ಜೈವಿಕ ಘಟಕ (Ecology System)

 

• ಈ ಘಟಕದಲ್ಲಿ ಜೀವಿಗಳು ತನ್ನಷ್ಟಕ್ಕೆ ತಾವೇ ಆಹಾರವನ್ನು ತಯಾರಿಸಿಕೊಳ್ಳುತ್ತವೆ. ಮತ್ತು ಕೆಲವು ಜೀವಿಗಳು ಬೇರೆ ಜೀವಿಗಳನ್ನು ಅವಲಂಬಿಸಿರುತ್ತವೆ. ಇದನ್ನು ಅನುಸರಿಸಿ 3 ವಿಧಗಳಾಗಿ ವಿಂಗಡಿಸಬಹಿದಾಗಿದೆ.
1.ಸ್ವಪೋಷಕಗಳು : ಜೀವಿಗಳು ತನ್ನಲ್ಲಿಯೇ ಆಹಾರವನ್ನು ತಯಾರಿಸಿಕೊಳ್ಳುತ್ತವೆ.
ಉದಾ : ಎಲ್ಲಾ ಹಸಿರು ಸಸ್ಯಗಳು
• ಸಸ್ಯಗಳು ವಾತಾವರಣದಲ್ಲಿರುವ ಇಂಗಾಲದ ಡೈ ಆಕ್ಸೈಡ್ನ್ನು ಸೂರ್ಯನ ಬೆಳಕಿನಲ್ಲಿ ನೀರಿನ ಜೊತೆಗೆ ಸೇರಿ ಆಹಾರವನ್ನು ತಯಾರಿಸುತ್ತವೆ. ಇದು ಎಲೆಗಳಲ್ಲಿ ಕ್ರಿಯೆ ನಡೆಯುತ್ತವೆ. ಮತ್ತು ವಾತಾವರಣಕ್ಕೆ ಆಮ್ಲಜನಕವನ್ನು ಪೂರೈಸುತ್ತವೆ. ಆದ್ದರಿಂದ ಇವುಗಳನ್ನು ಉತ್ಪಾದಕ ಗಳೆಂದು ಕರೆಯಬಹುದು. ಸಸ್ಯಗಳ ಸಮೂಹವನ್ನು ವನಸ್ಪತಿ ಎಂದು ಕರೆಯಬಹುದಾಗಿದೆ.
• ಸ್ವಪೋಷಕಗಳನ್ನು ಪ್ರಾಥಮಿಕ ಉತ್ಪಾದಕರೆಂದು ಕರೆಯಬಹುದಾಗಿದೆ.
2. ಪರಪೋಷಕಗಳು : ಇವುಗಳನ್ನು ಉಪಬೋಗಿಗಳು ಎಂದು ಕರೆಯುತ್ತೇವೆ. ಏಕೆಂದರೆ ಇವುಗಳು ಆಹಾರಕ್ಕಾಗಿ ಬೇರೆ ಪ್ರಾಣಿಗಳನ್ನು ಅವಲಂಬಿಸಿರುತ್ತವೆ.
• ಉಪಭೋಗಿಗಳಲ್ಲಿ ಪ್ರಾಥಮಿಕ ಉಪಭೋಗಿ, ದ್ವಿತೀಯ ಉಪಭೋಗಿ ಮತ್ತು ತೃತೀಯ ಉಪಭೋಗಿಗಳೆಂದು 3 ಪ್ರಕಾರಗಳಾಗಿ ವಿಂಗಡಿಸುತ್ತೇವೆ.
• ಪ್ರಾಣಿಗಳು ಸಸ್ಯಗಳನ್ನು ತಿಂದು ಜೀವಿಸುವ ಪ್ರಾಣಿಗಳಿಗೆ ಸಸ್ಯಾಹಾರಿ ಪ್ರಾಣಿಗಳು ಎಂದು ಕರೆಯುತ್ತೇವೆ. ಉದಾ : ಜಿಂಕೆ, ಮೊಲ
• ಸಸ್ಯಾಹಾರಿ ಪ್ರಾಣಿಗಳನ್ನು ತಿನ್ನುವ ಪ್ರಾಣಿಗಳಿಗೆ ಮಾಂಸಾಹಾರಿ ಪ್ರಾಣಿಗಳೆಂದು ಕರೆಯುತ್ತೇವೆ. ಉದಾ : ಹುಲಿ, ಚಿರತೆ, ಸಿಂಹ ಇತ್ಯಾದಿ.
• ಸಸ್ಯ ಮತ್ತು ಪ್ರಾಣಿಗಳನ್ನು ತಿಂದು ಜೀವಿಸುವ ಜೀವಿಗಳಿಗೆ ದ್ವೀತಿಯ ಮಾಂಸಾಹಾರಿ ಪ್ರಾಣಿಗಳು ಎಂದು ಕರೆಯುತ್ತವೆ.
• ಉದಾ : ಹಾವು, ಮಾನವ
• ಪ್ರಾಣಿಗಳಿಗೆ ಬೆನ್ನುಮೂಳೆ ಇಲ್ಲದಕ್ಕೆ ಅಕಶೇರಕನ್ನುವರು
• ಉದಾ : ಕೀಟಗಳು, ಜೇಡಗಳು
ಪ್ರಾಣಿಗಳಲ್ಲಿ ಬೆನ್ನುಮೂಳೆ ಇರುವ ಪ್ರಾಣಿಗಳಿಗೆ ಕಶೇರುಕಗಳೆನ್ನುವರು.
3. ವಿಘಟಕಗಳು (ಆeಛಿogeseಡಿs)
• ಇವು ಸಜೀವ ಜೀವಿಗಳಾಗಿದ್ದು ಬರೀಗಣ್ಣಿಗೆ ಕಾಣದೇ ಕೇವಲ ಸೂಕ್ಷ್ಮದರ್ಶಕ ಯಂತ್ರದಿಂದ ವೀಕ್ಷಿಸಬಹುದು. ಉದಾ: ಶಿಲೀಂಧ್ರಗಳು, ಬ್ಯಾಕ್ಟೀರಿಯಾಗಳು, ಸೂಕ್ಷ್ಮಾಣುಜೀವಿಗಳು ಇತ್ಯಾದಿ.
• ಈ ಜೀವಿಗಳು ಸಸ್ಯ ಮತ್ತು ಪ್ರಾಣಿಗಳು ಸತ್ತ ನಂತರ ಅವುಗಳನ್ನು ತಿಂದು ಜೀವಿಸುತ್ತವೆ. ಇವುಗಳಿಂದ ಉಪಯೋಗಗಳೆಂದರೆ ಜಟಿಲ ಜೀವಿಗಳನ್ನು ವಿಭಜಿಸುತ್ತವೆ. ಮತ್ತು ಪರಿಸರದಲ್ಲಿ, ಸಮತೋಲವನ್ನು ಕಾಪಾಡಲು ಮಹತ್ವವಾದ ಪಾತ್ರವನ್ನು ವಹಿಸುತ್ತವೆ. ಇವು ನಂತರ ಸ್ವಘೋಷಿತ ಜೀವಿಗಳಾದ ಸಸ್ಯಗಳಿಂದ ಮತ್ತೆ ಉಪಯೋಗಿಸಲ್ಪಡುತ್ತವೆ.

ಜೀವ ವ್ಯವಸ್ಥೆಯ ಮಜಲುಗಳು


• ಪ್ರಭೇದ:ಇದು ಅತ್ಯಂತಕೆಳಗಿನ ಮಜಲು. ಪ್ರಭೇದ ಎಂದರೆ ತಮ್ಮ ತಮ್ಮಲ್ಲೇ ಪ್ರಜನನ ಪ್ರಕ್ರಿಯೆಯಲ್ಲಿ ತೊಡಗಿ ಫಲವಂತ ಪೀಳಿಗೆಗಳನ್ನು ಉತ್ಪತ್ತಿ ಮಾಡಬಲ್ಲ ಜೀವಿಗಳ ಇಂದು ಗುಂಪು.ಪ್ರಪಂಚದ ಎಲ್ಲ ಮಾನವರೂ ಒಂದೇ ಪ್ರಭೇದಕ್ಕೆ ಸೇರುತ್ತಾರೆ.
• ಜೀವಿ ಸಂದಣಿ :ಯಾವುದೇ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಕಂಡುಬರುವ ಪ್ರಬೇಧವೊಂದರ ಜೀವಿಗಳ ಒಟ್ಟಾರೆ ಸಂಖ್ಯೆಯನ್ನು ಜೀವಿ ಸಂದಣಿ ಎಂದು ಕರೆಯಲಾಗುತ್ತದೆ.
• ಪರಿಸರ ವ್ಯವಸ್ಥೆ:ಒಂದು ನಿರ್ದಿಷ್ಟ ಪ್ರದೇಶದಲ್ಲಿ ಕಂಡು ಬರುವ ಪ್ರಭೇದವೊಂದರ ಜೀವಿಗಳ ಒಟ್ಟಾರೆಯಾಗಿ ಜೀವಿ ಸಮುದಾಯ ಎಂದು ಗುರುತಿಸಬಹುದು.
• ಬಯೋಮ್ :ಒಂದೇ ರೀತಿಯ ಹವಾಮಾನ ಪರಿಸ್ಥಿತಿಯನ್ನು ಹೊಂದಿರುವ ವಿಶಾಲವಾದ ಭೌಗೋಳಿಕ ಪ್ರದೇಶದಲ್ಲಿರುವ ಪರಿಸರ ವ್ಯವಸ್ಥೆಗಳಿಗೆ ಬಯೋಮ್ ಎಂದು ಹೆಸರು.
ಬಯೋಮ್ ಗಳ ವಿಧಗಳು
1. ಉಷ್ಣವಲಯದ ನಿತ್ಯ ಹರಿದ್ವರ್ಣ ಕಾಡುಗಳು
2. ಉಷ್ಣ ವಲಯದ ಮತ್ತು ಪರ್ಣಪಾತಿ ಕಾಡುಗಳು
3. ಹುಲ್ಲುಗಾವಲು ಬಯೋಮ್
4. ಮರಭೂಮಿ ಬಯೋಮ್
5. ಟಂಡ್ರ ಬಯೋಮ್