ಬೇಟಿ ಬಚಾವೋ ಬೇಟಿ ಪಡಾವೋ(BBBP)
ಲಿಂಗ ತಾರತಮ್ಯ ತಡೆಯಲು ಹಾಗೂ ಹೆಣ್ಣು ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಮಹತ್ವದ ಜಾಗೃತಿ ಅಭಿಯಾನವೇ ‘ಬೇಟಿ ಬಚಾವೋ ಬೇಟಿ ಪಡಾವೋ’ ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗು ಮಾನವ ಸಂಪನ್ಮೂಲಾಭಿವೃದ್ಧಿ ಸಚಿವಾಲಯಗಳು ಈ ಆಂದೋಲನವನ್ನು ಜಂಟಿಯಾಗಿ ನಿರ್ವಹಿಸುತ್ತಿವೆ .
ಪ್ರಾರಂಭ:
ಜನವರಿ-22-2015
2011 ರ ಜನಗಣತಿ ವರದಿಯ ಪ್ರಕಾರ ಪ್ರತಿ 1000 ಗಂಡು ಮಕ್ಕಳಿಗೆ 918 ಹೆಣ್ಣು ಮಕ್ಕಳಿದ್ದಾರೆ. ಈ
ಲಿಂಗಾನುಪಾತ ಹೀಗೆ ಮುಂದುವರೆದರೆ ಅದು
ಮನುಕುಲಕ್ಕೆ ಗಂಡಾಂತರವೆಂದು ಅರಿತ ಕೇಂದ್ರ ಸರ್ಕಾರ ದೇಶದಾದ್ಯಂತ ಸಮೂಹ ತಿಳುವಳಿಕೆಯ ಆಂದೋಲನವನ್ನು ಹಮ್ಮಿಕೊಂಡಿದೆ.
ಹೆಣ್ಣು ಮಕ್ಕಳ ಸಂಖ್ಯೆ ಕ್ಷೀಣಿಸಿರುವ ದೇಶದ 100 ಜಿಲ್ಲೆಗಳನ್ನು ಗುರುತಿಸಿ ಬಹುವಿಧದ ಕ್ರಮಗಳ
ಮೂಲಕ ಪರಿಸ್ಥಿತಿ ಸುಧಾರಣೆ ತರುವುದು, ಹೆಣ್ಣು ಮಗುವಿನ ಹುಟ್ಟನ್ನು ಸಂಭ್ರಮಿಸುವುದು, ಹೆಣ್ಣು
ಮಕ್ಕಳ ಶಿಕ್ಷಣದ ಮಹತ್ವವನ್ನ ಸಾರುವುದು ಹಾಗೂ ಆ ಕುರಿತು ಅರಿವು ಮೂಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶ.
5 ವರ್ಷಕ್ಕಿಂತ ಕಡಿಮೆಯಿರುವ ಹೆಣ್ಣುಮಕ್ಕಳು ಅತಿ ಕಡಿಮೆ ತೂಕದವರಾಗಿದ್ದರೆ ಪೌಷ್ಠಿಕಾಂಶ ಆರೈಕೆಗೆ ಪ್ರೋತ್ಸಾಹಿಸುವುದು
ಹೆಣ್ಣು ಮಕ್ಕಳ ಶಾಲಾ ದಾಖಲಾತಿಯನ್ನು ಪ್ರೋತ್ಸಾಹಿಸುವುದು ಮತ್ತು 2013-2014ರಲ್ಲಿ ಶೇ76%
ರಷ್ಟಿದ್ದ ಹೆಣ್ಣು ಮಕ್ಕಳ ದಾಖಲಾತಿಯನ್ನು 2017 ರಲ್ಲಿ 79% ರಷ್ಟಕ್ಕೇ ಏರಿಸುವುದು ಕೇಂದ್ರ ಸರ್ಕಾರದ ಗುರಿ
ಪ್ರತಿ ಶಾಲೆಯಲ್ಲಿ ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕ ಶೌಚಾಲಯ ಸೌಲಭ್ಯ ಕಲ್ಪಿಸುವುದು, ಲೈಂಗಿಕ ದೌರ್ಜನ್ಯಗಳ ವಿರುದ್ಧ ಮಕ್ಕಳಿಗೆ ರಕ್ಷಣೆ ಒದಗಿಸುವುದು ಈ ಅಭಿಯಾನದ ಬಹಳ ಮುಖ್ಯ ಉದ್ದೇಶ.
ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನದ ರಾಯಭಾರಿ-ಸಾಕ್ಷಿ ಮಲ್ಲಿಕ್