ಜೀವಕೋಶ

 

ಜೀವಕೋಶ


• ಪ್ರತಿಯೊಂದು ಜೀವಿಯ ದೇಹವು ಜೀವಕೋಶ (cell)ಗಳೆಂಬ ಸೂಕ್ಷ್ಮಘಟಕಗಳಿಂದ ಮಾಡಲ್ಪಟ್ಟಿವೆ.
• ಜೀವಕೋಶವನ್ನು ಒಂದು ಜೀವಿಯ ರಚನೆ ಮತ್ತು ಕಾರ್ಯದ ಮೂಲ ಘಟಕವೆಂದು ಕರೆಯಲಾಗುತ್ತದೆ.
• ಜೀವಕೋಶಗಳು ಜೀವಿಯ ದೇಹ ರಚನೆಯ ಮೂಲಘಟಕಗಳಾಗಿವೆ.
• ಸೂಕ್ಷ್ಮಜೀವಿಗಳನ್ನು ಮೊದಲಿಗೆ ಲೀವೆನ್ ಹಾಕ್ ಕಂಡುಹಿಡಿದರು.
• ಜೀವಕೋಶವನ್ನು ರಾಬರ್ಟ್ ಹುಕ್ ಕಂಡುಹಿಡಿದರು.
• ನರಕೋಶವು ಅತ್ಯಂತ ಉದ್ದವಾದ ಪ್ರಾಣಿ ಜೀವಕೋಶವಾಗಿದ್ದು, ಇದು ಸುಮಾರು 90 ಸೆಂ.ಮೀ ಉದ್ದ ಇರುತ್ತದೆ .
• ಜೀವಕೋಶವು ಜೀವದ್ರವ್ಯ(protoplasm)) ಎಂಬ ಬಣ್ಣರಹಿತ ವಸ್ತುವಿನಿಂದ ಮಾಡಲ್ಪಟ್ಟಿದೆ. ಅದು ಕೋಶಪೆÇರೆ(cell membrane) ಎಂಬ ಪೊರೆಯಿಂದ ಆವೃತಗೊಂಡಿದೆ. ಎಲ್ಲಾ ಜೀವಕೋಶಗಳು ಕೋಶಕೇಂದ್ರ(nucleus) ಮತ್ತು ಕೋಶದ್ರವ್ಯ(cytoplasm) ಗಳನ್ನು ಹೊಂದಿರುತ್ತವೆ.
• ಕೋಶಕೇಂದ್ರದ ಒಳಗಿನ ಜೀವದ್ರವ್ಯಕ್ಕೆ ಕೋಶಕೇಂದ್ರ ದ್ರವ್ಯ (nucleoplasm) ಎನ್ನುವರು. ಇದು ಕೋಶಕೇಂದ್ರ ಪೊರೆ(nuclear membrane)ಯಿಂದ ಸುತ್ತುವರೆಯಲ್ಪಟ್ಟಿದೆ. ಕೋಶಕೇಂದ್ರ ಮತ್ತು ಪ್ಲಾಸ್ಮಾ ಪೆÇರೆಯ ಮಧ್ಯದಲ್ಲಿರುವ ಜೀವದ್ರವ್ಯಕ್ಕೆ ಕೋಶದ್ರವ್ಯ ಎನ್ನುವರು. ಕಣದಂಗ(organelle)ಗಳು ಎಂಬ ಅನೇಕ ಸಣ್ಣ ಸಣ್ಣ ಕಣಗಳಂತಹ ರಚನೆಗಳು ಕೋಶದ್ರವ್ಯದಲ್ಲಿ ಕಂಡುಬರುತ್ತವೆ

ಜೀವ ಕೋಶಗಳ ವಿಧಗಳು


ಜೀವಿಗಳಲ್ಲಿ ಎರಡು ರೀತಿಯ ಕೋಶಗಳಿವೆ.
1. ಪ್ರೊಕ್ಯಾರಿಯೋಟ್
• ಜೀವಕೋಶವು ಕೋಶಪೊರೆ ಮತ್ತು ಕೋಶಭತ್ತಿಯಿಂದ ಸುತ್ತುವರೆದಿರುತ್ತದೆ.ಸಣ್ಣ್ಣ ರೈಬೊಸೋಮಗಳು ಕಂಡುಬರುತ್ತವೆ ಆದರೆ ಮೈಟೊಕೊಂಡ್ರಿಯಾ, ಎಂಡೋಪಾಸ್ಲ್ಮಿಕ್ ರೆಟಿಕ್ಯುಲಮ ,ಗಾಲ್ಗಿ ಸಂಕಿರ್ಣಗಳು ಕಾಣುವುದಿಲ್ಲ. ಇಂತಹ ಜೀವಕೋಶ ಹೊಂದಿರುವ ಜೀವಿಗಳಿಗೆ ಪ್ರೊಕ್ಯಾರಿಯೋಟ್ ಎಂದು ಕರೆಯಲಾಗುತ್ತದೆ.
• ಉದಾ: ಬ್ಯಾಕ್ಟೀರಿಯಾಗಳು.
2.ಯೂಕ್ಯಾರಿಯೋಟ್
• ಕೋಶಕೇಂದ್ರದ ಒಳಗೆ ಅನುವಂಶೀಯ ವಸ್ತು ಕ್ರೊಮ್ಯಾಟಿನ್ ರೂಪದಲ್ಲಿ ಇರುತ್ತದೆ. ಇಂತಹ ಕೋಶಕೇಂದ್ರವನ್ನು ನೈಜ ಕೋಶಕೇಂದ್ರ (true nucleus)) ಎನ್ನುವರು. ಯೂಕ್ಯಾರಿಯೋಟ್ಗಳ ಕೋಶದ್ರವ್ಯವು ದೊಡ್ಡ ರೈಬೋಸೋಮ್ಗಳು, ಮೈಟೊಕೊಂಡ್ರಿಯಾ, ಎಂಡೋಪಾಸ್ಲ್ಮಿಕ್ ರೆಟಿಕ್ಯುಲಮ ,ಗಾಲ್ಗಿ ಸಂಕಿರ್ಣಗಳು ಕಣದಂಗಗಳನ್ನು ಒಳಗೊಂಡಿರುತ್ತದೆ.
• ಉದಾಹರಣೆ: ಬ್ಯಾಕ್ಟೀರಿಯಗಳನ್ನು ಹೊರತುಪಡಿಸಿ ಉಳಿದೆಲ್ಲಾ ಜೀವಿಗಳು

ಜೀವಕೋಶದ ಭಾಗಗಳು ಮತ್ತು ಕಾರ್ಯಗಳು


1.ಮೈಟೊಕಾಂಡ್ರಿಯಾ
ಜೀವಕೋಶದ ಶಕ್ತಿ ಉತ್ಪಾದನಾ ಕೇಂದ್ರ ಎನ್ನುವರು. ಆಹಾರದಿಂದ ಶಕ್ತಿ ಉತ್ಪಾದಿಸಲು ಸಹಾಯ ಮಾಡುತ್ತದೆ.
2.ಕೋಶಕೇಂದ್ರ
ಇದನ್ನು ಜೀವಕೋಶದ ಕೇಂದ್ರ ಸ್ಥಾನ ಎನ್ನುವರು. ಜೀವಕೋಶದ ಎಲ್ಲಾ ಚಟುವಟಿಕೆಗಳನ್ನು ಸಂಯೋಜಿಸುತ್ತದೆ ಮತ್ತು ನಿಯಂತ್ರಿಸುತ್ತದೆ.
3.ರೈಬೋಸೋಮ್
ಇದನ್ನು ಪ್ರೊಟೀನ್ ಕಾರ್ಖಾನೆ ಎಂದು ಕರೆಯಲಾಗುತ್ತದೆ. ಪ್ರೊಟೀನ್ ಸಂಶ್ಲೇಷಣೆಗೆ ಸಹಾಯ ಮಾಡುತ್ತದೆ.
4. ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್
ವಿವಿಧ ವಸ್ತುಗಳನ್ನು ಕೋಶದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಮತ್ತು ಒಂದು ಕೋಶದಿಂದ ಇನ್ನೊಂದು ಕೋಶಕ್ಕೆ ಸಾಗಿಸುತ್ತದೆ.
5.ಲೈಸೋಸೋಮ್
ಕೋಶದಲ್ಲಿನ ಕಾರ್ಬನಿಕ ವಸ್ತುಗಳನ್ನು ಜೀರ್ಣಿಸಲು ಸಹಾಯ ಮಾಡುತ್ತದೆ. ಇದು ಮುಪ್ಪಾದ ಅಥವಾ ಹಾನಿಗೊಳಗಾದ ತನ್ನದೇ ಜೀವಕೋಶವನ್ನು ನಾಶ ಪಡಿಸುತ್ತದೆ. ಆದ್ದರಿಂದ ಇದನ್ನು ಜೀವಕೋಶದ ಆತ್ಮಹತ್ಯಾ ಸಂಚಿ ಎನ್ನುವರು
6.ಗಾಲ್ಗಿ ಸಂಕೀರ್ಣ
ಕೋಶೀಯ ಚಟುವಟಿಕೆಗಳಿಗೆ ಅಗತ್ಯವಿರುವ ರಾಸಾಯನಿಕಗಳನ್ನು ಸ್ರವಿಸುತ್ತದೆ.
7.ಸೆಂಟ್ರಿಯೋಲ್
ಕೋಶ ವಿಭಜನೆಗೆ ಸಹಾಯ ಮಾಡುತ್ತದೆ.
8. ಕೋಶಾವಕಾಶ
ಕೋಶದಲ್ಲಿ ಉತ್ಪತ್ತಿಯಾದ ತ್ಯಾಜ್ಜ ವಸ್ತುಗಳು. ಸ್ರವಿಕೆಗಳು ಮತ್ತು ಸಂಗ್ರಹ ಆಹಾರ ಉತ್ಪನ್ನಗಳನ್ನು ಸಂಗ್ರಹಿಸಿಡುತ್ತದೆ.

ಏಕಕೋಶೀಯ ಜೀವಿಗಳು


• ಜೀವಿಗಳು ಒಂದೇ ಜೀವಲೋಶ ಅಥವಾ ಅನೇಕ ಜೀವಕೋಶಗಳಿಂದ ಮಾಡಲ್ಪಟ್ಟಿರಬಹುದು. ಜೀವಿಯ ದೇಹವು ಕೇವಲ ಒಂದೇ ಜೀವಕೋಶದಿಂದ ಮಾಡಲ್ಪಟ್ಟಿದ್ದರೆ ಅಂತಹ ಜೀವಿಗಳಿಗೆ ಏಕಕೋಶೀಯ ಜೀವಿಗಳು(unicellular organisms) ಎನ್ನುವರು. ಅಂತಹ ಜೀವಿಗಳಲ್ಲಿ ಒಂದೇ ಜೀವಕೋಶವು ಯಾವುದೇ ಉನ್ನತ ಸಂಕೀರ್ಣ ಜೀವಿಯಂತೆ ತಿನ್ನುವ, ಬೆಳೆಯುವ, ಉಸಿರಾಡುವ, ವಿಸರ್ಜಿಸುವ, ಪ್ರಚೋದನೆಗೆ ಪ್ರತಿಕ್ರಿಯಿಸುವ ಮತ್ತು ಸಂತಾನೋತ್ಪತ್ತಿಯಂತಹ ಕಾರ್ಯಗಳನ್ನು ನಿರ್ವಹಿಸುತ್ತದೆ.
• ಜೀವಕೋಶದ ಒಳಗೆ ನಿರ್ದಿಷ್ಟ ಕಾರ್ಯಗಳನ್ನು ನಿರ್ವಹಿಸಲು ಅನೇಕ ವಿಶೇಷ ರಚನೆಗಳು ಇರುತ್ತವೆ.
• ಏಕಕೋಶೀಯ ಜೀವಿಗಳು ಬ್ಯಾಕ್ಟೀರಿಯಾ, ಕ್ಲೋರೆಲ್ಲಾದಂತಹ ಕೆಲವು ಶೈವಲಗಳು ಮತ್ತು ಅಮೀಬಾ, ಯುಗ್ಲೀನಾ, ಪ್ಯಾರಾಮೀಸಿಯಮ್ ನಂತಹ ಪ್ರೊಟೊಜೋವಗಳನ್ನು ಒಳಗೊಂಡಿರುತ್ತವೆ.

ಬಹುಕೋಶೀಯ ಜೀವಿಗಳು


• ಜೀವಿಗಳ ದೇಹವು ಅನೇಕ ಜೀವಕೋಶಗಳಿಂದ ಮಾಡಲ್ಪಟ್ಟಿದ್ದರೆ, ಅಂತಹ ಜೀವಿಗಳಿಗೆ ಬಹುಕೋಶೀಯ ಜೀವಿಗಳು ಎನ್ನುವರು.
• ಉದಾ: ಹೈಡ್ರಾ ದಂತಹ ಸೂಕ್ಷ್ಮಜೀವಿಗಳಿಂದ ಹಿಡಿದು ದೊಡ್ಡದಾದ ಜೀವಿಗಳು.

ನೆನಪೀಡಬೇಕಾದ ಅಂಶಗಳು


• ಜೀವಿಯ ರಚನಾತ್ಮಕ ಹಾಗೂ ಕ್ರಿಯಾತ್ಮಕ ಘಟವೇ – ಜೀವಕೋಶ
• ಜೀವಕೋಶವನ್ನು ಮೊಟ್ಟಮೊದಲು ಕಂಡುಹಿಡಿದವರು – ರಾಬರ್ಟ್ ಹುಕ್, 1665
• ಜೀವಕೋಶದ ಎಂದು ಹೆಸರು ನೀಡಿದವರು – ರಾಬರ್ಟ್ ಬ್ರೌನ್
• ಜೀವಕೋಶದ ಶಕ್ತಿಯ ಉತ್ಪಾದನಾ ಕೇಂದ್ರ – ಮೈಟೋಕಾಂಡ್ರಿಯಾ
• ಜೀವಕೋಶದ ‘ಪ್ರೊಟೀನ್ ಕಾರ್ಖಾನೆ’ – ರೈಬೋಸೋಮ್
• ಜೀವಕೋಶ ‘ಸಾಗಾಣಿಕೆ ವ್ಯವಸ್ಥೆ’ಯ ಕಣದಂಗ – ಎಂಡೋಪ್ಲಾಸ್ಮಿಕ್ ರೆಟಕ್ಯುಲಂ
• ಜೀವಕೋಶವನ್ನು ಅಳೆಯಲು ಬಳಸುವ ಮಾನ – ಮೈಕ್ರಾನ್
• ಜೀವಕೋಶಗಳ ಆತ್ಮಹತ್ಯೆ ಸಂಚಿ - ಲೈಸೋಸೋಮ್ಗಳು ಜೀವಕೋಶಧ ನಿಯಂತ್ರಕ ಭಾಗ – ಕೋಶಕೇಂದ್ರ
• ಕೋಶಕೇಂದ್ರದಲ್ಲಿರುವ ಪ್ರಮುಖ ಘಟಕಗಳು - ನ್ಯೂಕ್ಲಿಯೋಲಸ್, ವರ್ಣತಂತುಗಳು
• ಪ್ರಾಣಿಕೋಶ ಹಾಗೂ ಸಸ್ಯ ಜೀವಕೋಶಗಲೆರಡರಲ್ಲೂ ಕಂಡುಬರುವ ಭಾಗಗಳು ಕೋಶಪೊರೆ, ಕೋಶರಸ, ಮೈಟೋಕಾಂಡ್ರಿಯ, ಗಾಲ್ಗಿ ಸಂಕೀರ್ಣ, ಕೋಶಕೇಂದ್ರ, ವರ್ಣತಂತುಗಳು ರಸದಾನಿಗಳು.