ಪ್ರಧಾನ ಮಂತ್ರಿ ಬಡವರ ಕಲ್ಯಾಣ ಯೋಜನೆ (ಪಿ.ಎಂ.ಜಿ .ಕೆ )
ಕೇಂದ್ರ ಸರ್ಕಾರ ನವೆಂಬರ್ -8 ರಂದು 500/1000 ಮುಖ ಬೆಲೆಯ ನೋಟುಗಳನ್ನು ರದ್ದು ಪಡಿಸಿದ ನಂತರ ಕಪ್ಪುಕುಳಗಳು ಸ್ವಯಂಪ್ರೇರಿತರಾಗಿ ತಮ್ಮ ಬಳಿ ಇರುವ ಕಪ್ಪು ಹಣವನ್ನು ಘೋಷಿಸಿಕೊಂಡು ದಂಡ ಸಹಿತ ತೆರಿಗೆ ಪಾವತಿಸಿ ಕಾನೂನು ಕ್ರಮದಿಂದ ಪಾರಾಗಲು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಯೋಜನೆ ಇದು. ಈ ಯೊಜನೆಯ ಪ್ರಕಾರ ಕಪ್ಪು ಹಣ ಘೋಷಿಸಿಕೊಂಡಿದ್ದವರು 10% ದಂಡ ಮತ್ತು 30% ತೆರಿಗೆ ಮತ್ತು 33% ಪಿ.ಎಮ್.ಜಿ.ಕೆ. ಸೆಸ್ ಪಾವತಿ ಮಾಡಬೇಕು ಮತ್ತು ಒಟ್ಟು ಹಣದ 25% ಪಿ.ಎಮ್.ಜಿ.ಕೆ ಯೋಜನೆಯಡಿಯಲ್ಲಿ 4 ವರ್ಷಗಳ ಅವಧಿಗೆ ಬಡ್ಡಿ ರಹಿತವಾಗಿ ಠೇವಣಿ ಇಡಬೇಕಾಗುತ್ತದೆ. ಈ ರೀತಿ ಸೆಸ್‍ನಿಂದ ಸಂಗ್ರಹವಾದ ಹಣ ಮತ್ತು ಠೇವಣಿಯಿಂದ ಬರುವ ಬಡ್ಡಿಯ ಹಣವನ್ನು ಬಡವರ ಕಲ್ಯಾಣಕ್ಕಾಗಿ ಬಳಸಲಾಗುತ್ತಿದೆ . ಕಪ್ಪು ಹಣ ಇರುವವರು ಈ ಯೋಜನೆಯಡಿಯಲ್ಲಿ ಘೋಷಿಸಿಕೊಳ್ಳಲು ನಿರಾಕರಿಸಿ, ದಾಳಿ ಮುಖಾಂತರ ಕಪ್ಪುಹಣ ಬಹಿರಂಗಗೊಂಡಾಗ 77% ವರೆಗೆ ತೆರಿಗೆ ಮತ್ತು ದಂಡ ವಸೂಲಿ ಮಾಡಲಾಗುತ್ತದೆ ಮತ್ತು ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ