Loading [Contrib]/a11y/accessibility-menu.js

ಪ್ರಧಾನ ಮಂತ್ರಿ ಫಸಲ್ ಭೀಮಾ ಯೊಜನೆ(PMFBY)

 

ವ್ಯವಸಾಯ ಆಧಾರಿತ ಭಾರತದ ರೈತರು ಅತಿವೃಷ್ಟಿ, ಅನಾವೃಷ್ಟಿ, ಪ್ರಾಕೃತಿಕ ವಿಕೋಪ ಹಾಗೂ ಮತ್ತಿತರ ಕಾರಣಗಳಿಂದ ಬೆಳೆ ನಷ್ಟಕ್ಕೊಳಗಾದಾಗ ಆರ್ಥಿಕವಾಗಿ ಅವರನ್ನು ರಕ್ಷಿಸುವ ಸಲುವಾಗಿ ಹಾಗೂ ರೈತರ ಆದಾಯವನ್ನು ಸಧೃಡಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಬೆಳೆ ವಿಮೆ ಯೋಜನೆಯೇ ‘ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ(PMFBY) ಈ ಯೋಜನೆಯಡಿಯಲ್ಲಿ ವಿಮೆ ಮಾಡಿಸುವ ರೈತರು ವಿಮಾಕಂಪನಿ ಭರವಸೆ ನೀಡುವ ಒಟ್ಟು ಹಣದ ಮೇಲೆ ಖಾರಿಫ್ ಬೆಳೆಗೆ ಶೇಕಡಾ 2ರಷ್ಟು , ರಾಬಿ ಬೆಳೆಗೆ ಶೇಕಡ 1.5 ರಷ್ಟು ಮತ್ತು ತೋಟಗಾರಿಕೆ ಬೆಳೆಗೆ ಶೇಕಡ 5ರಷ್ಟು ಪ್ರೀಮಿಯಮ್ ಹಣ ಸಂದಾಯ ಮಾಡಬೇಕಾಗುತ್ತದೆ. ಬ್ಯಾಂಕ್ ಮತ್ತಿತರ ಹಣಕಾಸು ಸಂಸ್ಥೆಗಳಲ್ಲಿ ಕೃಷಿ ಸಾಲ ಪಡೆದ ರೈತರಿಗೆ ಈ ವಿಮೆಯನ್ನು ಕಡ್ಡಾಯ ಮಾಡಲಾಗಿದ್ದು, ಸಾಲವಿಲ್ಲದ ರೈತರಿಗೆ ಯಾವುದೇ ರೀತಿ ಕಡ್ಡಾಯವಿಲ್ಲ. ಕಳೆದ ವರ್ಷದಲ್ಲಿ ಒಟ್ಟು ಕೃಷಿ ಪ್ರದೇಶದ 30% ರಷ್ಟು ವಿಮಾ ಯೋಜನೆ ವ್ಯಾಪ್ತಿಗೆ ಒಳಪಟ್ಟಿದ್ದು ಪ್ರಸಕ್ತ ಸಾಲಿನಲ್ಲಿ 40% ಮತ್ತು ಮುಂದಿನ ವರ್ಷದಲ್ಲಿ 50% ರಷ್ಟು ಪ್ರದೇಶವನ್ನು ಈ ಯೋಜನೆಯ ವ್ಯಾಪ್ತಿಗೆ ತರುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಪ್ರಸ್ತುತ ಆಯವ್ಯಯದಲ್ಲಿ ಕೇಂದ್ರ ಸರ್ಕಾರ 5500 ಕೋಟಿ ರೂಪಾಯಿ ಹಣ ಮೀಸಲಿಟ್ಟಿದೆ.