ಮೇಕ್ ಇನ್ ಇಂಡಿಯಾ :-

 

ಪೀಠಿಕೆ :


‘ಮೇಕ್ ಇನ್ ಇಂಡಿಯಾ’ ಇದು ಭಾರತದ ಪ್ರಧಾನಿ ನರೇಂದ್ರಮೋದಿಯವರ ಮಹಾತ್ವಾಕಾಂಕ್ಷಿ ಅಭಿಯಾನಗಳಲ್ಲಿ ಒಂದು. ಈ ಅಭಿಯಾನದ ಮೂಲಕ ಜಾಗತಿಕ ಮತ್ತು ಸ್ಥಳೀಯ ಉದ್ಯಮಿಗಳ ಬೃಹತ್ ಸಮಾವೇಶದ ಜೊತೆಗೆ ದೇಶದ ಉತ್ಪದನಾ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದ ಉದ್ಯೋಗ ಸೃಷ್ಟಿಸುವುದಾಗಿದೆ. ಸ್ಥಿರತೆ ಮತ್ತು ಧೈರ್ಯದ ಪ್ರತೀಕವಾದ ಸಿಂಹ ಮೇಕ್ ಇನ್ ಇಂಡಿಯಾದ ಲಾಂಛನವಾಗಿದೆ.

ವಿಷಯ ನಿರೂಪಣೆ :


‘ಮೇಕ್ ಇನ್ ಇಂಡಿಯಾ’ ಅಭಿಯಾನವು ಮೂಲತ: ದೇಶಿಯ ಮತ್ತು ಸಾಗರೋತ್ತರ ಹೂಡಿಕೆದಾರರರ ಭರವಸೆದಾಯಕವಾಗಿದೆ. ಅದಲ್ಲದೇ ಭಾರತವನ್ನು ಒಂದು ಮುಖ್ಯ ಉತ್ಪಾದನಾ ಕೇಂದ್ರವಾಗಿಮಾಡುವ ಮತ್ತು 125 ಕೋಟಿ ಜನಸಂಖ್ಯೆಯಿಂದ ಪ್ರಭಲವಾದ ಭಾರತದಲ್ಲಿ ಉದ್ಯೋಗವಕಾಶಗಳು ಕಲ್ಪಿಸುವ ಯೋಜನೆಯಾಗಿದೆ.2022 ರ ಹೊತ್ತಿಗೆ ಉತ್ಪಾದನಾ ವಲಯದಲ್ಲಿ ದೇಶಿಯ ಮೌಲ್ಯದ ಜೊತೆಗೆ ಉತ್ಪಾದನಾ ತಾಂತ್ರಿಕ ಆಳದ ಹೆಚ್ಚಳ ಹಾಗೂ ಜಾಗತಿಕ ಮಟ್ಟದಲ್ಲಿ ಭಾರತೀಯ ಉತ್ಪಾದನಾ ವಲಯದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು. ಈ ಯೋಜನೆಯ ವಿಶೇಷ ಕಾರ್ಯವಾಗಿದೆ

ಭಾರತವು “ ಅನುಕೂಲಕರವದ ಜನಸಂಖ್ಯಾ ಲಾಭಾಂಶ” ಹೊಂದುವ ಧನಾತ್ಮಕ ಅಂಶಗಳನ್ನು ಹೊಂದಿದೆ. ಇದು ಗುಣಮಟ್ಟದ ಉದ್ಯೋಗಿಗಳ ನಿರಂತರ ಲಭ್ಯತೆ ಮತ್ತು ಉದ್ಯೋಗ ಭತ್ಯೆ, ವೆಚ್ಚ ಇವುಗಳು ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ಕಡಿಮೆ ಇದೆ. ಜವಾಬ್ದಾರಿಯುತವಾಗಿ ವಿಶ್ವಾಸರ್ಹತೆಯಿಂದ ಮತ್ತು ವೃತ್ತಿಪರತೆಯಿಂದ ಕಾರ್ಯಾಚರಣೆ ನಡೆಸುವ ವ್ಯಾಪಾರ ಕೇಂದ್ರಗಳಿವೆ. ಅಲ್ಲದೇ ದೇಶವು ಕಾನೂನಿನ ಮತ್ತು ದೇಶಿಯ ಮಾರುಕಟ್ಟೆಯ ಪ್ರಭಲ ಗ್ರಾಹಕೀಕರಣ ಸಾಮರ್ಥ್ಯವನ್ನು ನಡೆಸುವ ಒಂದು ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯನ್ನು ಹೊಂದಿದೆ. ಈ ಎಲ್ಲ ಅಂಶಗಳು ಮೇಕ್ ಇನ್ ಇಂಡಿಯಾದ ಯಶಸ್ಸಿಗೆ ಸಹಾಯಕವಾಗಿವೆ.

ಉಪಸಂಹಾರ :


ಮಂಗಳಯಾನ ಯಶಸ್ಸಿನ ಬಳಿಕ ಭಾರತದ ಪ್ರತಿಬೆಯ ಬಗ್ಗೆ ಯಾರೊಬ್ಬರೂ ಮಾತನಾಡುವಂತಿಲ್ಲ. ಆದರೆ ನಾವೆಲ್ಲ ಶ್ರದ್ಧೆಯಿಂದ ಈ ಯೋಜನೆಗೆ ಪ್ರೋತ್ಸಾಹ ನೀಡಬೇಕಿದೆ. ಬನ್ನಿ ನಾವೆಲ್ಲರೂ ಸೇರಿ ಮೇಕ್ ಇನ್ ಇಂಡಿಯಾವನ್ನು ಯಶಸ್ವಿಗೊಳಿಸೋಣ, ಯುವಕರಿಗೆ ಉದ್ಯೋಗವಕಾಶ ಸೃಷ್ಟಿಸೋಣ, ಭರತದ ಬಡತನ ನೀಗಿಸೋಣ.