ನಗರ ಸ್ಥಳೀಯ ಸರ್ಕಾರಗಳು

 

* ಸ್ಥಳೀಯ ಸರ್ಕಾರಗಳು ಸ್ವಾಯತ್ತತೆಯನ್ನು ಹೊಂದಿರುತ್ತವೆ.
* ಸಂವಿಧಾನಕ್ಕೆ 7ನೇ ತಿದ್ದುಪಡಿ ತಂದು 1-6-1993ರಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲಾಯಿತು. ಭಾಗ 9(ಎ)ನಲ್ಲಿ 243 ಪಿ ವಿಧಿಯಿಂದ 243 ಝಡ್ ವಿಧಿಗಳು ನಗರ ಸ್ಥಳೀಯ ಸರ್ಕಾರಗಳ ಬಗ್ಗೆ ಪ್ರಸ್ತಾಪಿಸುತ್ತವೆ.
* ಕರ್ನಾಟಕ ಸರ್ಕಾರವು ಸಂವಿಧಾನದ ಭಾಗ 9ನೇ ಎನಲ್ಲಿ ನೀಡಿರುವ ವಿವರಗಳ ಆಧಾರದ ಮೇಲೆ 1976 ರ ಮುನ್ಸಿಪಲ್ ಕಾರ್ಪೋರೇಷನ್ ಕಾಯ್ದೆ ಹಾಗೂ 1966 ರ ಮುನ್ಸಿಪಾಲಿಟಿ ಕಾಯ್ದೆಗೆ ಕೆಲವು ಬದಲಾವಣೆ ತರುವ ಮೂಲಕ ನಗರ ಸ್ಥಳೀಯ ಸರ್ಕಾರವನ್ನು 3 ವರ್ಗಗಳಾಗಿ ವಿಂಗಡಿಸಿ ಅಳವಡಿಸಿಕೊಳ್ಳಲಾಗಿದೆ.

ಮಹಾನಗರ ಪಾಲಿಕೆ (ಕಾರ್ಪೋರೇಶನ)


* ಮೂರು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ರಾಜ್ಯದ ಯಾವ ನಗರ ಹೊಂದಿರುತ್ತದೆಯೋ ಆ ನಗರವನ್ನು ಕಾರ್ಪೋರೇಷನ್ ಅಥವಾ ಮಹಾನಗರ ಪಾಲಿಕೆಗಳು ಎಂದು ಕರೆಯುಲಾಗುತ್ತದೆ. ಉದಾ: ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ದಾವಣರೆಗೆಸ, ಗುಲ್ಬರ್ಗಾ ಒಟ್ಟು 8 ಮಹಾನಗರ ಪಾಲಿಕೆಗಳು.
* ಮಹಾನಗರ ಪಾಲಿಕೆಯ ಪ್ರಮುಖ ಹುದ್ದೆಗಳು ಮೇಯರ್, ಉಪಮೇಯರ್, ಆಯುಕ್ತರು
* ಮಹಾನಗರ ಪಾಲಿಕೆ ಸಾಮಾನ್ಯ ಸಮಿತಿ ಸ್ಥಾಯಿ ಸಮಿತಿ ಆಯುಕ್ತರನ್ನು ಹೊಂದಿರುತ್ತದೆ.
ಅರ್ಹತೆಗಳು
* 21 ವರ್ಷ ವಯಸ್ಸಾಗಿರಬೇಕು.
* ನಗರದ ಯಾವುದಾದರೂ ವಾರ್ಡನ ಮತದಾರರ ಪಟ್ಟಿಯಲ್ಲಿ ಹೆಸರಿರಬೇಕು.
* ಸಾಮಾನ್ಯ ಸಮಿತಿಯ ಸದಸ್ಯರು ನಗರದ ವಿವಿಧ ವಾರ್ಡಗಳಿಂದ 5 ವರ್ಷಕ್ಕೆ ಆಯ್ಕೆಗೊಂಡ ಕಾರ್ಪೋರೇಟರ್‍ಗಳು ಜೊತೆಗೆ ನಗರ ವ್ಯಾಪ್ತಿಯನ್ನು ಪ್ರತಿನಿಧಿಸುವ ಲೋಕಸಭಾ ಸದಸ್ಯರು ವಿಧಾನಸಭಾ ಸದಸ್ಯರು ರಾಜ್ಯ ಸರ್ಕಾರದಿಂದ ನಾಮಕರಣಗೊಂಡ 5 ಜನ ಸದಸ್ಯರಿರುತ್ತಾರೆ.
* ಜನಸಂಖ್ಯೆ ಆಧಾರದ ಮೇಲೆ ನಗರಪಾಲಿಕೆಯ ವ್ಯಾಪ್ತಿಯ ಪ್ರದೇಶವನ್ನು ಅನೇಕ ವಿಭಾಗಗಳಾಗಿ(ವಾರ್ಡಗಳಾಗಿ) ವಿಂಗಡಿಸಲಾಗಿರುತ್ತದೆ. ನಗರ ಪಾಲಿಕೆಯ ಚುನಾವಣೆಯಲ್ಲಿ ವಯಸ್ಕ ಮತದಾನದ ಮೂಲಕ ಚುನಾಯಿಸಲಾಗುವ ಪ್ರತಿನಿಧಿಗಳನ್ನು ನಗರಪಾಲಿಕೆ ಸದಸ್ಯ ಅಥವಾ ಕೌನ್ಸಿಲರ್‍ಗಳೆಂದು ಕರೆಯಲಾಗುತ್ತದೆ.
* ನಗರ ಪಾಲಿಕೆಯ ಒಟ್ಟು ಸ್ಥಾನಗಳಲ್ಲಿ ಪರಿಶಿಷ್ಟ ಜಾತಿಗೆ ಶೇ. 15, ಪರಿಶೀಷ್ಟ ಪಂಗಡಕ್ಕೆ ಶೇ. 3 ಇತರೆ ಹಿಂದುಳಿದ ವರ್ಗಗಳಿಗೆ ಮತ್ತು ಮಹಿಳೆಯರಿಗೆ ಶೇ.1/3 ರಷ್ಟು ಸ್ಥಾನಗಳನ್ನು ಮೀಸಲಿಡಲಾಗಿದೆ ನಗರಪಾಲಿಕೆಯ ಸದಸ್ಯರ ಅಧಿಕಾರಾವಧಿ 5 ವರ್ಷ.
* ಮಹಾಪೌರ (ಮೇಯರ್) ಮತ್ತು ಉಪಮಹಾಪೌರ (ಉಪಮೇಯರ್)ರನ್ನು ಪಾಲಿಕೆಯ ಸದಸ್ಯರು ಪ್ರಥಮ ಸಭೆಯಲ್ಲಿಯೇ ಆಯ್ಕೆ ಮಾಡುತ್ತಾರೆ.
* ಅಧಿಕಾರಾವಧಿ ಒಂದು ವರ್ಷ. ಕಾರ್ಪೋರೇಶನಗಳು, ಲೆಕ್ಕಪತ್ರ ಸಮಿತಿ, ನಗರ ಯೋಜನೆ ಅಭಿವೃದ್ದಿ ಸಮಿತಿ, ತೆರಿಗೆ-ಹಣಕಾಸು ಸಮಿತಿ, ಆರೋಗ್ಯ, ಶಿಕ್ಷಣ, ಸಾಮಾಜಿಕ ಸಮಿತಿಗಳು ಪ್ರತಿ ಸ್ಥಾಯಿ ಸಮಿತಿಯಲ್ಲಿ 7 ಮಂದಿ ಸದಸ್ಯರಿರುತ್ತಾರೆ. ಎಲ್ಲಾ ಸ್ಥಾಯಿ ಸಮಿತಿಯ ಪದನಿಮಿತ್ಯ ಛೇರ್ಮನ್ ಮೇಯರ್ ಮತ್ತು ಉಪಮೇಯರಗಳಾಗಿರುತ್ತಾರೆ. (4 ಸ್ಥಾಯಿ ಸಮಿತಿಗಳು)
* ರಾಜ್ಯ ಸರ್ಕಾರ ನೀಡುವ ಸಹಾಯಧನ, ವಿಧಿಸುವ ತೆರಿಗೆ, ಬಾಡಿಗೆ, ದಂಡ, ಸಾರ್ವಜನಿಕರಿಂದ ಎತ್ತುವ ಸಾಲ, ಮೊದಲಾದವುಗಳು ಮಹಾನಗರ ಪಾಲಿಕೆಯ ಹಣಕಾಸಿನ ಮೂಲಗಳು ಜೊತೆಗೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ರಸ್ತೆ, ಸಾರಿಗೆ, ವಿದ್ಯುತ್, ನೀರು ಸಮಗ್ರ ಅಭಿವೃದ್ದಿ ಇದರ ಪ್ರಮುಖ ಕಾರ್ಯಗಳು.
* ಆಯುಕ್ತರು ಸಾಮಾನ್ಯ ಸಭೆಯಲ್ಲಿ ಭಾಗವಹಿಸಬಹುದು. ಆದರೆ ಮತ ಚಲಾಯಿಸುವಂತಿಲ್ಲ.

ನಗರಸಭೆ ಮತ್ತು ಪುರಸಭೆಗಳು


* 1964 ರ ಕರ್ನಾಟಕ ಮುನ್ಸಿಪಾಲಿಟಿ ಕಾಯ್ದೆ ಅನ್ವಯ ಕರ್ನಾಟಕದಲ್ಲಿ ನಗರ ಹಾಗೂ ಪಟ್ಟಣ ಪುರಸಭೆಗಳನ್ನು ಸ್ಥಾಪಿಸಲಾಯಿತು.
* 20,000 ರಿಂದ 50,000 ವರೆಗಿನ ಜನಸಂಖ್ಯೆಯುಳ್ಳ ಪ್ರದೇಶವನ್ನು ಪಟ್ಟಣ ಪುರಸಭೆ ಎಂದು 50,000 ರಿಂದ 3 ಲಕ್ಷದವರೆಗಿನ ಜನಸಂಖ್ಯೆಯ ಪ್ರದೇಶವನ್ನು ನಗರಸಭೆಯೆಂದು ಕರೆಯಲಾಗುತ್ತದೆ. ನಗರ ಮತ್ತು ಪಟ್ಟಣ ಪುರಸಭೆಗೆ ಸದಸ್ಯರ ಸಂಖ್ಯೆಯನ್ನು ಅಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ.
* ನಗರ ಪಟ್ಟಣ ಪುರಸಭೆಗಳ ಸದಸ್ಯರು ಚುನಾವಣೆಗಳ ಮೂಲಕ ಪ್ರಜೆಗಳಿಂದ ನೇರವಾಗಿ 5 ವರ್ಷಗಳಿಗೊಮ್ಮೆ ಆಯ್ಕೆಯಾಗುತ್ತಾರೆ.
* ರಾಜ್ಯ ಸರ್ಕಾರ ನಗರಸಭೆಯು ತನ್ನ ಕಾರ್ಯವನ್ನು ನೀತಿ ನಿಯಮಗಳಿಗೆ ಅನುಗುಣವಾಗಿ ನಿರ್ವಹಿಸದಿದ್ದರೆ ಅದನ್ನು ವಜಾ ಮಾಡಬಹುದು.
* ಇದರಲ್ಲಿ ಬರುವ ಸದಸ್ಯೆರುಗಳೆಂದರೆ, ರಾಜ್ಯ ಸರ್ಕಾರದಿಂದ ನೇಮಕಗೊಂಡ ವಿಶೇಷ ಅರ್ಹತೆವುಳ್ಳ 5 ಸದಸ್ಯರು, ಪುರಸಭೆಯ ವಿವಿಧ ವಾರ್ಡಗಳಿಂದ ಆಯ್ಕೆಯಾದ ಸದಸ್ಯರು, ಪಟ್ಟಣ ವ್ಯಾಪ್ತಿಯ ಲೋಕಸಭಾ, ವಿಧಾನಸಭಾ, ರಾಜ್ಯಸಭಾ, ವಿಧಾನ ಪರಿಷತ್ ಸದಸ್ಯರಿರುತ್ತಾರೆ.
* ನಗರ ಪಟ್ಟಣ ಪುರಸಭೆಗಳ ಒಟ್ಟು ಸ್ಥಾನಗಳಲ್ಲಿ ಪರಿಶಿಷ್ಟ ಜಾತಿಗೆ ಶೇ. 15, ಪರಿಶಿಷ್ಟ ಪಂಗಡಕ್ಕೆ ಶೇ.3 ಇತರೆ ಹಿಂದುಳಿದ ವರ್ಗಗಳಿಗೆ ಮತ್ತು ಮಹಿಳೆಯರಿಗೆ 1/3 ರಷ್ಟು ಸ್ಥಾನಗಳನ್ನು ಮೀಸÀಲಿಡಲಾಗಿರುತ್ತದೆ.
* ನಗರ ಹಾಗೂ ಪಟ್ಟಣ ಪುರಸಭೆಗಳ ಚುನಾಯಿತ ಸದಸ್ಯರು ತಮ್ಮಲ್ಲಿಯೇ ಒಬ್ಬನನ್ನು ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನಾಗಿ ನೇಮಿಸಿಕೊಳ್ಳುತ್ತಾರೆ. ನಗರ ಹಾಗೂ ಪಟ್ಟಣ ಪುರಸಭೆಗಳ ಸ್ಥಾಯಿ ಸಮಿತಿಗಳೆಂದರೆ, ತೆರಿಗೆ ಮತ್ತು ಹಣಕಾಸು ಸಮಿತಿ ಸಾರ್ವಜನಿಕ ಆರೋಗ್ಯ-ಶಿಕ್ಷಣ ಸಮಿತಿ, ಸಾಮಾಜಿಕ ನ್ಯಾಯ ಸಮಿತಿ, ಲೆಕ್ಕ ಪತ್ರ ಸಮಿತಿ, ನಗರ ಯೋಜನೆ ಮತ್ತು ಅಭಿವೃದ್ದಿ ಸಮಿತಿ ಸೇರಿ ಒಟ್ಟು 4 ಸ್ಥಾಯಿ ಸಮಿತಿಗಳು.
* ಪ್ರತಿ ಸ್ಥಾಯಿ ಸಮಿತಿಯಲ್ಲಿ 7 ಜನ ಸದಸ್ಯರಿರುತ್ತಾರೆ.
* ರಾಜ್ಯ ಸರ್ಕಾರ ನೀಡುವ ಅನುದಾನ, ಬಾಡಿಗೆ, ತೆರಿಗೆ, ದಂಡ, ಸಾರ್ವಜನಿಕರಿಂದ ಎತ್ತುವ ಸಾಲ, ಸಂಗ್ರಹವಾಗುವ ಹಣದ ಮೂಲಗಳು
* ರಾಜ್ಯ ಸರ್ಕಾರ 2ನೇ ದರ್ಜೆಯ ಅಧಿಕಾರಿಯನ್ನು ನಗರವಾರು ಪಟ್ಟಣ ಪುರಸಭೆಗಳ ಆಡಳಿತ ನಿರ್ವಹಣೆಗೆ ಸಂಬಂಧಿಸಿದಂತೆ ಆಯುಕ್ತರನ್ನಾಗಿ (ಮುಖ್ಯ ಅಧಿಕಾರಿ) ನೇಮಿಸುತ್ತಾರೆ.
* ಮುಖ್ಯ ಅಧಿಕಾರಿ ಸಾಮಾನ್ಯ ಸಭೆಯಲ್ಲಿ ಭಾಗವಹಿಸಬಹುದು. ಆದರೆ ಮತ ಚಲಾಯಿಸುವಂತಿಲ್ಲ.