ಪ್ರಮುಖ ಬೆಳೆಗಳು (Major crops)
 
ಭತ್ತ
• ಭಾರತದಲ್ಲಿ ಉತ್ಪಾದಿಸುತ್ತಿರುವ ಆಹಾರ ಧಾನ್ಯಗಳಲ್ಲಿ ಭತ್ತವು ಅತಿ ಮುಖ್ಯವಾಗಿದೆ.
• ಭಾರತವು ಪ್ರಪಂಚದಲ್ಲಿ ಅತಿ ಹೆಚ್ಚು ಭತ್ತದ ಕ್ಷೇತ್ರವನ್ನು ಹೊಂದಿದ್ದು ಉತ್ಪಾದನೆಯಲ್ಲಿ ಎರಡನೆ ಸ್ಥಾನದಲ್ಲಿದೆ. ಚೀನಾ ಮೊದಲ ಸ್ಥಾನದಲ್ಲಿದೆ.
• ದೇಶದ ಬಹುಪಾಲು ಜನರು ಭತ್ತವನ್ನೆ ಪ್ರಮುಖ ಆಹಾರ ಧಾನ್ಯವಾಗಿ ಬಳಸುವರು.
• ಭತ್ತವು ಪ್ರಮುಖವಾಗಿ ‘ಖಾರಿಫ್ ಬೆಳೆಯಾಗಿದೆ.
• ಭತ್ತದ ಬೇಸಾಯಕ್ಕೆ 25 ಡಿಗ್ರಿ ಸೆಲ್ಸಿಯಸ್ ಉಷ್ನಾಂಶ ಮತ್ತು 100 ರಿಂದ 200 ಸೆಂ.ಮೀ ವಾರ್ಷಿಕ ಮಳೆ ಅವಶ್ಯಕ.
• ಫಲವತ್ತಾದ ಮೆಕ್ಕಲು ಮಣ್ಣು, ಜೇಡಿ ಮಣ್ಣು, ಭತ್ತದ ಬೆಳೆಗೆ ಸೂಕ್ತವಾಗಿರುತವೆ.
• ಪಶ್ಚಿಮ ಬಂಗಾಳ ರಾಜ್ಯವು ಅತಿ ಹೆಚ್ಚು ಭತ್ತವನ್ನು ಬೆಳೆಯುವ ರಾಜ್ಯವಾಗಿದೆ. ಆಂಧ್ರಪ್ರದೇಶ, ತಮಿಳುನಾಡು, ಒರಿಸ್ಸಾ, ಕರ್ನಾಟಕ, ಉತ್ತರಪ್ರದೇಶ, ಭತ್ತ ಬೆಳೆಯುವ ಇತರ ರಾಜ್ಯಗಳಾಗಿವೆ.
ಗೋಧಿ
• ಇದು ಭಾರತದ ಚಳಿಗಾಲದ (ರಬಿ) ಮುಖ್ಯ ಬೆಳೆಯಾಗಿದೆ.
• ನಮ್ಮ ದೇಶ ಗೋಧಿಯ ಉತ್ಪಾದನೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಹಾಗೂ ಗೋಧಿಯನ್ನು ರಪ್ತು ಮಾಡುವ ಪ್ರಪಂಚದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ.
• ಭಾರತದಲ್ಲಿ ಹಸಿರು ಕ್ರಾಂತಿ ಯುಗಕ್ಕೆ ನಾಂದಿಯಾದುದು ಗೋಧಿಯ ಅಧಿಕ ಇಳುವರಿಯ ತಳಿಗಳಿಂದ.
• ಗೋಧಿ ಬೆಳೆಗೆ 10ಡಿಗ್ರಿಯಿಂದ 15 ಡಿಗ್ರಿ ಸೆಲ್ಸಿಯಸ್ ಉಷ್ನಾಂಶ 50 ರಿಂದ 70 ಸೆಂ ಮೀ ವಾರ್ಷಿಕ ಮಳೆ ಅವಶ್ಯಕ.
• ಮರಳು ಮಿಶ್ರಿತ ಜೇಡಿಮಣ್ಣು ಮತ್ತು ಕಪ್ಪುಮಣ್ಣಿನಲ್ಲಿ ಗೋಧಿಯು ಬೆಳೆಯುತ್ತದೆ.
• ಉತ್ತರದ ಮೈದಾನಗಳಾದ ಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶಗಳಲ್ಲಿ ಗೋಧಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ‘ಪಂಜಾಬ್‘ ಗೋಧಿಯ ಕಣಜವೆನಿಸಿದೆ.
• ಮಧ್ಯಪ್ರದೇಶ, ಬಿಹಾರ, ರಾಜಸ್ತಾನ, ಗುಜರಾತ್, ಕರ್ನಾಟಕದ ಉತ್ತರ ಭಾಗ ಮತ್ತು ಮಹಾರಾಷ್ಟ್ರಗಳು ಗೋಧಿಯನ್ನು ಬೆಳೆಯುವ ಇತರ ರಾಜ್ಯಗಳಾಗಿವೆ.
• ಉತ್ತರಪ್ರದೇಶವು ಗೋಧಿ ಉತ್ಪಾದನೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದೆ.
ಆಹಾರ ಧಾನ್ಯಗಳು
• ಇವುಗಳನ್ನು ಸಾಮಾನ್ಯವಾಗಿ ಶುಷ್ಕ ಮತ್ತು ಅರೆ ಶುಷ್ಕ ಪ್ರದೇಶಗಳಲ್ಲಿ ಮಳೆಯ ಆಶ್ರಯದಿಂದಲೇ ಬೆಳೆಯಲಾಗುವುದು.
• ಜೋಳ,ಸಜ್ಜೆ,ಮೆಕ್ಕೆ ಜೋಳ,ರಾಗಿ,ಬಾರ್ಲಿ,ಹಾಗೂ ಇತರ ಧಾನ್ಯಗಳು ದೇಶದಲ್ಲಿ ಉತ್ಪಾದಿಸಲ್ಪಡುವ ಇತರ ಧಾನ್ಯಗಳಾಗಿವೆ.
• ರಾಜಸ್ತಾನವು ಧಾನ್ಯಗಳ ಉತ್ಪಾದನೆಯಲ್ಲಿ ಮೊದಲ ಸ್ಥಾನವನ್ನು ಹೊಂದಿದ್ದು,ನಂತರದ ಸ್ಥಾನದಲ್ಲಿ ಕರ್ನಾಟಕವಿದೆ.
• ಉತ್ತರ ಕರ್ನಾಟಕದಲ್ಲಿ ಜೋಳ ಹಾಗೂ ದಕ್ಷಿಣ ಕರ್ನಾಟಕದಲ್ಲಿ ರಾಗಿ ಅತಿ ಮುಖ್ಯ ಆಹಾರ ಧಾನ್ಯಗಳಾಗಿವೆ.
ವಾಣಿಜ್ಯ ಬೆಳೆಗಳು
ಭಾರತದಲ್ಲಿ ಉತ್ಪಾದಿಸಲಾಗುವ ಮುಖ್ಯ ವಾಣಿಜ್ಯ ಬೆಳೆಗಳೆಂದರೆ ಹತ್ತಿ,ಸೆಣಬು,ಕಬ್ಬು,ಎಣ್ಣೆ ಕಾಳುಗಳು,ಸಾಂಬಾರ ಪದಾರ್ಥಗಳು,ಹೊಗೆಸೊಪ್ಪು,ರಬ್ಬರ್ ಇತ್ಯಾದಿ.
1) ಕಬ್ಬು
• ಇದು ಭಾರತದ ಅತಿ ಮುಖ್ಯ ವಾಣಿಜ್ಯ ಬೆಳೆಯಾಗಿದೆ. ಭಾರತದಲ್ಲಿ ಕಬ್ಬಿನ ಬೇಸಾಯವು ಅತೀ ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿದೆ.
• ಭಾರತವು ಇದರ ಮೂಲವಾಗಿದ್ದು, ಉತ್ಪಾದನೆಯಲ್ಲಿ ಪ್ರಪಂಚದಲ್ಲಿ ಎರಡನೆಯ ಸ್ಥಾನವನ್ನು ಹೊಂದಿರುವುದು.
• ಇದು ವಾರ್ಷಿಕ ಬೆಳೆಯಾಗಿದ್ದು ನೀರಾವರಿ ಪ್ರದೇಶದಲ್ಲಿ ಬೆಳೆಯುವ ಬೆಳೆಯಾಗಿದೆ.
• ಈ ಬೆಳೆಗೆ ಹೆಚ್ಚು ಉಷ್ಣಂಶ ಮತ್ತು ತೇವಾಂಶ ಹೊಂದಿರುವ ವಾಯುಗುಣ ಅವಶ್ಯಕ. ಇದಕ್ಕೆ 21 ರಿಂದ 26 ಡಿಗ್ರಿ ಸೆಲ್ಸಿಯಸ್ ಉಷ್ಣಂಶ, 10 ರಿಂದ 150 ಸೆಂ.ಮೀ. ವಾರ್ಷಿಕ ಮಳೆ ಬೇಕಾಗುವುದು. ಮೆ
• ಮೆಕ್ಕಲು ಮತ್ತು ಕಪ್ಪು ಮಣ್ಣಿನಲ್ಲಿ ಕಬ್ಬು ಬೆಳೆಯುತ್ತದೆ.
• ಉತ್ತರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ಗುಜರಾತ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಕಬ್ಬು ಮುಖ್ಯ ವಾಣಿಜ್ಯ ಬೆಳೆ. ಭಾರತದ ಬಹುತೇಕ ರಾಜ್ಯಗಳಲ್ಲಿ ಇದನ್ನು ಬೆಳೆಯುತ್ತಾರೆ.
2) ಹತ್ತಿ
• ಭಾರತವು ಉತ್ಪಾದಿಸುವ ನಾರಿನ ಬೆಳೆಗಳಲ್ಲಿ ಹತ್ತಿ ಪ್ರಮುಖವಾದುದು.
• ಭಾರತವು ಹತ್ತಿ ಬೆಳೆಯುವ ಪ್ರದೇಶದಲ್ಲಿ ಪ್ರಪಂಚದಲ್ಲಿ ಮೊದಲ ಹಾಗೂ ಉತ್ಪಾದನೆಯಲ್ಲಿ ಎರಡನೆ ಸ್ಥಾನದಲ್ಲಿದೆ.
• ಕಚ್ಚಾ ಹತ್ತಿಯನ್ನು ಹತ್ತಿ ಗಿರಣಿಗಳಲ್ಲಿ ಕಚ್ಚಾ ವಸ್ತುವಾಗಿ ಬಳಸುವುದಲ್ಲದೆ, ಅಧಿಕ ಪ್ರಮಾಣದ ಹತ್ತಿಯನ್ನು ರಫ್ತುಮಾಡಿ ವಿದೇಶಿ ವಿನಿಮಯವನ್ನು ಗಳಿಸುತ್ತದೆ. ಆದುದರಿಂದಲೇ ಹತ್ತಿಯನ್ನು "ಬಿಳಿಯ ಚಿನ್ನ" ಎಂದು ಕರೆಯುವರು
• ಹತ್ತಿಯು ಉಷ್ಣ ವಲಯ ಮತ್ತು ಉಪ ಉಷ್ಣವಲಯದ ಬೆಳೆ.
• ಇದನ್ನು ಬೆಳೆಯಲು 20 ರಿಂದ 25 ಡಿಗ್ರಿ ಸೆಲ್ಸಿಯಸ್. ಉಷ್ಣOಶ ಅವಶ್ಯಕ. ಸುಮಾರು 75 ರಿಂದ 150 ಸೆಂ.ಮೀ ಗಿಂತ ಹೆಚ್ಚು ಮಳೆ ಪಡೆಯುವ ಪ್ರದೇಶಗಳಲ್ಲಿ ಬೆಳೆಯಬಲ್ಲದು.
• ಕಪ್ಪು ಮಣ್ಣು, ಮೆಕ್ಕಲು ಮಣ್ಣುಗಳಲ್ಲಿ ಇಳುವರಿ ಚೆನ್ನಾಗಿ ಬರುತ್ತದೆ. ಆದರೆ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಮಣ್ಣು ಇದಕ್ಕೆಹೆಚ್ಚು ಸೂಕ್ತ.
• ಇದನ್ನು ಮುಂಗಾರು (ಖರೀಫ್) ಬೆಳೆಯಾಗಿ ಬೆಳೆಯುತ್ತಾರೆ.
• ಹತ್ತಿ ಬೆಳೆಯ ಇಳುವರಿಯಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದ್ದರೆ , ಮಹಾರಾಷ್ಟ್ರ, ಆಂಧ್ರಪ್ರದೇಶ, ಹರಿಯಾಣ, ಕರ್ನಾಟಕ ಮತ್ತು ಮಧ್ಯಪ್ರದೇಶಗಳು ನಂತರದ ಸ್ಥಾನದಲ್ಲಿವೆ..
3) ಹೊಗೆಸೊಪ್ಪು
• ಜಗತ್ತಿನಲ್ಲಿ ಭಾರತವು ಹೊಗೆಸೊಪ್ಪು ಬೆಳೆಯುವ ಪ್ರಮುಖ ದೇಶಗಳಲೊಂದು.
• ಇದು ಉಷ್ಣವಲಯದ ಬೆಳೆಯಾಗಿದ್ದು, 21 ರಿಂದ 27 ಡಿಗ್ರಿ ಸೆಲ್ಸಿಯಸ್ ಉಷ್ಣ0ಶ ಅವಶ್ಯಕ. ಸಾಧಾರಣ ಮಳೆಬೀಳುವ ಪ್ರದೇಶ ಅವಶ್ಯವಿದ್ದು, ಸರಾಸರಿ 50 ಸೆಂ.ಮೀ. ಮಳೆ ಬೇಕು.
• ಆಂಧ್ರಪ್ರದೇಶ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ ಗುಜರಾತ, ಉತ್ತರಪ್ರದೇಶ, ಕರ್ನಾಟಕ, ಬಿಹಾರ, ತಮಿಳುನಾಡು, ಮಹಾರಾಷ್ಟ್ರಗಳಲ್ಲಿ ಹೊಗೆ ಸೊಪ್ಪನ್ನು ಉತ್ಪಾದಿಸುವರು.
• ಕರ್ನಾಟಕದ ನಿಪ್ಪಾಣಿ ಬೀಡಿ ಹೊಗೆಸೊಪ್ಪಿನ ಉತ್ಪಾದನೆಗೆ ಹೆಸರಾಗಿದೆ.
4) ಸೆಣಬು
• ಭಾರತವು ಉತ್ಪಾದಿಸುವ ನಾರಿನ ಬೆಳೆಗಳಲ್ಲಿ ಸೆಣಬು ಹತ್ತಿಯ ನಂತರ ಎರಡನೆಯ ಸ್ಥಾನವನ್ನು ಪಡೆದಿದೆ.
• ಭಾರತವು ಸೆಣಬಿನ ಉತ್ಪಾದನೆ ಮತ್ತು ಉತ್ಪಾದನೆಯ ಕ್ಷೇತ್ರದಲ್ಲಿ ಮೊದಲನೇ ಸ್ಥಾನದಲ್ಲಿದೆ.
• ಸೆಣಬನ್ನು ಬೆಳೆಯಲು ಮಳೆ 150 ಸೆ.ಮಿಗಳಿಗಿಂತ ಅಧಿಕವಾಗಿರುತ್ತದೆ.
• ಮರಳು ಮಿಶ್ರಿತ ಜೇಡಿ ಮತ್ತು ಮೆಕ್ಕಲು ಮಣ್ಣು ಈ ಬೆಳೆಗೆ ಅತಿ ಸೂಕ್ತ.
• ಸೆಣಬಿನ ಉತ್ಪಾದನೆಯಲ್ಲಿ ಪಶ್ಚಿಮ ಬಂಗಾಳ ಮೊದಲನೆಯ ಸ್ಥಾನದಲ್ಲಿದ್ದು, ನಂತರದ ಸ್ಥಾನದಲ್ಲಿ ಬಿಹಾರ,ಒಡಿಶಾ,ಉತ್ತರ ಪ್ರದೇಶಗಳಿವೆ .
ತೋಟಗಾರಿಕೆ ಬೆಳೆಗಳು
1)ಚಹ
• ಚಹ ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದಲ್ಲಿಯೇ ಅತಿ ಮುಖ್ಯವಾದ ಪಾನೀಯವಾಗಿದೆ. ಭಾರತವು ಚಹದ ಉತ್ಪಾದನೆಯಲ್ಲಿ ಪ್ರಪಂಚದಲ್ಲಿ ಎರಡನೆಯ ಸ್ಥಾನವನ್ನು ಪಡೆದಿದೆ.
• ಚಹವು ಉಷ್ಣವಲಯ ಮತ್ತು ಉಪ ಉಷ್ಣವಲಯಗಳಲ್ಲಿ ಬೆಳೆಯುವ ನಿತ್ಯ ಹರಿದ್ವರ್ಣದ ಬಹುವಾರ್ಷಿಕ ಬೆಳೆಯಾಗಿದ್ದು, ಸರಾಸರಿ ಉಷ್ಣOಶ 21 ಡಿಗ್ರಿ ಸೆಲ್ಸಿಯಸ್ ಉಪಯುಕ್ತ. 150-200 ಸೆಂ.ಮೀ. ಮಳೆ ಅವಶ್ಯಕ.
• ಸುಮಾರು 1200 ರಿಂದ 2400 ಮೀ. ಎತ್ತರವುಳ್ಳ ಇಳಿಜಾರುಗಳಲ್ಲಿ ಬೆಳೆಯಲಾಗುವುದು.
• ಚಹಾದ ಉತ್ಪಾದನೆಯಲ್ಲಿ ಅಸ್ಸಾಂ ಮೊದಲ ಸ್ಥಾನ ಹೊಂದಿದೆ ಹಾಗೂ ಪಶ್ಚಿಮ ಬಂಗಾಳ ತಮಿಳುನಾಡು ಹಾಗೂ ಕೇರಳಗಳಲ್ಲಿ ಚಹದ ಬೇಸಾಯವನ್ನು ಕಾಣುತ್ತೇವೆ.
2)ಕಾಫಿ
• ಕಾಫಿಯು ಚಹಾದ ನಂತರ ಎರಡನೆಯ ಅತಿ ಮುಖ್ಯವಾದ ಪಾನೀಯ ಬೆಳೆಯಾಗಿದೆ.
• ಭಾರತದ ಕಾಫಿ ಸಂಶೋಧನಾ ಕೇಂದ್ರವನ್ನು ಬಾಳೆಹೊನ್ನೂರಿನಲ್ಲಿ ಸ್ಥಾಪಿಸಲಾಗಿದೆ.
• ಕಾಫಿ ಉಷ್ಣವಲಯದ ಬೆಳೆ. ಇದನ್ನು ಬೆಳೆಯಲು ಅಧಿಕ ಉಷ್ನಾಂಶ ಮತ್ತು ತೇವಯುತ ವಾಯುಗುಣ ಅವಶ್ಯಕ. ಉಷ್ನಾಂಶವು 15 - 30 ಡಿಗ್ರಿ ಸೆಲ್ಸಿಯಸ್ ಗಳಷ್ಟಿರಬೇಕು.
• ಕೆಂಪು ಜೇಡಿ ಮತ್ತು ಕಪ್ಪು ಜೇಡಿ ಮಣ್ಣು ಇದಕ್ಕೆ ಉಪಯುಕ್ತವಾದುದು.
• ಕರ್ನಾಟಕವು ಕಾಫಿ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದ್ದು,ನಂತರ ಕೇರಳ ಮತ್ತು ತಮಿಳು ನಾಡು ರಾಜ್ಯಗಳಿವೆ.