ಮೂಲಭೂತ ಕರ್ತವ್ಯಗಳು(Fundamental Duties)
 
* 1976 ರಲ್ಲಿ ಸಂವಿಧಾನಕ್ಕೆ 42ನೇ ತಿದ್ದುಪಡಿ ತಂದು 10 ಮೂಲಭೂತ ಕರ್ತವ್ಯಗಳನ್ನು ಸೇರಿಸಲಾಯಿತು.
* 2002 ರಲ್ಲಿ ಸಂವಿಧಾನಕ್ಕೆ 86 ನೇ ತಿದ್ದುಪಡಿ ತಂದು ಮತ್ತೊಂದು ಮೂಲಭೂತ ಕರ್ತವ್ಯವನ್ನು ಸೇರಿಸಲಾಗಿದೆ.
* ಸಂವಿಧಾನದ 4-ಎ ಭಾಗದಲ್ಲಿ 51-ಎ ವಿಧಿಯಲ್ಲಿ 11 ಮೂಲಭೂತ ಕರ್ತವ್ಯಗಳನ್ನು ಕಾಣಬಹುದು. ಅವುಗಳೆಂದರೆ.
1. ಸಂವಿಧಾನ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು.
2. ಸ್ವಾತಂತ್ರ್ಯ ಚಳುವಳಿಯಸ ಉದಾತ್ತ ಆದರ್ಶಗಳನ್ನು ಪಾಲಿಸುವುದು.
3. ಭಾರತದ ಸಾರ್ವಭೌಮತೆ, ಐಕ್ಯತೆ ಮತ್ತು ಸಮಗ್ರತೆಯನ್ನು ರಕ್ಷಿಸುವುದು.
4. ಅನಿವಾರ್ಯವೆಂದಾಗ ದೇಶ ಸೇವೆ ಮಾಡುವ ಮೂಲಕ ರಾಷ್ಟ್ರವನ್ನು ರಕ್ಷಿಸುವುದು.
5. ಸಾಮರಸ್ಯ ಮತ್ತು ಭ್ರಾತೃತ್ವ ಭಾವನೆಯನ್ನು ಬೆಳೆಸಿಕೊಳ್ಳುವುದು ಸಹಾಗೂ ಮಹಿಳೆಯರನ್ನು ಗೌರವಿಸುವುದು.
6. ನಮ್ಮ ಮಿಶ್ರ ಸಂಸ್ಕೃತಿಯನ್ನು ಪೋಷಿಸಿ ರಕ್ಷಿಸುವುದು.
7. ಅರಣ್ಯಗಳು ಸರೋವರಗಳು ನದಿಗಳು ಮತ್ತು ವನ್ಯ ಜೀವನಗಳನ್ನೊಳಗೊಂಡ ನೈಸರ್ಗಿಕ ಪರಿಸರವನ್ನು ರಕ್ಷಿಸಿ ಅಭಿವೃದ್ದಿಪಡಿಸುವುದು.
8. ವೈಜ್ಞಾನಿಕ ಮತ್ತು ಮಾನವೀಯ ಗುಣಗಳನ್ನು ಹಾಗೂ ಸುಧಾರಣಾ ಮನೋಭಾವನೆಯನ್ನು ಬೆಳೆಸಿಕೊಳ್ಳುವುದು.
9. ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು ಮತ್ತು ಹಿಂಸೆಯನ್ನು ತ್ಯಜಿಸುವುದು.
10. ವೈಯಕ್ತಿಕ ಹಾಗೂ ಸಾಮೂಹಿಕ ಚಟುವಟಿಕೆಗಳಲ್ಲಿ ಪ್ರಾವೀಣ್ಯತೆಯನ್ನು ತೋರಿಸಿ ರಾಷ್ಟ್ರದ ಉನ್ನತಿಗೆ ಶ್ರಮಿಸುವುದು.
11. 6 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ತಂದೆ, ತಾಯಿ ಅಥವಾ ಪಾಲಕರು ಶಿಕ್ಷಣ ಪಡೆಯುವ ಅವಕಾಶ ನೀಡತಕ್ಕದ್ದು
* ಮೂಲಭೂತ ಕರ್ತವ್ಯಗಳಿಗೆ ನ್ಯಾಯಿಕ ರಕ್ಷಣೆ ಇಲ್ಲ.
* ಆದರೆ ಇವುಗಳ ಬಗ್ಗೆ ಸಂಸತ್ ಸೂಕ್ತ ಸಮಯದಲ್ಲಿ ಶಾಸನ ರೂಪಿಸಿ, ಉಲ್ಲಂಘಿಸಿದವರಿಗೆ ಶಿಕ್ಷೆ ನೀಡಬಹುದು.
* ವರ್ಮಾ ಸಮಿತಿಯನ್ನು 1999 ರಲ್ಲಿ ಮೂಲಭೂತ ಕರ್ತವ್ಯಗಳ ಅನುಷ್ಟಾನಕ್ಕೆ ಶಾಸನೀಯ ಅವಕಾಶಗಳನ್ನು ನೀಡಲು ನೇಮಕ ಮಾಡಲಾಯಿತು.