ನಗ್ನೀಕರಣ ಕತೃಗಳು

 

ವಿವಿಧ ರೀತಿಯ ನೈಸರ್ಗಿಕ ಶಕ್ತಿಗಳು ಭೂಮಿಯ ಮೇಲ್ಭಾಗವನ್ನು ಮಾರ್ಪಡಿಸುವ ಕಾರ್ಯವನ್ನು ‘ಭೂ ನಗ್ನೀಕರಣ’ ಎನ್ನುವರು. ನಗ್ನೀಕರಣದ ಕರ್ತೃಗಳೆಂದರೆ; ನದಿ, ಹಿಮನದಿ, ಅಂತರ್ಜಲ, ಮಾರುತ ಹಾಗೂ ಸಮುದ್ರದ ಅಲೆಗಳು. ಇವು ಸವೆತ, ಸಾಗಾಣಿಕೆ ಮತ್ತು ಸಂಚಯ ಎಂಬ ಮೂರು ಕಾರ್ಯಗಳನ್ನು ನಡೆಸಿ ಭೂಮಿಯ ಮೇಲ್ಭಾಗದಲ್ಲಿ ವಿಶಿಷ್ಟವಾದ ಭೂಸ್ವರೂಪಗಳನ್ನು ನಿರ್ಮಿಸುತ್ತವೆ.