ಆಮ್ಲ ಮಳೆ

 

• ಪರಿಸರ ಮಾಲಿನ್ಯದ ಪರಿಣಾಮಗಳಲ್ಲಿ ಅತ್ಯಂತ ಭೀಕರವಾದದ್ದು ಆಮ್ಲಮಳೆ, ಹೆಚ್ಚುತ್ತಿರುವ ಜನಸಂಖ್ಯೆಯ ಅವಶ್ಯಕತೆಗಳನ್ನು ಪೂರೈಸಲು ಅಸಂಖ್ಯಾ ಕಾರ್ಖಾನೆಗಳು ಸ್ಥಾಪಿತಗೊಂಡಿವೆ. ಬಹುತೇಕ ಉದ್ಯಮಗಳಲ್ಲಿ ಕಲ್ಲಿದ್ದಲನ್ನು ಇಂಧನವಾಗಿ ಬಳಸುತ್ತಾರೆ. ಇದರಲ್ಲಿ ಶೇ 0.5 ರಿಂದ 3 ರಷ್ಟು ಗಂಧಕ ಇರುತ್ತದೆ.
• ಕಲ್ಲಿದ್ದಲನ್ನು ಉರಿಸಿದಾಗ ಅದರಲ್ಲಿರುವ ಗಂಧಕ ಆಮ್ಲಜನಕದೊಂದಿಗೆ ರಾಸಾಯನಿಕ ಕ್ರಿಯೆ ಹೊಂದಿ “ಗಂಧಕ ಡೈ ಆಕ್ಸೈಡ್” (So2) ಬಿಡುಗಡೆ ಆಗುತ್ತದೆ.
ಗಂಧಕ + ಆಮ್ಲಜನಕ ----> ಗಂಧಕದ ಡೈ ಆಕ್ಸೈಡ್
S + o2 ----> So2
• ಇದು ಮತ್ತೆ ಆಮ್ಲಜನಕದೊಂದಿಗೆ ವರ್ತಿಸಿದಾಗ ಗಂಧಕದ ಟ್ರೈ ಆಕ್ಸೈಡ್ (So3) ಆಗಿ ಮಾರ್ಪಾಡು ಹೊಂದುತ್ತದೆ.
• ವಾಹನಗಳಿಂದ ಬಿಡುಗಡೆಯಾಗುವ ಹೊಗೆಯಲ್ಲಿ ಗಂಧಕ (S) ಮತ್ತು ಸಾರಜನಕ (ಓ) ಆಮ್ಲಜನಕದೊಂದಿಗೆ ದಹಿಸಿದಾಗ ಕ್ರಮವಾಗಿ ಗಂಧಕದ ಡೈಆಕ್ಸೈಡ್ ಮತ್ತು ಸಾರಜನಕದ ಡೈ ಆಕ್ಸೈಡ್ಗಳು ಬಿಡುಗಡೆ ಆಗುತ್ತದೆ. (No2)
• ನಂತರ ಗಂಧಕದ ಡೈ ಆಕ್ಸೈಡ್ ಆಮ್ಲಜನಕದೊಂದಿಗೆ ಬೆರೆತು ಗಂಧಕದ ಟ್ರೈ ಆಕ್ಸೈಡ್ ಬಿಡುಗಡೆ ಆಗುತ್ತದೆ.
• ನಂತರ ಗಂಧಕದ ಟ್ರೈ ಆಕ್ಸೈಡ್ (So3) ಮತ್ತು ಸಾರಜನಕದ ಡೈ ಆಕ್ಸೈಡ್ ಗಳು ವಾತಾವರಣ ಸೇರಿ ಅಲ್ಲಿರುವ ‘ನೀರಾವಿ’ ಅಥವಾ ಮಳೆಯೊಂದಿಗೆ ಬೆರೆತು ಅನುಕ್ರಮವಾಗಿ ಗಂಧಕಾಮ್ಲ ಮತ್ತು ನೈಟ್ರಿಕ್ ಆಮ್ಲಗಳಾಗಿ ಮಳೆಯ ರೂಪದಲ್ಲಿ ಪೃಥ್ವಿಯನ್ನು ತಲುಪುತ್ತವೆ. ಇದನ್ನೇ ಅಮ್ಲಮಳೆ ಎಂದು ಕರೆಯುತ್ತೇವೆ. ಇದು ನದಿ ಮತ್ತು ಕೆರೆಗಳನ್ನು ಸೇರಿ ಆ ನೀರನ್ನು ಆಮ್ಲೀಯಗೊಳಿಸುತ್ತವೆ
• ಆಮ್ಲಮಳೆ ವಿಶೇಷವಾಗಿ ಕೈಗಾರಿಕೆಗಳು ಹೆಚ್ಚಿರುವ ಪ್ರದೇಶಗಳಲ್ಲಿ ಕಂಡುಬರುತ್ತದೆ. ಇದು ರುಚಿಯಲ್ಲಿ ಹುಳಿ ಅಥವಾ ಒಗರು ಆಗಿರುತ್ತದೆ. ಇದು ಅಪಾಯಕಾರಿ.
ಆಮ್ಲಮಳೆ ಹೆಚ್ಚಿದಂತೆ ವಾತಾವರಣದಲ್ಲಿ ಅನೇಕ ಬದಲಾವಣೆಗಳಾಗುತ್ತವೆ ಇದರಿಂದ
1. ಭೂಮಿಯ ಮೇಲಿರುವ ಮಣ್ಣು, ಕಲ್ಲು, ಬಂಡೆಗಳು, ತೀವ್ರ ಸವಕಳಿಗೆ ಒಳಗಾಗುತ್ತವೆ.
2. ಭೂಮಿಯ ಆಮ್ಲತೆ (Acidity) ಯನ್ನು ಹೆಚ್ಚಿಸುತ್ತದೆ.
3. ನೀರಿನಲ್ಲಿ ಆಮ್ಲಿಯ ಪ್ರಮಾಣ ಹೆಚ್ಚುವುದರಿಂದ ಅನೇಕ ಜಲಚರಗಳು ಸಾಯುತ್ತವೆ. ಇದರಿಂದ ಆಹಾರ ಸರಪಳಿಯಲ್ಲಿ (Food Chain) ವ್ಯತ್ಯಾಸವನ್ನು ಕಾಣುತ್ತೇವೆ. ಸಸ್ಯಗಳ ಬೆಳವಣಿಗೆ ಮಟ್ಟ ಕುಂಠಿತವಾಗುತ್ತದೆ. ಮತ್ತು ಭೂಮಿಯ ಫಲವತ್ತತೆ ಕಡಿಮೆ ಆಗುತ್ತದೆ.
4. ಅನೇಕ ಸ್ಮಾರಕಗಳು, ಕಟ್ಟಡಗಳು ಕುಸಿದು ಬೀಳುತ್ತವೆ ಎಂಬುದು ಊಹಿಸಬಹುದು.
ಉದಾ : ತಾಜ್ಮಹಲ್ನಲ್ಲಿನ ಹೊಳಪಿನ ಬಣ್ಣ ಮಾಯವಾಗಿ ಶಿಲೆಗಳಲ್ಲಿ ಬಿರುಕುಗಳುಂಟಾಗಲು ಆರಂಭಿಸಿದೆ.
• ಆಮ್ಲ ಮಳೆಯಾಗುವುದನ್ನು ತಡೆಗಟ್ಟಬೇಕಾದರೆ ಕಾರ್ಖಾನೆಗಳ ಚಿಮುಣಿಗಳಲ್ಲಿ “ಸ್ಕಬ್ಬರ್” ನ್ನು ಅಳವಡಿಸಬೇಕೆಂದು. ಏಕೆಂದರೆ ಇದು ಕಲ್ಲಿದ್ದಲ್ಲಿನ ಹೊಗೆಯಲ್ಲಿನ ಗಂಧಕದ ಅOಶವನ್ನು ಹೊರತೆಗೆಯುತ್ತದೆ. ಮತ್ತು ಸರಕಾರವು ಕಡ್ಡಾಯವಾಗಿ ಇದನ್ನು ಅಳವಡಿಸಲು ಶಾಸನವನ್ನು ರಚಿಸಬೇಕು.
• ಡೀಸೆಲ್, ಪೆಟ್ರೋಲ್, ಮುಂತಾದ ಇಂಧನಗಳನ್ನು ಮಿತವಾಗಿ ಬಳಸಬೇಕು ಮತ್ತು ಗಿಡ ಮರಗಳನ್ನು ಬೆಳೆಸಬೇಕು.