Loading [MathJax]/extensions/MathML/content-mathml.js

ಅಟಲ್ ಪೆನ್ಷನ್ ಯೋಜನೆ(APY)

 

ಅಟಲ್ ಪೆನ್ಷನ್ ಯೋಜನೆ(APY)


ಇದು ಕೇಂದ್ರ ಸರ್ಕಾರ ಪ್ರಾಯೋಜಿತ ಸಾಮಾಜಿಕ ಕಳಕಳಿಯ ಪೆನ್ಷನ್/ಪಿಂಚಣಿ ಯೋಜನೆಯಾಗಿದ್ದು, ಯಾವುದೇ ತರಹದ ಪೆನ್ಶನ್ ಯೋಜನೆಯ ವ್ಯಾಪ್ತಿಗೆ ಒಳಪಡದ ಅಸಂಘಟಿತ ವಲಯದ ಕಾರ್ಮಿಕರಿಗೆ 60 ವರ್ಷ ವಯಸ್ಸಿನ ನಂತರವೂ ಒಂದು ನಿರ್ದಿಷ್ಟ ಮೊತ್ತದ ಆದಾಯವನ್ನು ಖಾತರಿ ಪಡಿಸುವ ಪಿಂಚಣಿ ಯೋಜನೆ ಇದು. ಈ ಯೋಜನೆಯ ಫಲಾನುಭವಿಗಳಾಗಳು 18 ರಿಂದ 40 ವರ್ಷ ವಯಸ್ಸಿನೊಳಗಿರಬೇಕು ಮತ್ತು ಬ್ಯಾಂಕ್‍ನಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕು ಹಾಗೂ ಇತರ ಯಾವುದೇ ರೀತಿಯ ಪೆನ್ಷನ್ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿರಬಾರದು. ಈ ಯೋಜನೆಯ ಫಲಾನುಭವಿಗಳ ಉಳಿತಾಯ ಖಾತೆಯಿಂದ ಪ್ರತಿ ತಿಂಗಳು ಅವರ ಆಯ್ಕೆಯಂತೆ ನಿರ್ಧರಿಸಿರುವ ಹಣವನ್ನು ಕಡಿತಮಾಡಿಕೊಳ್ಳಲಾಗುತ್ತದೆ. ಕಡಿತ ಮಾಡಿಕೊಳ್ಳುವ ಹಣ ಮತ್ತು ಕಾಲದ ಆಧಾರದ ಮೇಲೆ 60 ವರ್ಷಗಳ ನಂತರ ತಿಂಗಳಿಗೆ 1000 ರೂಪಾಯಿಗಳಿಂದ 5000 ಸಾವಿರ ರೂಪಾಯಿಗಳವರೆಗೆ ಪಿಂಚಣಿ ಮೊತ್ತ ದೊರೆಯಲಿದೆ. ಫಲಾನುಭವಿಗಳನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರವು ಪ್ರತಿ ಖಾತೆಗೆ ಕಾರ್ಮಿಕರ ಚಂದಾಹಣದ ಶೇಕಡ 50 ಅಥವಾ 1000 ರೂಪಾಯಿಗಳು ಇವುಗಳಲ್ಲಿ ಯಾವುದು ಕಡಿಮೆ ಇದೆಯೋ ಆ ಮೊತ್ತವನ್ನು 5 ವರ್ಷಗಳವರೆಗೆ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡುತ್ತದೆ.