್ತದೆ.
• ಕಾಂತವನ್ನು ಎತ್ತಿ ಹಾಕಿದಾಗ ಕಾಂತತ್ವ ನಷ್ಟವಾಗಲು ಕಾರಣ – ಏಕ ದಿಕ್ಕಿನಲ್ಲಿ ಜೋಡಣೆಯಾಗಿದ್ದ ಅಣುಗಳು ಚದುರಿ ಹೋಗುತ್ತವೆ.
• ಕಾಂತವನ್ನು ಕಾಯಿಸಿದಾಗ ಕಾಂತತ್ವ ನಷ್ಟವಾಗಲು ಕಾರಣ – ಅಣುಗಳ ಚಲನಶಕ್ತಿ ಅಧಿಕವಾಗುವುದು.
• ಶಾಶ್ವತ ಕಾಂತಗಳ ತಯಾರಿಕೆಗೆ ಬಳಸುವ ವಸ್ತುಗಳು – ಉಕ್ಕು ಮತ್ತು ಆಲ್ನಿಕೋ.
• ಟೆಲಿಫೋನ್, ಡೈನಮೋ, ವಿದ್ಯುತ್ ಮೋಟಾರ್ ಮುಂತಾದವುಗಳಲ್ಲಿ ಬಳಸುವ ಕಾಂತಗಳು – ವಿದ್ಯುತ್ ಕಾಂತಗಳು / ಎಲೆಕ್ಟ್ರೋಮ್ಯಾಗ್ನೆಟ್ಸ್.
• ಕಾಂತದ ಸುತ್ತಲೂ ಇರುವ ಬಲ - ಕಾಂತಬಲ.
• ಕಾಂತಕ್ಷೇತ್ರವನ್ನು ಬಿಂಬಿಸುವ ರೇಖೆಗಳು – ಕಾಂತೀಯ ಬಲರೇಖೇಗಳು.
• ವಿದ್ಯುತ್ ಪ್ರವಾಹವಿರುವ ವಾಹಕದ ಸಮೀಪದಲ್ಲಿಟ್ಟು ದಿಕ್ಸೂಚಿಯ ದಿಕ್ಪಲ್ಲಟ್ಟದ ದಿಕ್ಕನ್ನು ತಿಳಿಯಲು ಬಳಸುವ ನಿಯಮ – ಅಂಪೇರ್ನ ಈಜುವಿಕೆಯ ನಿಯಮ.
• ವಿದ್ಯುತ್ ಪ್ರವಾಹವಿರುವ ವಾಹಕದ ಸುತ್ತ ಉಂಟಾಗುವ ಕಾಂತೀಯ ಬಲರೇಖೆಗಳ ದಿಕ್ಕನ್ನು ತಿಳಿಯಲು ಬಳಸುವ ವಿಧಾನ – ಮ್ಯಾಕ್ಸ್ವೆಲ್ನ ಬಲಗೈ ಹಿಡಿಗಟ್ಟು ನಿಯಮ.
• ಧ್ರುವ ಪ್ರಭೆ – ಧ್ರುವಗಳಲ್ಲಿ ಉಂಟಗುತ್ತದೆ.
• ರಾತ್ರಿ ಆಕಾಶದಲ್ಲಿ ಧ್ರುವಗಳಲ್ಲಿ ಕಂಡುಬರುವ ನಯನ ಮನೋಹರವಾದ ಬಣ್ಣದ ವಿಸ್ತಾರವನ್ನು * ಧ್ರುವಪ್ರಭೆ (ಅರೋರ) ಎನ್ನುತ್ತಾರೆ.
• ಭೂಮಿಯೇ ಒ0ದು ಕಾಂತ ಎಂಬ ಕಲ್ಪನೆಯನ್ನು ಪ್ರತಿಪಾದಿಸಿದ ಗಿಲ್ಬರ್ಟ್ ತಯಾರಿಸಿದ ಪುಟ್ಟ ಭೂಮಿಯ ಮಾದರಿ- ಟೆರೆಲ್ಲಾ