ಪ್ರಾಣಿಗಳ ವರ್ಗಿಕರಣ

 

ಪ್ರಾಣಿಗಳ ವರ್ಗಿಕರಣ


1. ಸ್ಪಂಜು ಪ್ರಾಣಿಗಳು(Porifera):
• ಪೋರಿಫೆರಾ ಎಂದರೆ ರಂಧ್ರಯುಕ್ತ ಜೀವಿಗಳು. ಇವು ಚಲಿಸಲಾರದ ಜೀವಿಗಳಾಗಿದ್ದು ಒಂದು ಘನವಸ್ತುವಿಗೆ ಅಂಟಿಕೊಂಡಿರುತ್ತವೆ.
2. ಕುಟುಕುಕಣವಂತ (cnidaria )
• ಈ ಪ್ರಾಣಿಗಳು ಜಲವಾಸಿಗಳಾಗಿವೆ. ಇವುಗಳ ದೇಹದ ವಿನ್ಯಾಸವು ಹೆಚ್ಚಿನ ವಿಭೇದತೆಯನ್ನು ಹೊಂದಿದೆ.
3. ಚಪ್ಪಟೆ ಹುಳುಗಳು (platyhelminthes)
• ದೇಹವು ದ್ವಿಪಾರ್ಶೀಯ ಸಮ್ಮಿತಿಯನ್ನು ಹೊಂದಿದ್ದು, ದೇಹದ ಎಡ ಮತ್ತು ಬಲ ಭಾಗಗಳು ಒಂದೆ ರೀತಿಯ ರಚನೆ ಹೊಂದಿರುತ್ತವೆ. ಇವುಗಳ ದೇಹಗಳು ಮೂರು ಪದರದಿಂದ ಮಾಡಿರುವುದರಿಂದ ಇವುಗಳನ್ನು ಮುಪ್ಪದರದ ಪ್ರಾಣಿಗಳು ಎಂದು ಕರೆಯಲಾಗುತ್ತದೆ.
4. ದುಂಡು ಹುಳುಗಳು (nematoda)
• ಇವುಗಳ ದೇಹವು ದ್ವಿಪಾಶ್ರ್ವ ಸಮ್ಮಿತಿ ಹೊಂದಿದ್ದು, ಮುಪ್ಪದರದ ಪ್ರಾಣಿಗಳಾಗಿವೆ ದೇಹವು ದುಂಡಾಗಿ ನೀಳವಾಗಿದೆ.
5. ವಲಯವಂತಗಳು (annelida)
• ವಲಯವಂತ ಪ್ರಾಣಿಗಳು ಕೂಡ ಮುಪ್ಪದರದ ಪ್ರಾಣಿಗಳಾಗಿವೆ. ದೇಹದ ಅಂಗಗಳು ವ್ಯಾಪಕ ಭಿನ್ನತೆಯಿಂದ ಕೂಡಿವೆ.
• ಉದಾಹರಣೆಗೆ ಎರೆಹುಳುಗಳು ಮತ್ತು ಜಿಗಣೆಗಳು
6. ಸಂಧಿಪದಿಗಳು (arthropoda)
• "ಅಥ್ರೋಪೋಡಾ" ಎಂದರೆ ಕೀಲುಕಾಲುಗಳನ್ನು ಹೊಂದಿರುವ ಪ್ರಾಣಿಗಳು, ಪ್ರಾಣಿಗಳಲ್ಲಿ ಅತ್ಯಂತ ದೊಡ್ಡ ವಂಶ ಇದಾಗಿದೆ. ದೇಹಾಂತರವಕಾಶವು ರಕ್ತದಿಂದ ತುಂಬಿಕೊಂಡಿದೆ.
• ಉದಾಹರಣೆಗೆ ಸೀಗಡಿ, ಚಿಟ್ಟೆಗಳು, ನೊಣ, ಇತ್ಯಾದಿ.
7. ಮೃದ್ವಂಗಿಗಳು (mollusca) :
• ಪ್ರಾಣಿಗಳು ದ್ವಿಪಾಶ್ರ್ವ ಸಮ್ಮಿತಿಯನ್ನು ಹೊಂದಿದ್ದು ತೆರೆದ ಪರಿಚಲನಾ ವ್ಯವಸ್ಥೆ ಹೊಂದಿದೆ ಮೂತ್ರಜನಕಾಂಗಗಳ ರೀತಿಯ ಅಂಗಗಳು ವಿಸರ್ಜನೆಗೆ ಸಹಾಯಕವಾಗಿವೆ. ಪಾದಗಳು ಕಂಡುಬಂದಿದ್ದು, ಚಲಿಸಲು ಉಪಯೋಗವಾಗಿದೆ.
• ಉದಾಹರಣೆಗೆ ಬಸವನಹುಳು ಮತ್ತು ಕಪ್ಪೆಚಿಪ್ಪಿನ ಪ್ರಾಣಿಗಳು
8. ಸಮುದ್ರಪೋರ (echinodermata) :
• ಇವುಗಳು ಮುಳ್ಳಿನ ಚರ್ಮವನ್ನು ಹೊಂದಿರುವ ಜೀವಿಗಳಾಗಿದ್ದು ಸಂಪೂರ್ಣವಾಗಿ ಸಮುದ್ರವಾಸಿ ಪ್ರಾಣಿಗಳಾಗಿವೆ. ಇವುಗಳು ವಿಶೇಷವಾದ ಜಲಪರಿಚಲನಾ ನಾಳ ವ್ಯವಸ್ಥೆ ಹೊಂದಿದ್ದು, ಅದನ್ನು ಚಲಿಸಲು ಬಳಸಿಕೊಳ್ಳುತ್ತವೆ.
• ಉದಾಹರಣೆಗೆ ನಕ್ಷತ್ರ ಮೀನು ಮತ್ತು ಕಡಲು ಚಿಳ್ಳೆ
9. ಪ್ರೋಟೋಕಾರ್ಡೇಟಾ (protochordata)
• ಈ ಪ್ರಾಣಿಗಳು ದ್ವಿ ಪಾಶ್ರ್ವ ಸಮ್ಮಿತಿ ಹೊಂದಿದ್ದು, ಮುಪ್ಪದರದ ಪ್ರಾಣಿಗಳಾಗಿವೆ ಮತ್ತು ದೇಹಾಂತರವಾಕಾಶವನ್ನು ಹೊಂದಿವೆ.
• ನೋಟೋಕಾರ್ಡ್ ಎಂಬುದು ನೀಳವಾದ ಘನ ರಚನೆಯಾಗಿದ್ದು, ಪ್ರಾಣಿಗಳ ಬೆನ್ನಿನ ಹಿಂಭಾಗದಲ್ಲಿ ಹಾಯ್ದು, ಕರುಳಿನ ಪ್ರದೇಶದಿಂದ ನರ ಅಂಗಾಂಶವನ್ನು ಬೇರ್ಪಡಿಸುತ್ತದೆ. ಇವು ಸಮುದ್ರವಾಸಿಗಳಾಗಿವೆ.
• ಉದಾಹರಣೆಗೆ. ಬೆಲನೋಗ್ಲಾಸಸ್, ಹರ್ಡ್‍ಮೇನಿಯ

ಕಶೇರುಕಗಳು (vertebrata)


• ಇವು ದೇಹಾಂತರವಕಾಶ ಹೊಂದಿದ್ದು ಸಂಕೀರ್ಣ ಅಂಗಾಂಶಗಳು ಮತ್ತು ಅಂಗಗಳಿಂದ ಕೂಡಿದ ದೇಹವನ್ನು ಹೊಂದಿವೆ. ಎಲ್ಲಾ ಕಶೇರುಕಗಳು ಬೆನ್ನಿನ ಭಾಗದಲ್ಲಿ ನರಹುರಿಯನ್ನು ಹೊಂದಿವೆ.
ಕಶೇರುಕಗಳನ್ನು ಐದು ವರ್ಗಗಳಾಗಿ ಗುಂಪುಗೂಡಿಸಿದೆ.
1. ಮೀನುಗಳು :
• ಸಂಪೂರ್ಣ ಜಲವಾಸಿಗಳಾಗಿದ್ದು ಕಿವಿರುಗಳನ್ನು ಬಳಸಿ ನೀರಿನಲ್ಲಿ ವಿಲೀನವಾಗಿರುವ ಆಕ್ಸಿಜನ್‍ಅನ್ನು ಪಡೆಯುತ್ತವೆ. ಇವು ಎರಡು ಕೋಣೆಗಳಿರುವ ಹೃದಯವನ್ನು ಹೊಂದಿವೆ.
2. ಉಭಯವಾಸಿಗಳು (amphibia)
• ಚರ್ಮಗಳಲ್ಲಿ ಶ್ಲೇಷ್ಮಗ್ರಂಥಿಗಳನ್ನು ಹೊಂದಿದ್ದ್ತು ಮೂರು ಕೋಣೆಗಳಿಂದಾದ ಹೃದಯ ಹೊಂದಿವೆ. ಉಸಿರಾಟ ಕ್ರಿಯೆಯು ಕಿವಿರುಗಳ ಮೂಲಕ ಅಥವಾ ಶ್ವಾಸಕೋಶಗಳಿಂದ ನಡೆಯುತ್ತದೆ. ಇವು ನೀರು ಮತ್ತು ನೆಲದ ಮೇಲೆ ಕಂಡುಬರುತ್ತವೆ.
• ಉದಾಹರಣೆಗೆ ಕಪ್ಪೆಗಳು, ಸಾಲಾಮ್ಯಾಂಡರ್‍ಗಳು
3. ಸರೀಸೃಪಗಳು (reptilia):
• ಇವು ಶೀತರಕ್ತ ಪ್ರಾಣಿಗಳಾಗಿದ್ದು, ಹುರುಪೆಗಳಿಂದ ಕೂಡಿದ ಚರ್ಮ ಮತ್ತು ಶ್ವಾಸಕೋಶಗಳಿಂದ ಉಸಿರಾಟ ಕ್ರಿಯೆ ಮಾಡುತ್ತವೆ. ಇವುಗಳು ಮೂರು ಕೋಣೆಗಳ ಹೃದಯ ಹೊಂದಿದ್ದು, ಮೊಸಳೆಗಳು ಮಾತ್ರ ನಾಲ್ಕು ಕೋಣೆಗಳ ಹೃದಯವನ್ನು ಹೊಂದಿವೆ.
• ಉದಾಹರಣೆಗೆ ಹಾವು ಮೊಸಳೆ ಇತ್ಯಾದಿ
4. ಪಕ್ಷಿಗಳು (aves)
• ಇವು ಬಿಸಿ ರಕ್ತ ಪ್ರಾಣಿಗಳಾಗಿದ್ದು ನಾಲ್ಕು ಕೋಣೆಗಳ ಹೃದಯ ಹೊಂದಿವೆ. ಇವು ಶ್ವಾಸಕೋಶಗಳಿಂದ ಉಸಿರಾಟ ಮಾಡುತ್ತವೆ.
5. ಸಸ್ತನಿಗಳು (mammalia)
• ಸ್ತನಿಗಳು ಬಿಸಿರಕ್ತ ಪ್ರಾಣಿಗಳಾಗಿದ್ದು, ಮರಿಗಳಿಗೆ ಹಾಲುಣಿ ಸ್ತನ್ಯ ಗ್ರಂಥಿಗಳನ್ನು ಹೊಂದಿವೆ.
• ಎಲ್ಲಾ ಸ್ತನಿಗಳು ಮರಿಗಳಿಗೆ ಜನ್ಮ ನೀಡುತ್ತವೆ.
• ಆದರೆ ಪ್ಲಾಟಿಪಸ್ ಮತ್ತು ಎಕಿಡ್ನಾಗಳು ಮೊಟ್ಟೆಯಿಡುವ ಸ್ತನಿಗಳು