ವಿದ್ಯುಚ್ಚಕ್ತಿ (Electricity)

 

ವಸ್ತುಗಳು ತಮ್ಮ ಚಲನೆಯ ಸ್ಥಿತಿಯಿಂದಾಗಿ ಪಡೆದುಕೊಳ್ಳುವ ಶಕ್ತಿಯೇ ಚಲನ ಶಕ್ತಿ,ವಿದ್ಯುದಾವೇಶಗಳಿರುವ ವಸ್ತುಗಳಿಗೆ ಇದು ಅನ್ವಯವಾಗುತ್ತದೆ. ವಿದ್ಯುದಾವಿಷ್ಟ ಕಣಗಳು ತಮ್ಮ ಚಲನೆಯ ಸ್ಥಿತಿಯಿಂದ ಪಡೆದುಕೊಳ್ಳುವ ಶಕ್ತಿಯನ್ನೇ "ವಿದ್ಯುಚ್ಛಕ್ತಿ" ಎನ್ನುವರು.
ವಿದ್ಯುಚ್ಚಕ್ತಿಯ ಅಂತರಾಷ್ಟ್ರೀಯ(SI) ಏಕಮಾನ-ಜೂಲ್
ವಿದ್ಯುತ್ ಸಾಮಥ್ರ್ಯ(Electric Power)ಏಕಮಾನ- ವ್ಯಾಟ್
ವಿದ್ಯುತ್ ಸಾಮಥ್ರ್ಯ= ವಿದ್ಯುಚ್ಛಕ್ತಿಯಿಂದಾದ ಕೆಲಸ / ಕಾಲ =P=E/t
ಇಲ್ಲಿ P= ವಿದ್ಯುತ್ ಸಾಮಥ್ರ್ಯ
E=ವಿದ್ಯುಚ್ಛಕ್ತಿ
t= ಕಾಲ
1 ವ್ಯಾಟ್=1 ಜೂಲ್/ಸೆ
ವ್ಯವಹಾರಿಕ ಏಕಮಾನ-ಕಿಲೋ ವ್ಯಾಟ ಹವರ್ ಇದನ್ನು ಒಂದು ಯುನಿಟ್ ಎಂದು ಸಹ ಕರೆಯಲಾಗುತ್ತದೆ.
ವಿದ್ಯುತ್ ಆವೇಶ ಪರಿಮಾಣ ಅಳೆಯಲು ಬಳಸುವ ಏಕಮಾನ-ಕೂಲಂ(Culumb)
ಆವೇಶಗಳು ಧನ ಮತ್ತು ಋಣ ಇರುತ್ತವೆ.
ವಿಭವಾಂತರ(potential different/voltage) ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ಧನ ಆವೇಶ ಸ್ಥಾನಪಲ್ಲಟಗೊಂಡಾಗ ನಡೆದ ಕೆಲಸಕ್ಕೆ ವಿಭವಾಂತರ ಎನ್ನುವರು.
V=W/Q
ಇಲ್ಲಿ
V = ವೋಲ್ಟೇಜ್
W= ಕೆಲಸ
Q = ಆವೇಶ ಕಣಗಳ ಪರಿಮಾಣ
ಇದರ ಅಂತರಾಷ್ಟ್ರೀಯ ಏಕಮಾನ ವೋಲ್ಟ (V)

ವಿದ್ಯುತ್ ಪ್ರವಾಹ (Electric Current)


• ಒಂದು ನಿರ್ದಿಷ್ಟ ಬಿಂದುವಿನ ಮೂಲಕ ಒಂದು ಸೆಕೆಂಡನಲ್ಲಿ ಪ್ರವಹಿಸುವು ವಿದ್ಯುತ್ ಆವೇಶ ಪರಿಮಾಣವನ್ನು ವಿದ್ಯುತ್ ಪ್ರವಾಹ ಎನ್ನುವರು.
• I=Q/t
• I= Electric Current= ವಿದ್ಯುತ್ಪ್ರವಾಹ
• Q=Quantity of electric charges = ವಿದ್ಯುದಾವೇಶಗಳ ಪರಿಮಾಣ
• t=time= ಕಾಲ
• ವಿದ್ಯುತ್ ಪ್ರವಾಹದ ಅಂತರಾಷ್ಟ್ರೀಯ ಏಕಮಾನ ಅಂಪೀಯರ್
• ವಿದ್ಯುತ್ ಪ್ರವಾಹವನ್ನು ಅಮ್ಮಿಮೀಟರ್ನಿಂದ ಅಳೆಯಲಾಗುತ್ತದೆ.

ವಿದ್ಯುತ್ ರೋಧ


• ವಿದ್ಯುತ್ ಚಲನೆಗೆ ಅಡ್ಡಿ ಪಡಿಸುವ ವಸ್ತುವಿನ ಗುಣವನ್ನು ಹೊಂದಿರುತ್ತದೆ.
• ಇದರ ಅಂತರಾಷ್ಟ್ರೀಯ ಏಕಮಾನ ಓಮ್.

ಓಮನ ನಿಯಮ


• ಓಮ್ ನ ನಿಯಮ ವಿಭವಾಂತರ ಹಾಗೂ ವಿದ್ಯುತ್ಪ್ರವಾಹಗಳಿಗಿರುವ ಸಂಭಂದವನ್ನು ತಿಳಿಸುತ್ತದೆ.
• "ಅನೇಕ ವಸ್ತುಗಳಲ್ಲಿ ಒಂದು ವಾಹಕದ ತಾಪ ಒಂದೇ ಮಟ್ಟದಲ್ಲಿದ್ದಾಗ, ಅದರಲ್ಲಿನ ವಿದ್ಯುತ್ಪ್ರವಾಹ, ಅದಕ್ಕೆ ಕಾರಣವಾದ ವಿಭವಾಂತರಕ್ಕೆ ನೇರ ಅನುಪಾತದಲ್ಲಿರುತ್ತಾದೆ."
• R=V/I
• R= ವಿದ್ಯುತ್ ರೋಧ
• V= ವಿಭವಾಂತರ
• I=ವಿದ್ಯುತ್ಪ್ರವಾಹ

ಫ್ಲೆಮಿಂಗ್ ನ ನಿಯಮಗಳು


1) ಫ್ಲೆಮಿಂಗ್ ನ ಬಲಗೈ ನಿಯಮ
• ಕಾಂತಕ್ಷೇತ್ರ, ವಿದ್ಯುತ್ಪ್ರವಾಹಕ ಮತ್ತು ಸುರುಳಿಯ ಚಲನೆ ಇವುಗಳ ನೇರಗಳಿಗಿರುವ ಪರಸ್ಪರ ಸಂಬಂಧವನ್ನು ಫ್ಲೆಮಿಂಗ್ ನ ಬಲಗೈ ನಿಯಮವು ತಿಳಿಸುತ್ತದೆ.
2) ಫ್ಲೆಮಿಂಗ್ ನ ಎಡಗೈ ನಿಯಮ
• ವಿಧ್ಯತ್ಪ್ರವಾಹದ ದಿಕ್ಕು, ಕಾಂತ ಕ್ಷೇತ್ರದ ದಿಕ್ಕು ಮತ್ತು ಯಾಂತ್ರಿಕ ಬಲವು ವಾಹಕದ ಮೇಲೆ ವರ್ತಿಸುವ ದಿಕ್ಕು- ಇವುಗಳಿಗಿರುವ ಸಂಬಂಧವನ್ನು ಫ್ಲೆಮಿಂಗ್ ನ ಎಡಗೈ ನಿಯಮವು ತಿಳಿಸುತ್ತದೆ.

ಡಿ.ಸಿ.ಮೋಟಾರ್(ವಿದ್ಯುತ್ ಮೋಟಾರ್)


• -ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ.
• ಪ್ಲೆಮಿಂಗ್ ಎಡಗೈ ನಿಯಮದ ಆಧಾರದಲ್ಲಿ ರೂಪಗೊಳ್ಳುತ್ತದೆ.

ಡೈನಮೋ (ಜನರೇಟರ್)


• ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ.
• ಪ್ಲೆಮಿಂಗ್ನ ಬಲಗೈ ನಿಯಮದ ಮೇಲೆ ರೂಪಗೊಂಡಿದೆ.

ವಿದ್ಯುತ್ ದೀಪ


• ವಿದ್ಯುತ್ ಉಷ್ಣ ಉತ್ಪಾದನಾ ಪರಿಣಾಮದ ಮೇಲೆ ರೂಪಗೊಂಡ ಸಾಧನ.
• ಟಂಗಸ್ಟನ್ ತಂತಿಯನ್ನು ಬಳಸಲಾಗುತ್ತದೆ.
• ವಿದ್ಯುತ್ ದ್ವೀಪದೊಳಗೆ ಸಾರಜನಕ ಅನಿಲ ತುಂಬಿರುತ್ತಾರೆ.

ವಿದ್ಯುಚ್ಚಕ್ತಿಯ ಆಕರಗಳು


1. ಜಲವಿದ್ಯುತ್
2. ಶಾಖೋತ್ಪನ್ನ ವಿದ್ಯುತ್
3. ಸೌರ ವಿದ್ಯುತ್
4. ಪವನ ವಿದ್ಯುತ್
5. ಅಣು ವಿದ್ಯುತ್
6. ಅಲೆಗಳ ಶಕ್ತಿಯಿಂದ ವಿದ್ಯುತ್

ನೆನಪಿಡಬೇಕಾದ ಅಂಶಗಳು


• ಶಕ್ತಿಯ ಉತ್ಕೃಷ್ಟರೂಪ ಎಂದು ಯಾವುದನ್ನು ಕರೆಯುವರು – ವಿದ್ಯುಚ್ಛಕ್ತಿ
• ವಿದ್ಯುಚ್ಛಕ್ತಿ ಅಂತಾ ರಾಷ್ಟ್ರೀಯ ಏಕಮಾನ – ಜೌಲ್.
• ವಿದ್ಯುಚ್ಛಕ್ತಿಯಿಂದ ಕೆಲಸ ಆಗುವ ದರಕ್ಕೆ- ವಿದ್ಯುತ್ ಸಾಮಥ್ರ್ಯ ಎನ್ನುತ್ತಾರೆ.
• ವಿದ್ಯುತ್ ಸಾಮಾರ್ಥದ ಅಂತರರಾಷ್ಟ್ರೀಯ ಏಕ ವಿಮಾನ – ವ್ಯಾಟ್
• ವಾಣಿಜ್ಯೋದ್ದೇಶಗಳಿಗೆ ಬಳಕೆಯಾಗುವ ವಿದ್ಯುಚ್ಛಕ್ತಿಯನ್ನು ಅಳೆಯಲು ಯಾವ ಏಕಮಾನವನ್ನು ಉಪಯೋಗಿಸುತ್ತಾರೆ – ಕಿಲೋ ವ್ಯಾಟ್/ಗಂಟೆ.
• ವಿದ್ಯುತ್ ಹರಿಯಲಾಗದಬ ವಸ್ತುಗಳಿಗೆ ಏನೆಂದು ಕರೆಯುತ್ತಾರೆ-ವಿದ್ಯುತ್ ಅವಾಹಕಗಳು.
• ವಿದ್ಯುತ್ ಕೆಲಸ ಸಂಯುಕ್ತಗಳ ಮೂಲಕ ಅದು ದ್ರವ ಅಥವಾ ದ್ರಾವಣ ಸ್ಥಿತಿಯಿಲ್ಲಿರುವಾಗ ಮಾತ್ರ ಹರಿಯುತ್ತದೆ. ಇಂಥ ಸಂಯುಕ್ತಗಳಿಗೆ – ವಿದ್ಯುದ್ವಿವಿಭಾಜ್ಯಗಳು ಅಥವಾ ಎಲೆಕ್ಟ್ರೋಲೈಟುಗಳು ಎಂದು ಕರೆಯುತ್ತಾರೆ.
• ಯಾವ ಸಂಯುಕ್ತಗಳ ಮೂಲಕ ವಿದ್ಯುತ್ ಹರಿಯುವುದಿಲವೋ ಅದಕ್ಕೆ – ವಿದ್ಯುದ್ವಿಭಾಜ್ಯಗಳು ಎಂದು ಕರೆಯುತ್ತಾರೆ.
• ವಿದ್ಯುತ್ತಿನ ಉಷ್ಣೋತ್ಪನ್ನ ಪರಿಣಾಮವನ್ನು ಆಧರಿಸಿರುವ ಒಂದು ಸುರಕ್ಷಾ ಸಾಧನ- ವಿದ್ಯುತ್ ಫ್ಯೂಸ್.
• ವಿದ್ಯುತ್ ಶಕ್ತಿ ಕಾಂತೀಯ ಸೂಜಿಯನ್ನು ದಿಕ್ಪಲ್ಲಟ್ಟ ಮಾಡುತ್ತದೆ ಎಂದು ಕಂಡುಹಿಡಿದವರು – ಆಯುರ್ ಸೈಡ್.
• ಸ್ಥಾಯೀ ವಿದ್ಯುದಾದೇಶಗಳನ್ನು ಪತ್ತೆ ಹಚ್ಚಲು ಬಳಸುವ ಸಾಧನ – ವಿದ್ಯುದ್ಧರ್ಶಕ.
• ಅವಾಹಕ ವಸ್ತುವಿನ ಮೇಲೆ ರೂಪುಗೊಳ್ಳುವ ವಿದ್ಯುದಾವೇಶಗಳನ್ನು - ಸ್ಥಾಯಿ ವಿದ್ಯುತ್ ಎಂದು ಕರೆಯುತ್ತೇವೆ.
• ವಿದ್ಯುತ್ ಕಂಪನ (ಎಲೆಕ್ಟ್ರಿಕ್ ವೈಬ್ರೇಷನ್) ದಾಖಲಿಸುವ ಉಪಕರಣದ ಹೆಸರು – ಅಸಿಲೋ ಗ್ರಾಫ್
• ವಿದ್ಯುತ್ ಜನಕ ಎಂದು – ಮೈಕೆಲ್ ಫ್ಯಾರೆಡೆಯನ್ನು ಕರೆಯುತ್ತಾರೆ.
• ವಿದ್ಯುತ್ ಶಕ್ತಿಯನ್ನು ರಾಸಾಯನಿಕ ಶಕ್ತಿಯಾಗಿ ಮಾರ್ಪಡಿಸುವುದು - ಸ್ಟೋರೇಜ್ ಬ್ಯಾಟರಿ
• ಒಂದು ಫ್ಲೋರೋಸೆಂಟ್ ಟ್ಯೂಬಿನಲ್ಲಿ ಯಾವ ವಸ್ತು ವಿದ್ಯುತ್ ದೀಪ್ತಿಯನ್ನು ಪ್ರಜ್ವಲ ಬೆಳಕನ್ನಾಗಿ ಪರಿವರ್ತಿಸುವ - ಫಾಸ್ಟರ್ (ರಂಜಕ)
• ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಮಾರ್ಪಾಟುಗೊಳಿಸುವುದು – ಡೈನಮೋ.
• ವಿದ್ಯುತ್ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ – ಮೋಟಾರ್ ಪರಿವರ್ತಿಸುತ್ತದೆ.
• ಒಂದು ವಿದ್ಯುತ್ ಕೊಶ (ಸೆಲ್) – ವಿದ್ಯುತ್ ರಾಸಾಯನಿಕ ಕ್ರಿಯೆಗಳಿಂದ ಕೆಲಸ ಮಾಡುತ್ತದೆ.
• ಬೆಂಜಮಿನ್ ಫ್ರಾಂಕ್ಲಿನ್ ಮಿಂಚಿನಲ್ಲಿ ವಿದ್ಯುತ್ಚ್ಛಕ್ತಿಯನ್ನು ಕಂಡುಹಿಡದವನು ಹಾಗೆ ಮಾಡಲು ಅವನು ಮೊದಲು ಬಳಸಿದ್ದು – ಗಾಳಿಪಟವನ್ನು.
• ವಿದ್ಯುದಂಶವನ್ನು ಅಳೆಯುವ ಏಕಮಾನ – ಕೊಲಂಬ್.
• ವಿದ್ಯುತ್ ಮಂಡಲದಲ್ಲಿ ವಿದ್ಯುತ್ರೋಧವನ್ನು ಬದಲಾಯಿಸಬಲ್ಲ ಉಪಕರಣ – ರಿಯೋಸ್ಟಾಟ್.
• ಮೂಲಮಾನ ಕಾಲಾವಧಿಯಲ್ಲಿ ಆದ ಸ್ಥಾನಪಲ್ಲಟಕ್ಕೆ – ಜವ ಎಂದು ಕರೆಯುವರು.
• ವಿದ್ಯುತ್ ಪ್ರವಾಹವನ್ನು ಅಳೆಯಲು ಉಪಯೋಗಿಸುವ ಮಾಪನ –ಆಮ್ಮೀಟರ್.
• ಒಂದು ವಿದ್ಯುತ್ ಮಂಡಲದ ಯಾವುದಾದರೂ ಎರಡು ಬಿಂದುಗಳ ನಡುವಿನ ವಿಭವಾಂತರ ಅಂದರೆ ಪ್ರಚ್ಛನ್ನಾಂತರವನ್ನು ಅಳೆಯಲು ಬಲಸುವ ಸಾಧನವನ್ನು – ವೋಲ್ಟ್ಮೀಟರ್ (ಪ್ರಚ್ಛನ್ನ ಮಾಪಕ) ಎನ್ನುತ್ತಾರೆ.
• ಸೂಕ್ಷ್ಮದರ್ಶಕದ ಮೂಲಕ ಕಲಾಯ್ಡ್ ಕಣಗಳನ್ನು ವೀಕ್ಷಿಸಿದರೆ ಕಣಗಳು ಪ್ರಸರಣಾ ಮಾಧ್ಯಮದಲ್ಲಿ ಒಂದೇ ಸಮನೆ ಅಡ್ಡಾದಿಡ್ಡಿಯಾಗಿ ಓಡಾಡುತ್ತಿರುವುದು ಕಂಡು ಬರುತ್ತದೆ. ಇದಕ್ಕೆ - ಬ್ರೌನಿಯನ್ ಚಲನೆ ಎಂದು ಕರೆಯುತ್ತಾರೆ.
• 1.5 ಅಂತರ್ ವಿದ್ಯುತ್ ಪ್ರವಾಹ 12 ವೋಲ್ಟ್ ಕಾರಿನ ದೀಪದ ಮೂಲಕ ಹರಿದರೆ, ಆ ದೀಪದ ಸಾಮಥ್ರ್ಯ – 18 ವ್ಯಾಟ್
• ಒಂದು ವಸ್ತುವಿನ ಮೇಲೆ 5 ನ್ಯೂಟನ್ ಬಲ ಪ್ರಯೋಗವಾದಾಗ 60ಮೀ./ಸೆಂ. ವೇಗೋತ್ಕರ್ಷ ಉಂಟಾದರೆ, ಆ ವಸ್ತುವಿನ ದ್ರವ್ಯರಾಶಿ - 0.25 ಕಿ.ಗ್ರಾಂ.
• ಟರ್ಬೈನ್ ಅನ್ನು ಅವಿಷ್ಕಾರಗೊಸಿಳಿದ ವಿಜ್ಞಾನಿ - ಚಾಲ್ರ್ಸ್ ಪಾರ್ಸನ್.
• ಚಿಕ್ಕ ಪ್ರಮಾಣದ ವಿದ್ಯುತ್ ಪ್ರವಾಹವನ್ನು ಕಂಡುಜಿಡಿಯಲು ಮತ್ತು ಅಳೆಯಲು ಬಳಸುವ ಸಾಧನ – ಗ್ಯಾಲ್ವನೋಮೀಟರ್.
• ವಿದ್ಯುತ್ ಬಲ್ಬನ್ನು ಕಂಡುಹಿಡಿದ ವಿಜ್ಞಾನಿ - ಥಾಮಸ್ ಆಲ್ವಾ ಎಡಿಸನ್.