ಸುವರ್ಣ ಕೃಷಿ ಗ್ರಾಮಯೋಜನೆ:
ಕರ್ನಾಟಕರಾಜ್ಯ ಸರ್ಕಾರದ ಕೃಷಿ ಇಲಾಖೆಯು ICRISAT ಸಂಸ್ಥೆಯೊಂದಿಗೆ ಆಯ್ದ 1000 ಹಳ್ಳಿಗಳ ರೈತರ ಆಧಾಯವನ್ನು ಶೇಕಡ 20 ರಷ್ಟು ಹೆಚ್ಚಿಸುವಗುರಿಯೊಂದಿಗೆ ಪ್ರಾರಂಭಿಸಿರುವ ಯೋಜನೆ ಇದಾಗಿದೆ. ಇದನ್ನು 2016 ಆಗಸ್ಟ್‍ರಲ್ಲಿ ಆರಂಭಿಸಲಾಗಿದೆ. ಮೊದಲ ಪರೀಕ್ಷಾರ್ಥ ಹಂತದಲ್ಲಿ ಈ ಯೋಜನೆಯನ್ನು 150 ಹಳ್ಳಿಗಳನ್ನು ಆಯ್ಕೆ ಮಾಡಿ ಅವುಗಳನ್ನು ಆದರ್ಶ ಗ್ರಾಮವನ್ನಾಗಿ ರೂಪಿಸುವುದು & ರೈತರಲ್ಲಿ ಕೌಶಲ್ಯ ಹೆಚ್ಚಿಸುವುದು &ಅವರಿಗೆ ಮಾರುಕಟ್ಟೆ ನಿರ್ವಹಣೆ ತರಬೇತಿ ನೀಡುವುದು. ಈ ಯೋಜನೆಯಡಿಯಲ್ಲಿ 23ಸಾವಿರ ರೈತರಿಗೆ 11000 ಕೋಟಿರೂಪಾಯಿ ಸಾಲ ವಿತರಿಸುವ ಗುರಿಯನ್ನು ಹೊಂದಲಾಗಿತ್ತು. ಈ ಯೋಜನೆಯಡಿಯಲ್ಲಿ 3 ಲಕ್ಷದ ವರೆಗಿನ ಬಡ್ಡಿರಹಿತ ಶೇ 3% ಬಡ್ಡಿದರದಲ್ಲಿ ದೀರ್ಘಾವಧಿ ಸಾಲ ವಿತರಿಸುವಗುರಿಯನ್ನು ಹೊಂದಲಾಗಿತ್ತು.