ಡಿಸೆಂಬರ್ 5th, 2017
 
1: ಶರಾವತಿ ಪಂಪ್ಡ ಸ್ಟೋರೇಜ್ ಪ್ರಾಜೆಕ್ಟ್:
• ಶರಾವತಿ ಕಣಿವೆಯಲ್ಲಿ ಜಲವಿದ್ಯುತ್ ಯೋಜನೆಗೆ ಸರ್ವೆ ಕಾರ್ಯಕ್ಕೆ ಕೇಂದ್ರ ಪರಿಸರ ಮಂತ್ರಾಲಯ ಒಪ್ಪಿಗೆ ಕೊಟ್ಟಿದ್ದು ಇನ್ನು 18 ತಿಂಗಳಲ್ಲಿ ಸರ್ವೇ ಮತ್ತು ಯೋಜನೆಯ ಸಮಗ್ರ ವರದಿ ಸಿದ್ಧಪಡಿಸಲು ಸಮಗ್ರ ವರದಿ ಸಿದ್ಧಪಡಿಸಲು kpc ಸಜ್ಜಾಗಿದೆ.
• ಶರಾವತಿ ಪಂಪ್ಡ ಸ್ಟೋರೇಜ್ ಪ್ರಾಜೆಕ್ಟ್ ಹೆಸರಿನಲ್ಲಿ kpc ಯೋಜನೆ ರಚಿಸಿದೆ.
• ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆ ನಡುವಿನ ಅರಣ್ಯ ಪ್ರದೇಶದಲ್ಲಿ ಸರ್ವೆಗೆ ಅನುಮತಿ ಸಿಕ್ಕಿದೆ.
• 2006, 2009ರಲ್ಲಿ ನಡೆದ ಅಧ್ಯಯನ ವರದಿ, ಸ್ಥಳೀಯರ, ತಜ್ಞರ ಪರಿಸರವಾದಿಗಳಿಗೆ ಯೋಜನೆಯ ಸಾಧಕ-ಬಾಧಕಗಳ ಕುರಿತು ಚರ್ಚಿಸಲು ಸೂಚಿಸಿದೆ.
ಯೋಜನೆಯ ಕುರಿತು:
ಗೇರುಸೊಪ್ಪ ಹಿನ್ನೀರಿನಿಂದ ತಲಕಳಲೆ ಡ್ಯಾಮ್ ಗೆ ಪೈಪ್ ಮೂಲಕ ನೀರನ್ನು ಲಿಫ್ಟ್ ಮಾಡಿ, ಟರ್ಬೈನ್ ಮೂಲಕ ವಿದ್ಯುತ್ ಉತ್ಪಾದಿಸುವ ಯೋಜನೆ.
ತಲಕಳಲೆಯಿಂದ ಶರಾವತಿ ಜಲವಿದ್ಯುದಾಗಾರ ನಂತರ ಮತ್ತೆ ಗೇರುಸೊಪ್ಪ ಪವರ ಪ್ರಾಜೆಕ್ಟ್ ಗೆ ಈ ನೀರು ಬಳಕೆಯಾಗುತ್ತದೆ.
ನೀರನ್ನು ಮರುಬಳಕೆ ಮಾಡುವುದರೊಂದಿಗೆ ಇಂಧನ ಕ್ಷಮತೆ ಹೆಚ್ಚಿಸಿ ಕೊಳ್ಲಲು ಈ ಯೋಜನೆ ಸಹಾಯಕ.
ಇದು ಕಾರ್ಯಗತವಾದರೆ ರಾಜ್ಯದ 3ನೇ ಭೂಗರ್ಭ ಯೋಜನೆಯಾಗಲಿದೆ.
• ವಾರಾಹಿ ಜಲವಿದ್ಯುತ್ ಯೋಜನೆ ರಾಜ್ಯದ 1ನೇ ಭೂಗರ್ಭ ಯೋಜನೆಯಾಗಲಿದೆ.
ಯೋಜನೆಯ ಅಂದಾಜು ವೆಚ್ಚ->4,800 ಕೋಟಿ
ವಿದ್ಯುತ್ ಉತ್ಪಾದನೆ->2000 ಮೆಗಾವ್ಯಾಟ್,
ಅಂದಾಜಿಸಲಾಗಿದೆ.
2. ಬಾಲಿವುಡ್ ನಟ ಶಶಿ ಕಪೂರ್ ನಿಧನ:
• ದೀರ್ಘ ಅನಾರೋಗ್ಯದ ಕಾರಣ ಬಾಲಿವುಡ್ ಹಿರಿಯ ನಟ ಶಶಿ ಕಪೂರ್ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನ.
• ಹೃದಯ ಸಂಬಂಧಿ, ಎದೆನೋವು & ಸೋಂಕಿನಿಂದ 2014ರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಿರುಪರಿಚಯ:
• ನಿಜವಾದ ಹೆಸರು-> ಬಲಬಿರರಾಜ್ ಪೃಥ್ವಿರಾಜ್ ಕಪೂರ್
• ಜನನ: ಕೋಲ್ಕತ್ತಾದಲ್ಲಿ, ಮಾರ್ಚ 18, 1938.
• 1961ರಲ್ಲಿ “ಧರ್ಮಪುತ್ರ” ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ.
• ಕೊನೆಯ ಚಿತ್ರ -> 1998ರ ಇಂಗ್ಲಿಷ್ ಸಿನಿಮಾ->ಸೈಡ್ ಸ್ಟ್ರೀಟ್ಸ್.
• ಪತ್ನಿ->ಬ್ರಿಟಿಷ್ ನಟಿ ಜೆನ್ನಿಫರ್ ಕಂಡಲ್.
• ಪ್ರಶಸ್ತಿಗಳು->
ಪದ್ಮಭೂಷಣ
ಫಿಲ್ಮ್ ಫೇರ್ ಜೀವಮಾನ ಸಾಧನೆ
ಮಹಮ್ಮದ ರಫಿ ಪ್ರಶಸ್ತಿ
ಪುಣೆ ಚಿತ್ರೋತ್ಸವ ಜೀವಮಾನ ಸಾಧನೆ
ಅತ್ತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ
3.ಪಾಪುಗೆ ಬಸವ ಪುರಸ್ಕಾರ:
• ಕರ್ನಾಟಕ ಸರ್ಕಾರ ನೀಡುವ 2017ನೇ ಸಾಲಿನ ಬಸವ ಪುರಸ್ಕಾರ ರಾಷ್ಟ್ರೀಯ (ಪುರಸ್ಕಾರ) ಪ್ರಶಸ್ತಿಗೆ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಆಯ್ಕೆಯಾಗಿದ್ದಾರೆ.
• ಆಯ್ಕೆ ಸಮಿತಿಯ ಅಧ್ಯಕ್ಷತೆ-> ನ್ಯಾ|| ಶಿವರಾಜ. ವಿ ಪಾಟೀಲ.
• ಪ್ರಶಸ್ತಿ ರೂ ೧೦ ಲಕ್ಷ ಬಹುಮಾನ ಒಳಗೊಂಡಿದೆ.
4: ನ್ಯಾ|| ಮಂಜುಳಾ ಚೆಲ್ಲೂರ್ ನಿವೃತ್ತಿ:
• ಬಾಂಬೆ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್ ಡಿಸೆಂಬರ್ 4ರಂದು ನಿವೃತ್ತಿ ಹೊಂದಿದರು.
• ಮಂಜುಳಾ ಚೆಲ್ಲೂರ್ ಬಳ್ಳಾರಿ ಮೂಲದವರು.
• ಬಾಂಬೆ ಹೈಕೋರ್ಟ್ ಗೆ ನೇಮಕಗೊಂಡ 2ನೇ ಮಹಿಳಾ CJ
ಮುಂಬೈ ಮೆಟ್ರೋದರ ಹೆಚ್ಚಳ ಆಗಬೇಕು.
ಸಂಸ್ಥೆ ಗಳ ವಿಲೀನಕ್ಕೆ ಸಂಬಂಧಿಸಿದ ಮೊನ್ಸ್ ಟೆಕ್ನಾಲಾಜಿಯ ಅರ್ಜಿಯ ವಜಾ.
ಮೇಲಿನ 2, ಅಂತಿಮ ದಿನದ ಪ್ರಮುಖ 2 ತೀರ್ಪುಗಳು
• ಬಾಂಬೆ ಹೈಕೋರ್ಟ್ ನ ಮುಂದಿನ CJ-> ನ್ಯಾ|| V.K. ತಹಿಲ್ರಾಮಣಿ
5. ಟ್ರಕ್ ಕ್ಯಾಬಿನ್ ಗೆ A.C:
• ಟ್ರಕ್ ತಯಾರಿಕಾ ಕಂಪನಿಗಳು 2018 ಜನೇವರಿ 1 ರಿಂದ ನಿರ್ಮಾಣ ಮಾಡುವ ಟ್ರಕ್ ಕ್ಯಾಬಿನ್ ನಲ್ಲಿ A.C or ಟ್ರಕ್ ಕ್ಯಾಬಿನ್ ವೆಂಟಿಲೇಷನ್ ವ್ಯವಸ್ಥೆ ಅಳವಡಿಸುವುದು ಕಡ್ಡಾಯವಾಗಿದೆ.
• ಈ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಸಚಿವಾಲಯ ಅಂತಿಮ ಅಧಿಸೂಚನೆ ಹೊರಡಿಸಿದೆ.
• ಸಚಿವಾಲಯ bureu of indian standards ಗೆ ಅನುಗುಣವಾಗಿ ಈ ಹವಾನಿಯಂತ್ರಣ ವ್ಯವಸ್ಥೆ ಇರಬೇಕು ಎಂದಿದೆ.
• ಒಂದು ವೇಳೆ ಉತ್ಪಾದಕರು ಚಾರ್ಶಿ ಮಾದರಿಯಲ್ಲಿ ಟ್ರಕ್ ಮಾರಾಟ ಮಾಡಿದರೆ ಜತೆಯಲಿ ಫೋರ್ಸ್ಡ್ ವೆಂಟಿಲೇಷನ್ ಕಿಟ್ ಕೂಡ ನೀಡಬೇಕು ಎಂದಿದೆ.
Contributed by: Mallikajan.Korbu