ಸಿಂಧೂ ನಾಗರಿಕತೆ

 

ಸಿಂಧೂ ನಾಗರಿಕತೆ


ಪ್ರಾಚೀನ ನಾಗರೀಕತೆ ನಗರ ನಾಗರೀಕತೆ ನಿರ್ಮಿಸಿದ ಮೊದಲಿಗರು - ಸಿಂಧೂಜನ
ಸಿಂಧೂ ಬಯಲಿನ ನಾಗರಿಕತೆಯನ್ನು ಹೀಗೆ ಕರೆಯುವರು - ಹರಪ್ಪಾ ಸಂಸ್ಕೃತಿ
ಭಾರತದ ಅತೀ ಪ್ರಾಚೀನ ನಾಗರೀಕತೆ - ಸಿಂಧೂ ಬಯಲಿನ ನಾಗರಿಕತೆ
ಸಿಂಧೂ ನಾಗರಕತೆಯ ಪ್ರಮುಖ ನಗರಗಳು - ಹರಪ್ಪಾ ಮತ್ತು ಮೊಹೆಂಜೋದಾರೋ
ಹರಪ್ಪಾ ಮತ್ತು ಮೊಹೆಂಜೋದಾರೋ ನಗರಗಳು ಈ ಪ್ರಾಂತ್ಯದಲ್ಲಿದೆ - ವಾಯುವ್ಯ ಭಾರತದಲ್ಲಿ ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯದಲ್ಲಿ
ಮೊಹೆಂಜೋದಾರೋ ಪದದ ಅರ್ಥ - ಮಡಿದವರ ದಿಬ್ಬ
ಹರಪ್ಪಾ ಸಂಸ್ಕೃತಿಯ ಅವಶೇಷಗಳನ್ನು ಪತ್ತೆ ಹಚ್ಚಿದವರು - ದಯಾರಾಮ್ ಸಾಹನಿ
ಹರಪ್ಪಾ ಸಂಸ್ಕೃತಿಯು ಬೆಳಕಿಗೆ ಬಂದ ಬಂದ ವರ್ಷ - 1921
ಹರಪ್ಪಾ ಸಂಸ್ಕೃತಿಯ ಅವಶೇಷಗಳು ಮೊದಲು ದೊರೆತದದ್ದು - ಪಂಜಾಬ್ ಪ್ರಾಂತ್ಯದಲ್ಲಿ
ಮೊಹೆಂಜೋದಾರೋ ನಗರವನ್ನು ಪತ್ತೆ ಹಚ್ಚಿದವರು - ಆರ್.ಡಿ.ಬ್ಯಾನರ್ಜಿ
ಮೊಹೆಂಜೋದಾರೋ ನಗರ ಬೆಳಕಿಗೆ ಬಂದ ವರ್ಷ - 1922
ಮೊಹೆಂಜೋದಾರೋ ನಗರವನ್ನು ಪತ್ತೆ ಹಚ್ಚಿದ್ದು - ಸಿಂಧ್ ಪ್ರಾಂತ್ಯದಲ್ಲಿ
ಪ್ರಾಚೀನ ಹಡಗುಕಟ್ಟೆ ದೊರೆತ ಸ್ಥಳ - ಲೋಥಾಲ್
ಲೋಥಾಲ್ ನ ಹಡಗು ಕಟ್ಟೆಯನ್ನ ಪತ್ತೆ ಹಚ್ಚಿದವರು - ಡಾ.ಎಸ್.ಆರ್.ರಾವ್
ಕಾಲಿಬಂಗನ್ ನಗರವನ್ನು ಪತ್ತೆ ಹಚ್ಚಿದ್ದು - 1960 ರಲ್ಲಿ
ಕಾಲಿಬಂಗನ್ ನಗರ ಈ ರಾಜ್ಯದಲ್ಲಿದೆ - ಪಂಜಾಬ್
ಗಾನ್ ವೆರಿಲಾಲ್ ಹಾಗೂ ರಾಖಿಗರಿ ನಗರವನ್ನು ಪತ್ತೆ ಹಚ್ಚಿದ್ದು - 1990 ರಲ್ಲಿ
ಗಾನ್ ವೆರಿಲಾಲ್ ನಗರ ಪಟ್ಟಣ ಈ ನದಿ ದಂಡೆಯಲ್ಲಿದೆ - ಹಾಕ್ರಾನದಿ
ಗಾನ್ ವೆರಿಲಾಲ್ ಪಟ್ಟಣದ ವಿಸ್ತೀರ್ಣ - 815 ಹೆಕ್ಟೇರ್
ಹರಪ್ಪಾ ಹಾಗೂ ಮೊಹೆಂಜೋದಾರೋ ನಗರಗಳ ಮಧ್ಯೆ ಇರುವ ನಗರ - ಗಾನ್ ವೆರಿಲಾಲ್
ಹರಪ್ಪಾದ ಪೂರ್ವಕ್ಕೆ ಇರುವ ನಗರ - ರಾಖಿಗರಿ ನಗರ
ಸಿಂಧೂ ನಾಗರಿಕತೆಯ ಜನರ ಲಿಪಿಗಳು - ಸೆಮಿಟಿಕ್ ಬರಹವನ್ನ ಹೋಲುತ್ತದೆ
ಈಜಿಪ್ ಷಿಯನ್ನರು ತಮ್ಮ ದಶಮಾಂಶ ಪದ್ದತಿಯನ್ನು ಈ ಸಂಕೇತದಲ್ಲಿ ಬರೆಯುತ್ತಿದ್ದರು - ಹಿರೋಗ್ಲಿಪಿಕ್ಸ್
ಸಿಂಧೂ ಜನರು ಮುದ್ರಿಕೆಗಳನ್ನು ಈ ಉದ್ದೇಶಕ್ಕೆ ಬಳಸುತ್ತಿದ್ದರು - ವಾಣಿಜ್ಯ ಉದ್ದೇಶಕ್ಕೆ
ಭಾರತದ ನಾಗರಿಕತೆಯ ತೊಟ್ಟಿಲು - ಸಿಂಧೂ ನಾಗರಿಕತೆ
ಸಿಂಧೂ ನಾಗರಿಕತೆಯಲ್ಲಿ ವ್ಯಾಪಕವಾಗಿದ್ದ ಲೋಹ - ಕಂಚು
ಸಿಂಧೂ ಜನರ ವಿನಿಮಯ ಪದ್ದತಿ - ವಸ್ತು ವಿನಿಮಯ ಪದ್ದತಿ
ಸಿಂಧೂ ಜನರು ಈ ದೇವರ ಆರಾಧಕರಾಗಿದ್ದರು - ಮಾತೃದೇವತೆ
ಸಿಂಧೂ ಜನರ ಈ ನೂರನ್ನು ಈ ಸಂಕೇತದಿಂದ ಸೂಚಿಸುತ್ತಿದ್ದರು - H
ಜೋಡಿಸಿದ ಕೈ ಚಿಹ್ನೆ - 10 ನ್ನ ಸೂಚಿಸುತ್ತದೆ
ಉಗುರಿನ ಚಿಹ್ನೆ - 20 ನ್ನ ಸೂಚಿಸುತ್ತದೆ
ಮನುಷ್ಯನ ಆಕರ - ಸಾವಿರವನ್ನು ಸೂಚಿಸುತ್ತಿತ್ತು

ರಾಜಕೀಯ ವ್ಯವಸ್ಥೆ


12 ಮುದ್ರೆಗಳಲ್ಲಿದ್ದ ಶಬ್ದಗಳು - ಪಾಲ , ಪಾಲಕ , ಮಹಾಪಾಲ
ಪಾಲ , ಪಾಲಕ , ಮಹಾಪಾಲ ಪದದ ಅರ್ಥ - ಆಡಳಿತಗಾರಿ , ಉಪ ಆಡಳಿತಗಾರ ಹಾಗೂ ಮಹಾ ಆಡಳಿತಗಾರ
ಲೇಹ , ಲೇಹಕ ಪದದ ಅರ್ಥ - ಲೇಖ ಮತ್ತು ಲೇಖಕ

ಸಿಂಧೂ ನಾಗರಿಕತೆಯ ಪ್ರಮುಖ ಲಕ್ಷಣಗಳು


1> ನಗರ ಯೋಜನೆ
2> ಒಳಚರಂಡಿ ವ್ಯವಸ್ಥೆ
3> ಗೃಹ ನಿರ್ಮಾಣ
4> ಸ್ನಾನದ ಕೊಳ
5> ಉಗ್ರಾಣ
6> ಸಿಂಧೂ ನಾಗರಿಕತೆಯ ಜನರು ಮನೆಗಳನ್ನು - ಸುಟ್ಟ ಇಟ್ಟಿಗೆಗಳಿಂದ ಕಟ್ಟುತ್ತಿದ್ದರು
7> ಸಿಂಧೂ ನಾಗರಿಕತೆಯ ಸ್ನಾನದ ಕೊಳ ಕಂಡು ಬಂದದ್ದು - ಮೊಹೆಂಜೋದಾರೋ
8> ಸ್ನಾನದ ಕೊಳದ ಉದ್ದ ಅಗಲಗಳು - 180 ಅಡಿ ಉದ್ದ 108 ಅಡಿ ಅಗಲ
9> ಸಿಂಧೂ ನಾಗರಿಕತೆಯ ಉಗ್ರಾಣಗಳು ಕಂಡು ಬಂದಿದ್ದು - ಹರಪ್ಪಾದಲ್ಲಿ

ಸಾಮಾಜಿಕ ಜೀವನ


ಈ ಕೆಳಗಿನ ವಿಚಾರಗಳು ಮುದ್ರೆಗಳಿಂದ ತಿಳಿದು ಬರುತ್ತದೆ
1> ಸಿಂಧೂ ಜನರು - ಹತ್ತಿ ಬಟ್ಟೆ ನೇಯುವುದು ಕಲಿತಿದ್ದರು
2> ಸ್ತ್ರೀಯರು ನೃತ್ಯ ಕಲೆಯಗಳಲ್ಲಿ ಪರಿಣತಿ ಹೊಂದಿದ್ದರು
3> ಇವರು ಉಪಯೋಗಿಸುತ್ತಿದ್ದ ಪ್ರಮುಖ ಆಭರಣಗಳು - ತೋಳಬಂದಿ , ಮಣಿಸರ ,ಓಲೆ , ಮೂಗುತಿ ಹಾಗೂ ಡಾಬು
4> ಸಿಂಧೂ ಕೊಳದ ಸಂಸ್ಕೃತಿಯು ಆಧುನಿಕ ಹಿಂದೂ ಧರ್ಮದ ತವರುಮನೆಯಾಗಿತ್ತು - ಈ ಹೇಳಿಕೆಯನ್ನು ನೀಡಿದವರು - ಜಾನ್ ಮಾರ್ಷಲ್

ಆರ್ಥಿಕ ಜೀವನ


ಸಿಂಧೂ ಜನರ ಮುಖ್ಯ ಉದ್ಯೋಗ - ಕೃಷಿ ಅಥವಾ ವ್ಯವಸಾಯ
ಸಿಂಧೂ ಜನರ ಪ್ರಮುಖ ಬೆಳೆಗಳು - ಗೋಧಿ , ಬಾರ್ಲಿ , ಅಕ್ಕಿ ಹಾಗೂ ಹತ್ತಿ
ಹರಪ್ಪಾದಲ್ಲಿ ಬೆಳೆಯುತ್ತಿದ್ದ ಧಾನ್ಯಗಳು - ಬಟಾಣಿ ಮತ್ತು ನವಣಿ
ಹರಪ್ಪಾ ಜನರು ಈ ದೇಳಗಳೊಡನೆ ವ್ಯಾಪರ ಸಂಪರ್ಕ ಹೊಂದಿದ್ದರು - - ಮೆಸಪೋಟೋಮಿಯ ಹಾಗೂ ಈಜಿಪ್ಟ್
ಇವರ ಪ್ರಮುಖ ಸಾಕು ಪ್ರಾಣಿ - ಗೂಳಿ , ಹಸು , ಕೋಣ , ಘೇಂಡಾಮೃಗ
ಪ್ರಮುಖ ಆಯುಧಗಳು - ಭರ್ಜಿ , ಶೂಲ ,ಬಾಣ , ಚಾಕು ಹಾಗೂ ಕತ್ತಿ
ಸಿಂಧೂ ಜನರ ಕುಶಲ ಕಲೆಗೆ ಕುರುಹುಗಳು - ಮಡಕೆಗಳು , ಆಟದ ಸಾಮಾನು ಹಾಗೂ ಮುದ್ರೆಗಳ ಮೇಲೆ ಕೊರೆದಿರುವ ಪ್ರಾಣಿಗಳ ಚಿತ್ರ
ಸಿಂಧೂ ಜನರ ನರ್ತಕಿಯರ ವಿಗ್ರಹ ದೊರೆತದ್ದು - ಹರಾಪ್ಪದಲ್ಲಿ

ಸಿಂಧೂ ನಾಗರಿಕತೆಯ ಧರ್ಮ


ಸಿಂಧೂ ಸಂಸ್ಕೃತಿಯು ಪ್ರಧಾನ ದೇವತೆ - ಮಾತೃದೇವತೆ
ಪಶುಪತಿಯನ್ನು ಆರಾಧಿಸುತ್ತದ್ದವರು - ಸಿಂಧೂ ಜನರು

ಸಿಂಧೂ ನಾಗರಿಕತೆಯ ಪ್ರಮುಖ ಹೆಸರುಗಳು


ಇಂಡೋ ಸುಮೇರಿಯನ್ ನಾಗರಿಕತೆ
ಚಾಲ್ಕೋಲಿಥಿಕ್ ನಾಗರಿಕತೆ
ಸಿಂಧೂ ತೀರದ ನಾಗರಿಕತೆ

ಹರಪ್ಪಾ ನಾಗರಿಕತೆ


ಗಗ್ಗರ್ ನದಿಯ ಇನ್ನೋಂದು ಹೆಸರು - ಸರಸ್ವತಿ
ಕಾಲಿಬಂಗಾನ್ ಈ ನದಿಯ ದಂಡೆಯಲ್ಲಿದೆ - ಗಗ್ಗರ್ ( ಸರಸ್ವತಿ )
ಸಿಂಧಿ ಭಾಷೆಯಲ್ಲಿ ಮೊಹೆಂಜೋದಾರೋ ಎಂದರೇ - ಮಡಿದವರ ದಿಬ್ಬ
ಮೊಹೆಂಜೋದಾರೋದ ನಿಜವಾದ ಹೆಸರು - ಮೊಹೆಂಜೋದಾಡೋ
ಸಬರಮತಿ ನದಿಯ ಉಪನದಿಯ ತಗ್ಗು ಪ್ರದೇಶದಲ್ಲಿರುವ ನಗರ - ಲೋಥಾಲ್
Oxford Cercle - ಎಂದರೆ - ಎರಡೂ ರಸ್ತೆಗಳು ಕೂಡುವ ಸ್ಥಳ
ಆಧುನಿಕ ಹಿಂದೂ ಧರ್ಮದ ಜನನಿ - ಹರಪ್ಪಾ ನಾಗರಿಕತೆ
ಹರಪ್ಪಾ ನಾಗರಿಕತೆಯ ಜನರು - ಮಾತೃ ಪ್ರಧಾನ ಕುಟುಂಬ ವ್ಯವಸ್ಥೆ ಹೊಂದಿದ್ದರು
ಹರಪ್ಪಾ ಜನರ ಪ್ರಮುಖ ಉದ್ಯೋಗ - ಕೃಷಿ ಮತ್ತು ಪಶುಪಾಲನೆ
ಸಿಂಧೂ ನಾಗರಿಕತೆ ಈ ನಾಗರಿಕತೆ ಸರಿಸಮಾನವಾದದ್ದು - ಸುಮೇರಿಯಾದ ನಾಗರಿಕತೆ
ಹರಪ್ಪಾ ಹಾಗೂ ಮೊಹೆಂಜೋದಾರೋಗಳು ಈಗ - ಪಾಕಿಸ್ಥಾನದಲ್ಲಿದೆ
ಲೋಥಾಲ್ ಈಗ - ಗುಜರಾತ್ ನಲ್ಲಿದೆ
ಸಾರಿಗೆಗೆ ಸಿಂಧೂ ಜನರು ಬಳಸುತ್ತಿದ್ದ ಸಾಧನ - ಎತ್ತಿನಗಾಡಿ
ಸಿಂಧೂ ಜನರ ಮುಖ್ಯ ಮನರಂಜನೆ - ಪಗಡೆಯಾಟ
ಸುಮೇರಿಯಾಗ ಇನ್ನೋಂದು ಹೆಸರು - ಈಜಿಪ್ಟ್
ಸಿಂಧೂ ನಾಗರಿಕತೆ ಬಹುತೇಕ ಭಾಗ ಇದ್ದ ಪ್ರದೇಶ - ವಾಯುವ್ಯ ಭಾರತ
ಸಿಂಧೂ ಜನರ ಹೆಚ್ಚಾಗಿ ರಪ್ತು ಮಾಡುತ್ತಿದ್ದ ವಸ್ತು - ಆಭರಣಗಳು
ಲೋಥಾಲ್ ನಲ್ಲಿ ಉತ್ಕನನ ಮಾಡಿದವರು - ಎಸ್.ಆರ್.ರಾವ್
ಮೊಹೆಂಜೋದಾರೋ ಮುಖ್ಯ ಕಟ್ಟಡ - ಸ್ನಾನದ ಕೊಳ
ರಾಜಸ್ಥಾನದ ಈ ಸ್ಥಳದಲ್ಲಿ ಹರಪ್ಪಾ ಸಂಸ್ಕೃತಿ ಸಂಶೋದಿಸಲ್ಪಟ್ಟಿದೆ - ಕಾಲಿಬಂಗಾನ್
ದೊಡ್ಡ ಉಗ್ರಾಣ ದೊರೆತ ನಗರ - ಹರಪ್ಪಾ
ಇತ್ತೀಚೆಗೆ ಪತ್ತೆ ಹಚ್ಚಲಾಗಿರುವ ನೆಲೆ - ಗುಜರಾತಿನ ಕಛ್ ನ ದೋಲವೀರ
ಇತ್ತಿಚೇಗೆ ಪತ್ತೆ ಮಾಡಲಾಗಿರುವ ಗುಜರಾತಿನ ಅತಿ ದೊಡ್ಡ ನಿವೇಶನ - ದೋಲವೀರ
ಮಣಿ ತಯಾರಕ ಕಾರ್ಯಗಳು ದೊರೆತಿರುವ ಪ್ರದೇಶಗಳು - ಚಾನ್ಹುದಾರೋ ಹಾಗೂ ಲೋಥಾಲ್
ಮೆಸಪೋಟೋಮಿಯ ಇಂದಿನ ಹೆಸರು - ಇರಾಕ್
ಇವರು ದೇಹವನ್ನು - ಉತ್ತರ ದಕ್ಷಿಣಾಭಿಮುಖವಾಗಿ ಹೂಳುತ್ತಿದ್ದರು
ಈ ನಾಗರಿಕತೆಯನ್ನು ಕಂಚಿನ ಯುಗ ಎಂದು ಕರೆಯುವರು - ಸಿಂಧೂ ನಾಗರಿಕತೆ
ಪುರಾತನ ಪ್ರಪಂಚದಲ್ಲಿ ಮೊಟ್ಟ ಮೊದಲು ಹತ್ತಿಯನ್ನು ಬಳಸಿದ ಜನಾಂಗ ಅಥವಾ ನಾಗರಿಕತೆ - ಸಿಂಧೂ ಬಯಲಿನ ನಾಗರಿಕತೆ
ಸಿಂಧೂ ಪ್ರದೇಶವನ್ನ ಇಂಡ್ಸ್ ಎಂದು ಕರೆದವರು - ಅರಬ್ಬರು
ಸಿಂಧೂ ನಾಗರಿಕತೆ ಮೊದಲ ಸಂಶೋಧಿತ ನಗರ - ಹರಪ್ಪಾ
ಸಿಂಧೂ ಜನರು - ವಿಗ್ರಹ ಆರಾಧಕರಾಗಿದ್ದರು
ಚಾನ್ಹುದಾರೋ ನಿವೇಶನದ ಸಂಶೋಧಕರು - ಎಂ.ಜಿ.ಮಜೂಂದಾರ್

ಸಿಂಧೂ ನಾಗರಿಕತೆಯ ಪ್ರಮುಖ ನಗರಗಳು


ಹರಪ್ಪಾ


ಇದು ರಾವಿ ನದಿಯ ಎಡ ದಂಡೆಯ ಮೇಲಿದೆ
ಸಿಂಧೂ ನಾಗರಿಕತೆಯ ಬಗೆಗೆ ಮೊದಲ ಸಂಶೋಧನೆ ನಡೆದ ಸ್ಥಳ
ಉಗ್ರಾಣ ಹಾಗೂ ವಸತಿ ಗೃಹ ಇಲ್ಲಿನ ಪ್ರಮುಖ ಕಟ್ಟಡಗಳು

ಮೊಹೆಂಜೋದಾರೋ


ಇದು ಸಿಂಧೂ ನದಿಯ ಬಲ ದಂಡೆಯ ಮೇಲಿದೆ
ಸಿಂಧಿ ಭಾಷೆಯಲ್ಲಿ ಮೊಹೆಂಜೋದಾರೋ ಎಂದರೆ ಮಡಿದವರ ದಿಬ್ಬ ಅಥವಾ ಸತ್ತವರ ದಿಬ್ಬ
ಸಾರ್ವಜನಿಕ ಸ್ನಾನ ಗೃಹ ಹಾಗೂ ಪುರಸಭಾ ಭವನಗಳು ಇಲ್ಲಿನ ಪ್ರಮುಖ ಕಟ್ಟಡಗಳು

ಕಾಲಿಬಂಗನ್


ಇದು ರಾಜಸ್ಥಾನದ ಗಗ್ಗರ್ ನದಿಯ ದಂಡೆಯ ಮೇಲಿದೆ
ಮೊಹೆಂಜೋದಾರೋ ಬಿಟ್ಟರೇ ಇದು ಅತ್ಯಂತ ದೊಡ್ಡ ನಗರ

ಚಾನ್ಹುದಾರೋ


ಇದು ಸಿಂಧ್ ಪ್ರಾಂತ್ಯದಲ್ಲಿದೆ
ಸಿಂಧೂ ನದಿಯ ಎಡದಂಡೆಯ ಮೇಲಿದೆ

ಲೋಥಾಲ್


ಸಿಂಧೂ ನಾಗರಿಕತೆಯ ಸಾಗರೋತ್ತರ ವಹಿವಾಟಿನ ಕೇಂದ್ರ
ಇದು ಗುಜರಾತ್ ರಾಜ್ಯದಲ್ಲಿ ಪತ್ತೆಯಾಗಿದೆ

ಬನವಾಲಿ


ಇದು ಸರಸ್ವತಿ ನದಿಯ ದಡದಲ್ಲಿ ಬೆಳೆದು ಬಂದಿತ್ತು
ಹರಪ್ಪಾ ಪೂರ್ವ ಸಂಸ್ಕೃತಿಯ ಅವಶೇಷಗಳು ಇಲ್ಲಿ ದೊರೆತಿದೆ

ಸುರಕೋಟಡ


ಇದು ಗುಜರಾತ್ ಪ್ರಾಂತ್ಯದಲ್ಲಿದೆ
ಕುದುರೆಯ ಬಳಕೆಯ ಬಗೆಗೆ ಮಾಹಿತಿ ಇಲ್ಲಿಂದ ದೊರೆತಿದೆ

ದೋಲವೀರ


ಇದು ಗುಜರಾತಿನ ಕಛ್ ಜಿಲ್ಲೆಯಲ್ಲಿದೆ
ಇದು ಇತ್ತಿಚೇಗೆ ಸಂಶೋಧಿಸಲ್ಪಟ್ಟಿದೆ

ಹೆಚ್ಚಿನ ವಿವರಗಳು


ಆಂಗ್ಲರು ವಾಯುವ್ಯ ಭಾರತದಲ್ಲಿ ರೈಲ್ವೆ ಹಳಿಯ ನಿರಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು - ಕ್ರಿ.ಶ.1856
ಹರಪ್ಪಾದಲ್ಲಿನ ಕೆಲವು ಮುದ್ರೆಗಳನ್ನು ಮೊಟ್ಟಮೊದಲು ಪತ್ತೆ ಹಚ್ಚಿದವರು - ಅಲೆಗ್ಸಾಂಡರ್ ಕನ್ನಿಂಗ್ ಹ್ಯಾಮ್ ( 1862 )
ಸಿಂಧೂ ನದಿಯ ನಾಗರಿಕತೆಯು - ಕ್ರಿ.ಪೂ. 3000 ರಷ್ಟು ಹಳೆಯದು
ಸಿಂಧೂ ನಾಗರಿಕತೆಯ ಉತ್ಕನನದಲ್ಲಿ ಕಾರ್ಯನಿರ್ವಹಿಸಿದ ಪ್ರಮುಖ ತಜ್ಞರು - ಎಂ.ಎಸ್. ವತ್ಸ , ಮಾರ್ಟಿಮರ್ ವೀಲ್ಹರ್ , ಸರ್.ಜಾನ್ ಮಾರ್ಷಲ್ , ಇ.ಜೆ.ಹೆಚ್.ಮೇಕೆ ಹಾಗೂ ಎಂ ಮಜೂಂದಾರ್
ಪ್ರಸ್ತುತ ಪಾಕಿಸ್ಥಾನದಲ್ಲಿರುವ ಸಿಂಧೂ ನಾಗರಿಕತೆಯ ನಗರಗಳು - ಕಾಲಿಬಂಗನ್ , ಬನವಲ್ಲಿ , ಲೋಥಾಲ್ , ಅಮ್ರಿ
ಸಿಂಧೂ ನಾಗರಿಕತೆಯನ್ನು - ಇತಿಹಾಸ ಪೂರ್ವ ಅಥವಾ ಪ್ರಾಗೈತಿಹಾಸದ ನಾಗರಿಕತೆ ಎಂದು ಕರೆಯುವರು
ಭಾರತದ ಪ್ರಾಕ್ತಾನ ಶಾಸ್ತ್ರದ ಪಿತಾಮಹಾ - ಅಲೆಗ್ಸಾಂಡರ್ ಕನ್ನಿಂಗ್ ಹ್ಯಾಮ್
ಸಿಂಧೂ ನಾಗರಿಕತೆಯ ಉತ್ಕನನಕ್ಕೆ ಪ್ರಪ್ರಥಮ ಭಾರಿಗೆ ಬೆಳಕು ಚೆಲ್ಲಿದವರು - ಅಲೆಗ್ಸಾಂಡರ್ ಕನ್ನಿಂಗ್ ಹ್ಯಾಮ್
ಅಲೆಗ್ಸಾಂಡರ್ ಕನ್ನಿಂಗ್ ಹ್ಯಾಮ್ ಹರಪ್ಪಾ ಬಳಿ ಮುದ್ರೆಗಳನ್ನು ಪತ್ತೆ ಹಚ್ಚಿದ ವರ್ಷ - 1962 ರಲ್ಲಿ
ಭಾರತದಲ್ಲಿ ಪ್ರಥಮ ಪ್ರಾಕ್ತಾನ ಇಲಾಖೆಯನ್ನು ಆರಂಭಿಸಿದವರು - ಅಂದಿನ ವೈಸ್ ರಾಯ್ ಲಾರ್ಡ್ ಕರ್ಜನ್
ಭಾರತದ ಪ್ರಥಮ ಪ್ರಾಕ್ತಾನ ಇಲಾಖೆ ಆರಂಭವಾದ ವರ್ಷ - 1906 ರಲ್ಲಿ
ಹರಪ್ಪಾ - ಮೊಹೆಂಜೋದಾರೋಗಳಲ್ಲಿ ಕ್ರಿ.ಶ. 1924 – 1931 ರವರೆಗೆ ಉತ್ಕನನ ಕೈಗೊಂಡವರು - ಸರ್ ಜಾನ್ ಮಾರ್ಷಲ್
ಲೋಥಾಲ್ ಹಡಗು ಕಟ್ಟೆಯನ್ನ ಪತ್ತೆ ಹಚ್ಚಿದವರು - ಡಾ.ಎಸ್.ಆರ್.ರಾವ್
ಲೋಥಾಲ್ ಹಡಗು ಕಟ್ಟೆ ಪತ್ತೆಯಾದ ವರ್ಷ - 1959 ರಲ್ಲಿ
ಲೋಥಾಲ್ ಹಡಗು ಕಟ್ಟೆ ಈ ಪ್ರದೇಶದಲ್ಲಿದೆ - ಗುಜರಾತಿನ ಕ್ಯಾಂಬೆ ತೀರ
ಪಂಜಾಬಿನ ಕಾಲಿಬಂಗಾನ್ ಪತ್ತೆ ಹಚ್ಚಿದವರು - ಘೋಷ್ ( 1953 )
ಗಾನ್ ವೆರಿಲಾ ನೆಲೆಗಳು ಪತ್ತೆಯಾಗಿದ್ದು - 1990 ರಲ್ಲಿ
ದೋಲವೀರದಲ್ಲಿ ಈ ನಾಗರಿಕತೆಯ ಅವಶೇಷಗಳು ಕಂಡು ಬಂದಿದ್ದು - 1993
ಇದುವರೆಗೆ ಪತ್ತೆ ಹಚ್ಚಲಾದ ಈ ನಾಗರಿಕತೆಯ ನಿವೇಶನಗಳ ಸಂಖ್ಯೆ ಸುಮಾರು - 1400
ಸಿಂಧೂ ನಾಗರಿಕತೆಯ ವಿಸ್ತಾರ - ಹಿಮಾಲಯ ಪರ್ವತ ದಿಂದ ನರ್ಮದಾ ನದಿಯವರೆಗೆ
The Harappan Civilization and it’s wrings - ಈ ಕೃತಿಯ ಕರ್ತೃ - ಪ್ರೋ ವಾಲ್ಟರ್
ಹರಪ್ಪಾ ನಾಗರಿಕತೆ ಹಲವು ಜನಾಂಗಗಳ ಸಾಧನೆಯ ಫಲ ಎಂಬ ಹೇಳಿಕೆಯನ್ನು ನೀಡಿದಲರು - ಸರ್ .ಜಾನ್ ಮಾರ್ಷಲ್
ಸಿಂಧೂ ನಾಗರಿಕತೆಯ ಆರಂಭ ಕಾಲವನ್ನು ಕ್ರಿ.ಪೂ. 7000 ಕ್ಕೆ ಕೊಂಡು ಹೋದವರು - ಆರ್.ಎಫ್.ಖಾನ್ ಪಾಕಿಸ್ಥಾನದ ಪುರಾತತ್ವ ಇಲಾಖೆಯ ನಿರ್ದೇಶಕ - ಆರ್.ಎಫ್ .ಖಾನ್
ಸಿಂಧೂ ನಾಗರಿಕರು ಸೀಸವನ್ನು ಈ ಪ್ರದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದರು - ಪೂರ್ವ ದಕ್ಷಿಣ ಸಿಂಧೂ ಪ್ರಾಂತ್ಯದಿಂದ
ಸಿಂಧೂ ನಾಗರಿಕತೆಯನ್ನು ಮೆಲುಹಾ ಎಂದವರು - ಮೆಸಪೋಟೆಮೀಯನ್ನರು
ಸಿಂಧೂ ನಾಗರಿಕತೆ ಜನರು ಪೂಜಿಸುತ್ತಿದ್ದ ಪುರುಷ ದೇವರು - ಪಶುಪತಿ
ಪಶುಪತಿ ಮುದ್ರೆಯಲ್ಲಿ ಇಲ್ಲದ ಪ್ರಾಣಿ - ಸಿಂಹ
ಮಣಿಗಳ ತಯಾರಿಕೆಗೆ ಪ್ರಸಿದ್ದಿಯಾದ ನಗರಗಳು - ಲೋಥಾಲ್ ಮತ್ತು ಚನ್ಹುದಾರೋ
ಸಿಂಧೂ ಲಿಪಿಯೊಂದಿಗೆ ಹೋಲಿಕೆಯಿರುವ ಬಾರತೀಯ ಲಿಪಿ - ದ್ರಾವಿಡಿಯನ್ ಲಿಪಿ
ಹರಪ್ಪಾ ನಾಗರಿಕತೆಯಲ್ಲಿ ಮುಖ್ಯವಾದ ಕೈಗಾರಿಕಾ ನಗರ - ಕಾಲಿಬಂಗನ್
ಹರಪ್ಪಾ ನಾಗರಿಕತೆಯಲ್ಲಿ ಸಂಶೋನೆಯಿಂದ ಹೊರಬಿದ್ದ ಆಯುಧ - ಖಡ್ಗ
ಕಾಲಿಬಮಗಾನ್ ಪ್ರದೇಶವನ್ನ ಕಂಡುಹಿಡಿದವರು - ವಿ.ಘೋಷ್
ಪ್ರಮುಖ ನಗರಗಳು ಇರುವ ಪ್ರದೇಶ
ಹರಪ್ಪಾ - ಪಂಜಾಬ್ ಪ್ರಾಂತ್ಯ ( ಪ್ರಾಚೀನ ಮೊಂಟೆಗೋಮರಿ ಜಿಲ್ಲೆ )
ಮೊಹೆಂಜೋದಾರೋ - ಸಿಂಧ್ ಪ್ರಾಂತ್ಯ ( ಪಾಕಿಸ್ತಾನದ ಲಖನ್ ಜಿಲ್ಲೆ )
ಲೋಥಾಲ್ - ಗುಜರಾತ್ ನ ಕ್ಯಾಂಬೆ
ಕಾಲಿಬಂಗಾನ್ - ಪಂಜಾಬ್ ( ರಾಜಸ್ಥಾನ್ )
ಚನ್ಹುದಾರೋ - ಪಾಕಿಸ್ಥಾನ ಸಿಂಧ್
ರೂಪಾರ್ - ಪಂಜಾಬ್
ಬನವಲಿ - ಗುಜರಾತ್
ದೋಲವೀರಾ - ಗುಜರಾತ್