ಸಾಗರ ನೀರಿನ ಉಷ್ಣಾಂಶ & ಲವಣತೆ

 

ಸಾಗರಗಳ ಉಷ್ಣಾಂಶ


ಸಮುದ್ರ ಅಥವಾ ಸಾಗರಗಳ ನೀರಿನ ಉಷ್ಣಾಂಶವು ವಿವಿಧ ಅಕ್ಷಾಂಶ ಹಾಗೂ ವಿವಿಧ ಆಳಗಳಲ್ಲಿ ಭಿನ್ನವಾಗಿರುವುದು. ಸಮಭಾಜಕವೃತ್ತದ ಸಮೀಪ ಉಷ್ಣವಲಯದ ಸಾಗರದ ನೀರು ಆಕ್ರ್ಟಿಕ್ ಮತ್ತು ಅಂಟಾರ್ಟಿಕ ವೃತ್ತಗಳಲ್ಲಿನ ನೀರಿಗಿಂತ ಹೆಚ್ಚು ಉಷ್ಣಾಂಶವನ್ನು ಹೊಂದಿದೆ. ಇದೇ ರೀತಿಯಲ್ಲಿ ಸಾಗರದ ನೀರಿನಲ್ಲಿ ಆಳಕ್ಕೆ ಹೋದಂತೆ ಉಷ್ಣಾಂಶವು ಕಡಿಮೆಯಾಗುವುದು. ಇದಕ್ಕೆ ಕಾರಣ ಸೂರ್ಯನ ಕಿರಣಗಳು ನೀರಿನಲ್ಲಿ 200 ಮೀ.ಗಳವರೆಗೆ ಮಾತ್ರ ಪ್ರವೇಶಿಸುತ್ತವೆ.

ಸಾಗರಗಳ ಲವಣತೆ


ಸಾಗರ ಮತ್ತು ಸಮುದ್ರಗಳ ನೀರು ಉಪ್ಪಾಗಿರುವುದು. ವಿವಿಧ ಲವಣಗಳು ನೀರಿನಲ್ಲಿ ಕರಗಿರುವುದರಿಂದ ಸಾಗರದ ನೀರು ಉಪ್ಪಾಗಿರುತ್ತದೆ. ಸಾಗರ ನೀರಿನಲ್ಲಿ ಅನೇಕ ಲವಣ ವಸ್ತುಗಳು ಕರಗಿರುವುವು. ಅವುಗಳ ಪ್ರಮಾಣಕ್ಕೆ ಸಾಗರ ನೀರಿನ ಲವಣತೆ ಎನ್ನುವರು. ಲವಣತೆಯನ್ನು ಅಳೆಯಲು 1000 ಗ್ರಾಂ ತೂಕದಷ್ಟು ಸಾಗರ ನೀರನ್ನು ತೆಗೆದುಕೊಂಡು ಅದರಲ್ಲಿ ಕರಗಿರುವ ಲವಣ ವಸ್ತುಗಳ ತೂಕವನ್ನು ನಿರ್ಧರಿಸುವರು. ಪ್ರತಿ 1000 ಗ್ರಾಂ ಸಾಗರ ನೀರಿನಲಿಲ ಕರಗಿದ ಲವಣಗಳ ವಸ್ತುಗಳ ತೂಕವೇ ಲವಣತೆಯ ಪರಿಮಾಣವಾಗಿದೆ. ಸಾಗರಗಳಲ್ಲಿ ಸುಮಾರು 84 ಮೂಲವಸ್ತುಗಳು ವಿವಿದ ರಾಸಾಯನಿಕ ಸ್ಥಿತಿಯಲ್ಲಿರುತ್ತವೆ. ಅವುಗಳಲ್ಲಿ ಮುಖ್ಯವಾಗಿ ಸೋಡಿಯಂ (Na), ಮೇಗ್ನಿಶಿಯಂ (Mg), ಕ್ಯಾಲ್ಸಿಯಂ (Ca), ಪೊಟ್ಯಾಶಿಯಂ (Ka), ಕ್ಲೋರಿನ್ (CI) ಮೂಲವಸ್ತುಗಳ ಪ್ರಮಾಣ ಅಧಿಕವಾಗಿರುತ್ತವೆ. ಬೆಳ್ಳಿ, ಬಂಗಾರ, ರೇಡಿಯಂ ಥೋರಿಯಂ ಅಲ್ಪ ಪ್ರಮಾಣದಲ್ಲಿ ಇರುತ್ತವೆ.
ಪ್ರಪಂಚದಲ್ಲಿ ಅತಿ ಹೆಚ್ಚು ಲವಣತೆ ಹೊಂದಿರುವ ಕೆಲವು ಜಲಭಾಗಗಳು .
1. ಟರ್ಕಿಯ ವ್ಯಾನ್‍ಸರೋವರ - 330/000
2. ಮೃತ ಸಮುದ್ರ - (ಜೋರ್ಡಾನ್) - 300/000
3. ಸಾಂಬಾರ್ ಸರೋವರ - (ಭಾರತ) - 265/000
4. ಕೆಂಪು ಸಮುದ್ರ - ( ಏಷ್ಯಾ ಮತ್ತು ಆಫ್ರಿಕಾ) - 240/000